ಇನ್ನೂ ಅರ್ಧಗಂಟೆ ಅಂದಿದ್ದರೆ ಆದಷ್ಟು ದೋಣಿಗಳು ಹೇಳಹೆಸರಿಲ್ಲದಂತೆ ಸಮುದ್ರದ ಒಡಲು ಸೇರುತ್ತಿದ್ದವು. “ತೀರ” ಅನ್ನುವಂತಿದ್ದ ಕಡಲ ದಂಡೆ ರಕ್ಕಸ ಅಲೆಗಳಿಗೆ ರಕ್ಷಣೆಯಿಲ್ಲದೆ ತಾವಾಗೇ ಸೋಲನ್ನಪ್ಪಿದ್ದವು. ಕೊರೆತಕ್ಕೆ ಸವೆಯುತ್ತಿದ್ದ ಮರಳನ್ನು ಹಿಡಿದಿಡಲಾಗದೆ ಕರಾವಳಿಗುಂಟ ಮರಗಿಡಗಳು ನೀರುಪಾಲಾದವು. ಕೋಟಾದ ಮಣೂರು ಪಡುಕರೆಯಲ್ಲಿ ಕಂಡುಬಂದ ದೃಶ್ಯಗಳಿವು. ಕರಾವಳಿಯುದ್ದಕ್ಕೂ ಇಂದು ಇದೇ ಗೋಳು. ಹರೀಶ್ ಕಾಂಚನ್, ಮುದ್ದುರಾಧ
Category: ಸಮಗ್ರ ಕನ್ನಡ
ಜೆಸಿಐ ಕುಂದಾಪುರ ಸಿಟಿ : 16 ನೇ ದಿನದ ಲಾಕ್ ಡೌನ್ ಉಚಿತ ಮಧ್ಯಾಹ್ನ ಊಟ ವಿತರಣೆ
ಕುಂದಾಪುರ (ಮೇ, 14) : ಜೆಸಿಐ ಕುಂದಾಪುರ ಸಿಟಿ ಘಟಕದ ಸತತ 16 ನೇ ದಿನದ ಲಾಕ್ ಡೌನ್ ಮಿಡ್ ಡೇ ಮಿಲ್ಸ್ ಮೇ13 ರಂದು ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗು ಮಿಲ್ಲತ್ ಫೌಂಡೇಶನ್ ಕುಂದಾಪುರ ತಾಲೂಕು ಇವರ ಸಹಕಾರ ದೊಂದಿಗೆ ನಡೆಯಿತು. ಕುಂದಾಪುರ ಪರಿಸರದಲ್ಲಿ ಲಾರಿ ಚಾಲಕರಿಗೆ, ಕೂಲಿಕಾರ್ಮಿಕರಿಗೆ ,ಆಸ್ಪತ್ರೆ ರೋಗಿ ಗಳಿಗೆ,ಭಿಕ್ಷುಕರಿಗೆಹಾಗೂ ವೃದ್ದರಿಗೆ ಸುಮಾರು 280 ಕ್ಕಿಂತಲೂ ಹೆಚ್ಚು ಹಸಿದವರಿಗೆ ಊಟ ವನ್ನು ನೀಡಲಾಯಿತು. ಈ […]
ಬಾಳ ಸಾರಥಿ
ಅಂದು ಆ ಶಾಲೆಯಲ್ಲೊಂದು ಸಂಭ್ರಮದ ವಾತಾವರಣ. ಎಲ್ಲರೂ ಸಡಗರದಿಂದ ಸಮಾರಂಭಕ್ಕಾಗಿ ತಯಾರಿ ನಡೆಸುವ ತರಾತುರಿಯಲ್ಲಿದ್ದರು. ಎಲ್ಲವೂ ಸಜ್ಜಾಗುವ ವೇಳೆಯಲ್ಲಿ ಗಣ್ಯರೂ ಆಗಮಿಸಲಾರಂಭಿಸಿದ್ದರು. ಕೆಲ ಕ್ಷಣದಲ್ಲೇ ಸಮಾರಂಭದ ಕೇಂದ್ರ ಬಿಂದುವಾದ “ದಿಶಾ ತ್ರಿವೇಣಿ” ತನ್ನ ಜೀವನದ ಅವಿಭಾಜ್ಯ ಅಂಗವಾದ ತಾಯಿಯೊಂದಿಗೆ ಸಮಾರಂಭದ ಸ್ಥಳಕ್ಕೆ ಆಗಮಿಸಿ ತನ್ನೆಲ್ಲಾ ಗುರುವೃಂದರನ್ನು ಮಾತನಾಡಿಸಿ ಆಶೀರ್ವಾದ ಪಡೆದಿದ್ದಳು. ಕೊಂಚ ಸಮಯದಲ್ಲೇ ಸಮಾರಂಭ ಆರಂಭವಾಗಿತ್ತು. ವೇದಿಕೆಯ ಮೇಲೆ ಗಣ್ಯಾತೀಗಣ್ಯರ ನಡುವೆ ತನ್ನ ಮಗಳನ್ನು ಕಂಡ ತ್ರಿವೇಣಿಯವರ ಕಣ್ಣಲ್ಲಿ ಆನಂದಬಾಷ್ಪ. […]
ಮೊದಲು ನೀ ಬದಲಾಗು
ವಾಸ್ತವದ ಪರಿಸ್ಥಿತಿಯನ್ನು ಒಮ್ಮೆ ಗಮನಿಸಿದಾಗ ನನಗೆ ನೆನಪಿಗೆ ಬರುವುದು “ಮಾಡಿದ್ದುಣ್ಣೋ ಮಹಾರಾಯ” ಎಂಬ ಮಾತು. ನಮ್ಮ ದೇಶದಲ್ಲಿ ಪರಿಸರ ಕಾಳಜಿ ಬಗ್ಗೆ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಬೋಧಿಸುವ ನಮ್ಮ ಶಿಕ್ಷಣ ವ್ಯವಸ್ಥೆ ಭಾಗಶಃ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆಯೆನೋ ಎಂದೆನಿಸುತ್ತಿದೆ. ಎತ್ತ ನೋಡಿದರೂ ಹಸಿರು ಗಿಡಮರಗಳನ್ನು ಕಿತ್ತೆಸೆದು, ಜಲಮಾಲಿನ್ಯ, ವಾಯುಮಾಲಿನ್ಯ ಮಾಡಿ ಮನುಷ್ಯ ಅಹಂಕಾರದಲ್ಲಿ ಮೆರೆದ!. ಹಾಗಾಗಿ ಅದೇ ಪ್ರಕ್ರತಿ ಇಂದು ಮುನಿಸಿಕೊಂಡು ನಾವು ಆಕ್ಸಿಜನ್ ಗಾಗಿ ಪರದಾಡುವ ಸ್ಥಿತಿಯನ್ನು ತಂದೊಡ್ಡಿದೆ. […]
ಮರಣ ಬಲೆ
ಕರಾವಳಿಯ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ “ಮರಣ ಬಲೆ” ಕೂಡಾ ಒಂದು. ಹೆಸರೇ ಅರ್ಥೈಸುವಂತೆ ಅಜಾಗರೂಕತೆ, ಮರಣ-ಮಸಣಕ್ಕೊಯ್ಯುವಂತದ್ದು. ಅಲೆಗಳಬ್ಬರ ಹೆಚ್ಚಿದ್ದಾಗ ಮಾತ್ರ ಬಲೆ ನೀರಿನಾಳಕ್ಕೆ ಇಳಿಯುತ್ತದೆ. ಬಲೆ ಹೊತ್ತು ಅಲೆ ದಾಟಿ ಕೈ ಸಡಿಲಿಸುವಲ್ಲಿ ಮೀನುಗಾರ ನಿಪುಣನಾಗಿರಲೇ ಬೇಕು. ಹೆಚ್ಚಾಗಿ ಆಳ ಸಮುದ್ರದ ಮೀನುಗಾರಿಕೆಗೆ ಮಳೆಗಾಲದ ರಜೆಯಿತ್ತಾಗ ಈ ‘ಮರಣಬಲೆ’ ಯನ್ನು ಅಣಿಗೊಳಿಸಲಾಗುತ್ತದೆ. ಮುಳ್ಳು ಬಿಡಿಸ ಬಲ್ಲವಗೆ ಯಾವ ಮೀನಾದರೇನು? ಅಲೆಗೆ ಎದೆಯೊಡ್ಡುವವಗೆ ಯಾವ ಬಲೆಯಾದರೇನು? ವೀರ ಕಳೆ ಮೊಗದಲ್ಲಿದ್ದರಷ್ಟೇ ಸಾಕು… ಅದೋ […]
“ನೆಲೆ ಕಾಣದ ಬಂಡಿ”
ಬಹಳ ವರ್ಷದ ಹಿಂದೆ ಆ ಪುಟ್ಟ ಹಳ್ಳಿಯ ಎಲ್ಲ ಮನೆಯಲ್ಲೂ ಬಡತನವು ತಾಂಡವ ನರ್ತನ ವಾಡುತ್ತಿತ್ತು. ವಸಂತಗಳು ಕಳೆಯುತ್ತಾ ಹೋದಂತೆ ಆ ಹಳ್ಳಿಯಲ್ಲಿ ಹಲವಾರು ಸುಧಾರಣೆ ಕಾಣ ತೊಡಗಿದವು. ಇದರ ಪರಿಣಾಮ ಊರಿನ ಜನತೆ ಬೇರೆ ಬೇರೆ ಊರುಗಳಿಗೆ ತೆರಳಿ ಸ್ವಂತ ಉದ್ಯಮ ಪ್ರಾರಂಭಿಸಿ ತಕ್ಕಮಟ್ಟಿಗೆ ಬದುಕನ್ನು ಸುಧಾರಿಸಿಕೊಂಡಿದ್ದರು. ಸಾಲ ಕಡ ಮಾಡಿ ಅಕ್ಕ ತಂಗಿಯರ ಮದುವೆ ಮತ್ತು ಮನೆ ಕಟ್ಟಿಕೊಂಡು ಮಾಡಿದ ಸಾಲ ತೀರಿಸಿ ಎಲ್ಲವೂ ಒಂದು ಹಂತಕ್ಕೆ […]
ಹೋಟೆಲ್ ಕಾರ್ಮಿಕರ ಗೋಳು ಕೇಳುವವರು ಯಾರು?
ಹೋಟೆಲ್ ಕಾರ್ಮಿಕರೆಂದರೆ ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಹು ಸಂಖ್ಯಾತರಲ್ಲಿ ಪ್ರಮುಖವಾದ ಬಡ ಮತ್ತು ಮಧ್ಯಮ ವರ್ಗದವರ ಒಂದು ಸಮುದಾಯ. ಸಣ್ಣ ಪುಟ್ಟ ಹೋಟೆಲ್ ಕ್ಯಾಂಟೀನ್ ಬೇಕರಿ ಇತ್ಯಾದಿ ವ್ಯಾಪಾರ ಮಾಡಿಕೊಂಡು ತಮ್ಮ ದಿನನಿತ್ಯಕ್ಕೆ ಬೇಕಾಗುವಷ್ಟು ಸಂಪಾದನೆ ಮಾಡಿಕೊಂಡು, ತಮ್ಮ ಸಂಸಾರ ,ತಂದೆ ತಾಯಿಯನ್ನು ಸಾಕಿಕೊಂಡು ಇರುವುದರಲ್ಲಿ ತೃಪ್ತಿಪಟ್ಟುಕೊಂಡು ಅತೀ ಸುಖದಲ್ಲಿ ಇಲ್ಲದಿದ್ದರೂ ಸಹ ತಕ್ಕ ಮಟ್ಟಿನ ಸಂತೋಷ ಜೀವನ ಸಾಗಿಸುತ್ತ ಬದುಕಿನ ದಿನ ದುಡುತ್ತಿರುವ ಈ ವರ್ಗ ಇಂದು […]
ಮಕ್ಕಳಿಗೆ ಚಮಚ ಕೊಡಿ ಸಾಕು… ಚಿನ್ನದ ಚಮಚ ಬೇಡ
ಅಂದು ಗೋಪಾಲರಾಯರ ಪಾಲಿಗೆ ವಿಶೇಷ ದಿನವಾಗಿತ್ತು. ಅಂದು ಅವರಿಗೆ 72 ವರ್ಷವಾಗಿತ್ತು. ಬ್ಯಾಂಕಿಗೆ ಓಡೋಡಿ ಹೋಗಿದ್ದರು. ಅಂದು ಅವರ 25 ವರ್ಷದ ಕನಸು ನನಸಾಗುವುದರಲ್ಲಿತ್ತು. ಆ ದಿನಕ್ಕಾಗಿಯೇ ಅವರು 25 ವರ್ಷ ಕಾದಿದ್ದರು. ಸರಕಾರಿ ಶಾಲೆಯೊಂದರಲ್ಲಿ ಅಧ್ಯಾಪಕನಾಗಿ, ನಿವೃತ್ತಿಯ ನಂತರ ಸಮೀಪದ ದೇವಸ್ಥಾನದಲ್ಲಿ ಮೇಲ್ವಿಚಾರಕನಾಗಿ ತಾನು ಸಂಪಾದಿಸಿದ ಹಣದಲ್ಲಿ ಪ್ರತಿ ತಿಂಗಳು ಒಟ್ಟು 25 ವರ್ಷ ಅಂದರೆ 300 ತಿಂಗಳು 4000 ರೂ. ಜಮೆ ಮಾಡಲು ಅದೆಷ್ಟೊ ಕಷ್ಟ ಪಟ್ಟಿದ್ದರು. […]
ಅಕ್ಕ ಎರಡು ಸೇರು ಅಕ್ಕಿ ಇದ್ರೆ ಕೊಡಿ ಅಕ್ಕ……
ನಾನು ಬೆಂಗಳೂರಿನಿಂದ ಬಂದು ಸುಮಾರು ಹತ್ತು ದಿನ ಆಗಿದೆ. ಮನೆಯ ಮಹಡಿ ಮೇಲಿನ ಒಂದು ಕೋಣೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದೇನೆ. (Covid ಇಲ್ಲ ಆದರೂ ನಮ್ಮ ಜಾಗ್ರತೆ ). ಮನೆಯ ಗೇಟ್ ಹತ್ತಿರ ಒರ್ವ ಮಹಿಳೆಯ ಕೂಗು ಕೇಳಿಸಿತು. ನಮ್ಮ ಮನೆಯ ಎರಡು ನಾಯಿ ಬೌ ಬೌ ಎಂದು ಕೂಗುತ್ತಾ ಆಕೆಯ ಮೇಲೆ ದಾಳಿ ಮಾಡಲು ಮುಂದಾದವು. ನಾನು ಜೋರಾಗಿ ನಾಯಿಗಳನ್ನು ವಾಪಸು ಕರೆದೆ… ಅವು ಸುಮ್ಮನಾದವು.. ಆ ತಾಯಿಯ […]
ತಾಯಿ ಎಂಬ ಮುಗಿಲು (ವಿಶ್ವ ತಾಯಂದಿರ ದಿನದ ಈ ಸಂದರ್ಭದಲ್ಲಿ)
ತಾಯೇ ನಿನದು ಪೊರೆವ ಮಡಿಲುಹಿತದಿ ಒರಗಿಕೊಳ್ಳುವೆಪ್ರೀತಿ ಮಳೆಯ ಹನಿಸೋ ಮುಗಿಲುತಂಪನುಣುತ ತಣಿಯುವೆ ಕೊನೆಯಿರದ ವಾತ್ಸಲ್ಯ ಕಡಲುಪ್ರತೀ ಹನಿಯದು ಅಮೃತನಿನ್ನ ಪ್ರೇಮದ ಜೀವಜಲವನೆಸವಿದು ಬದುಕುವೆನವಿರತ ಬೆಚ್ಚನೆ ಭಾವ ನೀ ಜೊತೆಗಿರಲುನಿನ್ನ ಸನಿಹವು ಅದ್ಭುತಅರಿವ ತೆರೆಯುತ ಪ್ರತೀ ಕ್ಷಣದಲುಬೆರಗಿನೊಳಿಡುವೆ ಸಂತತ ನೋವಿನಲ್ಲೂ ನಗುವ ಧರಿಸಿಹರುಷ ಹಂಚಿ ಉಣಿಸುವೆಕೋಪ ತಾಪ ಎರಗಿ ಬರಲಿಮಮತೆಯಲ್ಲೇ ಮಣಿಸುವೆ ನಿನ್ನ ರಕ್ಷೆಯು ಎದುರು ನಿಲಲುಜಗಕೆ ಜಗವೇ ಮೌನವುಕಾಡದೆಂದಿಗೂ ಭಯ – ದಿಗಿಲುನಿನ್ನ ಜೊತೆಯಿರೆ ಸೌಖ್ಯವು ನೀನೊಂದು ಮುಗಿಯದ ಕವಿತೆನನ್ನೆದೆಯೊಳಗಿನ […]










