ಮೂಡಬಿದ್ರೆ ( ನ,26): ಇಲ್ಲಿನ ಶ್ರೀ ದವಲ ಕಾಲೇಜಿನ ಮಾನವ ಹಕ್ಕುಗಳು ಘಟಕದ ವತಿಯಿಂದ ಕಾಲೇಜಿನ ಎ. ವಿ. ಕೊಠಡಿಯಲ್ಲಿ ಸಂವಿಧಾನ ದಿನ ವನ್ನು ನ.26 ರಂದು ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಪ್ರೊಫೆಸರ್ ಮಹಾವೀರ ಆಜ್ರಿ ಅವರು ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಓದಿ ಹೇಳುವುದರೊಂದಿಗೆ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮವನ್ನು ನೆರವೇರಿಸಿದರು.
ಅಲ್ಲದೆ ಸಂವಿಧಾನದ ಬಗೆಗಿನ ಜ್ಞಾನವನ್ನು ಪ್ರತಿ ಒಬ್ಬ ಭಾರತೀಯನು ಹೊಂದಿಸಿಕೊಳ್ಳುವುದರೊಂದಿಗೆ ಸಪ್ರಜೆಯಾಗಿ ಭಾರತದಲ್ಲಿ ಬದುಕುವ ಮನಸ್ಸು ಮಾಡಬೇಕು ಎನ್ನುವುದನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಸೂರಜ್ ಎ ಕೋಟ್ಯಾನ್ ಮಾತನಾಡಿ ಸಂವಿಧಾನದ ಆಶಯಗಳನ್ನು, ಪೂರ್ವಪೀಠಿಕೆಯನ್ನು ತಾತ್ವಿಕತೆಯನ್ನು, ಸಂವಿಧಾನದ ಇತಿಹಾಸವನ್ನು ವಿವರಿಸಿ ಹೇಳಿದರು
. ಮಾನವ ಹಕ್ಕುಗಳ ವಿಭಾಗದ ಸಂಯೋಜಕರದ ಶ್ರೀ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಕುಮಾರಿ ತೇಜಸ್ವಿನಿ ಗೆ ಧನ್ಯವಾದಗೈದರು. ಮಾನವ ಹಕ್ಕುಗಳ ಘಟಕದ ಜೊತೆ ಕಾರ್ಯದರ್ಶಿ ಕುಮಾರಿ ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.