ಉಡುಪಿ ( ಆ,18): ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ ಬೆಂಗಳೂರಿನ ಬಸವನ ಗುಡಿಯಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಈಜು ಸ್ಪರ್ಧೆಯಲ್ಲಿ 400 ಮೀ ಇಂಡ್ ಮಿಡ್ಲೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿಧ್ಯಾರ್ಥಿನಿಯಾದ ಕುಮಾರಿ ಭೂಮಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಕಾರ್ಕಳದ ಶ್ರೀ ಕೆ. ವಿ ಪ್ರವೀಣ್ ಹಾಗೂ ಶ್ರೀಮತಿ ದೀಪ್ತಿ ಪ್ರಭು […]
Category: ಕಲೆ ಮತ್ತು ಸಂಸ್ಕೃತಿ
ಅ. 19 ರಂದು ಕಲಾಕ್ಷೇತ್ರದಲ್ಲಿ ಕಲ್ಯಾಣೋತ್ಸವ- ಯಕ್ಷಗಾನ ವೈಭವ
ಬೆಂಗಳೂರು (ಆ,18): ಕಲಾಕ್ಷೇತ್ರ ಯಕ್ಷಮಿತ್ರ ಬಳಗ ಬೆಂಗಳೂರು ಇವರ ಪ್ರಸ್ತುತಿಯಲ್ಲಿ ಸಾವಿತ್ರಿ ವೈಜಯಂತಿ ಗಿರಿಜಾ ಈ ಅಪರೂಪದ ಪೌರಾಣಿಕ ಯಕ್ಷಗಾನ ಪ್ರದರ್ಶನ ಬೆಂಗಳೂರಿನ ಯಕ್ಷ ಕೈಲಾಸವೆಂದು ಪ್ರಖ್ಯಾತಿ ಪಡೆದ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ (ರಿ) ಇವರ ಸಂಯೋಜನೆಯಲ್ಲಿ ಸುಪ್ರಸಿದ್ಧ ಕಲಾವಿದರು ಮತ್ತು ಅತಿಥಿ ಕಲಾವಿದರ ಸಂಗಮದಲ್ಲಿ ಅಕ್ಟೋಬರ್ 19 ರ ರಾತ್ರಿ 9:30ಕ್ಕೆ ನಡೆಯಲಿದೆ. ಯಕ್ಷಗಾನ ಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಈ […]
ಕಲರ್ಸ್ನಲ್ಲಿ ಹೊಸ ಧಾರಾವಾಹಿ ‘ನನ್ನ ದೇವ್ರು’ಜುಲೈ 8ರಿಂದ ನಿತ್ಯ ಸಂಜೆ 6:30ಕ್ಕೆ ಪ್ರಸಾರ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಮರಳಿ ಕಿರುತೆರೆಗೆ
ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾದ ಕಲರ್ಸ್ ಕನ್ನಡ ಇದೀಗ ‘ನನ್ನ ದೇವ್ರು’ ಎಂಬ ಹೊಸ ಕತೆಯನ್ನು ಹೊತ್ತು ತಂದಿದೆ. ಜುಲೈ 82024 ರಿಂದ ಪ್ರಸಾರ ಆರಂಭಿಸಲಿರುವ ಈ ಹೊಸ ಧಾರಾವಾಹಿಯನ್ನು ನೀವು ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ಸಂಜೆ 6.30 ಕ್ಕೆ ವೀಕ್ಷಿಸಬಹುದು. ‘ನನ್ನ ದೇವ್ರು’ ಧಾರಾವಾಹಿಯ ವಿಶೇಷವೆಂದರೆ “ಅಶ್ವಿನಿ ನಕ್ಷತ್ರ’ದಿಂದ ಮನೆಮಾತಾಗಿದ್ದ ಮಯೂರಿ ಮತ್ತೆ ಕಿರುತೆರೆಗೆ ಮರಳಿರುವುದು. ಈ ಧಾರಾವಾಹಿಯಲ್ಲಿ ಮಯೂರಿಯದು ಸಣ್ಣ ಊರಿನ ಬಡ […]
ಮೊಗವೀರ ಯುವ ಸಂಘಟನೆ -ಸಾಂಸ್ಕೃತಿಕ ಸ್ಪರ್ಧೆ: ಹೆಮ್ಮಾಡಿ ಘಟಕಕ್ಕೆ ಸಮಗ್ರ ಪ್ರಶಸ್ತಿ
ಕುಂದಾಪುರ (ನ.27): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ನೇತೃತ್ವದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.) ಅಂಬಲಪಾಡಿ ಸಹಯೋಗದಲ್ಲಿ ಕುಂದಾಪುರ ಘಟಕದ ಆತಿಥ್ಯದಲ್ಲಿ ಕುಂದಾಪುರದ ಮೊಗವೀರ ಭವನದಲ್ಲಿ ನವೆಂಬರ್ 26 ರಂದು ನಡೆದ ಜಿಲ್ಲಾ ವ್ಯಾಪ್ತಿಯ ಅಂತರ್ ಘಟಕಗಳ ಸಾಂಸ್ಕೃತಿಕ ಸ್ಪರ್ಧೆ-ಸಂಗಮ ದಲ್ಲಿ ಹೆಮ್ಮಾಡಿ ಘಟಕವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನಿಮ್ಮ ಆಯ್ಕೆ ವಿಭಾಗದಲ್ಲಿ ಪ್ರಥಮ ಸ್ಥಾನ, ಸಿನಿಮಾ ನ್ರತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಪ್ರಹಸನ ವಿಭಾಗದಲ್ಲಿ ದ್ವೀತಿಯ ಸ್ಥಾನವನ್ನು […]
ಆ.20 ರಂದು ಯುವ ಲೇಖಕ ಶ್ರೀರಾಜ್ ವಕ್ವಾಡಿಯವರ ಅತ್ತ ನಕ್ಷತ್ರ ನೀಳ್ಗತೆ ಪುಸ್ತಕ ಬಿಡುಗಡೆ
ಕುಂದಾಪುರ(ಆ,11): : ಜನಪ್ರತಿನಿಧಿ ಪ್ರಕಾಶನ ಪ್ರಕಟಿಸುವ ಕವಿ, ಲೇಖಕ ಕಾವ್ಯ ಬೈರಾಗಿ (ಶ್ರೀರಾಜ್ ವಕ್ವಾಡಿ) ಅವರ ಐದನೇ ಕೃತಿ ʼಅತ್ತ ನಕ್ಷತ್ರʼ ನೀಳ್ಗತೆ ಪುಸ್ತಕ ಬಿಡುಗಡೆ ಸಮಾರಂಭ ಆಗಸ್ಟ್ 20, ಆದಿತ್ಯವಾರ ಮಧ್ಯಾಹ್ನ 02:30ಕ್ಕೆ ಜನಪ್ರತಿನಿಧಿ ಕುಂದಾಪುರದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆಯ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕೃತಿ ಬಿಡುಗಡೆ ಮಾಡಲಿದ್ದಾರೆ. ಕವಿ, ಸಾಹಿತಿ ರಾಜ್ ಆಚಾರ್ಯ ಪುಣೆ, ಪ್ರಕಾಶಕರಾದ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು, […]
ಅಗಸ್ಟ್ 16 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ
ಕುಂದಾಪುರ (ಜು,25): ಯಕ್ಷ ಬ್ರಹ್ಮಶ್ರೀ ತಂಡದವರ ಆಶ್ರಯದಲ್ಲಿ ಅಗಸ್ಟ್ 16 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಲಿಗ್ರಾಮ ಮತ್ತು ಸೌಕೂರು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಎರಡನೇ ವರ್ಷದ ಅದ್ದೂರಿ ಯಕ್ಷಗಾನದ ಪ್ರದರ್ಶನದ ನಡೆಯಲಿದೆ . ಆ ಪ್ರಯುಕ್ತ ಯಕ್ಷಗಾನದ ಕರಪತ್ರ ಮತ್ತು ಬೇಲ್ತೂರು ಕ್ಷೇತ್ರ ಮಹಾತ್ಮೆ ಎಂಬ ಪ್ರಸಂಗವನ್ನು ಮಾಜಿ ಸಂಸದರು,ಮಾಜಿ ಸಚಿವರು ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾದ, ಕೆ.ಜಯಪ್ರಕಾಶ್ ಹೆಗ್ಡೆ ಅವರು ಬಿಡುಗಡೆ ಮಾಡಿದರು. […]
ಗುಜ್ಜಾಡಿ: ಪ್ರಶಾಂತ್ ಆಚಾರ್ಯರ ಕೈಚಳದಲ್ಲಿ ಮೂಡಿದ ಮಾರಣಕಟ್ಟೆ ಮೇಳದ ರಂಗಸ್ಥಳ
ಗುಜ್ಜಾಡಿ (ಫೆ. 5): ಉದಯೋನ್ಮುಖ ಕಲಾವಿದ ಪ್ರಶಾಂತ್ ಆಚಾರ್ಯ ಗುಜ್ಜಾಡಿ ತಮ್ಮ ಕೈಚಳಕದಿಂದ ಮಾರಣಕಟ್ಟೆ ಮೇಳದ ರಂಗಸ್ಥಳ ಮಾದರಿಯ ಚಿಕ್ಕ ರಂಗಮಂಠಪವನ್ನು ರಚಿಸಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆ ಇದರ ಆಡಳಿತ ಮೊಕ್ತೇಸರರಾದ ಸದಾಶಿವ ಶೆಟ್ಟಿ ಯವರ ಮೂಲಕ ಶ್ರೀ ದೇವರ ಸನ್ನಿಧಿಗೆ ಹಸ್ತಾಂತರಿಸಿದರು. ಪ್ರಶಾಂತ್ ಆಚಾರ್ಯ ತೆಂಕಮನೆ ಗುಜ್ಜಾಡಿ , ವೃತ್ತಿಯಲ್ಲಿ ಪ್ಲೈವುಡ್ ,ಅಲ್ಯೂಮಿನಿಯಂ ಹಾಗೂ ಫೈಬರ್ ಡೋರ್ ವರ್ಕ್ ,ರಂಗಸ್ಥಳ ಮಾದರಿಯ ಮಂಟಪ ,ರಬ್ಬರ್ ಮರ,ಬಟ್ಟೆ ,ರೇಡಿಯಂ […]
ಗಂಗೊಳ್ಳಿ:ಮರಣಿ ಮಾಂಟೆ ನಾಟಕ ಪ್ರದರ್ಶನ
ಗಂಗೊಳ್ಳಿ(ಡಿ.18): ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ವಿದ್ಯಾರ್ಥಿಗಳು ಮರಣಿ ಮಾಂಟೆ ಎನ್ನುವ ಭಿನ್ನ ಶೈಲಿಯ ನಾಟಕ ಇತ್ತೀಚೆಗೆ ಪ್ರದರ್ಶನಗೊಂಡಿತು . ಸಾವಿನ ದೇವತೆಯೊಂದಿಗೆ ಹೋರಾಡುವ ಕುತೂಹಲಕಾರಿ ಕಥಾನಕವನ್ನು ಮರಣಿ ಮಾಂಟೆ ನಾಟಕವು ಒಳಗೊಂಡಿದ್ದು ಇದನ್ನು ಇಲ್ಲಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ರಚಿಸಿ ನಿರ್ದೇಶಿಸಿದ್ದಾರೆ. ಶ್ರಾವ್ಯ ಎನ್, ನಿಶಾ ಬಿ ಪೂಜಾರಿ ಹೃತಿಕ, ದಿಯಾ, ಅಮೀಕ್ಷಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಒಟ್ಟು […]
ಯಕ್ಷಗಾನ ಯಕ್ಷ ಚೆಲುವೆ ಶರತ್ ಶೆಟ್ಟಿ ತೀರ್ಥಳ್ಳಿ
ಯಕ್ಷಗಾನದಲ್ಲಿ ಸ್ತ್ರೀ ಪಾತ್ರಕ್ಕೆ ವಿಭಿನ್ನ ಮತ್ತು ವಿಶಿಷ್ಟ ವೇಷಭೂಷಣದ ಮೆರಗು ಇರುವುದು ಯಕ್ಷಗಾನ ಪ್ರಿಯರಿಗೆ ತಿಳಿದ ವಿಷಯ. ಸಾಂಪ್ರದಾಯಿಕ ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವುದು ಕಲಾವಿದರಿಗೆ ಒಂದು ಸವಾಲೇ ಸರಿ. ಸ್ವರದ ಸಮತೋಲನ ತನ್ನದಲ್ಲದ ನಯ ವಿನಯ ವಯ್ಯಾರ ತನ್ನ ಪಾತ್ರದಲ್ಲಿ ತಂದು ಪಾತ್ರಕ್ಕೂ ನ್ಯಾಯ ಒದಗಿಸುತ್ತ ಅಭಿಮಾನಿಗಳನ್ನು ಆಕರ್ಷಿಸುತ್ತ ಯಕ್ಷಗಾನದಲ್ಲಿ ಒಂದು ಭದ್ರವಾದ ಸ್ಥಾನವನ್ನು ಪಡೆಯಲು ಹರಸಾಹಸ ಮಾಡಬೇಕಾಗುತ್ತದೆ. ಪಾತ್ರದ ಒಳಹೊಕ್ಕು ಸ್ತ್ರಿ ವೈಯಾರಗಳಲ್ಲಿ ಹೆಣ್ಣನ್ನೇ ನಾಚಿಸುವ […]
ಗಂಗೊಳ್ಳಿಯಲ್ಲಿ ಗೂಡುದೀಪ ಸ್ಪರ್ಧೆ
ಗಂಗೊಳ್ಳಿ(ಅ,19): ಡಾ.ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ ಗೂಡುದೀಪ ಸ್ಪರ್ಧೆಯನ್ನು ಅಕ್ಟೋಬರ್ 24 ರಂದು ಹಮ್ಮಿಕೊಳ್ಳಲಾಗಿದೆ. ಪ್ರಥಮ ದ್ವಿತೀಯ ಮತ್ತು ತೃತೀಯ ನಗದು ಬಹುಮಾನಗಳು ಇವೆ. ಸ್ವಂತ ರಚನೆಯ ಆಧುನಿಕ ಮತ್ತು ಸಾಂಪ್ರದಾಯಿಕ ಶೈಲಿಯ ಗೂಡುದೀಪಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿದ್ದು ಅಕ್ಟೋಬರ್ 23ರ ಒಳಗೆ ಸ್ಪರ್ಧಾಳುಗಳು ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 7406196138, 9481751521, 9535633230 9632867885 ನಂಬರನ್ನು ಸಂಪರ್ಕಿಸಲು ಕೋರಲಾಗಿದೆ. ವರದಿ : ನರೇಂದ್ರ […]