ನಿನ್ನಯ ಮಡಿಲಿನಲ್ಲಿ ನೆತ್ತರ ಮಡುವಿನಲ್ಲಿ ಮಲಗಿದ್ದಾಗಲೂಅರಿಗಳಾಡುವ ಪ್ರಶ್ನೆಗೆ ಗುಡುಗುಡುಗಿ ನೀಡುವ ಉತ್ತರವೊಂದೆ “ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ಎಂದೆ” ಭಾರತ್ಮಾತಾಕೀ_ಜೈ . . . .🇮🇳 Feb_14_2019 #Pulwama_Attack 🙁
Author: KundaVahini Editor
Net – Work
Net – Work ಕಟ್ಟು ಪಾಡುಗಳ ನಡುವೆ ಬದುಕು ಕಟ್ಟುವ ಪಾಡು ಪೆಟ್ಟುಗಳ ನಡುವೆ ಪಟ್ಟು ಬಿಡದೆ ಕಟ್ಟುವ ಗೂಡು ದಿಟ್ಟವಾಗಿ ಅಟ್ಟದಿ ಕುಳಿತು ಮೌನದಿ ಹಾಡುವ ಹಾಡು #ಏನೇ_ಹೇಳಿ, ಒಟ್ಟು ಇಷ್ಟ ಕಷ್ಟ ನಷ್ಟಗಳ ನಡುವೆ ನಡೆಯುವುದು ಸಂತುಷ್ಟ ಜೀವನದ ಹೊಟ್ಟೆಪಾಡು . #Say_Whatever, Life Is a ” Net – Work ” . . . . 🕸️
ಸಮುದಾಯ ತಿಂಗಳ ಕಥಾ ಓದು
ಕೊರೋನಾ ಎಂಬ ವಿಚಿತ್ರ ಸಂಕಟದ ಸಂದರ್ಭದಲ್ಲಿ ಆಧುನಿಕ ರಂಗಭೂಮಿಯ ಹೊಸ ಸಾಧ್ಯತೆ ಮತ್ತು ದಾರಿಗಳನ್ನು ಕಂಡುಕೊಳ್ಳುತ್ತಿರುವಾಗ ಈ ಹಿನ್ನೆಲೆಯಲ್ಲಿ ನಮ್ಮದು ಈ ಪ್ರಯತ್ನ ಎನ್ನುತ್ತಾ ಆರಂಭಿಸಿದರು ಸಂಕಥನ ಎನ್ನುವ ರಂಗ ಓದನ್ನು ಮಂದಾರ ಕಲಾವಿದರು ಈ ಸಂಜೆ ಕುಂದಾಪುರ ಜೇಸಿ ಭವನದಲ್ಲಿ.ಪುಟ್ಟ, ಪುಟ್ಟ ಒಂದೈದು ಕತೆ-ಲೇಖನ-ಕವಿತೆಗಳ ಎಳೆಗಳನ್ನು ಬಿಡಿಬಿಡಿಯಾಗಿ ರೋಹಿತ್ ಬೈಕಾಡಿ ವಿನ್ಯಾಸಗೊಳಿಸಿದ್ದರು. ವಿಶಿಷ್ಟ ತೀರ್ಪು ಇದರಲ್ಲಿ ಬ್ರೆಡ್ ಮತ್ತು ಜಾಮ್ ಕದ್ದ ಕಾರಣಕ್ಕಾಗಿ ಹದಿನೈದರ ಹುಡುಗನೊಬ್ಬನನ್ನು ಕಟಕಟೆಯಲ್ಲಿ ಪ್ರಶ್ನಿಸಲಾಗುತ್ತದೆ. […]
ರೋಟರಿ ಕ್ಲಬ್ ಹಳೆಯ ಕಟ್ಟಡದ ಮಾಡುಕುಸಿತ
ಕುಂದಾಪುರ(ಫೆಬ್ರವರಿ 13) : ಕುಂದಾಪುರದ ಹೊಸ ಬಸ್ ಸ್ಟ್ಯಾಂಡ್ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿ ಇರುವ ರೋಟರಿ ಕ್ಲಬ್ನ ಹಳೆ ಕಟ್ಟಡದ ಮಾಡು ಶುಕ್ರವಾರ ಸಂಜೆ ದಿಢೀರ್ ಕುಸಿದಿದೆ. ಎರಡು ವರ್ಷಗಳ ಹಿಂದೆ ಈ ಕಟ್ಟಡದವನ್ನು ದುರಸ್ತಿಗೊಳಿಸಲಾಗಿತ್ತು. ಇದರ ಪಕ್ಕದಲ್ಲೆ ಇರುವ ಹೊಸ ಕಟ್ಟಡದಲ್ಲಿ ನರ್ಸರಿ ಶಾಲೆ, ಮಕ್ಕಳಿಗೆ ಚಿತ್ರಕಲೆ, ಸಂಗೀತ ತರಬೇತಿಗೆ ಅವಕಾಶ ಕಲ್ಪಿಸಲಾಗಿತ್ತು. ಅದೇ ದಿನ ಸಂಜೆ 06:30ಕ್ಕೆ ರೋಟರಿ ಕ್ಲಬ್ ನ ವಾರದ ಸಭೆ ನಡೆಯಬೇಕಿದ್ದು […]
ಜಾನಪದ ಭೂಷಣ ಪ್ರಶಸ್ತಿಗೆ ಗಣೇಶ್ ಗಂಗೊಳ್ಳಿ ಆಯ್ಕೆ
ಖ್ಯಾತ ಗಾಯಕ ,ಜಾನಪದ ಚಿಂತಕ ಹಾಗೂ ಉಡುಪಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾಗಿರುವ ಗಣೇಶ್ ಗಂಗೊಳ್ಳಿಯವರು ಜಾನಪದ ಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹೌಂದರಾಯನ ವಾಲ್ಗ
ಹೌಂದರಾಯನ ವಾಲ್ಗ ಇದು ಕುಂದಾಪುರದ ಕರಾವಳಿ ಭಾಗದ ಜನಪದ ಸಂಸ್ಕೃತಿಯ ಒಂದು ಭಾಗವಾಗಿದ್ದು, ಇದನ್ನು ಜನರು ಧಾರ್ಮಿಕ ಹಿನ್ನೆಲೆಯಲ್ಲಿ ಆಚರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಪ್ರಶಂಸನೀಯ.
ಡಾ| ಬಿ. ಬಿ. ಹೆಗ್ಡೆ ಕಾಲೇಜು – ರಕ್ತದಾನ ಶಿಬಿರ
ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ಕ್ರಾಸ್ ಘಟಕ , ರೆಡ್ ರಿಬ್ಬನ್ ಕ್ಲಬ್, ಎನ್.ಸಿ.ಸಿ., ಎನ್.ಎಸ್.ಎಸ್., ಇಂಡಿಯನ್ ರೆಡ್ಕ್ರಾಸ್ ಸೊಸೈಟಿ, ಕುಂದಾಪುರ ಹಾಗೂ ಲಯನ್ಸ್ ಕ್ಲಬ್, ಕುಂದಾಪುರದ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 10 ರಂದು ರಕ್ತದಾನ ಶಿಬಿರ ಜರುಗಿತು.
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ : ರಸ್ತೆ ಸುರಕ್ಷತಾ ಜಾಗೃತಿ
ಕುಂದಾಪುರ, (ಫೆಬ್ರವರಿ 12) : ರಸ್ತೆ ಅಪಘಾತದಲ್ಲಿ ಯುವಜನತೆಯೇ ಹೆಚ್ಚು ಸಾವಿಗೀಡಾಗುತ್ತಿರುವುದು ವಿಷಾದನೀಯ. ರಸ್ತೆಯ ಸಾಮಾನ್ಯ ನಿಯಮಗಳಾದ ಹೆಲೈಟ್, ಸೀಟ್ಬೆಲ್ಟ್ ಧರಿಸುವುದು,ವೇಗದ ಮಿತಿ ಕಡಿಮೆಗೊಳಿಸುವುದು ಇಂತಹ ಸರಳ ನಿಯಮಗಳ ಮೂಲಕ ಅಮೂಲ್ಯವಾದ ಜೀವನ ರಕ್ಷಣೆಯಾಗಬೇಕು ಎಂದು ಕುಂದಾಪುರ ಸಂಚಾರಿ ಪೊಲೀಸ್ ಅಧಿಕಾರಿಯಾದ ಶ್ರೀ ಸುದರ್ಶನ್ ಡಿ.ಎನ್ ಹೇಳಿದರು.ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಯೋಜನಾ ಘಟಕ ಆಯೋಜಿಸಿದ “ರಸ್ತೆ ಸುರಕ್ಷತಾ ಜಾಗೃತಿ” ಕಾರ್ಯಕ್ರಮದಲ್ಲಿ […]
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET) ಅರ್ಜಿ ಅಹ್ವಾನ
ಉಡುಪಿ: ಮೈಸೂರು ವಿಶ್ವವಿದ್ಯಾನಿಲಯ ನಡೆಸಲಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET) ದಿನಾಂಕ 11ನೇ ಏಪ್ರಿಲ್ 2021 ರಂದು ನಡೆಯಲಿದ್ದು, ಪರೀಕ್ಷೆಗೆ ಸಂಬಂಧಪಟ್ಟ ಅರ್ಹತಾ ನಿಭಂದನೆ, ಪರೀಕ್ಷಾ ಪದ್ಧತಿ, ಪಠ್ಯಕ್ರಮ, ಮಾದರಿ ಪ್ರಶ್ನೆ ಪತ್ರಿಕೆ, ಅಭ್ಯರ್ಥಿಗಳಿಗೆ ಸೂಚನೆ ಅರ್ಜಿಯನ್ನು ಸಲ್ಲಿಸುವ ಬಗ್ಗೆ ನೋಂದಣಿಯ ವಿವರಗಳು ಮತ್ತು ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸುವುದರ ಬಗ್ಗೆ ವಿವರ http//:kset.uni-mysore.ac.in ವೆಬ್ ಸೈಟ್ ನಲ್ಲಿ ಲಭ್ಯವಿದೆ. 1. ಆನಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ […]
ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಆರೋಗ್ಯಕರ ಜೀವನಶೈಲಿಯ ಪಾತ್ರ
ಮಧುವನ, (ಫೆಬ್ರವರಿ 12) : ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್, ಮಧುವನ ಇಲ್ಲಿನ ರೆಡಿಕ್ರಾಸ್ ಘಟಕ ಮತ್ತು ಸಂಜೀವಿನಿ, ಎನ್ ಜಿ ಒ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 10-02-2021 ರಂದು “ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಆರೋಗ್ಯಕರ ಜೀವನಶೈಲಿಯ ಪಾತ್ರ ” ಎಂಬ ವಿಷಯದ ಕುರಿತು ವೆಬಿನಾರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೀವಿನಿ ಸಂಸ್ಥೆಯ ಸ್ಥಾಪಕರಾದ ಕುಮಾರಿ ರೂಬಿ ಅಹ್ಲುವಾಲಿಯಾ ಅವರು ಸಂಸ್ಥೆಯ ಉದ್ದೇಶವನ್ನು ಪರಿಚಯಿಸಿದರು. ಸಂಸ್ಥೆಯ […]










