ಸಂಗೀತ, ಕಲೆ ಮತ್ತು ಸಾಹಿತ್ಯ ದ ಬಗ್ಗೆ ಅಪಾರ ಆಸಕ್ತಿ ಹೊಂದಿರುವರು ಈ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ತವಕದಲ್ಲಿರುತ್ತಾರೆ.ಕಲಾವಿದ ಕಲೆಯಲ್ಲಿನ ಉತ್ಸಾಹ ಸೃಜನಶೀಲತೆಯನ್ನು ತನ್ನ ಅಂತರಾಳದಲ್ಲಿ ವೈವಿಧ್ಯತೆ ಮತ್ತು ವೈಭವದಿಂದ ತುಂಬಿಕೊಳ್ಳುತ್ತಾನೆ. ಹೀಗೆ ಸದಾ ಉಸಿರು ಉಸಿರಿನಲ್ಲೂ ಸಂಗೀತವನ್ನು ಉಸಿರಾಡುವ ಒರ್ವ ಕನಸುಗಾರ ಯುವಕ ಅಕ್ಷಯ್ ಬಡಾಮನೆಯವರನ್ನು ಇಂದು ಪರಿಚಯಿಸುತ್ತಿದ್ದೇವೆ. ಬೈಂದೂರು ತಾಲೂಕಿನ ನಂದನವನದ ಕೆರ್ಗಾಲ್ ನ ಶ್ರೀ ಮಂಜುನಾಥ ಪೂಜಾರಿ ಹಾಗೂ ಶ್ರೀಮತಿ ಅಕ್ಕಯ್ಯ ರವರ ಮೂರು […]
Category: ಯುವಪ್ರತಿಭೆಗಳು
ನಮ್ಮ ಕುಂದಾಪುರ —> ಸಾಧಕರು —> ಯುವಪ್ರತಿಭೆಗಳು
ಸಿಎ ಫೌಂಡೇಶನ್ನ ಪರೀಕ್ಷೆ ತೇರ್ಗಡೆ – ಸಮ್ಮಾನ
ಕುಂದಾಪುರ (ಸೆ,28): ಇನ್ಸ್ಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವ 11 ವಿದ್ಯಾರ್ಥಿಗಳು ಸಿಎ ಫೌಂಡೇಶನ್ನ ಪರೀಕ್ಷೆ ತೇರ್ಗಡೆ ಹೊಂದಿದ್ದಾರೆ. ಅವರನ್ನು ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಪ್ರೊ. ಕರುಣಾಕರ ಕೊಟೇಗಾರ್ ಸಮ್ಮಾನಿಸಿ ಗೌರವಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಪ್ರಭಾ ಅಕಾಡೆಮಿಯ ಮುಖ್ಯಸ್ಥರಾದ […]
ನರೇಶ್ ಶೆಟ್ಟಿ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ
ಕುಂದಾಪುರ (ಸೆ,21); ಜೂನ್ 2021ರ ಚಾರ್ಟರ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಹುಯ್ಯಾರು ಹೆಬ್ಬಾಗಿಲು ಮನೆ ನರೇಶ್ ಶೆಟ್ಟಿ ತೇರ್ಗಡೆ ಹೊಂದಿದ್ದಾರೆ. ಬೆಂಗಳೂರಿನ ಟಿ.ಆರ್. ಚಡ್ಡಾ ರವರಲ್ಲಿ ಆರ್ಟಿಕಲ್ ಶಿಪ್ ಮಾಡಿರುವ ನರೇಶ್ ಶೆಟ್ಟಿ ಶ್ರೀ ಚಂದ್ರಶೇಖರ ಶೆಟ್ಟಿ ಹಾಗೂ ಹುಯ್ಯಾರು ಹೆಬ್ಬಾಗಿಲು ಮನೆ ಶ್ರೀಮತಿ ವಸಂತಿ ಶೆಟ್ಟಿ ಯವರ ಪುತ್ರ.
ಎಕ್ಸಲೆಂಟ್ ಕಾಲೇಜು ಕುಂದಾಪುರ: ಸಿಇಟಿ ಪರೀಕ್ಷೆಯಲ್ಲಿ ರಿಷಿ ಮಯೂರ ಕುಂದಾಪುರ ತಾಲೂಕಿಗೆ ಅಗ್ರಸ್ಥಾನ
ಕುಂದಾಪುರ(ಸೆ,21): ಸುಜ್ಞಾನ ಎಜುಕೇಶನ್ ಟ್ರಸ್ಟ್ ಮೂಡುಬಿದರಿ ಇದರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಕ್ಸಲೆಂಟ್ ಕಾಲೇಜು ಸಿಇಟಿ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ಕಾಲೇಜುಗಳಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿ ರಿಷಿ ಮಯೂರ 224 ನೇ ರ್ಯಾಂಕ್ ಸಿಇಟಿ ಯಲ್ಲಿ ಪಡೆಯುವುದರ ಮೂಲಕ ಕಾಲೇಜು ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ 694 ಬಿ ಎನ್ ವೈ ಎಸ್ 731, ಪಶುವೈದ್ಯಕೀಯದಲ್ಲಿ 731, 224 ಅಗ್ರಿಕಲ್ಚರಲ್ ಬಿ.ಎಸ್ಸಿ ವಿಭಾಗದಲ್ಲಿ ರ್ಯಾಂಕ್ ಗಳಿಸಿರುತ್ತಾರೆ. ಈ […]
ಚಲನ್ ಚಂದ್ರ ಶೆಟ್ಟಿ ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ
ಕುಂದಾಪುರ (ಸೆ,21): ಕುಂದಾಪುರ ಮೂಲದ ಚಲನ್ ಚಂದ್ರ ಶೆಟ್ಟಿಯವರು ಜೂನ್ 2021ರ ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಉಡುಪಿಯ ಶ್ರೀ ಸುರೇಂದ್ರ ನಾಯಕ್ ರವರಲ್ಲಿ ಆರ್ಟಿಕಲ್ ಶಿಪ್ ಮಾಡಿರುವ ಚಲನ್ ಚಂದ್ರ ಶೆಟ್ಟಿ ಯವರು ಅಧ್ಯಾಪಕರಾದ ಬಿಲ್ಲಾಡಿಮನೆ ಶ್ರೀ ಚಂದ್ರಶೇಖರ ಶೆಟ್ಟಿ ಮಣಿಗೇರಿ ಹಾಗೂ ಶಿರೂರು ಹೈಕಾಡಿಮನೆ ಶ್ರೀಮತಿ ಶ್ಯಾಮಲಾ ಸಿ ಶೆಟ್ಟಿ ಯವರ ಪುತ್ರ.
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ: ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅಖಿಲ ಭಾರತ 29ನೇ ರ್ಯಾಂಕ್
ಕುಂದಾಪುರ(ಸೆ,19): ಇಲ್ಲಿನ ಕುಂದೇಶ್ವರ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್(ಸ್ಪೇಸ್) ಸಿಎ/ಸಿಎಸ್/ಸಿಎಮ್ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ಸಂಸ್ಥೆಯ ವಿದ್ಯಾರ್ಥಿನಿ ವೈಷ್ಣವಿ ಅವರು 543 ಅಂಕ ಗಳಿಸುವುದರೊಂದಿಗೆ ಅಖಿಲ ಭಾರತಕ್ಕೆ 29ನೇರ್ಯಾಂಕ್ ಗಳಿಸಿದ್ದಾರೆ. ಹಾಗೆಯೇ ಸಂಸ್ಥೆಯ ವಿದ್ಯಾರ್ಥಿಗಳಾದ ರಕ್ಷಿತ್ ಶೆಟ್ಟಿ 246, […]
ಕುಂದಾಪುರ ಮೂಲದ ಪುಟ್ಟಪೋರ ಆರ್ಯನ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ
ಕುಂದಾಪುರ(ಸೆ,7): ಕುಂದಾಪುರ ಮೂಲದ ಮೂರು ವರ್ಷದ ಪುಟ್ಟಪೋರ ಆರ್ಯನ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿದ್ದಾನೆ.ಎಳೆಯ ವಯಸ್ಸಿನಲ್ಲಿಯೇ ಅಪಾರ ಜ್ಞಾಪಕ ಶಕ್ತಿ ಹೊಂದಿರುವ ಆರ್ಯನ್ ದೇಶಗಳು, ರಾಜ್ಯಗಳು, ರಾಜಧಾನಿ, ವರ್ಣಮಾಲೆ ,ಬಣ್ಣ, ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಟ್ಟನೇ ಉತ್ತರಿಸುವ ಅಪಾರ ಜ್ಞಾಪನಾ ಶಕ್ತಿ ಹೊಂದಿರುವ ಕಾರಣಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಲಭಿಸಿದೆ . ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪುರದ ಕೋಡಿಯ ಕೋಟೆಮನೆ ನಾಗೇಂದ್ರ ಹಾಗೂ ಅಂಜಲಿ […]
ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ :ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ
ಗಂಗೊಳ್ಳಿ: (ಜು,24): ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 182 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 106 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 45 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಸನ್ನಾ ಪೈ 600ಕ್ಕೆ 600 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ರಿಫ್ಜಾ (597) ಮತ್ತು […]
ಸರಕಾರಿ ಪದವಿಪೂರ್ವ ಕಾಲೇಜು,ನಾವುಂದ : ಚವೀಶ್ ಜೈನ್ ಕಾಲೇಜಿಗೆ ಪ್ರಥಮ ಸ್ಥಾನ
ನಾವುಂದ (ಜು,22): ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು,ಇದರಲ್ಲಿ ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ನಾವುಂದ ಚವೀಶ್ ಜೈನ್ 600 ರಲ್ಲಿ 590 ಅಂಕಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಕಾಲೇಜಿನ ಪ್ರಾಂಶುಪಾಲರು, ಭೋಧಕ ಹಾಗೂ ಭೋಧಕೇತರ ವ್ರಂದ ಚವೀಶ್ ಜೈನ್ ಗೆ ಶುಭಾಶಯ ಕೋರಿರುತ್ತಾರೆ.
ಧಾರಿಣಿ ಕೆ. ಎಸ್. ಗೆ ಸ್ವರ ಕುಡ್ಲ ಸೀಸನ್ – 3 ಪ್ರಶಸ್ತಿ
ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಮಂಗಳೂರು ಇವರು ಫೆಬ್ರವರಿ 10ರಂದು ಆಯೋಜಿಸಿದ “ಸ್ವರ ಕುಡ್ಲ” ಸೀಸನ್ 3 ಅಂತರ್ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಧಾರಿಣಿ ಕೆ.ಎಸ್ ಕುಂದಾಪುರ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.