ಕುಂದಾಪುರ( ಜು,21 ): ಎರಡೂ ಕೈಗಳಿಲ್ಲದ ಜೆಸಿಕಾ ಕಾಕ್ ತನ್ನ ಪದವಿ ಮುಗಿಸಿ, ಕಾಲಿನಿಂದ ಕಂಪ್ಯೂಟರ್ ಆಪರೇಟ್ ಮಾಡ್ತಾಳೆ, ಕರಾಟೆ ಬ್ಲ್ಯಾಕ್ ಬೆಲ್ಟ್, ಸ್ಕೇಟಿಂಗ್, ಕಾರ್ ಡ್ರೈವಿಂಗ್ ಮಾಡ್ತಾಳೆ, ಪೈಲೆಟ್ ಆಗ್ತಾಳೆ ಅಂದಮೇಲೆ ಸಾಧಿಸುವ ಕಿಚ್ಚೊಂದಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ್ ಮರಕಾಲ ಹೇಳಿದರು.
ಕುಂದಾಪುರ ಎಜುಕೇಶನ್ ಸೊಸೈಟಿ (ರಿ),ಪ್ರವರ್ತಿತ , ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಶಿಕ್ಷಕರಿಗಾಗಿ ಆಯೋಜಿಸಲ್ಪಟ್ಟ ಶಿಕ್ಷಕ ಪುನಶ್ಚೇತನ ಕಾರ್ಯಾಗಾರ ಪ್ರೇರಣ- 2022 ಸರಣಿ ಕಾರ್ಯಾಗಾರ ಮುಂದುವರಿದ ಭಾಗದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಕಾರಿ ಪದವಿ ಕಾಲೇಜು ಕಾಲೇಜ್, ಕುಕ್ಕುಜೆ, ಕಾರ್ಕಳ ಇದರ ಪ್ರೌಢಶಾಲಾ ಶಿಕ್ಷಕರಾಗಿರುವ ಸುರೇಶ್ ಮರಕಾಲ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು. ಅನೇಕ ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ಸ್ಥಳೀಯ ವಿಕಲಚೇತನ ಮಹಾನ್ ಸಾಧಕರ ಸಾಧನೆಗಳನ್ನು ವಿವರಿಸುತ್ತಾ, ತಾನು ನಡೆದು ಬಂದ ಸಾಧನೆಯ ಫಥಗಳನ್ನು ಮೆಲುಕು ಹಾಕುತ್ತಾ, ಶಿಕ್ಷಕರನ್ನು ಸಾಧನೆಗೆ ಪ್ರೇರೆಪಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಇವರ ಅತ್ಯುನ್ನತ ಸಾಧನೆಯನ್ನು ಗುರುತಿಸಿ ಸಂಸ್ಥೆ ಇವರನ್ನು ಸನ್ಮಾನಿಸಿತು.
ಈ ಶೈಕ್ಷಣಿಕ ಕರ್ಯಗಾರದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಚಿಂತನಾ ರಾಜೇಶ್ , ಉಪ ಪ್ರಾಂಶುಪಾಲೆ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶುಭಾ ಕೆ ಎನ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲತಾ ಜಿ ಭಟ್, ಸಂಯೋಜಕ ಶಿಕ್ಷಕಿ ಆರತಿ ಶೆಟ್ಟಿ ಮತ್ತು ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ಪ್ರೌಢಶಾಲಾ ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ಕಕಾರ್ಯಕ್ರಮ ನಿರೂಪಿಸಿ, ವಂದಿಸಿದರು.