ಬೇಲೂರು ರಘುನಂದನ್ ಸರ್ ರವರ ರಚನೆಯ, ಕೃಷ್ಣಮೂರ್ತಿ ಕವತ್ತಾರ್ ಸರ್ ರವರ ನಿರ್ದೇಶನದಲ್ಲಿ, ನನ್ನ ಪುಟ್ಟ ಗೆಳೆಯ ಗೋಕುಲ ಸಹೃದಯ ನಟಿಸಿರುವ ನಾಟಕ ಚಿಟ್ಟೆ. ಈ ನಾಟಕ ರಚನೆಯಾಗಿ ಪ್ರದರ್ಶನ ಗೊಳ್ಳಲು ಪ್ರಾರಂಭವಾಗಿ ಸುಮಾರು ಒಂದೂವರೆ ವರ್ಷಗಳೇ ಆಗಿರಬಹುದು ಎಂದು ಭಾವಿಸುತ್ತೇನೆ.ಇಂದು ಕರಾವಳಿ ಭಾಗದಲ್ಲಿ ಈ ನಾಟಕದ ಪ್ರದರ್ಶನಗಳು ಆಯೋಜನೆಗೊಂಡಿದ್ದು ಅದೆಷ್ಟೋ ದಿನಗಳಿಂದ ಈ ನಾಟಕವನ್ನು ನೋಡಲು ಅವಕಾಶ ವಂಚಿತನಾಗಿದ್ದ ನಾನು ಇಂದು ಅರೆಹೊಳೆ ಪ್ರತಿಷ್ಠಾನ, ಅರೆಹೊಳೆಯಲ್ಲಿ ಈ ನಾಟಕದ ನಲವತ್ತೈದನೇ ಪ್ರದರ್ಶನ […]
Category: ಕುಂದಾಪ್ರ ಕನ್ನಡ
ಕುಂದಾಪ್ರ ಕನ್ನಡ
ಡ್ರಾಮ ಜ್ಯುನಿಯರ್ ಖ್ಯಾತಿಯ ಬಾಲನಟಿ ಕುಂದಾಪುರದ ಕುವರಿ ಸಮೃದ್ಧಿ ಎಸ್ ಮೊಗವೀರ
ನಿಮ್ಮ ಮಕ್ಕಳನ್ನು ಪಠ್ಯದ ಕಲಿಕೆಯ ಪರಿದಿಗೆ ಮಾತ್ರ ಸೀಮಿತಗೊಳಿಸಬೇಡಿ ಎನ್ನುವ ರಾಷ್ಟ್ರಕವಿ ರವೀಂದ್ರನಾಥ ಟಾಗೋರ್ ರವರು ಹೇಳಿದ ಮಾತು ಈಗಿನ ಮಕ್ಕಳ ಪ್ರತಿಭೆ, ಕಲೆ, ಕೌಶಲ್ಯ, ಬುದ್ಧಿವಂತಿಕೆಯನ್ನು ಕಂಡಾಗ ನೂರಕ್ಕೆ ನೂರು ಪ್ರಸ್ತುತ ಅನ್ನಿಸುತ್ತದೆ. ಪ್ರೋತ್ಸಾಹ ಮತ್ತು ಸಹಕಾರ ದೊರೆತರೆ ಉತ್ತಮ ಕಲಾವಿದರಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣವನ್ನು ನಮ್ಮ ಯುವ ಸಮುದಾಯ ಹೊಂದಿದೆ .ಆ ನಿಟ್ಟಿನಲ್ಲಿ ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಡ್ರಾಮ ಜುನಿಯರ್ ಸೀಜನ್ -4 ಖ್ಯಾತಿಯ ಬಾಲಪ್ರತಿಭೆ ಕುಂದಾಪುರದ ಸಮೃದ್ಧಿ […]
ಮತ್ತೆ ಅಂಕಣಕ್ಕೆ ಇಳಿದ ಛಲಗಾರ ಸುಷ್ಮಂತ್ ಒಂಟಿ ಕಾಲಲ್ಲೇ ಟೂರ್ನಿ ಆಯೋಜಿಸಿ ಗೆದ್ದ ಸುಷ್ಮಂತ್
ಭಾರತೀಯ ಪ್ರೊ ಕಬ್ಬಡ್ಡಿ ತಂಡದ ಬಾಗಿಲು ಬಡಿದು ಬಂದಿದ್ದ ಸುಷ್ಮಂತ್ ಎನ್ನುವ ಮಲೆನಾಡಿನ ಪ್ರತಿಭೆ ಇನ್ನೇನು ಮುಂಬೈ ತಂಡ ಸೇರಿಯೇ ಬಿಟ್ಟ ಅನ್ನೋವಷ್ಟರಲ್ಲಿ ಆತನ ಜೀವನದಲ್ಲಿ ವಿಧಿ ಬೇರೆಯದೇ ಆಟ ಆಡಿತ್ತು. ಮೂರು ವರ್ಷಗಳ ಹಿಂದೆ ಪ್ರೊ ಕಬಡ್ಡಿ ಉತ್ತುಂಗಕ್ಕೆ ಏರಿದಾಗ ಕಬಡ್ಡಿ ಆಟಗಾರರಿಗೂ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು ಸಂತಸದ ಮಾತೇ.ಮಲೆನಾಡಿನ ಹೊಸನಗರದ ಹೆದ್ದಾರಿಪುರದ ತೊರೆಗದ್ದೆಯ ಮಧ್ಯಮ ಕುಟುಂಬದ ಹುಡುಗ ಬಾಲ್ಯದಿಂದಲೂ ಕಬ್ಬಡ್ಡಿ ಅಂಕಣದಲ್ಲಿ ಕಳೆದದ್ದೇ ಹೆಚ್ಚು. […]
ನೀ ಸೂತ್ರಧಾರಿ ನಾ ಪಾತ್ರಧಾರಿ
” ಕುಣಿಸಲು ನೀನು ಕುಣಿವೇನು ನಾನು ……..ನೀ ಸೂತ್ರಧಾರಿ ನಾ ಪಾತ್ರಧಾರಿ “ಎನ್ನುವ ಸಾಲು ಪ್ರತಿ ವ್ಯಕ್ತಿಯ ಜೀವನ ಬಂಡಿಯ ಚಲನೆಗೆ ಒಂದು ನಿದರ್ಶನ. ಭೂಮಿ ನಮ್ಮದಲ್ಲ, ಗಾಳಿ ನಮ್ಮದಲ್ಲ, ಈ ನಾಲ್ಕು ದಿನದ ಜೀವನದಲ್ಲಿ ಚಿರಾಸ್ಥಾಯಿಯಾಗಿ ಉಳಿಯುವು ಸತ್ಕರ್ಮವಷ್ಟೇ! ಜೀವನಕ್ಕೇನು? ನಿರ್ಜೀವ ವಸ್ತುಗಳಿಗೂ ಕೂಡ ಹುಟ್ಟು , ವಿಕಾಸ ಹಾಗೂ ಅವನತಿ ಎನ್ನುವ ಜೀವನದ ಹಂತವಿರುತ್ತದೆ. ಆದರೆ ಈ ಜೀವನದಲ್ಲಿ ಅವಶ್ಯವಾಗಿರುವುದು ಜೀವಿಸುವುದು ಹಾಗೂ ನಿರರ್ಥಕ ಜೀವನವನ್ನು ಸಾರ್ಥಕವನ್ನಾಗಿಸಿಕೊಂಡು ಬದುಕಿನಲ್ಲಿ […]
ಬದುಕೆಂಬ ಗೊಂಬೆಯಾಟ
ಗೊಂಬೆಯಾಟ ಎಂದಾಗಲೆಲ್ಲ ಎಂದೋ ಇಂಡಿಯಾ ಗೋಟ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ಕಂಡ ರಾಜಸ್ಥಾನದ ರಾಮಾಯಣದ ಗೊಂಬೆಯಾಟವೇ ನೆನಪಿಗೆ ಬರುತಿತ್ತೇ ಹೊರತು ನಮ್ಮೂರಲ್ಲೂ ಒಂದು ಗೊಂಬೆಯಾಟದ ಆರು ತಲೆಮಾರಿನ ಪರಂಪರೆ ಇತ್ತೆಂದು ಗೊತ್ತಾಗಿದ್ದು ಇಂದು ಭಾಸ್ಕರ್ ಕೊಗ್ಗ ಕಾಮತ್ ಮಾತು ಕೇಳಿದ ಬಳಿಕ. ಜಗವೇ ಆ ದೇವರಾಡಿಸೋ ನಾಟಕ…. ನಾವೆಲ್ಲ ಅವನ ಕೈಯ ಗೊಂಬೆಗಳು ಎಂಬ ಮಾತಿನಂತೆ ಇಂದು ನಮ್ಮ ಕಾಲೇಜಿನ ಯಕ್ಷಗಾನ ಸಂಘ ಹಾಗೂ ಕನ್ನಡ ವಿಭಾಗ ಆಯೋಜಿಸಿದ ಉಪ್ಪಿನಕುದ್ರು ಗೊಂಬೆ […]
ನನ್ನದು ವರ್ಕ್ ಫ್ರಮ್ ಹೋಮ್ ಸ್ವಾಮಿ…..
ಒಂದು ಕುರ್ಚಿಒಂದು ಸಿಸ್ಟಮ್…. .ಆಗೊಮ್ಮೆ ಇಗೊಮ್ಮೆ ಹೈ ಸ್ಪೀಡ್ ನಲ್ಲಿ ಕೆಲಸ ಮಾಡೋ ಇಂಟರ್ನೆಟ್ಟು…. ಬೆನ್ನು ನೋವಾಗದಿರಲಿ ಎಂದು ಬೆನ್ನು ಹಿಂದೊಂದು ತಲೆದಿಂಬು…. ಯಾಕಂದ್ರೆ ನನ್ನದು ವರ್ಕ್ ಫ್ರಮ್ ಹೋಮ್ ಸ್ವಾಮಿ..!ಹಿಂದೆ ಆಫೀಸಿನಲ್ಲಿ ಕೇಳಿಸುತ್ತಿದ್ದ ಮಾತಿನ ಸದ್ದಿಲ್ಲ….. ಮೈ ಮರೆತು ನಕ್ಕ ನಗುವಿನ ಅಲೆಯಿಲ್ಲ…… ಸೂರ್ಯೋದಯ ಕಾಣೋಲ್ಲ ,ಸೂರ್ಯಾಸ್ತಮವೂ ಕಂಡಿಲ್ಲ….. ಸಮಯದ ಅರಿವಿಲ್ಲ, ಹಸಿವಿನ ಪರಿವಿಲ್ಲ ………ಯಾಕೆ ಅಂದ್ರೆ ನಮ್ದು ವರ್ಕ್ ಫ್ರಮ್ ಹೋಮ್ ಸ್ವಾಮಿ.. ಸಂಬಂಧಗಳು ಹಳಸಿವೆ,ಭಾವನೆಗಳ ತಿಳಿಯಲು ಸಮಯವಿಲ್ಲ………..ಮನೆಯೊಳಿದ್ದರೂ ಮನೆಯ […]
ದಿ.ಸದಿಯ ಸಾಹುಕಾರ್ ರವರ ಹ್ರದಯ ವೈಶಾಲ್ಯತೆಗೆ ಶರಣು ಶರಣಾರ್ತಿ
ಯಪ್ಪಾ..ಬರೋಬ್ಬರಿ 16.50 ಎಕ್ರೆ ಜಾಗ…ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದೆ. ಕೋಟಿ – ಕೋಟಿ ಬೆಲೆ ಬಾಳುವ ಆಸ್ತಿ ಎಂದು ಹುಬ್ಬೆರಿಸಿ ಆಶ್ಚರ್ಯ ಚಿಕಿತರಾಗಿ ಅಕ್ಕ ಪಕ್ಕದವರ ಜೊತೆ ಮಾತನಾಡುವ ಜನರನ್ನು ಕಂಡು ಹೀಗೆ ಸುಮ್ಮನೆ ಆಲೋಚಿಸತೋಡಗಿದೆ. ಆಧುನಿಕ ಬದುಕಿನ ಈ ನಾಗಾಲೋಟದಲ್ಲಿ ತಾನು,ತನ್ನದು,ತನ್ನದಷ್ಟಕ್ಕೆ ಎನ್ನುವ ಸ್ವಾರ್ಥಪರತೆಗೆ ಒಳಗಾದ ಜನತೆ ಇಂದು ಪರರ ಹಿತಾಸಕ್ತಿಗಿಂತ ಸ್ವ ಹಿತಾಸಕ್ತಿಗೆ ಹೆಚ್ಚು ಒತ್ತು ಕೊಡುತ್ತೀರುವುದು ವಾಸ್ತವ.ಈ ಸ್ವಾರ್ಥ ತುಂಬಿದ ಜಗತ್ತೀನಲ್ಲಿ ಒಂದಿಂಚು ಭೂಮಿಗೂ ಹೊಡೆದಾಡುವ ಮನುಷ್ಯರ […]
ಗುಣಾತ್ಮಕ ಶಿಕ್ಷಣ ನೀಡಲು ಸಜ್ಜಾಗಿದೆ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು
“ ಶಿಕ್ಷಣ ಭಾರತದ ಗ್ರಾಮೀಣ ಪ್ರದೇಶಗಳನ್ನು ತಲುಪಬೇಕು. ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಗುರಿಯನ್ನು ಸಾಧಿಸುವಂತಾಗಬೇಕು ” ಎಂಬ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರ ನುಡಿಯಂತೆ ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಪ್ರಮುಖವಾದದ್ದು. ಸ್ಪರ್ಧಾತ್ಮಕ ಜಗತ್ತಿನ ವೇಗದ ಜೊತೆಗೆ ಹೆಜ್ಜೆ ಹಾಕಲು ಇಂದಿನ ಯುವ ಪೀಳಿಗೆಗೆ ಸ್ಪರ್ಧಾತ್ಮಕತೆಗೆ ಅನುಗುಣವಾಗಿ ಭವಿಷ್ಯವನ್ನು ರೂಪಿಸಿಕೊಳ್ಳಲು ಕುಂದಾಪುರ ತಾಲೂಕಿನ ಹೆಮ್ಮಾಡಿಯ ಹೃದಯ ಭಾಗದಲ್ಲಿರುವ ಪ್ರಕೃತಿ ರಮಣೀಯ ಪರಿಸರದಲ್ಲಿ ಮೈ ತಳೆದು ನಿಂತಿರುವ […]
“ದೇಗುಲವೀ ದೇಹ”
ಹೃದಯವು ಬಲೂನಲ್ಲ ….ಆದರೂ ಗಾಳಿ ತುಂಬಿಸಿಕೊಳ್ಳುತ್ತೆರಕ್ತವು ನೀರಲ್ಲ …ಆದರೂ ದೇಹದೊಳಗೆ ಹರಿಯುತ್ತಿರುತ್ತೆಹೊಟ್ಟೆಯು ಚೀಲವಲ್ಲ…ಆದರೂ ಆಹಾರ ತುಂಬಿಸಿಕೊಳ್ಳುತ್ತೆಕೈಕಾಲುಗಳು ಯಂತ್ರವಲ್ಲ…ಆದರೂ ಪ್ರತಿಕ್ಷಣವೂ ಚಲನೆಯಲ್ಲಿರುತ್ತೆ ಎಲುಬುಗಳು ಕಬ್ಬಿಣವಲ್ಲ …ಆದರೂ ದೇಹಕ್ಕೆ ರಕ್ಷಣೆ ನೀಡುತ್ತೆಕೈ-ಬೆರಳುಗಳು ಅಳತೆಯ ಕೋಲಲ್ಲ…ಆದರೂ ಅಳತೆಗೆ ಉಪಯೋಗವಾಗುತ್ತೆಚರ್ಮ ಕಂಬಳಿಯಲ್ಲ…..ಆದರೂ ಬಿಸಿಲು ಮಳೆ ಚಳಿಗೆ ಕವಚವಾಗುತ್ತೆಕಣ್ಗಳೆರಡು ಸಮುದ್ರವಲ್ಲ….ಆದರೂ ದುಃಖದಿ ಉಕ್ಕಿ ಹರಿಯುತ್ತೆಮೆದುಳು ಸಾಧನವಲ್ಲ… ಆದರೂ ದೇಹದಾಂಗವ ಶೋಧಿಸುತ್ತಿರುತ್ತೆ… ಕವನ : ಜಗದೀಶ್ ಮೇಲ್ಮನೆ ಉಪ್ಪುಂದ
ಕನ್ನಡ ಭಾಷೆ – ರಕ್ಷಣೆ ಯಾರ ಹೊಣೆ ?
ಕನ್ನಡ ಇದು ಕನ್ನಡಿಗರ ಆಡುಭಾಷೆ. ಭಾಷಾ ಸೊಗಡಿನಲ್ಲಿ ಹಲವು ಕವಲುಗಳಿದ್ದರೂ ಕೊನೆಗೆ ಸ್ವಾಭಿಮಾನದ ಸಾಗರಕ್ಕೆ ಸೇರುವ ವಿಶಾಲವಾಗಿ ಹರಿಯುವ ನದಿ ನಮ್ಮ ಕನ್ನಡ . ಇಲ್ಲಿ ಊರಿಗೊಂದು ರೀತಿಯಲ್ಲಿ ಕನ್ನಡ ,ಹೊಸ ಅರ್ಥದ ಹೊಸ ಭಾವಗಳ ಪುಸ್ತಕ. ಈಗ ಈ ಪುಸ್ತಕ ನನ್ನದೂ ನಮ್ಮದು ಅನ್ನೋ ಹೆಮ್ಮೆಯಾಗಲಿ ಕಲಿಯುವ ಆಸೆಯಾಗಲಿ ಕಲಿತದ್ದನ್ನು ಬಳಸುವ ಔದಾರ್ಯವಾಗಲಿ ಎಲ್ಲವೂ ಬತ್ತಿ ಹೊಗುತ್ತಿರುವ ಸಾಗರದಂತೆನಿಸಿ ಬಿಟ್ಟಿದೆ. ಕನ್ನಡ ಬಳಸಬೇಕಾದ ನಾವು ಯಾರಿಗೋ ಕನ್ನಡ ಕಲಿಸೋ […]










