ಕುಂದಾಪುರ(ಸೆ,5): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಕುಂದಾಪುರ ತಾಲೂಕಿನ ಹೊಂಬಾಡಿಯ ನಿವೃತ್ತ ಶಿಕ್ಷಕರಾದ ಶ್ರೀ ಸಚ್ಚಿದಾನಂದ ಹೆಗ್ಡೆ ದಂಪತಿಯವರನ್ನು ಕ್ಲಬ್ ನ ಅಧ್ಯಕ್ಷರಾದ ಲ. ಜಯಶೀಲ ಶೆಟ್ಟಿ ಕಂದಾವರ ಇವರಿಗೆ ಸನ್ಮಾನಿಸುವ ಮೂಲಕ ಆಚರಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು. ಪ್ರತಿಯೊಬ್ಬ ಶಿಕ್ಷಕರು ತಮ್ಮ ವೃತ್ತಿಯ ಬಗ್ಗೆ ಅಪಾರ ಗೌರವ ಹಾಗೂ ಅಭಿಮಾನ ಹೊಂದಿರುತ್ತಾರೆ. ಅಲ್ಲದೆ ಸಂಘ […]
Author: KundaVahini Editor
ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ: 41ನೇ ತುರ್ತು ಚಿಕಿತ್ಸಾ ನೆರವು ಯೋಜನೆ-ಸಹಾಯಧನ ಹಸ್ತಾಂತರ
ಕೋಟ( ಸೆ.06) : ನೊಂದವರಿಗೆ ನೆರವಿನ ದಾರಿ ದೀಪ ವಾಗಿರುವ ಕುಂದಾಪುರದ ಜೈ ಕುಂದಾಪ್ರ ಸೇವಾ ಟ್ರಸ್ಟ್ ಬಹುಬಗೆಯ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿವುದರ ಜೊತೆಗೆ ನೊಂದವರಿಗೆ ಸಹಾಯ ಹಸ್ತ ಚಾಚಲು ಅರ್ಥಪೂರ್ಣ ಯೋಜನೆಗಳನ್ನು ಹಾಕಿಕೊಂಡಿದೆ. ಆ ನಿಟ್ಟಿನಲ್ಲಿ ಟ್ರಸ್ಟ್ ನ 41ನೇ ತುರ್ತು ಚಿಕಿತ್ಸಾ ನೆರವು ಯೋಜನೆ-ಸಹಾಯ ಧನ ಹಸ್ತಾಂತರ ಕಾರ್ಯಕ್ರಮ ಸಪ್ಟೆಂಬರ್, 5 ರಂದು ನೆರವೇರಿತು. ಗುರುಪ್ರಸಾದ್ ಎನ್ನುವ ವ್ಯಕ್ತಿ ಟಿಪ್ಪರ್ ಲಿಫ್ಟ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ಟಿಪ್ಪರ್ […]
ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕ : ಕೊರೋನ ಲಸಿಕಾ ಅಭಿಯಾನ
ಕೋಟೇಶ್ವರ(ಸೆ.6): ಮೊಗವೀರ ಯುವ ಸಂಘಟನೆ(ರಿ) ಉಡುಪಿ ಇದರ ಕೋಟೇಶ್ವರ ಘಟಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೇಶ್ವರದ ಸಹಭಾಗಿತ್ವದಲ್ಲಿ ಸೆಪ್ಟೆಂಬರ್,4 ರಂದು ಕೋಟೇಶ್ವರದ ವಿಶ್ವ ಕರ್ಮ ಕಲ್ಯಾಣ ಮಂಟಪದಲ್ಲಿ ಉಚಿತ ಕೊರೋನ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಯಿತು.217 ಡೋಸ್ ಲಸಿಕೆ ಹಾಕುವ ಮೂಲಕ ಅಭಿಯಾನ ಯಶಸ್ವಿಯಾಯಿತು. ಮೊಗವೀರ ಯುವ ಸಂಘಟನೆಯ ಮಾರ್ಗದರ್ಶಕರಾದ ಡಾ. ಜಿ. ಶಂಕರ್ ರವರು ಕರೋನ ಸಮಯದಲ್ಲಿ ಆಮ್ಲಜನಕದ ಕೊರತೆ ನೀಗಿಸಲು ಸ್ಪಂದಿಸಿದ ರೀತಿ ಮತ್ತು ಕೋಟೇಶ್ವರ ಸಂಘಟನೆಯ […]
ಕುಂದಾಪುರ ಏನಿದರ ಇತಿಹಾಸ?
ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಬಹಳ ಇತಿಹಾಸವಿದೆ. ಆ ಎಲ್ಲಾ ಇತಿಹಾಸಕ್ಕೆ ಮುಕುಟಪ್ರಯವಾಗಿರುವ ಸ್ಥಳವೇ ಕುಂದಾಪುರ.ಭಾರತಕ್ಕೆ ಹೇಗೆ ಹಿಮಾಲಯವೋ ಅದೇ ರೀತಿಯಲ್ಲಿ ಕುಂದಾಪುರಕ್ಕೆ ನದಿಗಳು. ಮೂಡಣದಲ್ಲಿ ಉಗಮವಾಗುವ ಚಕ್ರ, ಸೌಪರ್ಣಿಕ, ವಾರಾಹಿ, ಕೇದಕ ಹಾಗೂ ಕುಬ್ಜ ಎಂಬ ಈ ಐದು ನದಿಗಳು ಗಂಗೊಳ್ಳಿಯಲ್ಲಿ ಒಂದಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಆ ಸ್ಥಳವೇ ಪಂಚಗಂಗಾವಳಿ. ನದಿಗಳು ಒಂದೆಡೆಯಾದರೆ ದೇವಸ್ಥಾನಗಳು ಇನ್ನೊಂದೆಡೆ. ನೂರಾರು ದೇವಾಲಯಗಳ ಹೊಂದಿರುವ ಕುಂದಾಪುರ ಕೊಲ್ಲೂರು ಮೂಕಾಂಬಿಕೆ, ಆನೆಗುಡ್ಡೆಯ ವಿನಾಯಕ,ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ, […]
ನಾ ಕಂಡಂತೆ ಚಿಂತಕ, ಮಾರ್ಗದರ್ಶಕ ಮತ್ತು ಸಲಹೆಗಾರ ಈಶ್ವರ್ ಸಿ ನಾವುಂದ
ನಿಜ. ಆ ಚಿಂತನೆಗಳು ಬಹಳ ಸೂಕ್ಷ್ಮ ಮತ್ತು ಆಳವಾಗಿದ್ದವು. ಆ ಚಿಂತನೆಗಳ ಒಂದೊಂದು ಪದಗಳನ್ನು ಮಣಿಗಳಂತೆ ಪೋಣಿಸುತ್ತಾ ಹೋದಾಗ ಅದ್ಬುತ ಬರವಣಿಗೆಯಾಗಿ ಹೊರಹೊಮ್ಮತ್ತಿತ್ತು. ಸಾಧನೆ ಮಾಡ ಹೊರಟವರಿಗೆ ಶಕ್ತಿಯಾಗಿ ನಿಲ್ಲುತ್ತಿತ್ತು. ಈ ಬರವಣಿಗೆಯ ಹಿಂದಿರುವ ಕೈ ಬೇರೆ ಯಾರದ್ದು ಅಲ್ಲ. ಇದು ನಮ್ಮ ನಿಮ್ಮೆಲ್ಲರ ನೆಚ್ಚಿನ ಚಿಂತಕ,ಬರಹಗಾರ ಈಶ್ವರ್ ಸಿ ನಾವುಂದರವರದ್ದು. ಯೋಚನೆಗಳು ನನ್ನ ಸಾಧನೆಗಳಾಗಿದ್ದವು ಹಾಗೂ ಶಕ್ತಿಶಾಲಿ ಸಾಧನೆಗಳು ಹೌದು.ಕೆಲವೊಂದು ಸೃಜನಶೀಲ ಕೆಲಸಗಳಿಗೆ ನನ್ನ ಈ ಯೋಚನೆಗಳೇ ಸಾಧನವಾಗಿದ್ದವು. […]
ಗುರು ಮಾತೆ – ಅಕ್ಷರ ಕಲಿಸಿದ ವಿದ್ಯಾ ಸರಸ್ವತಿ : ಸಿಂಗಾರಿ ಅಮ್ಮ ಟೀಚರ್ ನಾವುಂದ
ಗುರು ಎನ್ನುವ ಪರಿಕಲ್ಪನೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಏಕೆಂದರೆ ಒರ್ವ ಗುರು ತಂದೆ-ತಾಯಿಯ ಎರಡು ಪಾತ್ರವನ್ನು ಏಕಕಾಲದಲ್ಲಿ ನಿರ್ವಹಿಸಬಲ್ಲವನಾಗಿದ್ದು, ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಭಾವಿಸುವ ,ಪ್ರೀತಿಸುವ ಹಾಗೂ ತನ್ನ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಮತ್ತು ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವ ದಾಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಹೊರಹಾಕಲು ಶಿಕ್ಷಕರು ಮಾರ್ಗದರ್ಶಕರಾಗುತ್ತಾರೆ. ಗುರು ಎಂಬ ಶಬ್ದದ ಅರ್ಥವು ಅಜ್ಞಾನವನ್ನು ಓಡಿಸುವುದೇ ಆಗಿದೆ. ಪ್ರತಿಯೊಬ್ಬರ ಜೀವನದ ಏಳು- ಬೀಳುಗಳಿಗೆ […]
ಓ ಗುಣವಂತನೆ
ಓ ಗುಣವಂತನೆನೀ ಗುಣಗಳ ಖಜಾನೆನೀ ಗುಣಕಾರಿ, ನೀನೇ ಗುಣಾಧಿಕಾರಿನೀ ಸುಗುಣಾಚಾರಿ, ನೀನೇ ಗುಣಗಳ ರೂವಾರಿನೀ ಗುಣವರ್ಧಕ, ನೀನೇ ಗುಣಾತ್ಮಕನೀ ಗುಣವಿಶೇಷ, ನೀನೇ ಗುಣವಾಚಕಗುರಿ ತೋರಿಸುವ ಗುರುವೇನಾ ಹೇಗೇ ಮಾಡಲಿ ನಿನ್ನ ಗುಣಗಾನಓ ಗುಣಮಟ್ಟದ ಉತ್ತುಂಗವೆನಿನಗೆ ಕೋಟಿ ಕೋಟಿ ನಮನ. ಡಾ. ಉಮ್ಮೆ ಸಲ್ಮಾ ಎಂ., ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ :ವನಮಹೋತ್ಸವ ಆಚರಣೆ
ಕುಂದಾಪುರ( ಸೆ.03): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 03 ರಂದು ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದಲ್ಲಿ ಆಚರಿಸಲಾಯಿತು. ಕ್ಲಬ್ ನ ಅಧ್ಯಕ್ಷರಾದ ಲ. ಜಯಶೀಲ ಶೆಟ್ಟಿ ಕಂದಾವರ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಲಯಾಧ್ಯಕ್ಷರಾದ ಲ. ಅಶೋಕ್ ಶೆಟ್ಟಿ ಸಂಸಾಡಿ , ನಿಕಟ ಪೂರ್ವ ಅಧ್ಯಕ್ಷರಾದ ಲ.ರತ್ನಾಕರ ಶೆಟ್ಟಿ ಕಂದಾವರ, ಪ್ರಧಾನ ಕಾರ್ಯದರ್ಶಿ ಲ. ಗಿರೀಶ್ ಮೇಸ್ತ, ನಿರ್ದೇಶಕರಾದ ಲ. ಅಂಪಾರು ನಿತ್ಯಾನಂದ ಶೆಟ್ಟಿ, […]
ಸಂತ ಮೇರಿ ಮಹಾವಿದ್ಯಾಲಯ ಶಿರ್ವ: ಸ್ವಚ್ಛ ಸರ್ವೇಕ್ಷಣ ಜನಾಂದೋಲನ -2021
ಶಿರ್ವ(ಸೆ.4): ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ‘ಸ್ವಚ್ಛ ಸರ್ವೆಕ್ಷಣ ಗ್ರಾಮೀಣ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದೆ. ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಗ್ರಾಮೀಣ ಸಮುದಾಯದಲ್ಲಿ ಸ್ವಚ್ಛತೆ, ಸುಚಿತ್ವ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರ ವ್ಯಾಪಿ ಚಾಲನೆಯಲ್ಲಿರುವ ಈ ಯೋಜನೆಯನ್ನು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಎನ್.ಸಿ.ಸಿ, ಎನ್.ಎಸ್.ಎಸ್, ಹಾಗು ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಚ್ಚತೆ […]
ಗಣೇಶ್ ಗಂಗೊಳ್ಳಿ ಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ
ಕುಂದಾಪುರ (ಸೆ.2): ಕನ್ನಡ ನಾಡಿನ ಖ್ಯಾತ ಜಾನಪದ ಗಾಯಕ, ಜಾನಪದ ಚಿಂತಕ ಹಾಗೂ ಸಂಘಟಕ ಕುಂದಾಪುರ ಮೂಲದ ಗಣೇಶ್ ಗಂಗೊಳ್ಳಿ ಯವರಿಗೆ ತಮಿಳುನಾಡಿನ ಪ್ರತಿಷ್ಠಿತ ಇಂಡಿಯನ್ ಎಂಪೆಯರ್ ವಿಶ್ವ ವಿದ್ಯಾಲಯ ಹಾಗೂ ಯುನಿವರ್ಸಲ್ ಅಕಾಡೆಮಿಕ್ ಕೌನ್ಸಿಲ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಆಗಸ್ಟ್ 28ರಂದು ತಮಿಳುನಾಡಿನ ಹೊಸೂರು ಕ್ಲಾರೇಶ್ವ ಸಭಾಂಗಣದಲ್ಲಿ ಗೌರವ ಡಾಕ್ಟರೇಟ್ ನ್ನು ಪ್ರಧಾನ ಮಾಡಲಾಯಿತು .ಯು ಜಿ ಸಿ ವೈಸ್ ಚೇರ್ಮನ್ ಡಾ.ಕೆ ಪ್ರಭಾಕರ್ , […]










