ಶ್ರೀ ಎಸ್ .ಆರ್ ಕಂಠಿ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಮುಧೋಳ ಹಾಗೂ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಫೆಬ್ರವರಿ 22 ರಂದು ಬೇಡನ್ ಪಾವೆಲ್ ರವರ 164 ನೇ ಜನ್ಮದಿನೋತ್ಸವದ ಅಂಗವಾಗಿ “ವಿಶ್ವ ಚಿಂತಕರ ದಿನ “ವನ್ನು ಆಚರಿಸಲಾಯಿತು.
Author: KundaVahini Editor
ಕಲಾಸೃಷ್ಟಿ ಅರ್ಪಿಸುವ ಅಂತರ್ಜಾಲ ಚಿತ್ರಕಲಾ ಸ್ಪರ್ಧೆ
Magic – The Art of Life ಎನ್ನುವ ಪರಿಕಲ್ಪನೆಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದ್ದು ಆಸಕ್ತರು ತಾವು ರಚಿಸಿದ ಚಿತ್ರವನ್ನು ಫೆಬ್ರವರಿ 23ರ ಒಳಗೆ ಕೆಳಕಂಡ ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.
ಶಿವಾಜಿ ಇಡೀ ಹಿಂದು ಸಮಾಜದ ಐಕ್ಯತಾ ಶಕ್ತಿ – ಚಕ್ರವರ್ತಿ ಸೂಲಿಬೆಲೆ
ಶಿವಾಜಿ ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾದವರಲ್ಲ ಇಡೀ ಹಿಂದೂ ಸಮಾಜದ ಒಗ್ಗೂಡಿಸಿದ ಮಹಾನ್ ನಾಯಕ ಅವರು ಇಡೀ ದೇಶದ ಆಸ್ತಿ, ಶಿವಾಜಿಯ ಹೋರಾಟ, ತ್ಯಾಗ, ಹಿಂದೂ ಸಾಮ್ರಾಜ್ಯ ಕಟ್ಟಬೇಕು ಎನ್ನುವ ಛಲ ನಮ್ಮೆಲ್ಲರಿಗೂ ಆದರ್ಶ.
ಕ್ಲೀನ್ ಕುಂದಾಪುರ ಪ್ರಾಜೆಕ್ಟ್ – ಕೋಡಿ ಕಡಲ ತೀರ : ಸ್ವಚ್ಛತಾ ಕಾರ್ಯಕ್ರಮ
ಕುಂದಾಪುರದ ಪ್ರಸಿದ್ಧ ಪ್ರವಾಸಿ ತಾಣ ಕೋಡಿ ಕಡಲತೀರದಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ವತಿಯಿಂದ 84ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಫೆಬ್ರವರಿ 21ರಂದು ಜರುಗಿತು.
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಪುನರ್ನಿರ್ಮಾಣ ಧಾರ್ಮಿಕ ಸಭೆ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇಗುಲ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಮೊಗವೀರ ಸಮುದಾಯದ ಆರಾಧ್ಯ ದೇವತೆ ಶ್ರೀ ಮಹಾಲಕ್ಷ್ಮಿ ದೇವಿ ಸರ್ವರಿಗೂ ಉಂಟುಮಾಡಲಿ, ಮುಂದಿನ ದಿನಗಳಲ್ಲಿ ಈ ದೇಗುಲವು ಹಿಂದೂ ಸಮಾಜದ ಪ್ರಮುಖ ಶ್ರದ್ಧಾ ಕೇಂದ್ರವಾಗಿ ರೂಪುಗೊಳ್ಳಲಿ ಎಂದು ಸಂಸದ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ನೂತನ ಗರ್ಭಗುಡಿಗೆ ಅದಮಾರು ಶ್ರೀಗಳಿಂದ ಶಿಲಾನ್ಯಾಸ
ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕೇಂದ್ರಗಳಲ್ಲೊಂದಾದ,ಮೊಗವೀರ ಸಮುದಾಯದ ಆರಾಧ್ಯ ದೇವರು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ನೂತನ ಗರ್ಭಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ ಫೆಬ್ರವರಿ 21 ರಂದು ಬೆಳಗ್ಗೆ 8.30ಕ್ಕೆ ನಡೆಯಿತು.
ಫೆ. 22 ರಂದು ಗಂಗೊಳ್ಳಿಯ ಗ್ರಾಮ ಪಂಚಾಯತ್ ವಿರುದ್ದ ಹಿಂದು ಜಾಗರಣ ವೇದಿಕೆ ಪ್ರತಿಭಟನೆ
ಗಂಗೊಳ್ಳಿ (ಫೆ.21) ಕಳೆದ 2 ವರ್ಷಗಳ ಹಿಂದೆ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿನ ನೀರಿನ ಟ್ಯಾಂಕ್ ಬಳಿ ಖಾಸಗಿ ಸ್ಥಳವೊಂದರಲ್ಲಿ ಪಂಚಾಯತ್ ನ ಅನುಮತಿ ಪಡೆಯದೇ ಅನುಮಾನಸ್ಪದ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದ್ದು, ಜೊತೆಗೆ ಅನೇಕ ಅನುಮಾನಾಸ್ಪದ ವ್ಯಕ್ತಿಗಳು ಹೊತ್ತಲ್ಲದ ಹೊತ್ತಿನಲ್ಲಿ ಈ ಭಾಗದಲ್ಲಿ ಜಮಾವಣೆಗೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಸ್ಥಳೀಯಾಡಳಿತವಾದ ಗಂಗೊಳ್ಳಿ ಗ್ರಾಮ ಪಂಚಾಯತ್ ನಲ್ಲಿ ಕಾನೂನು ಹೋರಾಟವನ್ನು ನಿರಂತರವಾಗಿ ಮಾಡಿದರೂ ಗ್ರಾಮ ಪಂಚಾಯತ್ ಇದನ್ನು ಗಂಭೀರ […]
ಕೊಡಗಿನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ
ಕೊಡಗು ಹಾಗೂ ಹಾಸನದಲ್ಲಿ ಆಲಿಕಲ್ಲು ಸಹಿತ ಮಳೆ ನಿರಂತರವಾಗಿ ಸುರಿದಿದ್ದು ಕೆಲವೊಂದು ಭಾಗಗಳಲ್ಲಿ ಮಂಜು ಹಾಸಿದಂತೆ ಕಂಡುಬಂದವು.
ಡಾ. ಬಿ. ಬಿ. ಹೆಗ್ಡೆ ಕಾಲೇಜು – ಫೆ.24 ರಂದು ಅಂತರ್ ಕಾಲೇಜು ಮಹಿಳಾ ವಿಭಾಗದ ತ್ರೋಬಾಲ್ ಪಂದ್ಯಾಕೂಟ
ಕುಂದಾಪುರ ಎಜುಕೇಶನ್ ಸೊಸೈಟಿ(ರಿ) ಪ್ರವರ್ತಿತ ಡಾl ಬಿ.ಬಿ ಹೆಗ್ದೆ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಕುಂದಾಪುರ ವಲಯ ಮಟ್ಟದ ಮಹಿಳಾ ವಿಭಾಗದ ತ್ರೋಬಾಲ್ ಪಂದ್ಯಾಕೂಟ ಇದೇ ಫೆಬ್ರವರಿ 24ರಂದು ಕಾಲೇಜಿನ ಬಿ.ಎಂ.ಎಸ್. ಕ್ರೀಡಾಂಗಣದಲ್ಲಿ ನಡೆಯಲಿದೆ.
ಪದುವಾ ಕಾಲೇಜು : ಎನ್ನೆಸ್ಸೆಸ್ ರಾಷ್ಟ್ರೀಯ ಭಾವೈಕ್ಯತಾ ಶಿಬಿರ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ, ರಾಜ್ಯ ಎನ್ನೆಸ್ಸೆಸ್ ಘಟಕ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಮಂಗಳೂರಿನ ಪದುವಾ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಫೆಬ್ರವರಿ 23 ರಿಂದ ಮಾರ್ಚ್ 1ರ ತನಕ ನಡೆಯಲಿದೆ.