ಕುಂದಾಪುರ (ಅ, 05) : ಇತ್ತೀಚೆಗೆ ಗದಗ ಇಂಡೋರ್ ಸ್ಟೇಡಿಯಂ ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಫೀನಿಕ್ಸ್ ಅಕಾಡೆಮಿ ಇಂಡಿಯಾ ಸಂಸ್ಥೆಯ ಕ್ರೀಡಾಪಟುಗಳಾದ ಲಕ್ಷ್ಮೀಕಾಂತ್ ಎನ್ ಆರ್ (ಸೀನಿಯರ್ -75 ಕೆ.ಜಿ ಕುಮಿಟೆ) ಸ್ವರ್ಣ ಪದಕ, ಅಜಯ್ ಎ ದೇವಾಡಿಗ (-21 ವರ್ಷ -75 ಕೆ.ಜಿ ಕುಮಿಟೆ) ಸ್ವರ್ಣಪದಕ, ಭರತ್ ಬಾಬು ದೇವಾಡಿಗ (-21 ವರ್ಷ -84 ಕೆ.ಜಿ ಕುಮಿಟೆ) ಸ್ವರ್ಣಪದಕ ಹಾಗೂ ಪವನ್ ಎನ್ ಪೂಜಾರಿ (-21 […]
Category: ನಮ್ಮ ಕುಂದಾಪುರ
ನಮ್ಮ ಕುಂದಾಪುರ
ತನು -ಮನ, ಕನಸಿನಲ್ಲೂ ಸಂಗೀತ ಆರಾಧಕ ಅಕ್ಷಯ್ ಬಡಾಮನೆ
ಸಂಗೀತ, ಕಲೆ ಮತ್ತು ಸಾಹಿತ್ಯ ದ ಬಗ್ಗೆ ಅಪಾರ ಆಸಕ್ತಿ ಹೊಂದಿರುವರು ಈ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ತವಕದಲ್ಲಿರುತ್ತಾರೆ.ಕಲಾವಿದ ಕಲೆಯಲ್ಲಿನ ಉತ್ಸಾಹ ಸೃಜನಶೀಲತೆಯನ್ನು ತನ್ನ ಅಂತರಾಳದಲ್ಲಿ ವೈವಿಧ್ಯತೆ ಮತ್ತು ವೈಭವದಿಂದ ತುಂಬಿಕೊಳ್ಳುತ್ತಾನೆ. ಹೀಗೆ ಸದಾ ಉಸಿರು ಉಸಿರಿನಲ್ಲೂ ಸಂಗೀತವನ್ನು ಉಸಿರಾಡುವ ಒರ್ವ ಕನಸುಗಾರ ಯುವಕ ಅಕ್ಷಯ್ ಬಡಾಮನೆಯವರನ್ನು ಇಂದು ಪರಿಚಯಿಸುತ್ತಿದ್ದೇವೆ. ಬೈಂದೂರು ತಾಲೂಕಿನ ನಂದನವನದ ಕೆರ್ಗಾಲ್ ನ ಶ್ರೀ ಮಂಜುನಾಥ ಪೂಜಾರಿ ಹಾಗೂ ಶ್ರೀಮತಿ ಅಕ್ಕಯ್ಯ ರವರ ಮೂರು […]
ಅಕ್ಷಯ ಹೆಗ್ಡೆ ಮೊಳಹಳ್ಳಿಯವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ
ಕುಂದಾಪುರ (ಸೆ, 29): ಲಯನ್ಸ್ ಕ್ಲಬ್ ಕೊಡಮಾಡುವ ಅಂತರಾಷ್ಟ್ರೀಯ ಪ್ರಶಸ್ತಿ “ಇಂಟರ್ನ್ಯಾಷನಲ್ ಲೀಡರ್ ಶಿಪ್ ಅವಾರ್ಡ್ ” ಉಪನ್ಯಾಸಕ ,ನಿರೂಪಕ ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿಯವರಿಗೆ ಲಭಿಸಿದೆ.ಇತ್ತೀಚೆಗೆ ಉಡುಪಿಯ ಅಮೃತ ಗಾರ್ಡನ್ ನಲ್ಲಿ ನಡೆದ ಮಾನ್ಯತೆ ಲಯನ್ಸ್ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಕ್ಷಯ ಹೆಗ್ಡೆ ಮೊಳಹಳ್ಳಿ ಯವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಇವರು ಕಳೆದ ಲಯನ್ಸ್ ವರ್ಷ ದಲ್ಲಿ ತನ್ನ ಕ್ಲಬ್ನಲ್ಲಿ 200 % ಮೆಂಬರ್ ಶಿಪ್ ಗ್ರೋತ್ ನೀಡಿರುವುದರ ಜೊತೆಗೆ ಲಯನ್ಸ್ […]
ನರೇಂದ್ರ ಎಸ್ ಗಂಗೊಳ್ಳಿಗೆ ರಾಷ್ಟ್ರೀಯ ಶಿಕ್ಷಕ ವೇತನ ಪುರಸ್ಕಾರ
ಕುಂದಾಪುರ(ಸೆ,29): ವೊಡಾಫೋನ್ ಫೌಂಡೇಶನ್ ವತಿಯಿಂದ ವೊಡಾಫೋನ್ ಐಡಿಯಾ ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಶಿಕ್ಷಕರಿಗಾಗಿ ಕೊಡಮಾಡುವ 2021 ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ವೇತನ ಪುರಸ್ಕಾರವನ್ನು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ಪಡೆದುಕೊಂಡಿದ್ದಾರೆ. ಈ ಬಾರಿ ಭಾರತದ 22 ರಾಜ್ಯಗಳಲ್ಲಿನ ಒಟ್ಟು 110 ಶಿಕ್ಷಕರಿಗೆ ಈ ಪುರಸ್ಕಾರವನ್ನು ನೀಡಲಾಗಿದೆ. ಶಿಕ್ಷಕರ ಶೈಕ್ಷಣಿಕ ಮತ್ತು ಇತರ […]
ಸಿಎ ಫೌಂಡೇಶನ್ನ ಪರೀಕ್ಷೆ ತೇರ್ಗಡೆ – ಸಮ್ಮಾನ
ಕುಂದಾಪುರ (ಸೆ,28): ಇನ್ಸ್ಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವ 11 ವಿದ್ಯಾರ್ಥಿಗಳು ಸಿಎ ಫೌಂಡೇಶನ್ನ ಪರೀಕ್ಷೆ ತೇರ್ಗಡೆ ಹೊಂದಿದ್ದಾರೆ. ಅವರನ್ನು ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಪ್ರೊ. ಕರುಣಾಕರ ಕೊಟೇಗಾರ್ ಸಮ್ಮಾನಿಸಿ ಗೌರವಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಪ್ರಭಾ ಅಕಾಡೆಮಿಯ ಮುಖ್ಯಸ್ಥರಾದ […]
ಕುಂದಾಪುರದ ಕುವರ ಕಿಕ್ ಬಾಕ್ಸರ್ ಅನೀಶ್ ಶೆಟ್ಟಿಗೆ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ
ಪಣಜಿ(ಸೆ,27): ಗೋವಾದ ಪಣಜಿಯಲ್ಲಿ ನಡೆದ ರಾಷ್ಟ್ರೀಯ ಥಾಯ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಮೊದಲ ಬಾರಿಗೆ ಅಮೆಚೂರು ವಿಭಾಗದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ವೃತ್ತಿಪರ ಕಿಕ್ ಬಾಕ್ಸರ್ ಕುಂದಾಪುರ ಮೂಲದ ಅನೀಶ್ ಶೆಟ್ಟಿ ಬೆಳ್ಳಿಯ ಪದಕ ಪಡೆದಿದ್ದಾರೆ. ವೃತ್ತಿಪರ ಸ್ಪರ್ಧೆಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲು ಗೋವಾದಲ್ಲಿ ತರಬೇತಿ ಪಡೆಯುತ್ತಿರುವ ಅನೀಶ್, ಅಲ್ಲಿಯ ಟ್ರೈಬಲ್ ವಾರಿಯರ್ಸ್ ಗೋವಾ (TWG) ತಂಡವನ್ನು ಪ್ರತಿನಿಧಿಸಿರುತ್ತಾರೆ.ನಾಲ್ಕು ಸುತ್ತಿನ ಹೋರಾಟದಲ್ಲಿ ಅನೀಶ್ ಒಡಿಶಾದ ಸ್ಪರ್ಧಿಯ ವಿರುದ್ಧದ ಅಂತಿಮ ಸುತ್ತಿನಲ್ಲಿ ಪರಾಜಯ ಅನುಭವಿಸಿದರು. […]
ಕನಕದಾಸ ಸಂಶೋಧನಾ ಕೇಂದ್ರಕ್ಕೆ ಡಾ. ಶುಭಾ ಮರವಂತೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕ
ಶಿವಮೊಗ್ಗ(ಸೆ,27): ನಗರದ ಸಹ್ಯಾದ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಕುಂದಾಪುರ ಮೂಲದ ಡಾ.ಶುಭಾ ಮರವಂತೆ ಯವರನ್ನು ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕಾರ್ಯಾನುಷ್ಠಾನ ಮಂಡಳಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ವೆಂಕಟೇಶಪ್ಪ, ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ದೈನಂದಿನ ಕಾರ್ಯಚಟುವಟಿಕೆಗಳ ಹಾಗೂ ಕಾರ್ಯಕ್ರಮಗಳ ಅನುಷ್ಠಾನಗಳ ದೃಷ್ಠಿಯಿಂದ […]
ಡಾ। ಬಿ. ಬಿ. ಹೆಗ್ಡೆ ಕಾಲೇಜು-ಎನ್.ಎಸ್.ಎಸ್ ಘಟಕ: ಬಸ್ರೂರಿನಲ್ಲಿ “ನಿರ್ಮಲ ದೇಗುಲ ” ಸ್ವಚ್ಚತಾ ಕಾರ್ಯಕ್ರಮ
ಬಸ್ರೂರು (ಸೆ, 26): ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಬಸ್ರೂರಿನ ಮೂಡ್ಕೇರಿಯ ನಾಥ ಪರಂಪರೆಯ ಪ್ರಾಚೀನ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಸೆಪ್ಟೆಂಬರ್26 ರಂದು ಸ್ವಚ್ಚತಾ ಕಾರ್ಯ “ನಿರ್ಮಲ ದೇಗುಲ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಸಾರ್ವಜನಿಕ ಸಂಪರ್ಕಾಧಿಕಾರಿ ನಾಗರಾಜ್ ಶೆಟ್ಟಿ ನೈಕಂಬ್ಳಿ , ನಿಕಟಪೂರ್ವ ಎನ್.ಎಸ್.ಎಸ್ ಯೋಜನಾಧಿಕಾರಿ […]
ಕಾರ್ಪೋರೇಟ್ ಕ್ಯಾಟರಿಂಗ್ ರಂಗದ “ಗುಣವಂತ”ಉದ್ಯಮಿ ದಯಾನಂದ್ ಶ್ರೀಯಾನ್
ಧರ್ಮವು ಮರೆಯಾಗಿ ಅಧರ್ಮವೇ ಗೆಲ್ಲುತಿರುವ ಈ ಕಾಲಘಟ್ಟದಲ್ಲಿ ಯಾರಿಗೂ ತಿಳಿಯದಂತೆ, ಯಾರಲ್ಲೂ ಹೇಳಿಕೊಳ್ಳದೆ ,ಯಾರಿಗೂ ಬರೆಯಲು ಅವಕಾಶ ಮಾಡಿಕೊಡದೆ ದಾನ-ಧರ್ಮ ಸಮಾಜಸೇವೆ ಮಾಡುತ್ತಿರುವ ಒರ್ವ ವ್ಯಕ್ತಿ ಮತ್ತು ಶಕ್ತಿಯ ಯಶೋಗಾತೆಯನ್ನು ಪ್ರೀತಿಯಿಂದ ನನ್ನನು ಗದರಿಸಿ ಬಿಡುತ್ತಾರೋ ಏನೋ ಎಂಬ ಹೆದರಿಯಿಂದಲೇ ಬರೆಯುವ ಅನಿವಾರ್ಯತೆ ನನಗೆ. ಮಹಾಭಾರತದ ನೀತಿ ಸತ್ಯದಂತೆ ಸಜ್ಜನರು ಒಳ್ಳೆಯದನ್ನು ಮಾತ್ರ ಸ್ಮರಿಸಿಕೊಳ್ಳುತ್ತಾರೆ. ಕೆಟ್ಟದ್ದನ್ನು ಮಾಡದಿದ್ದರೂ ಎಂದೂ ತಪ್ಪುಗಳ ಬಗ್ಗೆ ಚರ್ಚೆಗೆ ಅವಕಾಶ ಕೂಡದೆ ಪರೋಪಕಾರಕ್ಕಾಗಿ ಕೆಲಸ ಮಾಡುವರೇ ಹೊರತು ಪ್ರತ್ಯುಪಕಾರ ವನ್ನು […]
ಶ್ರೀ ಗೋವಿಂದ ಬಾಬು ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಪ್ರದಾನ
ಕುಂದಾಪುರ (ಸೆ, 25) : ಕೊಡುಗೈ ದಾನಿ ಉದ್ಯಮಿ ,ಶೇಫ್ ಟಾಕ್ ಹಾಸ್ಪಿಟಾಲಿಟಿ ಸಂಸ್ಥೆ ಹಾಗೂ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಅಧ್ಯಕ್ಷರಾದ ಶ್ರೀ ಗೋವಿಂದ ಬಾಬು ಪೂಜಾರಿಯವರಿಗೆ ಸಮಾಜ ಸೇವಾ ಕ್ಷೇತ್ರದ ಅನನ್ಯ ಕೊಡುಗೆಯನ್ನು ಗುರುತಿಸಿ ಏಶಿಯಾ ವೇದಿಕ್ ಕಲ್ಚರ್ ಫೌಂಡೇಷನ್ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.