ಜೀವನದಲ್ಲಿ ಪ್ರತಿನಿತ್ಯ ಹಲವಾರು ಸವಾಲುಗಳನ್ನು ಎದುರಿಸುವುದು ನೋಡಿರುತ್ತೇವೆ ಹಾಗೆ ಪ್ರತಿಯೊಬ್ಬ ಬೈಕ್ ಸವಾರರಿಗೂ ಲಡಾಕ್ ಗೆ ಪ್ರಯಾಣ ಬೆಳೆಸೋದು ಒಂದು ಅತಿದೊಡ್ಡ ಕನಸು. ಆ ಕನಸನ್ನು ನನಸು ಮಾಡಲು ಹೊರಟ ನಮ್ಮೂರ ಹುಡುಗ ಜಿತೇಂದ್ರ್ ಕುಮಾರ್ ಕೂಡ ಒಬ್ಬರು.
ವೃತ್ತಿಯಲ್ಲಿ ವಕೀಲ. ಶಿಕ್ಷಣ ಮುಗಿಸಿರುವ ಇವರು ಈಗಾಗಲೇ ಯ್ಯೂಟ್ಯೂಬ್ ನಲ್ಲಿ ಹಲವಾರು VLOG ವಿಡಿಯೋಗಳ ಮೂಲಕ ಮನೆ ಮಾತಾದವರು. ಎಲ್ಲಾ ವಿಡಿಯೋದಲ್ಲು ಕುಂದಾಪ್ರ ಕನ್ನಡದಲ್ಲಿ ಮಾತಾಡೋದು ಇವರ ವಿಶೇಷ. ಕುಂದಾಪುರದ ಆಸುಪಾಸಿನ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ತನ್ನ VLOG ಮೂಲಕ ತೋರಿಸಿದ ಕೀರ್ತಿ ಇವರದು.

ಯ್ಯೂಟ್ಯೂಬ್ ನಲ್ಲಿ Jini on Wheels ಹಾಗೂ instagram ನಲ್ಲಿ Iam_jini ಖಾತೆಯಲ್ಲಿ ಇವರ ಹಲವಾರು ವಿಡಿಯೋಗಳು ಲಭ್ಯ. ಲಡಾಕ್ ಪ್ರಯಾಣ ಬೆಳೆಸೋದು ಈತನ ಅತಿದೊಡ್ಡ ಕನಸಾಗಿತ್ತು. ಕಳೆದವಾರ ROYAL ENFIELD HIMALAYAN ಬೈಕ್ನಲ್ಲಿ ಪ್ರಯಾಣ ಶುರು ಮಾಡಿದ ಈತ ಈಗಾಗಲೆ ಲಡಾಕ್ ಗೆ ತಲುಪಿ ಹಲವಾರು ಚಿತ್ರಗಳನ್ನು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಹಲವಾರು ದೇಶ ಸುತ್ತಿದ ಈತ ಇನ್ನಷ್ಟು ದೇಶ ನೋಡುವಂತಾಲಿ ಎಂದು ನಾವೆಲ್ಲರು ಹಾರೈಸುವ.
ಲೇಖನ :ಅಕ್ಷಯ ಬಡಾಮನೆ











