ಬೆಳಗಾವಿ (ಮಾ.10): ಇಲ್ಲಿನ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ & ರಿಸರ್ಚ್ ಇದರ ಮ್ಯಾಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಶ್ರೀ ರವಿಗೌಡ ಪಾಟೀಲ್ ರವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.
ಇನ್ವೆಸ್ಟಿಗೇಶನ್ ಆಫ್ ಮ್ಯಾಕಾನಿಕಲ್ ಅಕೌಸ್ಟಿಕ್ ಆ್ಯಂಡ್ ತರ್ಮಲ್ ಬಿಹೇವಿಯರ್ ಆಫ್ ಸಿಲಿಕಾ ಆರೋಜೆಲ್ ಆ್ಯಂಡ್ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಫಿಲ್ಲಡ್ ವಿದ್ ಇಪೋಕ್ಸಿ ಕಂಪೋಸಿಟ್ ಮೆಟಿರಿಯಲ್ ಎನ್ನುವುದು ಮಹಾ ಪ್ರಬಂಧ ಮಂಡನೆಗೆ ಡಾಕ್ಟರೇಟ್ ಪದವಿ ನೀಡಲಾಗಿದೆ.
ಇವರು ದಾವಣಗೆರೆಯ ಬಾಪುಜಿ ಇನಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿಯ ಪ್ರಾಧ್ಯಾಪಕರಾದ ಡಾ.ಕಾನಕುಪ್ಪಿ ಸದಾಶಿವಪ್ಪರವರ ಮಾರ್ಗದರ್ಶನದಲ್ಲಿ ತನ್ನ ಸಂಶೋಧನಾ ಕಾರ್ಯ ಮುಗಿಸಿರುತ್ತಾರೆ.