ಕುಂದಾಪುರ(ಡಿ.29): ಮಾತೆ ಶಾರದಾದೇವಿಯ ಜನ್ಮ ಜಯಂತಿಯ ಪ್ರಯುಕ್ತ “ಅಮ್ಮ ನಮನ” ಹೆಸರಿನಲ್ಲಿ ತಾಯಂದಿರ ಪಾದಪೂಜೆ ಕಾರ್ಯಕ್ರಮವನ್ನು ಸತತ 6 ವರ್ಷಗಳಿಂದರಾಜ್ಯಾದ್ಯಂತ ಯುವಾಬ್ರಿಗೇಡ್ ಆಯೋಜಿಸುತ್ತಾ ಬಂದಿದೆ. ಅದರಂತೆಯೇ ಈ ವರ್ಷವೂ ಸಹ ವಿಶೇಷವಾಗಿ ಸೈನಿಕರ ತಾಯಂದಿರ ಪಾದಪೂಜೆ ಕಾರ್ಯಕ್ರಮ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ,ಆ ಹಿನ್ನೆಲೆಯಲ್ಲಿ ಡಿ.28 ರ ಮಂಗಳವಾರ ಯುವಾಬ್ರಿಗೇಡ್ ಕುಂದಾಪುರದ ವತಿಯಿಂದ ಕೋಡಿಯ ಶ್ರೀ ರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಅವರವರ ಮಾತೆಯರಿಗೆ ಪಾದಪೂಜೆ ಮಾಡಿಸುವ ಮೂಲಕ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಯಿತು.
ಮಕ್ಕಳ ಮುಗ್ದತೆ ಹಾಗೂ ತಲ್ಲೀನತೆ ಕಂಡು ಎಲ್ಲಾ ತಾಯಂದಿರು ಭವುಕರಾಗುವುದರ ಜೊತೆಗೆ ಇಂತಹ ಕಾರ್ಯಕ್ರಮ ಯೋಜನೆ ಮಾಡುತ್ತಿರುವ ಯುವಾಬ್ರಿಗೇಡ್ ನ ಸರ್ವಸದಸ್ಯರನ್ನು ಪ್ರೀತಿಯಿಂದ ಹರಸಿದರು. ಆ ಎಲ್ಲಾ ತಾಯಂದಿರ ಮುಖದಲ್ಲೂ “ಅಮ್ಮ ನಮನ” ಕಾರ್ಯಕ್ರಮದ ಸಾರ್ಥಕತೆ ಕಾಣತೊಡಗಿತು. ಪಾದಪೂಜೆಯ ಬಳಿಕ ವಿದ್ಯಾರ್ಥಿಗಳೆಲ್ಲರೂ ತಮ್ಮ ತಮ್ಮ ಮಾತೆಯರಿಗೆ ಸಿಹಿ ತಿನಿಸಿ ಸಂತಸಪಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಮತಾ, ಶಿಕ್ಷಕ ವೃಂದ,ಹಾಗೂ ಯುವಾಬ್ರಿಗೇಡ್ ನ ಕುಂದಾಪುರ ತಾಲೂಕು ಸಂಚಾಲಕ ಪ್ರಮೋದ್ ಶಂಕರನಾರಾಯಣ, ಚೇತನ್ ಖಾರ್ವಿಕೇರಿ,ಕೀರ್ತನ್ ಶಂಕರನಾರಾಯಣ ಹಾಗೂ ಸುಹಾಸ್ ಖಾರ್ವಿಕೇರಿ ಉಪಸ್ಥಿತಿ ಇದ್ದರು.
ಇಂತಹ ಕಾರ್ಯಕ್ರಮ ಎಲ್ಲಾ ಭಾಗದಲ್ಲೂ ಅತೀ ಹೆಚ್ಚು ನಡೆದರೆ ಈಗಿನ ಪೀಳಿಗೆಯ ಮಕ್ಕಳಿಗೆ ಪೊಷಕರ ಮೇಲಿನ ಗೌರವ ಕಿಂಚಿತ್ತಾದರೂ ಉಳಿಯುವಂತಾಗುತ್ತದೆ ಎನ್ನುವುದಷ್ಟೇ ಈ ಕಾರ್ಯಕ್ರಮದ ಆಶಯವಾಗಿತ್ತು.