ಮಧುವನ( ಮಾ.15): ಇಲ್ಲಿನ ಇ ಸಿ ಆರ್ ಕಾಲೇಜಿನ ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ2021-22 ರ ಉದ್ಘಾಟನಾ ಸಮಾರಂಭವು ಮಾ. 14 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಿನಮಕ್ಕಿ, ಹರ್ಕೂರು ಕುಂದಾಪುರ ಇಲ್ಲಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆಲೂರು ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಶ್ರೀಮತಿ ಜಲಜ ಶೆಡ್ತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಆಕಾಶ್ ಎಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆನರಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಟರಾಜ ಕೆ, ಆಲೂರು ಮತ್ತು ಹರ್ಕೂರು ಗ್ರಾಮ ಪಂಚಾಯತ್ ಸದಸ್ಯರು, ಕಿರಿಯ ಪ್ರಾಥಮಿಕ ಶಾಲೆ ಹರ್ಕೂರಿನ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಿರಿಜಾ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಶಿಬಿರಾಧಿಕಾರಿ ಹಾಗೂ ವಾಣಿಜ್ಯ ಮತ್ತು ವ್ಯವಹಾರ ಶಾಸ್ತçದ ಮುಖ್ಯಸ್ಥರಾದ ಶ್ರೀ ಅಶೋಕ್ ಜೋಗಿ, ಸಹ ಶಿಬಿರಾಧಿಕಾರಿಗಳಾದ ಕುಮಾರಿ ಅರ್ಪಿತಾ ಮತ್ತು ಕುಮಾರಿ ಸಮಿತಾ ಮುಂತಾದವರು ಉಪಸ್ಥಿತರಿದ್ದರು.
ಕುಮಾರಿ ಅರ್ಪಿತಾ ಕಾರ್ಯಕ್ರಮವನ್ನು ನಿರೂಪಿಸಿ ಕುಮಾರಿ ಸಮಿತಾ ವಂದಿಸಿದರು.