ಸಮ ಅಸಮಗಳ ನಡುವೆ ನಸುನಗುವ ಕುಸುಮ ಸರಿದಾಡುವ ಸದ್ದೊಳು ಸುಳಿದಾಡಿದೆ ಗಮಕಗಳ ಸ ರಿ ಗ ಮ ಘಮಘಮಿಸುವ ಘಮಲಿನ ತುಳಿತಕೆ ತುಸುನಗುವ ಮನಸುಮ #ಏನೇ_ಹೇಳಿ, ಸಕಲಕ್ಕೂ ಸಕಾಲಕ್ಕೂ ಒದಗುವ ಪವನನ ತೆರದಿ ಪಾವನ ಸೇವೆಯೇ ಅನುಪಮ . . . . !!!
Author: KundaVahini Editor
ಜಟ್ಟಿದೇವಸ್ಥಾನ್ ಹಬ್ಬ….. ಒಂದು ನೆನಪು..
ಪೊಡಾಯಿನ್ ಜೋರ್ ಗಾಳಿಗೆ, ಕಡ್ಲಿನ್ ಆ ತೆರಿಗಳ್ ಸುಂಯ್ ಗುಟ್ಟು ಶಬ್ದು ಕೆಳ್ಕಂಡ್, ಅಜ್ಜಿ ಹೇಳು ಕಥಿಗೆ ಮಲ್ಕಂತಿದ್ದರ್ ನಾವ್. ಅವತ್ತ್ ಜನವರಿ ಆರ್ನೆ ದಿನದ್ ಹೊತ್ತ್ ಕಂತಿ ಹೊಯ್ ಇದ್ದಿತ್. ಏಳುವರೆ ಏಂಟ್ ಆಯ್ತ್ ಅಂದ್ರ ಸಾಕ್ ಊರಿಗ್ ಊರೆ ಉಂಡ್ಕ ಮನಿಕಂತ್ ಇದ್ದಿತ್. ಆ ನೂರ್ ವೋಲ್ಟಿನ್ ಬಲ್ಪ ಸುಚ್ಚ್ ಬಂದ್ ಮಾಡಿ ಅಜ್ಜಿ ಹಾಂಗೆ ಎಲಿ ಅಡ್ಕಿ ತಿಂತ ಹಸಿ ಬುಡ್ದಂಗ್ ಗೋಡಿ ಒರ್ಗಿ ಕುಕಂಡಳ್.ಕಾಲ್ […]
ಡಾ. ಬಿ. ಬಿ. ಹೆಗ್ಡೆ ಕಾಲೇಜು: ವಿದ್ಯಾರ್ಥಿಗಳಿಂದ ಶಾನಾಡಿ ಆಲೆಮನೆಗೆ ಭೇಟಿ
ತಾಲೂಕಿನ ಪ್ರಸಿದ್ಧ ನೈಸರ್ಗಿಕ ಬೆಲ್ಲ ತಯಾರಿಕಾ ಕೇಂದ್ರವಾಗಿರುವ ಕೆದೂರು- ಶಾನಾಡಿ ಆಲೆಮನೆ ಬೆಲ್ಲ ತಯಾರಿಕಾ ಘಟಕಕ್ಕೆ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ. ಪ್ರೊಫೆಷನಲ್ (ಸಿಎ, ಸಿಎಸ್, ಸಿ.ಎಮ್.ಎ.) ಬ್ಯಾಚಿನ ವಿದ್ಯಾರ್ಥಿಗಳು ವಿಸ್ತರಣಾ ಚಟುವಟಿಕೆಯ ಹಿನ್ನೆಲೆಯಲ್ಲಿ ಭೇಟಿ ನೀಡಿದರು.
ಗೋಪಾಡಿ ಕಡಲ ತೀರ- ಕಡಲಾಮೆ ಮೊಟ್ಟೆ ರಕ್ಷಣೆ
ಕುಂದಾಪುರ: ಕುಂದಾಪುರ ತಾಲೂಕು ಗೋಪಾಡಿ ಗ್ರಾಮದ ಮಲಸಾವರಿ ಪಂಜುರ್ಲಿ ದೈವಸ್ಥಾನದ ಚೆರ್ಕಿ ಕಡು ಸಮುದ್ರತೀರದಲ್ಲಿ ಫೆಬ್ರುವರಿ 03 ರ ಬುಧವಾರ ರಾತ್ರಿ ಸಮಯದಲ್ಲಿ ಕಡಲಾಮೆ ಮೊಟ್ಟೆ ಪತ್ತೆಯಾಗಿದ್ದು, ಕರಾವಳಿ ಫ್ರೆಂಡ್ಸ್ ನ ಸಂತೋಷ್ ಪೂಜಾರಿ ಹಾಗೂ ಲೋಕೇಶ್ ಪೂಜಾರಿಯವರು ಕಡಲಾಮೆ ಮೊಟ್ಟೆಯನ್ನು ಪತ್ತೆಹಚ್ಚಿದ್ದು, ಇದೀಗ ಸರಿ ಸುಮಾರು 130 ಮೊಟ್ಟೆಗಳನ್ನು ಸಂರಕ್ಷಿಸಲಾಗಿದೆ. ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಹಾಗೂ ಎಫ್.ಎಸ್.ಎಲ್. ಇಂಡಿಯಾದ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಿ.ಸಿ.ಎಫ್ ಆಶಿಶ್ ರೆಡ್ಡಿ, […]
ಡಾ|ಬಿ. ಬಿ. ಹೆಗ್ಗೆ ಕಾಲೇಜು, ಕುಂದಾಪುರ – ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಉದ್ಘಾಟನೆ
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಅಗತ್ಯ. ಆ ಮೂಲಕ ವಿದ್ಯಾರ್ಥಿದೆಸೆಯಲ್ಲಿಯೇ ಆತ್ಮ ಸ್ಥೈರ್ಯದಿಂದ ಕಾರ್ಯಪ್ರವೃತ್ತರಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಬಿ.ಎಸ್. ಸುರೇಶ್ ಶೆಟ್ಟಿ ಹೇಳಿದರು.
ಪರಿ’ಸುದ್ಧ’ ಕನ್ನಡಿಗರಿಗೆ…!
ಅಕ್ಕಾ ಹೇಳೇ ಟೈಮ್ ಆಯಿತು ಆಫೀಸ್ಗೆ ಓಗಲ್ವಾ… ನನ್ ತಂಗಿ ಅನ್ನಿಸಿಕೊಂಡಿರೋ ಸುಧ್ಧ ಕನ್ನಡತಿ ಬೆಳಿಗ್ಗೆ ಬೆಳಿಗ್ಗೇನೇ ನನ್ನ ಜೀವದ ಭಾಷೆಯನ್ನು ಹೀಗೆ ಕೊಲೆ ಮಾಡ್ತಾ ಇದ್ರೆ ಅವಳನ್ನು ಸಾಯಿಸಿಬಿಡೋಣ ಅನ್ನೋವಷ್ಟು ಕೋಪ ಬರುತ್ತೆ ನನಗೆ. ಆದರೂ ಸುಧಾರಿಸಿಕೊಂಡು ಅದು ಹೇಳೇ ಅಲ್ವೇ ಏಳೇ ಅಂತ ಹೇಳೇ ಮಾರಾಯ್ತಿ, ಆಫೀಸ್ಗೆ ಓಗೋದಲ್ಲಾ ಹೋಗೋದು ಅಂತ ಅವಳ ಭಾಷೆ ತಿದ್ದಿ ನನ್ನ ಪಾಡಿಗೆ ನಾನು ನೆಮ್ಮದಿಯಾಗಿ ಇರೋ ಕೆಲಸ ಮುಗಿಸಿಕೊಂಡು ಹೊರಡೋಣ […]
ಪ್ಲಾಸ್ಟಿಕ್ನ ದುರ್ಬಳಕೆ: ಜಾಗೃತಿ ಕಾರ್ಯಕ್ರಮ
ಕೋಟೇಶ್ವರ : ಇ. ಸಿ. ಆರ್. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮಧುವನ, ಬ್ರಹ್ಮಾವರ ಇಲ್ಲಿ ದಿನಾಂಕ 30-01-2021 ರಂದು ‘ಹುತಾತ್ಮರ ದಿನ’ದ ಅಂಗವಾಗಿ ನೇಚರ್ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ದುರ್ಬಳಕೆ ಕುರಿತು ವಿದ್ಯಾರ್ಥಿಗಳಿಂದ ನೃತ್ಯ ರೂಪಕದ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಶ್ರೀ ಆಕಾಶ್ ಸವಳಸಂಗ್ ಹಾಗೂ ಏವಿಯೇಷನ್ ವಿಭಾಗ ಮುಖ್ಯಸ್ಥರಾದ ಶ್ರೀ ಮಿರ್ ತಾಜ್ದಾರ್ ಹುಸೇನ್ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ಲಾಸ್ಟಿಕ್ನ ಅತಿಯಾದ ಬಳಕೆಯಿಂದ ಪ್ರಕೃತಿ ಮೇಲಾಗುವ […]
ಹೆಸ್ಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಮಾಣಿಕತಾ ಮಳಿಗೆ (HONESTY SHOP) ವಿನೂತನ ಪ್ರಯೋಗ
ವಿದ್ಯಾರ್ಥಿಗಳನ್ನು ಸದಾ ಕ್ರಿಯಾಶೀಲರನ್ನಾಗಿ ರೂಪಿಸಲು ಶ್ರಮಿಸುತ್ತಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಹೆಸ್ಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜೆ.ಸಿ.ಐ ಕುಂದಾಪುರ ಜೊತೆಗೂಡಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಪ್ರಾಮಾಣಿಕತಾ ಮಳಿಗೆ”.(HONESTY SHOP) ಪ್ರಾರಂಭಿಸಿದೆ.
ಫೆಬ್ರವರಿ 12 ರಿಂದ 14 ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವ
ಕುಂದಾಪುರ ತಾಲೂಕಿನ ಪ್ರಸಿದ್ಧ ಕ್ಷೇತ್ರ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಇದೇ ಫೆಬ್ರವರಿ 12 ರಿಂದ 14 ರ ವರೆಗೆ ನಡೆಯಲಿದೆ.
ಈಜು ಪಟು ನಾಗರಾಜ ಖಾರ್ವಿ ಯವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರ
ರಾಷ್ಟ್ರೀಯ ದಾಖಲೆಯ ಸಾಧನೆಗೈದ ಈಜು ಪಟು ನಾಗರಾಜ ಖಾರ್ವಿಯವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಪ್ರಮಾಣ ಪತ್ರ ನೀಡಿದೆ.










