ಉಡುಪಿ (ಜೂ, 10): ಪರಶುರಾಮ ಸೃಷ್ಟಿಯ ತುಳುನಾಡಿನ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೈವಸ್ಥಾನಗಳು ಹಲವಾರು ಇದೆ. ಆಯಾಯ ಗ್ರಾಮಗಳ ದೈವ ಸ್ಥಾನದಲ್ಲಿ ದೈವ ಚಾಕ್ರಿ ಮಾಡುವ ವರ್ಗಗಳು ಹಲವು ವರ್ಷಗಳಿಂದ ದೈವಾರಾಧನೆಯಲ್ಲೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆಈ ಕರೋನಾ ಮಹಾಮಾರಿಯಿಂದಾದ ದೀರ್ಘಾವಧಿಯ ಲಾಕ್ಡೌನ್ನಿಂದಾಗಿ ಧಾರ್ಮಿಕ ಕ್ಷೇತ್ರಗಳ ಉತ್ಸವ, ಜಾತ್ರೆ, ವಾರ್ಷಿಕೋತ್ಸವಗಳನ್ನು ಕೋವಿಡ್ ಮುನ್ನೆಚ್ಚರಿಕೆಯ ಕಾರಣದಿಂದಾಗಿ ಸರ್ಕಾರ ರದ್ದು ಮಾಡಿದೆ. ಆದರೆ ಇದು ದೈವ ಚಾಕ್ರಿ ಸದಸ್ಯರ ಬದುಕಿನ ಮೇಲೆ ನೇರ […]
Author: KundaVahini Editor
ಕಮಲಶಿಲೆ ದೇವಳದ ಸೆಕ್ಯೂರಿಟಿ – ಗಾನ ಪ್ರತಿಭೆ – ಮಂಜುನಾಥ್ ಮೊಗವೀರ
ಪ್ರತಿಭೆ ಅನ್ನೋದು ಯಾರ ಸೊತ್ತೂ ಅಲ್ಲ. ಪ್ರತಿಭೆಗೆ ಬಡವ-ಬಲ್ಲಿದ, ಹೆಣ್ಣು-ಗಂಡು ,ಜಾತಿ-ಧರ್ಮದ ತಾರತಮ್ಯ ಇಲ್ಲ. ಪ್ರತಿಯೊಂದು ಪ್ರತಿಭೆ ಅರಳಲು- ಬೆಳೆಯಲು ಬೇಕಾಗಿರುವುದು ಸ್ವ ಆಸಕ್ತಿ, ಛಲ, ಕಾಯಕ, ಪ್ರೀತಿ ಹಾಗೂ ಬೆಂಬಲ. ಗಿಡವೊಂದು ಬಲಿತು ಹೆಮ್ಮರವಾಗಿ ಬೆಳೆಯ ಬೇಕಾದರೆ ಅದಕ್ಕೆ ಪ್ರಕೃತಿಯ ಪಂಚಭೂತಗಳು ಎಷ್ಟು ಮುಖ್ಯವೋ, ಒಬ್ಬ ಪ್ರತಿಭಾವಂತನ ಪ್ರತಿಭೆ ಬಾಹ್ಯ ಪ್ರಪಂಚಕ್ಕೆ ಪಸರಿಸಲು ಸಹೃದಯದವರು ಕೂಡ ಅಷ್ಟೇ ಮುಖ್ಯವಾಗುತ್ತಾರೆ. ಅದೆಷ್ಟೋ ಪ್ರತಿಭೆ ಗಳಿಗೆ ಸೂಕ್ತ ವೇದಿಕೆ ಸಿಗದೇ, ಬೇಲಿಯೊಳಗಿನ […]
ಕರೋನಾ ಕಂಟಕ – ಬದುಕಿನ ತಲ್ಲಣ
ಕಣ್ಣಿಗೆ ಕಾಣದ ಒಂದು ಸಣ್ಣ ವೈರಾಣು ಇಡೀ ಪ್ರಪಂಚದ ಮೂಲೆಮೂಲೆಗಳಲ್ಲಿ ಸಂಚರಿಸಿ ಜನರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದೆ. ಕೆಲವೆ ಕೆಲವೇ ದಿನಗಳಲ್ಲಿ ಕರೋನ ಎನ್ನುವ ಹೆಮ್ಮಾರಿ ಹಲವಾರು ಸಾವು ನೋವುಗಳಿಗೆ ಕಾರಣವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ತನ್ನ ಕಬಂಧಬಾಹುವನ್ನು ಭಾರತದಾದ್ಯಂತ ಅವರಿಸುವುದರ ಜೊತೆಗೆ ರಾಜ್ಯದ ಮೂಲೆ ಮೂಲೆಗೆ ಸಂಚಾರ ಮುಂದುವರಿಸಿ ಹಲವಾರು ಜನರ ಜೀವನದ ದಾರಿಯನ್ನು ಮುಚ್ಚಿದೆ. ಈ ಕರೋನ ಎನ್ನುವ ರೋಗದಿಂದಾಗಿ ನಮ್ಮ ಬದುಕು ಕಬ್ಬಿಣದ ಕಡಲೆಯಂತೆಯಾಗಿದೆ. ದುಡಿದು […]
ಐಎಸ್ಎಸಿ : ಸೈಬರ್ ಭದ್ರತಾ ತರಬೇತಿ ಕೋರ್ಸ್ಗಳಿಗೆ ನೋಂದಣಿ ಪ್ರಾರಂಭ
ಉಡುಪಿ (ಜೂ, 09): ಸೈಬರ್ ಉಲ್ಲಂಘನೆಗಳು ಬಹಳ ಗಂಭೀರ ವಿಷಯವಾಗಿದೆ. ಜಗತ್ತಿನಾದ್ಯಂತ ವ್ಯಾಪಿಸಿರುವ ಸೈಬರ್ ಉಲ್ಲಂಘನೆಗಳ ಘಟನೆಗಳನ್ನು ವಿಶ್ವಸಂಸ್ಥೆಯ ಬಹಳ ಗಂಭೀರವಾಗಿ ಗಣನೆಗೆ ತೆಗೆದುಕೊಂಡಿದೆ. ಆ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ತನ್ನ ನಿರ್ಣಯಗಳ ಮೂಲಕ ಸದಸ್ಯ ರಾಷ್ಟ್ರಗಳು ಜಾಗೃತಿ ಅಭಿಯಾನಗಳನ್ನು ನಡೆಸಬೇಕೆಂದಿದೆ. ಸದಸ್ಯ ರಾಷ್ಟ್ರಗಳು ಸೈಬರ್ ಭದ್ರತಾ ಸಾಮರ್ಥ್ಯದ ಹೆಚ್ಚಿಸಿಕೊಳ್ಳಲು ನೆಟಿಜನ್ಗಳಿಗೆ ತರಬೇತಿ ನೀಡುವುದು ಅಂತರರಾಷ್ಟ್ರೀಯ ಆದೇಶವಾಗಿದೆ. ರಾಷ್ಟ್ರೀಯ ಭದ್ರತಾ ಸಲಹಾ ಸಮಿತಿ ಮತ್ತು ಮಾನ್ಯ ಅಪೆಕ್ಸ್ ನ್ಯಾಯಾಲಯವು ಹೆಚ್ಚಿನ ಜಾಗೃತಿಯ […]
ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರ : ದಾನಿಗಳ ಸಹಕಾರದಿಂದ ಆಶ್ರಮದ ಮಕ್ಕಳಿಗೆ ಅಗತ್ಯ ವಸ್ತುಗಳ ಪೂರೈಕೆ
ಕುಂದಾಪುರ (ಜೂ, 8) : ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಕುಂದಾಪುರ ತಂಡದ ವತಿಯಿಂದ ಜೂನ್ 6 ರಂದು ಸಂತೆಕಟ್ಟೆಯ ಕೃಷ್ಣಾನುಗ್ರಹ ಆಶ್ರಮ ಹಾಗೂ ಉಪ್ಪೂರಿನ ಸ್ಪಂದನ ಆಶ್ರಮದ ಮಕ್ಕಳಿಗೆ ದಾನಿಗಳಾದ ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಕುಂದಾಪುರ ಇದರ ಗೌರವ ಸಲಹೆಗಾರ ದಿನೇಶ್ ಗಾಣಿಗ ಕೋಟ ಹಾಗೂ ಕೋಟೇಶ್ವರದ ಬ್ರಹ್ಮಶ್ರೀ ಡಿಸ್ಟ್ರಿಬ್ಯೂಟರ್ ನ ಮಾಲಿಕರಾದ ಸಂತೋಷ್ ಶೆಟ್ಟಿನೀಡಿದ ಸಹಾಯಹಸ್ತದಿಂದ ದಿನಬಳಕೆಯ ಸಾಮಾಗ್ರಿ ಹಾಗೂ ತಿಂಡಿ ತಿನಿಸುಗಳನ್ನು […]
ಪ್ರಾಸ – ತ್ರಾಸಗಳ ಮಧ್ಯೆ
ಎಳೆಯೊಂದು ಸಿಕ್ಕಿತುಬರೆಯುವ ತವಕದಲಿದ್ದೆಮಳೆ ಹೊರಗೆ ಸುರಿಯುತಲಿತ್ತು ಶಬ್ದಗಳ ಕದನದಲ್ಲಿ ಎಳೆ ಕಳೆದು ಹೋಗುವುದರಲ್ಲಿತ್ತುಮತ್ತೆ ಎಳೆಯನ್ನು ಒಳಗೆ ಕರೆ ತಂದೆ ಯಾಕೆಂದರೆ ಹೊರಗೆ ಮಳೆ ತುಂಬಾ ಇತ್ತು ಪ್ರಾಸ -ತ್ರಾಸಗಳ ನಡುವೆ ಗೊಂದಲ ಇತ್ತು ! ಕವನಕೆ ವಸ್ತುವಾಗುವ ಎಳೆ ಮಾಯವಾಗಿತ್ತುನನ್ನ ಒಳಗೆ ಒಂದು ಚಂಚಲತೆ ಇತ್ತು ಅದಕ್ಕೊಂದು ರೂಪ ಕೊಡಲಾಗದ ನೋವಿತ್ತು ಕವನ ಹುಟ್ಟದಿರುವ ಆಕ್ರೋಶ ಇತ್ತು . ಅ ಎಳೆಗೂ ನನ್ನ ಮೇಲೆ ಅಸಹನೆ ಇತ್ತು ಏಕೆಂದರೆ ರಸಿಕತೆ […]
ಮೂಡ್ಲಕಟ್ಟೆ ಎಂ ಐ ಟಿ : ವಿಶ್ವ ಪರಿಸರ ದಿನಾಚರಣೆ
ಕುಂದಾಪುರ (ಜೂ, 06): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಪರಿಸರದ ದಿನದ ಪ್ರಯುಕ್ತ ಆನ್ಲೈನ್ ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಪರಿಸರ ಸಂರಕ್ಷಣೆ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೋ. ದೀಪಕ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಪರಿಸರವನ್ನು ಸ್ವಚ್ಚ ವಾಗಿಡುವುದರ ಕುರಿತು ಮಾಹಿತಿ ನೀಡಿದರು. ಗಿಡ- ಮರಗಳನ್ನು ಬೆಳೆಸುವುದು ನಾವು ಸಮಾಜಕ್ಕೆ ನೀಡುವ ಮಹತ್ತರವಾದ ಕೊಡುಗೆಯಾಗಿದ್ದು […]
ಗೋಪಾಡಿ : ಒಂದೇ ಬಾರಿಗೆ ಅರಳಿದ 80 ಬ್ರಹ್ಮಕಮಲ ಹೂವುಗಳು
ಗೋಪಾಡಿ (ಜೂ, 08): ಗೋಪಾಡಿ ಗ್ರಾಮದ ಗಣೇಶ್ ಕಾಂಚನ್ ಪಡುಚಾವಡಿ ಬೆಟ್ಟು ಇವರ ಮನೆಯಲ್ಲಿ ಒಂದೇ ಬಾರಿಗೆ 80 ಬ್ರಹ್ಮಕಮಲ ಹೂವುಗಳು ಅರಳಿದೆ. ವರ್ಷಕ್ಕೊಮ್ಮೆ ಅರಳುವ ಈ ಸುಂದರ ಹೂವುಗಳು ರಾತ್ರಿ ಸುಮಾರು 9 ಗಂಟೆಗೆ ಅರಳಲು ಶುರುವಾಗಿ 12 ಗಂಟೆವರಗೆ ಸಂಪೂರ್ಣವಾಗಿ ಅರಳುತ್ತದೆ. ಹಾಗೆಯೇ ಬೆಳಗ್ಗಿನ ಜಾವದಲ್ಲಿ ಮುದುಡಿಹೋಗುತ್ತದೆ. ಹೂ ಅರಳುವಾಗ ಸುತ್ತಲೂ ಸುವಾಸನೆ ಬೀರುವುದು ಇದರ ವಿಶೇಷ .
ಮಾರಣಕಟ್ಟೆ : ಕೊರೊನಾ ವಾರಿಯರ್ಸ್ಗಳಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ
ಹೆಮ್ಮಾಡಿ (ಜೂ, 07): ಸೇವಾ ಭಾರತಿ ಕರ್ನಾಟಕ, ಪ್ರೇರಣಾ ಎಜುಕೇಶನಲ್ ಟ್ರಸ್ಟ್ (ರಿ) ಶಿವಮೊಗ್ಗ ಹಾಗೂ ಕುಂದಾಪುರ ಎಜುಕೇಶನಲ್ ಸೊಸೈಟಿ (ರಿ) ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಜೂನ್ 07 ರಂದು ಮಾರಣಕಟ್ಟೆಯಲ್ಲಿ ಚಾಲನೆ ನೀಡಲಾಯಿತು. ಧಾರ್ಮಿಕ ದತ್ತಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಸಂಸದರಾದ ಬಿ. ವೈ. ರಾಘವೇಂದ್ರ, ಬೈಂದೂರು ಶಾಸಕ ಶ್ರೀ ಬಿ. ಎಂ. […]
ಕುಂದಾಪುರದ ಪುರಸಭೆಯ ಬಳಿ ವಯೋವೃದ್ಧನೊಬ್ಬ ಅನಾರೋಗ್ಯ ಪೀಡಿತನಾಗಿ, ಅಸಹಾಯಕ ಸ್ಥಿತಿಯಲ್ಲಿ ಪತ್ತೆ – ಸಮಾಜ ಸೇವಕ ಸುರೇಂದ್ರ ಸಂಗಮ್ ನೇತ್ರತ್ವದ ತಂಡದಿಂದ ರಕ್ಷಣೆ
ಕುಂದಾಪುರ (ಜೂ, 7):ಕುಂದಾಪುರದ ಪುರಸಭೆಯ ಬಳಿ ವಯೋವೃದ್ಧನೊಬ್ಬ ಅನಾರೋಗ್ಯ ಪೀಡಿತನಾಗಿ, ಅಸಹಾಯಕ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸಮಾಜ ಸೇವಕ ಸುರೇಂದ್ರ ಕಾಂಚನ್ ಸಂಗಮ್, ಕುಂದಾಪುರ ಪುರಸಭೆಯ ಉಪಾಧ್ಯಕ್ಷ ಸಂದೀಪ ಖಾರ್ವಿ, ಪತ್ರಕರ್ತ ಕಿರಣ್ ಪೂಜಾರಿ ಮದ್ದುಗುಡ್ಡೆಯವರು 108 ಸಿಬ್ಬಂದಿಯ ಸಹಕಾರದಿಂದ ಸಮೀಪದ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ಸಹಕರಿಸಿದರು. ಇವರ ಮಾನವೀಯ ನೆಲೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.