ಬಾರ್ಕೂರು( ಏ.8): ಬಾರ್ಕೂರಿನ ಶ್ರೀ ಪಂಚ ಲಿಂಗೇಶ್ವರ ದೇವಾಲಯದ ರಥೋತ್ಸವದ ಸಂದರ್ಭದಲ್ಲಿ ಪಿ ಕಾಳಿಂಗ ರಾವ್ ಪ್ರತಿಷ್ಠಾನ ಬೆಂಗಳೂರು ಇವರು ಏರ್ಪಡಿಸಿದ “ಜಾನಪದ ವೈಭವ” ಕಾರ್ಯಕ್ರಮ ಏ.08 ರಂದು ನಡೆಯಿತು. ಈ ಕಾರ್ಯಕ್ರಮವನ್ನು ನಾಡಿನ ಖ್ಯಾತ ಸುಗಮ ಸಂಗೀತ ಗಾಯಕ ಡಾ.ಗಣೇಶ್ ಗಂಗೊಳ್ಳಿ ಹಾಗೂ ಬಳಗದವರು ಜಾನಪದ ವೈಭವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಡಾ.ಗಣೇಶ್ ಗಂಗೊಳ್ಳಿ ಅವರನ್ನು ಕಾಳಿಂಗ ರಾವ್ ಪ್ರತಿಷ್ಠಾನದ ವತಿಯಿಂದ ಶ್ರೀ ರಾಮಚಂದ್ರ ನಾಯಕ್ ಸರ್ಕಲ್ […]
Category: ಕಲೆ ಮತ್ತು ಸಂಸ್ಕೃತಿ
ಉಪ್ಪುಂದ: ಮಾ. 6 ರಂದು ಜ| ಬಿಪಿನ್ ರಾವತ್ ಕೃತಿ ಲೋಕಾರ್ಪಣೆ
ಬೈಂದೂರು (ಫೆ.26): ಭಾರತೀಯ ಸೇನೆಯನ್ನು ಸ್ವಾವಲಂಬಿ ಮತ್ತು ಶಕ್ತಿಶಾಲಿಯಾಗಿಸಲು ಸೇವಾಕಾಲದುದ್ದಕ್ಕೂ ಶ್ರಮಿಸುತ್ತಾ, ಕಳೆದ ವರ್ಷ ಡಿ.8 ರಂದು ಹೆಲಿಕಾಪ್ಟರ್ ದುರ್ಘಟನೆಯಲ್ಲಿ ವಿಧಿವಶರಾದ ಪದ್ಮವಿಭೂಷಣ CDS ಜ. ಬಿಪಿನ್ ರಾವತ್ ಅವರ ಪ್ರೇರಣಾದಾಯಿ ವ್ಯಕ್ತಿತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ದೃಷ್ಟಿಯಿಂದ ಮಾಜಿ ಸೈನಿಕ, ಲೇಖಕ ಬೈಂದೂರು ಚಂದ್ರಶೇಖರ ನಾವಡರು `ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್` ಕೃತಿ ರಚಿಸಿರುತ್ತಾರೆ. ಮಂಗಳೂರಿನ ಅವನಿ ಪ್ರಕಾಶನ ಕೃತಿಯನ್ನು ಹೊರತಂದಿದೆ.ಕೃತಿ ಲೋಕಾರ್ಪಣೆ ಸಮಾರಂಭವು ಭಾನುವಾರ ಮಾ. 6 […]
ಶ್ರೀ ಚಂದ್ರಶೇಖರ್ ಬಸ್ರೂರು ರವರಿಗೆ “ಭಾರತ ಸೇವಾ ರತ್ನ ಪ್ರಶಸ್ತಿ”
ಕುಂದಾಪುರ (ಫೆ.24):ಸುದ್ದಿ ಕಿರಣ ಟಿವಿ ವಾಹಿನಿ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕೊಡಮಾಡುವ “ಭಾರತ ಸೇವಾ ರತ್ನ ಪ್ರಶಸ್ತಿ” ಯನ್ನು ಶ್ರೀ ಚಂದ್ರಶೇಖರ ಬಸ್ರೂರು ರವರಿಗೆ ಲಭಿಸಿದೆ. ಫೆ. 20 ರಂದು ರವೀಂದ್ರ ಕಲಾ ಕ್ಷೇತ್ರದ ನಯನ ಸಭಾಂಗಣ ಬೆಂಗಳೂರು ಇಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ರಂಗಭೂಮಿ ಕಲಾವಿದರಾಗಿ,ನಾಟಕ ರಚನೆ ಹಾಗೂ ನಿರ್ದೇಶಕರು,ಸಿನಿಮಾ ನಟ,ನಿರ್ದೇಶಕ,ನಿರ್ಮಾಪಕರಾಗಿ,ಸಾರ್ವಜನಿಕ ಹೋರಾಟದಲ್ಲಿ ಮುಂಚೂಣಿಯಾಗಿ ಇವರು ಸೇವೆ ಸಲ್ಲಿಸಿರುತ್ತಾರೆ.
ಪ್ರೇಕ್ಷಕರ ಮನಗೆದ್ದ ಇಷ್ಟಾರ್ಥ ಪ್ರೊಡಕ್ಷನ್ಸ್ ಹೊಸ ತಂಡ
ಕಿರುಚಿತ್ರ ಲೋಕದಲ್ಲಿ ದಿನೇ ದಿನೇ ಹೊಸ ಪ್ರತಿಭೆಗಳು ಪರಿಚಯವಾಗುತ್ತಿದೆ. ಆ ಸಾಲಿನಲ್ಲಿ ಈಗ ಕುಂದಾಪುರದ ‘ಇಷ್ಟಾರ್ಥ ಪ್ರೊಡಕ್ಷನ್’ ಎನ್ನುವ ಹೊಸ ತಂಡ ಮೊದಲ ಹೆಜ್ಜೆ ಇಟ್ಟಿದೆ.ನಟನೆಯಿಂದ ನಿರ್ದೇಶನದ ತನಕ ಮೊದಲ ಬಾರಿಗೆ ಹೊಸ ಪ್ರತಿಭೆಗಳು ಸೇರಿಕೊಂಡು ಮಾಡಿರುವ “ಕಲ್ಮಶ” ಎನ್ನುವ ಕಿರುಚಿತ್ರ ಈಗ ಪ್ರೇಕ್ಷಕರ ಮನಗೆದ್ದು ಎಲ್ಲೆಡೆ ಸದ್ದು ಮಾಡುತ್ತಿದೆ.ಗೆಳೆತನದ ನಡುವೆ ಸ್ವಾರ್ಥ ಎಂಬುದು ಬಂದಾಗ ಏನಾಗಬಹುದು ಎಂಬುದನ್ನ ಎಳೆಯಾಗಿ ಇಟ್ಟುಕೊಂಡು ಮಾಡಿರುವ ಚಿತ್ರ, ಪ್ರೇಕ್ಷಕರ ಕುತೂಹಲಕ್ಕೆ ಕೊನೆತನಕ ತಿರುವುಗಳು […]
ಕಂದಾವರದ ಕೆಂದಾವರೆಗೆ ಕಿರೀಟ ಪ್ರಶಸ್ತಿ ಪ್ರದಾನ ( ಮಾರಣಕಟ್ಟೆ ಹಬ್ಬದಲ್ಲಿ ನೈಕಂಬ್ಳಿ ಸಂಯೋಜನೆಯ ಯಕ್ಷಸಂಕ್ರಾಂತಿ ಯಕ್ಷಗಾನ)
ಕುಂದಾಪುರ (ಜ.15): ಮಕರ ಸಂಕ್ರಾಂತಿಯಂದು ಮಾರಣಕಟ್ಟೆ ಹಬ್ಬದಲ್ಲಿ ಜರುಗಿದ ಪಾವಂಜೆ ಮೇಳದ ಯಕ್ಷಗಾನ ಬಯಲಾಟದಲ್ಲಿ ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಅವರಿಗೆ ನಾಗರಾಜ್ ಶೆಟ್ಟಿ ನೈಕಂಬ್ಳಿ ನೇತೃತ್ವದ ಯಕ್ಷ ಸಂಕ್ರಾಂತಿಯ ‘ಕಿರೀಟ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕಂದಾವರ ರಘುರಾಮ ಶೆಟ್ಟಿಯವರು, ಯಕ್ಷಗಾನ ಅಮೋಘವಾದ ಕಲೆ. ದೀರ್ಘವಾಗಿ ಸಾಗಿ ಬಂದ ಈ ಕಲೆ ವಿಚಾರಶೀಲರು, ಜಿಜ್ಞಾಸುಗಳು, ಸಾಮಾನ್ಯ ಹಳ್ಳಿಯ ಜನರನ್ನೂ ತಲುಪುವ ಸಾಮರ್ಥ್ಯ ಹೊಂದಿದ ಪ್ರಭಾವಿ ಕಲೆಯಾಗಿದೆ. ಯಕ್ಷಗಾನಕ್ಕೆ […]
ಆ 90 ದಿನಗಳು ಸಿನಿಮಾದ ಫಸ್ಟ್ ಲುಕ್, ಪೋಸ್ಟರ್, ಟ್ರೈಲರ್ ಮತ್ತು ಹಾಡು ಬಿಡುಗಡೆ
ಬಸ್ರೂರು(ಜ.3): ರಾಷ್ಟ್ರಪ್ರಶಸ್ತಿ ಪುರಸ್ಕೃತ ಯಾಕೂಬ್ ಖಾದರ್ ಗುಲ್ವಾಡಿ ಹಾಗೂ ರೊನಾಲ್ಡ್ ಲೋಬೊ ನಿರ್ದೇಶನದ ಕರಾವಳಿಯ ಯುವ ಪ್ರತಿಭೆಗಳನ್ನೊಳಗೊಂಡ ಆ 90 ದಿನಗಳು ಸಿನಿಮಾದ ಫಸ್ಟ್ ಲುಕ್ ಪೋಸ್ಟರ್, ಟೈಲರ್ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮ ಜ.02 ರಂದು ಗುಲ್ವಾಡಿಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ,ನಾಡೋಜ ಡಾ. ಜಿ ಶಂಕರ್ ,ಖ್ಯಾತ ಚಲನಚಿತ್ರ ನಿರ್ದೇಶಕ,-ನಟ ರಿಷಬ್ ಶೆಟ್ಟಿ ,ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ,ಹಿರಿಯ ನ್ಯಾಯವಾದಿ […]
•••ಅವಳೆಂದರೆ•••
ನಾ ಹೇಗೆ ವರ್ಣಿಸಲಿ ನಿನ್ನ ಪುಸ್ತಕ ಪೆನ್ನುಗಳಿಗೆ ಸೀಮಿತವೇ … ನಿನ್ನೆಲ್ಲಾ ಅನುರಣನ ನೆನಪುಗಳು..? ನಾಲ್ಕು ಸಾಲು ಗೀಚಿದರೆ ಮುಗಿಯಿತೇ ನಮ್ಮೆಲ್ಲ ಸ್ನೇಹ ಸಂಬಂಧಗಳು….?? ತಡಕಾಡುವುದೀ ಮನ ಹೊಸ ಪದ ಹುಡುಕಲು…. ಮಿಡಿಯುವುದೀ ಕ್ಷಣ ನಿನ್ನತನವ ಗುರುತಿಸಲು…. ನಾ ಹೇಗೆ ಬರೆಯಲಿ ಹೇಳು….. ಪದಕಡಲ ಸಾಮ್ರಾಜ್ಞಿ ನೀನು…. ಪದ ಪೋಣಿಸುವ ತಿರುಕ ನಾನು…. ಒಮ್ಮೊಮ್ಮೆ ಯೋಚಿಸುವೆ ನಿನ್ನ ನೆರಳ … ಚಿತ್ರಿಸುವ ಕಲಾಕಾರ ನಾನು…. ಚಿತ್ರಭಂಡಾರವೇ ನೀನಾಗಿರುವಾಗ ನಾನೆಷ್ಟು ಗೀಚಲಿ ಹೇಳುನಿನ್ನ […]
ಆಚ್ಲಾಡಿ ಗ್ರಾಮದ ಸೊಬಗು
ಕನ್ನಡ ಕರಾವಳಿ ಪ್ರಕ್ರತಿಯ ರಮಣೀಯ ತಾಣ. ಒಂದೆಡೆ ಪಶ್ಚಿಮ ಘಟ್ಟದ ಸಾಲಾದರೆ, ಇನ್ನೊಂದೆಡೆ ಕಡಲ ಕಿನಾರೆ ಕರಾವಳಿಗೆ ಸಾಕಷ್ಟು ಮೆರುಗು ನೀಡಿದೆ. ಸದಾ ಹಸಿರುಟ್ಟ ಭೂತಾಯಿ ಇಲ್ಲಿ ಸಂತಸದ ನಗೆ ಬೀರುತ್ತಿದ್ದಾಳೆ. ವಿದ್ಯಾ ದೇವತೆ ಕೂಡ ಇಲ್ಲಿ ಪ್ರಸನ್ನಳಾಗಿದ್ದಾಳೆ ಎನ್ನುವುದು ಹೆಮ್ಮೆ ವಿಷಯ . ಇಂತಹ ಪುಣ್ಯ ಭೂಮಿಯಲ್ಲಿನ ಜನ ಅನಾದಿ ಕಾಲದಿಂದಲೂ ದೈವ ದೇವರಲ್ಲಿ ಅಪಾರ ನಂಬಿಕೆ ಇಟ್ಟವರು. ಉಡುಪಿ ಹಾಗೂ ದಕ್ಷಿಣ ಕನ್ನಡ ಹತ್ತು ಹಲವು ಪುರಾತನ […]
ಹೆಮ್ಮಾಡಿ:ಮನೆ ಮನೆ ಭಜನೆ ಕಾರ್ಯಕ್ರಮ
ಹೆಮ್ಮಾಡಿ(ನ,28): ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಕುಂದಾಪುರ, ವಂಡ್ಸೆ ವಲಯ ಭಜನಾ ಒಕ್ಕೂಟ ಹಾಗೂ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂಡಳಿ ಹೆಮ್ಮಾಡಿ ಸಹಯೋಗದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂಡಳಿ ಹೆಮ್ಮಾಡಿ ಯವರ 20 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮನೆ ಮನೆ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮನೆ ಮನೆ ಭಜನೆ ಶ್ರೀ ರಾಮನಾಮ ಹರಿ ಸ್ಮರಣೆ, 108 ಮನೆಯಂಗಳದಲ್ಲಿ ಭಜನಾ ಕಾರ್ಯಕ್ರಮ ಮತ್ತು ಭಜನಾ ತಾಳ […]
ಗ್ರಾಮ ವಿಕಾಸ ಸಮಿತಿ ಪಡು ಗೋಪಾಡಿ : ಮನೆ ಮನೆ ಭಜನೆ ಕಾರ್ಯಕ್ರಮ
ಗೋಪಾಡಿ(ನ,25): ಗ್ರಾಮ ವಿಕಾಸ ಸಮಿತಿ ಪಡು ಗೋಪಾಡಿ ಆಯೋಜನೆಯಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕುಟುಂಬ ಪ್ರಬೋಧನ ಪ್ರಮುಖ್ ಗುರುರಾಜ್ ರಾವ್. ಕೋಟೇಶ್ವರ ರವರು ಇತ್ತೀಚೆಗೆ ಚಾಲನೆ ನೀಡಿದ್ದು, ಭಜನೆಯ ಮೂಲಕ ಜನರಲ್ಲಿ ಭಕ್ತಿ ಮತ್ತು ಧಾರ್ಮಿಕ ಶ್ರದ್ಧೆಯನ್ನು ಉದ್ದೀಪನಗೊಳಿಸುವ ನೆಲೆಯಲ್ಲಿ ಗೋಪಾಡಿ ಪಡು ಗ್ರಾಮ ವಿಕಾಸ ಸಮಿತಿಯ ಸಂಚಾಲಕ ಸುರೇಂದ್ರ ಸಂಗಮ್ ರವರ ನೇತೃತ್ವದಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಯಾವುದೇ ರೀತಿಯ ಹಣ […]