ಕೋಟೇಶ್ವರ (ಡಿ.28): ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಬ್ಬೊಬ್ಬ ವಿಜ್ಞಾನಿ ಅಡಗಿದ್ದಾನೆ ಆದರೆ ಆವರ ಪ್ರತಿಭೆಯನ್ನು ಒರೆ ಹಚ್ಚುವ ಕೆಲಸ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಯ ಜವಾಬ್ದಾರಿ ಎಂದು ಸುಜ್ಞಾನ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಶಿಕ್ಷಣ ತಜ್ಞ ಡಾ. ರಮೇಶ್ ಶೆಟ್ಟಿಯವರು ಹೇಳಿದರು.
ಅವರು ಸುಣ್ಣಾರಿಯ ಎಕ್ಸಲೆಂಟ್ ಪ್ರೌಢಶಾಲೆ ಮತ್ತು ಪಿ.ಯು ಕಾಲೇಜಿನಲ್ಲಿ ಆಯೋಜಿದ ರಾಷ್ಟ್ರೀಯ ಗಣಿತ ದಿನಾಚರಣೆಯೆಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಕಿರಣ್ ಶೆಟ್ಟಿ ಯವರು ಮಾತನಾಡಿ ಗಣಿತ ಎಂದರೆ ಕೇವಲ ಪಠ್ಯದ ವಿಷಯ ಹೊರತು ಕಬ್ಬಿಣದ ಕಡಲೆಯಲ್ಲ ,ಅದು ನಮ್ಮ ದಿನಚರಿಯ ಒಂದು ಭಾಗ ,ಈ ಬ್ರಹ್ಮಾಂಡದ ಪ್ರತಿಯೊಂದರಲ್ಲೂ ಗಣಿತ ಶಾಸ್ತ್ರದ ವಿಷಯ ಅಡಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗಣಿತ ಶಾಸ್ತ್ರದ ಉಪನ್ಯಾಸಕರಾದ ಆನಂದ, ರಾಮು.ಕೆ ಸಹ ಶಿಕ್ಷಕಿಯರಾದ ರಕ್ಷಿತಾ ಹಾಗೂ ರಶ್ಮಿತಾ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.