ಅಕ್ಷಯ್ ಬಡಾಮನೆ ಓರ್ವ ಉದಯೋನ್ಮುಕ ಪ್ರತಿಭೆ. ಹತ್ತು ಹಲವು ಹಾಡುಗಳಿಗೆ ಧ್ವನಿಯಾಗಿ ಎಲ್ಲರ ಮನೆಮಾತಾದವರು. ರಿಹಾ ಇಂಡಿಯನ್ ಆರ್ಗ್ ಸಂಸ್ಥೆ ಇವರ ಗಾಯನಕ್ಕೆ ಮೆಚ್ಚಿ ಈ ವರ್ಷದ ಅತ್ಯುತ್ತಮ ಗಾಯಕ ಪ್ರಶಸ್ತಿ (ಅಲ್ಬಂ ಹಾಡು ಹಾಗೂ ಕಿರುಚಿತ್ರ ಹಾಡುಗಳ ವಿಭಾಗ) ನೀಡಿರುತ್ತಾರೆ. ರಿಹಾ ಐದಾರು ವರ್ಷಗಳಿಂದ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸುತ್ತದ್ದು, ಈ ವರ್ಷದ ಪ್ರಶಸ್ತಿ ಸಮಾರಂಭವನ್ನು ಗೋವಾದಲ್ಲಿ ನೆಡೆಸುವ ತಯಾರಿಯಲ್ಲಿದೆ. ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಅಕ್ಷಯ್ ಬಡಾಮನೆ ಕರಾವಳಿ ಪ್ರತಿಭೆ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಇವರ ಈ ಎಲ್ಲಾ ಪ್ರಯತ್ನಗಳಿಗೆ ಬೆನ್ನೆಲುಭಾಗಿರುವ ಅಶ್ನಿಗ್ಧ ಕ್ರಿಯೇಷನ್ಸ್ ತಂಡಕ್ಕೆ, ಪ್ರತಿಯೋರ್ವ ಸ್ನೇಹಿತರಿಗೂ ನಾ ಆಭಾರಿ ಎಂದು ಸ್ವತಃ ಅವರೆ ತಿಳಿಸಿದ್ದಾರೆ. ಈಗಾಗಲೆ 32 ಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾದ ಅಕ್ಷಯ್ ಈ ವರ್ಷ ಕೂಡ ಹಲವು ಹಾಡುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
ವರದಿ: ಪ್ರವೀಣ್ ಗಂಗೊಳ್ಳಿ











