ಕೋಟೇಶ್ವರ (ಫೆ.2): ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ನೆನಪಿನ ಶಕ್ತಿ ವೃದ್ಧಿಸುವ ಹಾಗೂ ಪರಿಣಾಮಕಾರಿ ಕಲಿಕೆ ಕುರಿತಾದ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ.ಮೆಲ್ವಿನ್ ಡಿ’ಸೋಜ ರವರು ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ತಮ್ಮ ಎಡ ಹಾಗೂ ಬಲ ಭಾಗದ ಮೆದುಳನ್ನು ಸಮತೋಲನದಲ್ಲಿ ಇರಿಸಿಕೊಂಡು ನೆನಪಿನ ಶಕ್ತಿ ಹೆಚ್ಚಿಸ ಬೇಕು ಎಂಬುದನ್ನು ತಿಳಿಸಿಕೊಟ್ಟರು.
ಸಂಸ್ಥೆಯ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರಾದ ಡಾ. ರಮೇಶ್ ಶೆಟ್ಟಿ ರವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮೂಡ್ಲಕಟ್ಟೆ ಎಂ ಐ ಟಿ ಯ, ಪಬ್ಲಿಸಿಟಿ ಅಂಡ್ ಡೆವಲಪ್ಮೆಂಟ್ ವಿಭಾಗದ ಡೀನ್ ಪ್ರೊ.ಕಿಶೋರ್ ಕುಮಾರ್ ಆರೂರ್ ಹಾಗೂ ಎಕ್ಸಲೆಂಟ್ ಕಾಲೇಜಿನ ಉಪನ್ಯಾಸಕ ವ್ರಂದದವರು ಉಪಸ್ಥಿತರಿದ್ದರು.