ಮ್ಮ ಕರಾವಳಿ ಭಾಗದಾದ್ಯಂತ ಹೊಸ ಫಸಲಿನ ಕದಿರುಕಟ್ಟುವ ಪೂಜೆ ಸಂಪ್ರದಾಯಕವಾಗಿ ರೂಡಿಯಲ್ಲಿರುವ ಹಬ್ಬ.ವಿಶೇಷವಾಗಿ ನವರಾತ್ರಿ ಸಂದರ್ಭದಲ್ಲಿ ಆಚರಿಸುವ ಈ ಹಬ್ಬದಂದು ಮನೆ ಮಂದಿಯಲ್ಲಾ ಸಂತಸದಿಂದ ಆಚರಿಸುತ್ತಾರೆ. ಕರಾವಳಿಯ ಕೃಷಿ ಪರಂಪರೆಯಲ್ಲಿ ಮತ್ತು ಸಂಪ್ರದಾಯದಲ್ಲಿ ಕದಿರು ಕಟ್ಟುವ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ಕ್ರಷಿ ಭೂಮಿಯಲ್ಲಿ ಬೆಳೆದ ಭತ್ತದ ಪೈರು ತೆನೆಬಿಟ್ಟು ಬೆಳೆದಿರುವ ಸಂಭ್ರಮವನ್ನು ಕರಾವಳಿ ಭಾಗದ ಜನತೆ ಭಕ್ತಿಭಾವದಿಂದ ಆಚರಿಸುವ ಹಾಗೂ ದೇವಸ್ಥಾನದಲ್ಲಿ ಹೊಸ ಫಸಲುಗಳನ್ನು ಊರ ಜನತೆಗೆ ಹಂಚುವುದು […]
Category: ಕಲೆ ಮತ್ತು ಸಂಸ್ಕೃತಿ
ಕನಕದಾಸ ಸಂಶೋಧನಾ ಕೇಂದ್ರಕ್ಕೆ ಡಾ. ಶುಭಾ ಮರವಂತೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕ
ಶಿವಮೊಗ್ಗ(ಸೆ,27): ನಗರದ ಸಹ್ಯಾದ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಕುಂದಾಪುರ ಮೂಲದ ಡಾ.ಶುಭಾ ಮರವಂತೆ ಯವರನ್ನು ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕಾರ್ಯಾನುಷ್ಠಾನ ಮಂಡಳಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ವೆಂಕಟೇಶಪ್ಪ, ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ದೈನಂದಿನ ಕಾರ್ಯಚಟುವಟಿಕೆಗಳ ಹಾಗೂ ಕಾರ್ಯಕ್ರಮಗಳ ಅನುಷ್ಠಾನಗಳ ದೃಷ್ಠಿಯಿಂದ […]
ಡಾ। ಬಿ. ಬಿ. ಹೆಗ್ಡೆ ಕಾಲೇಜು-ಎನ್.ಎಸ್.ಎಸ್ ಘಟಕ: ಬಸ್ರೂರಿನಲ್ಲಿ “ನಿರ್ಮಲ ದೇಗುಲ ” ಸ್ವಚ್ಚತಾ ಕಾರ್ಯಕ್ರಮ
ಬಸ್ರೂರು (ಸೆ, 26): ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಬಸ್ರೂರಿನ ಮೂಡ್ಕೇರಿಯ ನಾಥ ಪರಂಪರೆಯ ಪ್ರಾಚೀನ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಸೆಪ್ಟೆಂಬರ್26 ರಂದು ಸ್ವಚ್ಚತಾ ಕಾರ್ಯ “ನಿರ್ಮಲ ದೇಗುಲ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಸಾರ್ವಜನಿಕ ಸಂಪರ್ಕಾಧಿಕಾರಿ ನಾಗರಾಜ್ ಶೆಟ್ಟಿ ನೈಕಂಬ್ಳಿ , ನಿಕಟಪೂರ್ವ ಎನ್.ಎಸ್.ಎಸ್ ಯೋಜನಾಧಿಕಾರಿ […]
ಬಸ್ರೂರಿನಲ್ಲಿ ಶಿಲಾಯುಗ ಕಾಲದ ಬ್ರಹತ್ ನಿಲ್ಸ್ ಕಲ್ಲು ಪತ್ತೆ
ಕುಂದಾಪುರ (ಸೆ,21): ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಐತಿಹಾಸಿಕ ನಗರವಾದ ಬಸ್ರೂರಿನಲ್ಲಿ ಶಿಲಾಯುಗ ಕಾಲದ ಬ್ರಹತ್ ನಿಲ್ಸ್ ಕಲ್ಲು ಒಂದು ಪತ್ತೆಯಾಗಿದೆ. ಶಿರ್ವಾದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರವಿಭಾಗದ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ ಈ ನಿಲ್ಸ್ ಕಲ್ಲಿನ ಐತಿಹಾಸಿಕ ಹಿನ್ನೆಲೆಯನ್ನು ಗುರುತಿಸಿದ್ದಾರೆ.
ನಿಸ್ವಾರ್ಥ ಕಲಾ ಸೇವಕಿ ಮತ್ತು ಭಜನಾ ಗಾಯಕಿ ಸುಶೀಲಾ ಪೂಜಾರಿ ನಾವುಂದ
ದೇವರ ಮೇಲಿನ ಭಕ್ತಿ ಮತ್ತು ಆಧ್ಯಾತ್ಮಿಕ ವಿಚಾರಗಳು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇವರ ಕ್ರಪೆಗೆ ಪಾತ್ರರಾಗಲು ಹಲವು ವಿಧಾನಗಳಿವೆ. ಆದರೆ ಭಜನೆ ಸರಳವಾದ ಮಾರ್ಗ.ಆದರೆ ಆಧುನಿಕತೆಯ ಸ್ಥಿತ್ಯಂತರಕ್ಕೆ ಒಳಗಾದ ಯುವ ಜನತೆ ಆಧ್ಯಾತ್ಮಿಕತೆ , ಭಜನೆ ಹಾಡುವುದು, ಕುಣಿತ ಭಜನೆ, ಜಾನಪದ ಗೀತೆ ಭಾವಗೀತೆಯಂತಹ ಧಾರ್ಮಿಕ ಚಟುವಟಿಕೆಯಿಂದ ದೂರವಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮನೆ-ಮನಗಳಲ್ಲಿ ಭಜನೆಯ ಭಕ್ತಿ -ಭಾವ ಕಡಿಮೆಗೊಳ್ಳುತ್ತಿರುವ ಈ ಆಧುನಿಕ ಕಾಲಘಟ್ಟದಲ್ಲಿ ಭಜನೆಯನ್ನು ಭಕ್ತಿಪೂರ್ವಕವಾಗಿ ಹಾಡುತ್ತಾ, […]
ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದ್ದಾನೆ “ಅರ್ಜುನ್ ಸನ್ಯಾಸಿ”
ಮುಂದಿನ ತಿಂಗಳು ತೆರೆ ಕಾಣಲಿರುವ ನಮ್ಮೂರ ಹುಡುಗ ಸಿ .ಸಿ. ರಾವ್ ನಾಯಕ ನಟನಾಗಿ ಅಭಿನಯಿಸಿರುವ “ಅರ್ಜುನ್ ಸನ್ಯಾಸಿ” ಚಿತ್ರದ ಪೋಸ್ಟರ್ ಇತ್ತೀಚಿಗೆ ಸೋಶಿಯಲ್ ಮೀಡಿಯಾ ಮತ್ತು ಸಿನಿಮಾರಂಗದಲ್ಲಿ ಹವಾ ಸ್ರಷ್ಟಿಸುತ್ತಿದೆ. ಉತ್ತಮ ಅಭಿನಯ ಹಾಗೂ ನಿರ್ದೇಶನದ ಬಗ್ಗೆ ಒಳ್ಳೆ ಮಾತುಗಳು ಪತ್ರಿಕಾ ವಲಯ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಈಶ್ವರ್ ಪೋಲಂಕಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ನಿರ್ಮಾಣ ಮಾಡುತ್ತಿದ್ದು ಗುರುಮೂರ್ತಿ ಹೆಗಡೆ ,ಕಣ್ಣಿ ಪಾಲ್, […]
ಕುಂದಾಪುರ ಏನಿದರ ಇತಿಹಾಸ?
ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಬಹಳ ಇತಿಹಾಸವಿದೆ. ಆ ಎಲ್ಲಾ ಇತಿಹಾಸಕ್ಕೆ ಮುಕುಟಪ್ರಯವಾಗಿರುವ ಸ್ಥಳವೇ ಕುಂದಾಪುರ.ಭಾರತಕ್ಕೆ ಹೇಗೆ ಹಿಮಾಲಯವೋ ಅದೇ ರೀತಿಯಲ್ಲಿ ಕುಂದಾಪುರಕ್ಕೆ ನದಿಗಳು. ಮೂಡಣದಲ್ಲಿ ಉಗಮವಾಗುವ ಚಕ್ರ, ಸೌಪರ್ಣಿಕ, ವಾರಾಹಿ, ಕೇದಕ ಹಾಗೂ ಕುಬ್ಜ ಎಂಬ ಈ ಐದು ನದಿಗಳು ಗಂಗೊಳ್ಳಿಯಲ್ಲಿ ಒಂದಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಆ ಸ್ಥಳವೇ ಪಂಚಗಂಗಾವಳಿ. ನದಿಗಳು ಒಂದೆಡೆಯಾದರೆ ದೇವಸ್ಥಾನಗಳು ಇನ್ನೊಂದೆಡೆ. ನೂರಾರು ದೇವಾಲಯಗಳ ಹೊಂದಿರುವ ಕುಂದಾಪುರ ಕೊಲ್ಲೂರು ಮೂಕಾಂಬಿಕೆ, ಆನೆಗುಡ್ಡೆಯ ವಿನಾಯಕ,ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ, […]
ಗಣೇಶ್ ಗಂಗೊಳ್ಳಿ ಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ
ಕುಂದಾಪುರ (ಸೆ.2): ಕನ್ನಡ ನಾಡಿನ ಖ್ಯಾತ ಜಾನಪದ ಗಾಯಕ, ಜಾನಪದ ಚಿಂತಕ ಹಾಗೂ ಸಂಘಟಕ ಕುಂದಾಪುರ ಮೂಲದ ಗಣೇಶ್ ಗಂಗೊಳ್ಳಿ ಯವರಿಗೆ ತಮಿಳುನಾಡಿನ ಪ್ರತಿಷ್ಠಿತ ಇಂಡಿಯನ್ ಎಂಪೆಯರ್ ವಿಶ್ವ ವಿದ್ಯಾಲಯ ಹಾಗೂ ಯುನಿವರ್ಸಲ್ ಅಕಾಡೆಮಿಕ್ ಕೌನ್ಸಿಲ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಆಗಸ್ಟ್ 28ರಂದು ತಮಿಳುನಾಡಿನ ಹೊಸೂರು ಕ್ಲಾರೇಶ್ವ ಸಭಾಂಗಣದಲ್ಲಿ ಗೌರವ ಡಾಕ್ಟರೇಟ್ ನ್ನು ಪ್ರಧಾನ ಮಾಡಲಾಯಿತು .ಯು ಜಿ ಸಿ ವೈಸ್ ಚೇರ್ಮನ್ ಡಾ.ಕೆ ಪ್ರಭಾಕರ್ , […]
ಪುರಾಣ ಪ್ರಸಿದ್ಧ ಮೂಡುಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ನಟ,ನಿರ್ದೇಶಕರಾದ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಭೇಟಿ
ವಂಡ್ಸೆ (ಆ,24): ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಪುರಾಣ ಪ್ರಸಿದ್ಧ ಮೂಡುಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ಆಗಸ್ಟ್,24 ರಂದು ಕನ್ನಡ ಚಿತ್ರರಂಗದ ಹೆಸರಾಂತ ನಟ,ನಿರ್ದೇಶಕರಾದ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪ್ರದೀಪ್ ಶೆಟ್ಟಿ ಬೆಳ್ಳಾಲ ,ದಿವ್ಯಾಧರ್ ಶೆಟ್ಟಿ ಕೆರಾಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕೆರಾಡಿಯಿಂದ ನಾಲೈದು ಕಿಲೋಮೀಟರ್ ಕಾಡು ದಾರಿಯಲ್ಲಿ ಸಾಗಿದರೆ ಅತ್ಯoತ ಎತ್ತರದ ಸ್ಥಳದಲ್ಲಿ ಉರ್ಧ್ವಮುಖಿಯಾಗಿ ಮೂಡುಗಲ್ಲು ಗುಹೆಯ ಒಳಗೆ ಹರಿಯುವ ನೀರಿನ […]
ಬಕ್ರೀದ್ ಹಬ್ಬದ ಆಚರಣೆಯ ಹಿನ್ನೆಲೆ
ಮುಸ್ಲಿಂ ಸಮುದಾಯ ಆಚರಿಸುವ ಹಬ್ಬಗಳಲ್ಲಿ ರಂಜಾನ್ ಮತ್ತು ಬಕ್ರೀದ್ ಪ್ರಮುಖವಾದುದು. ರಂಜಾನ್, ಮುಸ್ಲಿಂ ಸಮುದಾಯ ತಮ್ಮ ಬದುಕಿನಲ್ಲಿ ಅನುಸರಿಸಬೇಕಾದ 5 ಪ್ರಮುಖ ತತ್ವಗಳಲ್ಲಿ ಒಂದಾದರೆ, ಬಕ್ರೀದ್ ತ್ಯಾಗದ ಪ್ರತೀಕವಾಗಿ ಆಚರಿಸಲಾಗುತ್ತದೆ. ಬಕ್ರೀದ್ ನ್ನು ಈದ್-ಉಲ್-ಅದಾ ಎಂದು ಸಹ ಕರೆಯುತ್ತಾರೆ. ಈದ್-ಉಲ್-ಅದಾ(ಬಕ್ರೀದ್) ಇದರ ಹಿಂದೆ ಒಂದು ರೋಚಕ ಇತಿಹಾಸವೇ ಇದೆ. ಇಸ್ಲಾಂ ಧರ್ಮದ ಪ್ರಕಾರ ಅಲ್ಲಾಹು ಯಾರನ್ನು ಹೆಚ್ಚು ಪ್ರೀತಿಸುತ್ತಾನೋ ಅಂತಹ ವ್ಯಕ್ತಿಗಳಿಗೆ ಕಷ್ಟ ಕೊಟ್ಟು ಅವರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಾನೆ […]