ಉಡುಪಿ (ಮಾ. 29): ಮೊಗವೀರ ಮಹಾಜನ ಸಂಘ(ರಿ) ಉಚ್ಚಿಲ ಇದರ ಅಧ್ಯಕ್ಷರಾದ ಜಯಾ.ಸಿ. ಕೋಟ್ಯಾನ್ ರವರು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು ಇದೀಗ ಕರ್ನಾಟಕ ಕರಾವಳಿಯ ಮೀನುಗಾರರ ಕ್ರಿಯಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Author: KundaVahini Editor
ಭಾರತೀಯ ಸೇನೆಯ ಗಡಿ ಭದ್ರತಾ ಪಡೆಗೆ ( BSF) ಆಯ್ಕೆಗೊಂಡ ಕ್ರೀಡಾ ಪ್ರತಿಭೆ ವಿದ್ಯಾಗೌಡ
ಕುಂದಾಪುರ ( ಮಾ. 31): ಕೊಲ್ಲೂರು ಶ್ರೀಮೂಕಾಂಬಿಕಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ, ಉತ್ತಮ ಕ್ರೀಡಾಪಟು ,ಬೈಂದೂರು ತಾಲೂಕಿನ ಎಳಜಿತ್ ಗ್ರಾಮದ ಯುವತಿ ವಿದ್ಯಾಗೌಡ ಭಾರತೀಯ ಸೇನೆಯ ಗಡಿ ಭದ್ರತಾ ಪಡೆಗೆ ( BSF) ಆಯ್ಕೆಗೊಂಡಿದ್ದಾರೆ. ಶಿಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದಿರುವ ವಿದ್ಯಾ ಗೌಡ ಸತತ ಪರಿಶ್ರಮದಿಂದ ಭಾರತೀಯ ಸೇನೆ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿರುವುದು ಹೆತ್ತವರಿಗೆ ಕುಟುಂಬಸ್ಥರಿಗೆ ಹಾಗೂ ಊರ ಜನತೆಗೆ ಸಂತಸ ತಂದಿದೆ.
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಮಂಗಳೂರು ವಿ.ವಿ. ಅಂತರ್ ಕಾಲೇಜು ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಕೂಟ ಸಂಪನ್ನ
ಕುಂದಾಪುರ (ಮಾ. 30) : ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರ್ ಕಾಲೇಜು ಪುರುಷ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಕೂಟದ ಸಮಾರೋಪ ಸಮಾರಂಭ ಮಾರ್ಚ್ 30ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಿತು. ಕುಂದಾಪುರ ಎಜುಕೇಶನ್ ಸೊಸೈಟಿ(ರಿ) ಕುಂದಾಪುರ ಇದರ ಕಾರ್ಯದರ್ಶಿಗಳಾದ ಶ್ರೀ ಸೀತಾರಾಮ ನಕ್ಕತ್ತಾಯ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಂದಾಪುರದ ಪ್ರತಿಷ್ಠಿತ ಚಕ್ರವರ್ತಿ ಸ್ಫೋರ್ಟ್ಸ್ ಕ್ಲಬ್ ನ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಮಂಗಳೂರು ವಿ. ವಿ. ಅಂತರ್ ಕಾಲೇಜು ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಕೂಟ ಉದ್ಘಾಟನೆ
ಕುಂದಾಪುರ (ಮಾ. 30): ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರಕಾಲೇಜು ಪುರುಷ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಕೂಟ ಮಾರ್ಚ್ 30ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಉದ್ಘಾಟನೆಗೊಂಡಿತು. ಕುಂದಾಪುರದ ಪ್ರಸಿದ್ಧ ಟೋರ್ಪಡೋಸ್ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಗೌತಮ್ ಶೆಟ್ಟಿ ಪಂದ್ಯ ಕೂಟವನ್ನು ಉದ್ಘಾಟಿಸಿ ಶುಭಹಾರೈಸಿದರು.ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಹುಂತ್ರಿಕೆ ಸುಧಾಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. […]
ಬಾಲಪ್ರತಿಭೆಗಳಾದ ಪ್ರಜ್ಞಾನ್ ಪಿ. ಶೆಟ್ಟಿ ಹಾಗೂ ಅನಿಕೇತ್ ಆರ್. ರಾಜ್ಯಮಟ್ಟದಲ್ಲಿ ಪ್ರಥಮ
ಕುಂದಾಪುರ (ಮಾ. 31): ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ದೂರದರ್ಶನ ಕೇಂದ್ರ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ 2019- 20 ನೇ ಸಾಲಿನ ರಾಜ್ಯಮಟ್ಟದ ಸರ್. ಸಿ. ವಿ. ರಾಮನ್ ವಿಜ್ಞಾನ ರಸಪ್ರಶ್ನೆ “ಥಟ್ ಅಂತ ಹೇಳಿ” ಸ್ಪರ್ಧೆಯಲ್ಲಿ ಪ್ರಜ್ಞಾನ್. ಪಿ. ಶೆಟ್ಟಿ ಮತ್ತು ಅನಿಕೇತ್ […]
ಅಮ್ಮನ ಸೆರಗು
ಇಂದಿನ ಮಕ್ಕಳಿಗೆ ಅಮ್ಮನ ಸೆರಗಂಚಿನ ಅನುಭವ ಕಡಿಮೆ. ಏಕೆಂದರೆ ಅಮ್ಮ ಸೀರೆ ಉಡುವುದೇ ಕಡಿಮೆ. ಹಬ್ಬಕ್ಕೆ ಹಾಗೂ ಇನ್ನಿತರ ಸಭಾ ಸಮಾರಂಭಕ್ಕೆ ಉಡುವ ಸೀರೆಯ ಸೆರಗು ಇದಲ್ಲ. ಅದು ಬಲು ನಾಜೂಕು. ಇದರ ಮಹಿಮೆಯೇ ಬೇರೆ. ಉಪಯೋಗವಂತೂ ಒಂದಕ್ಕಿಂತ ಒಂದು.ಬಾಲ್ಯದಲ್ಲಿ ನಮ್ಮ ಅಮ್ಮನ ಸೇರಗೆಂದರೆ ಅದೊಂದು ಖಜಾನೆ ಇದ್ದಂತೆ, ನಾವೆಲ್ಲಿಯಾದರೂ ಸಪ್ಪೆ ಮೊರೆ ಹಾಕಿದ್ದೇವೆಂದರೆ ಅಮ್ಮ ತನ್ನ ಸೀರೆಯ ಸೆರಗಿನ ತುದಿಯಲ್ಲಿದ್ದ ಆ ಖಜಾನೆ ಗಂಟನ್ನು ಬಿಡಿಸಿ ಒಂದೆರಡು ಚಿಲ್ಲರೆ […]
ಆ ಹಿತನುಡಿ
ಆ ಹಿತನುಡಿ ಮಿತವಾಗಿದ್ದೇ ಮಿಗಿಲು ಹಿತವಾದದ್ದೇ ಹಿರಿದು ಎಂದೆನಿಸುತ್ತಿತ್ತು ಆ ಹಿತನುಡಿ ಶತಸಂವತ್ಸರ ಯೋಜನೆಯ ಈ ಬಾಳ ಪುಸ್ತಕಕೆ ನೀ ಬರೆದೆ ಮುನ್ನುಡಿ ನೀನೇ ರಚಿಸಿದ ಜೀವನ ಕೃತಿಗೆ ನಿನ್ನದೇ ಸಂಯೋಜಿತ ಪರಿವಿಡಿ ಸ್ವ ಬಿಂಬವ ಕಂಡಾಗೆಲ್ಲಾ ಹೇಳಿತು #ನಾನಲ್ಲ_ನೀನೆ ಎನ್ನುವ ಕನ್ನಡಿ #ಏನೇ_ಹೇಳಿ. #ನಾನು ಸಮಾಜಕ್ಕೆ ಸಲ್ಲಬೇಕೆಂದರೆ ಸ್ವಲ್ಪವಾದರೂ ಕೊಟ್ಟುಬಿಡಿ.
ಶ್ರೀಮತಿ ವನಜ ರವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪದವಿ
ಮಂಗಳೂರು (ಮಾ. 28): ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ವನಜ ರವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪದವಿ ನೀಡಿದೆ. ಇವರು ಮಂಡಿಸಿದ “USE OF N-LIST RESOURCES BY FACULTY AND STUDENTS OF POST GRADUATE CENTERS AFFILIATED TO MANGALORE UNIVERSITY” ಎನ್ನುವ ವಿಷಯಕ್ಕೆ ಪಿಹೆಚ್.ಡಿ. ಲಭಿಸಿದ್ದು, ಇವರು ಮಂಗಳೂರು ವಿ.ವಿ. ಗಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ನಿವ್ರತ್ತ ಪ್ರೋ. ಮಹೇಶ್.ವಿ. ಮುಧೋಳ್ ರವರಿಂದ […]
ಯುವಾ ಬ್ರಿಗೇಡ್ ವತಿಯಿಂದ ವಿನೂತನ ಕಾರ್ಯಕ್ರಮ
ಕುಂದಾಪುರ (ಮಾ. 29): ಇದೇ ಎಪ್ರಿಲ್ 4 ರ ಭಾನುವಾರದಂದು ರಾಜ್ಯದೆಲ್ಲೆಡೆ ಯುವಾಬ್ರಿಗೇಡ್ ನ ಕಾರ್ಯಕರ್ತರು ಹಳೆಯ, ಬದಿಗಿಟ್ಟ, ಬೀದಿಯಲ್ಲಿ ಅನಾಥವಾಗಿ ಬಿದ್ದಿರುವ ದೇವರ ಫೋಟೊಗಳ ವಿಲೇವಾರಿ ಮಾಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. “ಕಣ ಕಣದಲ್ಲೂ ಶಿವ” ಎನ್ನುವ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಕಟ್ಟೆಯ ಬಳಿ, ಫುಟ್ ಪಾತ್ ನ ಮೇಲೆ ಬಿಟ್ಟುಹೋಗಿರುವ ದೇವರ ಫೋಟೋಗಳನ್ನು ವಿಲೇವಾರಿ ಮಾಡಿ ಭಗವಂತನ ಕೃಪೆಗೆ ಪಾತ್ರರಾಗುವ ಸಂಕಲ್ಪ ಹೊಂದಿದ್ದಾರೆ.
ಮೂಡ್ಲಕಟ್ಟೆ ಎಂ. ಐ. ಟಿ. : ಪ್ರಾದ್ಯಾಪಕರಿಗೆ ಆನ್ ಲೈನ್ ತರಬೇತಿ ಕಾರ್ಯಾಗಾರ
ಕುಂದಾಪುರ (ಮಾ. 27): ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವತಿಯಿಂದ ಉಪನ್ಯಾಸಕರಿಗಾಗಿ ವಿದ್ಯುನ್ಮಾನ ಮತ್ತು ಸಂವಹನ ಇಂಜಿನಿಯರಿಂಗ್ ನಲ್ಲಿ ಇತ್ತೀಚಿನ ಪ್ರವೃತ್ತಿಗಳು ಎಂಬ ವಿಷಯದ ಕುರಿತು ಐದು ದಿನಗಳ ಆನ್ ಲೈನ್ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಲಿಕೆ ಎನ್ನುವುದು ನಿರಂತರವಾದ ಪ್ರಕ್ರಿಯೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಕರು ತಮ್ಮ ಜ್ಞಾನ ಕೌಶಲ್ಯವನ್ನು ವೃದ್ದಿಗೊಳಿಸಿಕೊಳ್ಳುವುದು ಅವಶ್ಯಕ ಎಂದು ಕಾರ್ಯಾಗಾರದ ಉದ್ಘಾಟಕರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಣಿಪಾಲ್ ಡಾಟ್ ನೆಟ್ […]










