ಕಳಸ (ಡಿ,25): ಭದ್ರ ನದಿಯ ನೀರಿನಲ್ಲಿ ಮುಳುಗಿ ಮ್ರತರಾದ ಇಬ್ಬರು ಯುವಕರ ಮೃತ ದೇಹ ಶೋಧಕಾರ್ಯ ಯಶಸ್ವಿಯಾಗದ ಕಾರಣ ಉಡುಪಿ ಜಿಲ್ಲೆಯ ಈಶ್ವರ್ ಮಲ್ಪೆ ಯವರಿಗೆ ಮೃತದೇಹವನ್ನು ಶೋಧಿಸಿ ಕೊಡುವುದರ ಬಗ್ಗೆ ಕರೆ ಬಂದಿತ್ತು. ಕರೆಗೆ ಓಗೊಟ್ಟ ಮುಳುಗು ತಜ್ಞ ಜೀವರಕ್ಷಕ ಈಶ್ವರ್ ಮಲ್ಪೆ ತಕ್ಷಣ ಕಾರ್ಯಪ್ರವೃತ್ತರಾಗಿ ಡಿ,25 ರ ಬೆಳಿಗ್ಗೆ 4 ಗಂಟೆಯಿಂದಲೇ ಸ್ಥಳೀಯ ಯುವಕರ ಸಹಾಯದಿಂದ ಶೋಧನೆಗೆ ಇಳಿದಿದ್ದು ಮ್ರತದೃಹವನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಮೃತದೇಹವನ್ನು ಪಡೆದ ವಾರಸುದಾರರು ಈಶ್ವರ್ ಮಲ್ಪೆ ಯವರ ಈ ನಿಸ್ವಾರ್ಥ ಸೇವೆಯನ್ನು ಅವರ ದುಃಖದಲ್ಲಿಯೂ ಕೊಂಡಾಡಿದರು. ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮುಳುಗು ತಜ್ಞ ಈಶ್ವರ್ ಮಲ್ಪೆಯವರ ಸಾಹಸ ಕಾರ್ಯವನ್ನು ಶ್ಲಾಘಿಸಿ ,ಸನ್ಮಾನಿಸಿ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ.
ವರದಿ ಈಶ್ವರ್ ಸಿ ನಾವುಂದ.