ವಂಡ್ಸೆ (ಜು, 30) : ಸುಧಿರ್ಘ 25 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಜು,30 ರಂದು ಸೇವೆಯಿಂದ ನಿವ್ರತ್ತರಾದ ನೆಂಪು ಅಂಗನವಾಡಿ ಶಿಕ್ಷಕಿ ಭಾರತಿ ಶೆಟ್ಟಿಯವರನ್ನು ಶ್ರೀ ವಿನಾಯಕ ಯುವಕ ಸಂಘ (ರಿ) ನೆಂಪು ಹಾಗೂ ನೆಂಪು ಗ್ರಾಮಸ್ಥರ ವತಿಯಿಂದ ಅವರ ಸೇವೆಯನ್ನು ಗುರುತಿಸಿ ಬೀಳ್ಕೊಡುಗೆ
ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪು ಇದರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ನೆಂಪು
ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಗದೀಶ್ ನೆಂಪು, ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪು ಇದರ ಮುಖ್ಯೋಪಾಧ್ಯಾಯ ರಾದ ಕುಪ್ಪಯ್ಯ ಮರಾಠಿ ಸಂತೋಷ್ ಮೊಗವೀರ,ಚಂದ್ರ ಶೇಖರ್ ನೀರ್ಕೋಡ್ಲು, ಸುಕುಮಾರ್ ಶಾರಳ, ರವಿಗಾಣಿಗ ಕೆಂಚನೂರು ಹಾಗೂ ಭಾರತಿ ಶೆಟ್ಟಿ ಬಗ್ವಾಡಿ ಉಪಸ್ಥಿತರಿದ್ದರು.
ಶಶಿಧರ ಶೆಟ್ಟಿ ಕೆಂಚನೂರ್ ಸ್ವಾಗತಿಸಿದರು ,ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪು ಇದರ ಶಿಕ್ಷಕರಾದ ಗಣೇಶ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು.
ನೆಂಪು ಯುವಕ ಮಂಡಲ(ರಿ) ನೆಂಪು ಇದರ ಸರ್ವ ಸದ್ಯಸರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.