ಗುಜ್ಜಾಡಿ(ಮಾ.24): ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಶಾಲೆ ರಸ್ತೆ ಬಳಿಯ ವಾಸವಾಗಿರುವ ಕಂಟದಮನೆ ವಿದ್ಯಾವತಿ ಪೂಜಾರಿಯವರು ಸುಮಾರು ಒಂದು ವರ್ಷದಿಂದ ಮೂತ್ರ ಪಿಂಡದ ವೈಫಲ್ಯ ಖಾಯಿಲೆಯಿಂದ ಬಳಲುತ್ತಿದ್ದು, ವಾರಕ್ಕೆ 2 ಬಾರಿ ಡಯಾಲಿಸೀಸ್ ಮಾಡ ಬೇಕಾಗಿದ್ದು, ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ರಿ ಖಾಯಿಲೆಗೆ ಮುಂದಿನ ತಪಾಸಣೆ ಮತ್ತು ಮೂತ್ರಪಿಂಡದ ಕಸಿ (Kidney Transplant) ಆಪರೇಷನ್, ಮತ್ತಿತರ ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿಯನ್ನು ಆಸ್ಪತ್ರೆಯ ವೈದ್ಯರು ನೀಡಿದ್ದು, ಅದರಂತೆ ಒಟ್ಟು ಖರ್ಚು ರೂ.7,00,000/-(ರೂಪಾಯಿ ಏಳು ಲಕ್ಷ ) ಆಗುದಾಗಿ ಸೂಚಿಸಿರುತ್ತಾರೆ.
ಅದಲ್ಲದೆ ಔಷದೋಪಚಾರ ಮತ್ತು ಆಪರೇಷನ್ ನಂತರ ಬರುವಂತ ಇತರೆ ಚಿಕಿತ್ಸೆ ವೆಚ್ಚ ಸುಮಾರು ರೂ 5,00,000(ರೂಪಾಯಿ ಐದು ಲಕ್ಷ ) ರಂತೆ ಒಟ್ಟು ಸುಮಾರು ರೂ 12,00,000/-(ರೂಪಾಯಿ ಹನ್ನೇರಡು ಲಕ್ಷ ಮಾತ್ರ)ಕ್ಕೂ ಮಿಕ್ಕಿ ವೆಚ್ಚವಾಗುವ ಸಾಧ್ಯತೆ ಇದ್ದು, ಇವರು ಬಡ ಕುಟುಂಬದವಳಾಗಿದ್ದು, ಒಂದು ಹೆಣ್ಣು ಮಗುವಿನ ತಾಯಿಯಾಗಿದ್ದಾರೆ . ಮಗು ವಿದ್ಯಾಭ್ಯಾಸ ಪಡೆಯುತ್ತಿದ್ದು, ಗಂಡ ಹೋಟೆಲ್ ಕಾರ್ಮಿಕನಾಗಿದ್ದು ಆಸ್ಪತ್ರೆಯ ಖರ್ಚು ಭರಿಸಲು ಸಾಧ್ಯವಾಗದೆ ದಿಕ್ಕು ತೋಚದಂತಾಗಿದೆ.
ಕುಟುಂಬದ ದೈನಂದಿನ ನಿರ್ವಹಣೆಯು ಕಷ್ಟಕರವಾಗಿರುತ್ತದೆ, ಈ ಖಾಯಿಲೆಯಿಂದಾಗಿ ಮಹಿಳೆಯ ಜೀವನವು ತುಂಬಾ ಕಷ್ಟಕರವಾಗಿದ್ದು. ಈಕೆಯ ಚಿಕಿತ್ಸೆಗೆ ಸಹೃದಯಿ ದಾನಿಗಳಾದ ತಾವುಗಳು ತಮ್ಮಿಂದಾದ ಆರ್ಥಿಕ ಸಹಾಯ ಮಾಡಬೇಕಾಗಿ ತಮ್ಮಲ್ಲಿ ಈ ಮೂಲಕ ತಿಳಿಸಲಾಗಿದೆ.
A/c Name: Annapa Poojary
A/c No:110041831459
IFSC: CNRB0010280
Branch: Gujjadi
GOOGLE PAY: 7760364103