ಕಾಳಾವರ(ನ,20): ಕಾಳಾವರ ಶ್ರೀ ಮಹಾಲಿಂಗೇಶ್ವರ ಹಾಗೂ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದ ವರ್ಷಂಪ್ರತಿ ನಡೆಯುವ ಷಷ್ಠಿ ಪ್ರಯುಕ್ತ ಪೂರ್ವಭಾವಿ ಸಭೆ ದೇವಸ್ಥಾನದ ವಠಾರದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಹೆಗ್ಡೆ ಶಾನಾಡಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಷಷ್ಠಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಸಮಿತಿಯ 9 ಸದಸ್ಯರು ಅನಾವರಣಗೊಳಿಸಿದರು. ಶ್ರೀ ಚಂದ್ರಶೇಖರ ಹೆಗ್ಡೆ ಯವರು ಅಧ್ಯಕ್ಷೀಯ ನೆಲೆಯ ಮಾತುಗಳನ್ನಾಡಿ ಉತ್ಸವಕ್ಕೆ ಗ್ರಾಮಸ್ಥರ ಸಹಕಾರವನ್ನು ಕೋರಿದರು. ಈ ಸಂದರ್ಭದಲ್ಲಿ ಪೊಲೀಸ್ […]
Category: ಕಲೆ ಮತ್ತು ಸಂಸ್ಕೃತಿ
ಬೆಂಗಳೂರು: ನರಕಾಸುರ ವಧೆ ಯಕ್ಷಗಾನ ಪ್ರದರ್ಶನ
ಬೆಂಗಳೂರು (ನ,20): ಟೀಮ್ ಉತ್ಸಹಿ ಬೆಂಗಳೂರು ತಂಡ ಮತ್ತು ಬಡಗುತಿಟ್ಟಿನ ಸುಪ್ರಸಿದ್ಧ ಅತಿಥಿ ಕಲಾವಿದರ ಸಂಗಮದಲ್ಲಿ ” ನರಕಾಸುರ ವಧೆ” ಎನ್ನುವ ಪೌರಾಣಿಕ ಯಕ್ಷಗಾನ ಪ್ರಸಂಗವು ಬೆಂಗಳೂರಿನ ಕತ್ರಿಗುಪ್ಪೆ ಹೋಟೆಲ್ ಅನ್ನಕುಟೀರದ ಸಭಾಂಗಣದಲ್ಲಿ ವೈಭವದಿಂದ ಪ್ರದರ್ಶನಗೊಂಡಿತು. ಬಡಗು ತಿಟ್ಟಿನ ಹಿರಿಯ ಭಾಗವತರಾದ ಹೆರಂಜಾಲು ಗೋಪಾಲ ಗಾಣಿಗ ರವರ ಹಿಮ್ಮೇಳ , ಕಲಾವಿದರಾದ ನಾಗ ಶ್ರಿ ಜಿ.ಎಸ್ , ಅರ್ಪಿತ ಹೆಗ್ಡೆ ಮತ್ತು ಸಹ ಕಲಾವಿದರು ರಂಗವನ್ನು ವೈಭಿಕರಿಸಿದರು. ವರದಿ: ರಾಘವೇಂದ್ರ […]
ಕoಬದಕೋಣೆ: ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಆರ್. ಕೆ. ಸಂಜೀವರಾಯರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ
ಕoಬದಕೋಣೆ(ನ,16);“ಸ್ವರಾಜ್ಯ ೭೫” ರವರ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆ ಅಭಿಯಾನದ ಪ್ರಯುಕ್ತ ಕoಬದಕೋಣೆಯ ದಿವಂಗತ ಆರ್. ಕೆ. ಸಂಜೀವರಾಯರ ಮನೆಯಲ್ಲಿ ನ,13 ರ ಶನಿವಾರದಂದು ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶ್ರೀ ಜನಾರ್ಧನ್ ಮರವಂತೆ ಯವರು ನಾಮಫಲಕವನ್ನು ಅನಾವರಣ ಮಾಡಿದರು. ನಂತರ ಸರ್ವರು ದಿವಂಗತ ಸಂಜೀವರಾಯ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಲ್ಲಿಸಿದರು. ಶ್ರೀ.ಬಿ ಪಿ ಶಿವಾನಂದ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.”ಸ್ವರಾಜ್ಯ75″ ರ ಸಂಚಾಲಕರಾದ ಪ್ರದೀಪ್ ಕುಮಾರ್, ಬಸ್ರೂರು […]
ಜಿಲ್ಲಾಮಟ್ಟದ ಸಾಂಸ್ಕೃತಿಕ ಉತ್ಸವ ಕಲಾ ಸಂಗಮ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ರೋಟರಾಕ್ಟ್ ಕ್ಲಬ್ ಚಾಂಪಿಯನ್
ಬ್ರಹ್ಮಾವರ(ನ ,17):ರೋಟರಿ ಕ್ಲಬ್ ಬ್ರಹ್ಮಾವರದ ಆಶ್ರಯದಲ್ಲಿ ಅಲ್ಲಿನ ರೋಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ಬ್ರಹ್ಮಾವರದ ರೋಟರಿ ಹಾಲ್ ನಲ್ಲಿ ಕಳೆದ ಶನಿವಾರ ರೋಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಉತ್ಸವ ಕಲಾ ಸಂಗಮದಲ್ಲಿ ಅತ್ಯುತ್ತಮವಾದ ನಿರ್ವಹಣೆಯನ್ನು ನೀಡುವ ಮೂಲಕ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಾಕ್ಟ್ ಕ್ಲಬ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಎಂಟು ತಂಡಗಳು ಭಾಗವಹಿಸಿದ್ದ ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾಲಯದ ರೋಟರಾಕ್ಟ್ ವಿದ್ಯಾರ್ಥಿಗಳು ನಿರೂಪಣೆಯಲ್ಲಿ ಪ್ರಥಮ […]
ಸಂಜಿತ್ ಎಂ ದೇವಾಡಿಗ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ
ಕಾರ್ಕಳ( ನ ,17): ಕಾರ್ಕಳದ ಅಜೆಕಾರುವಿನ ಶ್ರೀ ರಾಮಮಂದಿರದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ , ಉಡುಪಿ ಜಿಲ್ಲಾ ಪತ್ರಕರ್ತರ ವೇದಿಕೆ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ 2021ರ ಸಮಾರಂಭದಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಬಾಲ ಕಲಾವಿದ ಸಂಜಿತ್ ಎಂ ದೇವಾಡಿಗ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮವನ್ನು ನೀಡಿದರು. ತವಿಲ್ ನಲ್ಲಿ ಗೋಪಾಲ ದೇವಾಡಿಗ, ಮತ್ತು ಹರ್ಷವರ್ಧನ್ ಖಾರ್ವಿ, ತಾಳದಲ್ಲಿ ಮಾಧವ […]
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ: ಖ್ಯಾತ ಗಾಯಕ ಡಾ.ಗಣೇಶ್ ಗಂಗೊಳ್ಳಿ ಯವರಿಗೆ ಸನ್ಮಾನ
ಕೋಟೇಶ್ವರ (ನ,14): ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ ಇಲ್ಲಿ ನ,14 ರಂದು ನಡೆದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ರವರ ಜನ್ಮ ದಿನಾಚರಣೆಯ ಅಂಗವಾಗಿ ಆಚರಿಸಲಾಗುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಶಾಲಾಭಿವೃದ್ಧ ಸಮಿತಿಯ ಮಾಜಿ ಅಧ್ಯಕ್ಷರು, ತಮಿಳುನಾಡು ಹೊಸೂರಿನ ಇಂಡಿಯನ್ ಎಂಪಾಯಾರ್ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಪಡೆದ ಖ್ಯಾತ ಗಾಯಕರಾದ ಡಾ.ಗಣೇಶ್ ಗಂಗೊಳ್ಳಿ ಅವರನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ […]
ಉಡುಪಿ: ಜಾನಪದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಉಡುಪಿ (ನ,9): ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗೂ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜಾನಪದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನ,08 ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿ ರವರು ಮಾತನಾಡಿ ಜಾನಪದ ಮೂಕಾದರೆ ಮಾನವ ಜಾನಂಗ ಮೂಕ ಆದಂತೆ,ಆದ್ದರಿಂದ ಜಾನಪದ ಕಲೆ ಸಂಸ್ಕತಿಯನ್ನು ಇಂದಿನ ಯುವ ಜನಾಂಗ ಉಳಿಸಿ ಬೆಳೆಸ ಬೇಕೆಂದು […]
ಉಡುಪಿ: ನ ,08 ರಂದು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ
ಉಡುಪಿ (ನ,06): ಕನ್ನಡ ಜಾನಪದ ಪರಿಷತ್ ಬೆಂಗಳೂರು,ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಉಡುಪಿ ಜಿಲ್ಲೆ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮವು ನ,8 ರಂದು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿಯವರು ನೆರವೇರಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರುದ್ರೇಗೌಡ ರವರು […]
ದೀಪಾವಳಿಯ ನೆನಪಿನಂಗಳ
ದೀಪಾವಳಿ ……ದೀಪಾವಳಿ…………. ಗೋವಿಂದ ಲೀಲಾವಳಿ.. ಅಳಿಯ ಮಗನಾ…….. ” ಹರಿಯಾ ಆ ಟೇಪ್ ಸೌಂಡ್ ಒಂಚೂರ್ ಕಮ್ಮಿ ಮಾಡ್.. ಕೆಮಿ ಕೆಪ್ಪ್ ಆಯ್ತಾ ನಿಮ್ದ್?”… ಗಡಾ ಹೋಯ್ ಕಮ್ಮಿ ಮಾಡ್, ಇಲ್ದಿರ್ ಅಪ್ಪ ಪಟಾಕಿಗ್ ದುಡ್ದ್ ಕೊಡುದಿಲ್ಲ.. ಹ್ಮಾಂ.. ಸರಿ; ಗಳಿನ್ ಒಟ್ಟಿಯಂಗ್ ದುಡ್ಡ್ ಇಟ್ಟದ್ ತೆಗುವಾ? ಪಟಾಕಿಗ್ ಆತ್ತ್…. ಉದ್ದ ತೆಮಿಗ್ ಕಟ್ಟದ್, ಬಿದ್ರಂಗ್ ಮಾಡದ್ ಗೂಡ್ ದೀಪ ಗಾಳಿಗ್ ಬಾಲ ಬೀಸ್ತಾ ಇತ್ತು…ಬಿಸ್ಲ್ ನೆತ್ತಿಗ್ ಏರುಕ್ ಹತ್ತಿತ್…. ಸೆಗ್ಣಿ […]
ಉಡುಪಿ: ನವರಾತ್ರಿಯ ಸಂಭ್ರಮದಲ್ಲಿ ಮಹಿಳೆಯರು
ಉಡುಪಿ (ಅ.8): ನವರಾತ್ರಿಯ ಸಡಗರ ದೇಶದೆಲ್ಲೆಡೆ ಮನೆ ಮಾಡುತ್ತಿದ್ದು, ವಿವಿಧ ಸಂಘ -ಸಂಸ್ಥೆ ಗಳಲ್ಲಿ ,ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳು ಬಣ್ಣ ಬಣ್ಣದ ಉಡುಗೆ ತೊಡುಗೆ ಗಳಲ್ಲಿ ಕಂಗೊಳಿಸಿತ್ತಿದ್ದು ,ನವರಾತ್ರಿಯ ಸಂಭ್ರಮಕ್ಕೆ ಮೆರುಗು ನೀಡುತ್ತಿದ್ದಾರೆ. ಉಡುಪಿಯಲ್ಲಿ ಮಹಿಳೆಯರು ನವರಾತ್ರಿಯ ಪ್ರಯುಕ್ತ ಬಣ್ಣ ಬಣ್ಣದ ಉಡುಗೆ ತೊಡುಗೆಯೊಂದಿಗೆ ಫೋಟೋಗೆ ಫೋಸ್ ನೀಡಿದ ಕ್ಷಣ.