ಓ ಗುಣವಂತನೆನೀ ಗುಣಗಳ ಖಜಾನೆನೀ ಗುಣಕಾರಿ, ನೀನೇ ಗುಣಾಧಿಕಾರಿನೀ ಸುಗುಣಾಚಾರಿ, ನೀನೇ ಗುಣಗಳ ರೂವಾರಿನೀ ಗುಣವರ್ಧಕ, ನೀನೇ ಗುಣಾತ್ಮಕನೀ ಗುಣವಿಶೇಷ, ನೀನೇ ಗುಣವಾಚಕಗುರಿ ತೋರಿಸುವ ಗುರುವೇನಾ ಹೇಗೇ ಮಾಡಲಿ ನಿನ್ನ ಗುಣಗಾನಓ ಗುಣಮಟ್ಟದ ಉತ್ತುಂಗವೆನಿನಗೆ ಕೋಟಿ ಕೋಟಿ ನಮನ. ಡಾ. ಉಮ್ಮೆ ಸಲ್ಮಾ ಎಂ., ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯
Category: ಸಮಗ್ರ ಕನ್ನಡ
ಭಾರತಾಂಬೆ
ಹೇ ಭಾರತಾಂಬೆ, ನಾ ನಿನ್ನ ಮಡಿಲಲ್ಲಿ ನಲಿದಾಡುವ ಕಂದನೂರು ಜನ್ಮ ತಾಳಿದರು ತಿರಿಸಲಾರೆ ನಾ ನಿನ್ನ ಋಣಾನುಬಂಧ. ನಿನ್ನ ಮಡಿಲೇ ಗಂಧದ ಗುಡಿ ನನಗೆಹಚ್ಚ ಹಸಿರಿನ ಗಿರಿವನಗಳೆ ನೀನಿತ್ತ ಉಸಿರು ನನಗೆ ನೀ ಸಿರಿ ದೇವತೆ, ನೀ ಜ್ಞಾನಮಯಿನೀ ಶಕ್ತಿ ದೇವತೆ, ನೀ ಕರುಣಾಮಯಿ ನೀ ನಮ್ಮ ಬಾಳ ಜ್ಯೋತಿನಿನ್ನಿಂದಲೇ ಜೇವನದ ಕಾಂತಿಸದಾ ನಮಿಪೆ ನಿನ್ನ ಚರ್ಣಗಳಿಗೆ ಹೇ ಭಾರತಾಂಬೆ.ಜೈ ಭಾರತಾಂಬೆ, ಜೈ ಭಾರತಾಂಬೆ. ಕವಿಯತ್ರಿ: ಡಾ. ಉಮ್ಮೆ ಸಲ್ಮಾ […]
ನನ್ನ ಭಾರತಕ್ಕೆ ಕೇವಲ ಒಂದೇ ಚಿನ್ನ ಗೆಲ್ಲುವ ಸಾಮರ್ಥ್ಯವೇ…?
ನನ್ನ ಭಾರತಕ್ಕೆ ಕೇವಲ ಒಂದೇ ಚಿನ್ನ ಗೆಲ್ಲುವ ಸಾಮರ್ಥ್ಯವೇ…?ನನ್ನ ಭಾರತದಲ್ಲಿ ದೇಶಕ್ಕೆ ಒಬ್ಬ ಅಲ್ಲ … ಜಿಲ್ಲೆಗೆ ಒಬ್ಬ ನೀರಜ್ ಚೋಪ್ರ ಸಿಗುತ್ತಾರೆ. ಹೇಗೆ?ಒಂದು ಚಿನ್ನ ಗೆದ್ದವರಿಗೆ ನೂರು ತಲೆಮಾರಿಗಾಗುವಷ್ಟು ಸುರಿಯುವುದಕ್ಕಿಂತ ನೂರು ಚಿನ್ನ ಗೆಲ್ಲಲು ನೂರು ಬಡ ಪ್ರತಿಭೆಗಳನ್ನು ಗುರುತಿಸಿ ಆರ್ಥಿಕ ವೆಚ್ಚ ಸಂಪೂರ್ಣ ಸರ್ಕಾರಗಳು ಬರಿಸಿದರೆ ಇದು ಸಾಧ್ಯ. ಜೊತೆಗೆ ಅತೀ ಹೆಚ್ಚು ಚಿನ್ನ ಗೆಲ್ಲುವ ದೇಶವೂ ನಮ್ಮದಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಖುಷಿಯ ಜೊತೆಗೆ ಹೆಮ್ಮೆಯೂ […]
ಕುಂದಾಪುರದ ಅನನ್ಯತೆ
ಕುಂದಾಪುರ (ಕುಂದಗನ್ನಡ) ಕನ್ನಡ ನಾಡಿನ ವಿಭಿನ್ನ ಹಾಗೂ ವಿಶಿಷ್ಟ ಭಾಷಾ ಸೊಗಡಿನ ಪ್ರದೇಶ. ಸುತ್ತ ಮುತ್ತ ಹಸಿರಿನಿಂದ ಮೈದುಂಬಿ ಕಂಗೊಳಿಸುತ್ತ ,ಹಕ್ಕಿಗಳ ಚಿಲಿಪಿಲಿ ಕಲರವ ಕೇಳುತ್ತ, ಪಶ್ಚಿಮ ದಿಕ್ಕಿನಗಲಕ್ಕೂ ಸಮುದ್ರದ ಬೋರ್ಗರೆಯುವ ಅಲೆಗಳನ್ನು ನೋಡುತ್ತಾ ಖುಷಿ ನೀಡುವ ತಾಣ ನಮ್ಮ ಕುಂದಾಪುರ. ಕುಂದಾಪುರ ಬರೀ ಕರ್ನಾಟಕ ರಾಜ್ಯ ಹಾಗೂ ಭಾರತ ದೇಶದಲ್ಲಿ ಅಲ್ಲದೆ ಅನೇಕ ಕಾರಣಗಳಿಂದ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ರಾಜ್ಯದ ಇತರೆ ಭಾಗಗಳಿಗಿಂತ ವಿಶಿಷ್ಟ ಶೈಲಿಯ ಅಸ್ಮೀತೆ, ಸಂಸ್ಕೃತಿ ಮತ್ತು […]
ಮಾತು
ಈಗೀಗ ಮನದೊಳಗಿನ ಭಾವನೆಗಳುನಾಲ್ಗೆಗೆ ಬರಲು ಹೆದರುತ್ತವೆಎಲ್ಲರೂ ಬೇಲಿಹಾಕಿಕೊಂಡು ಬಿಟ್ಟಿದ್ದಾರೆಮನದೊಳಗೂ, ಮೆದುಳೊಳಗೂಪ್ರತಿ ನುಡಿಯಲ್ಲೂ ಏನಾದರೊಂದು ಲೋಪಕೊಂಕಿರಬಹುದು ಎಂದೇ ಹುಡುಕುವವರಿದ್ದಾರೆಮೌನವಾಗಿದ್ದರೆ…. ಮೌನವೇ ಜ್ವಾಲಾಮುಖಿಲಾಗಿಲಾವಾರಸ ಉಕ್ಕಿ ಮಾತುಗಳನ್ನೇ ಬಲಿಹಾಕಿಬಿಡಬಹುದುಯಂತ್ರವಾಗಬೇಕು, ರೋಬೋವೇ ಆಗಿಬಿಡಬೇಕುಕೃತಕತೆ ತುಂಬಿದ ವಾಕ್ಯಗಳನ್ನು ಒಳ ತೂರಿಸಿಮತ್ತೆ ಮತ್ತೆ ಎಲ್ಲರಿಗೂ ಖುಷಿನೀಡುವಅದೇ ಸಾಲು, ಸುಳ್ಳಿನ ಸಾಲುಗಳನ್ನುಕ್ಲೀಷೆಯಾಗುವವರೆಗೆ ಕೇಳಿಸುತ್ತಲೇ ಇರಬೇಕುತುಟಿಬಿರಿದು ಹಳದಿಯಂಟಿದ ಹಲ್ಲುಗಳನ್ನುತೋರಿಸಿ ಧನ್ಯರಾಗಿಬಿಡುತ್ತಾರೆಆರೇಳಿಂಚಗಲದ ಸ್ಮಾರ್ಟ್ ಫೋನ್ ಪರದೆಯೂಳಗೆಮುಖ ಹುದಿಗಿಸಿ ಹೂಂ ಗಟ್ಟುತ್ತಾರೆಕಾಫಿ ಕುಡಿಯುವಾಗಲೂ, ಊಟಮಾಡುವಾಗಲೂಮಾತುಗಳೆಲ್ಲ ಹಾಗೇ ತೇಲಿಹೋಗಿಬಿಡುತ್ತವೆಮಾತುಗಳೇ ಮೇಲೇರಿ ಮೋಡಗಳಾಗಿಘನೀಕರಿಸಿ, ಕರಗಿ ಧೋ…ಎಂದುಸುರಿಯುವಂತಿದ್ದರಾಗುತ್ತಿತ್ತು…ಬಹುಶಃ ಮಾತನಾಡಲು […]
ಮೀನುಗಾರರನ್ನು ಕರೋನ ಲಸಿಕೆಯ ಆದ್ಯತೆಯ ಪಟ್ಟಿಯಲ್ಲಿ ಸೇರಿಸಬೇಕು
ಕರೋನಾ ಲಾಕ್ಡೌನಿನ ಕಳೆದೆರಡು ಅವಧಿಯಲ್ಲಿ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು, ಸರಕಾರದ ಪ್ಯಾಕೇಜುಗಳು ಸರಿಯಾಗಿ ಸಿಗದೆ ಬದುಕು ಸಾಗಿಸಿದ ಮೀನುಗಾರರು ಮತ್ತೆ ಕಡಲಿಗೆ ಇಳಿಯಲು ಸಜ್ಜಾಗುತ್ತಿದ್ದಾರೆ. ಕರೋನಾ ಮೂರನೆ ಅಲೆಯ ಭಯದ ನಡುವೆ ಹೊಟ್ಟೆಪಾಡಿಗಾಗಿ ಅಗಸ್ಟ್ ತಿಂಗಳ ಎರಡನೇ ವಾರದಲ್ಲಿ ಸರ್ಕಾರದ ನಿಯಮದಂತೆ ಮೀನು ಹಿಡಿಯಲು ಹೊರಡುತ್ತಿರುವ ಬಹುತೇಕ ಮೀನುಗಾರರಿಗೆ ಕರೋನಾ ಲಸಿಕೆ ಇನ್ನೂ ಲಭ್ಯವಾಗಿಲ್ಲ. ಕರೋನಾ ಲಸಿಕಾಕರಣ ನಿಧಾನ ಗತಿಯಲ್ಲಿ ಸಾಗುತ್ತಿರುವುದರ ಜೊತೆಗೆ ಸರ್ಕಾರ ಮೀನುಗಾರರನ್ನು ಕರೋನ ಲಸಿಕೆಯ […]
ಬಂಧನದೊಳಗೆ
ಮೋಹವೋ, ವ್ಯಾಮೋಹವೋ … ಸೆಳತಕೆ ಒಳಗಾಗಿ ಬಂದಿಯಾಗುತಿದ್ದೇವೆ….ಯಾರಿಗೂ ತಿಳಿಯದೆ, ತಿಳಿದು ಗೊತ್ತಾಗದೆ ಹೊಟ್ಟೆಯ ಚೀಲ ತುಂಬಿಸಲು…ಜೀವದ ಹಂಗು ತೊರೆದು ಎರಡು ಅಲೆಗಳಿಗೆ ಎದೆ ಕೊಟ್ಟುಈಜಿದ್ದು ಗೊತ್ತಾಗಲೇ ಇಲ್ಲಾ ! ಬದುಕಿನ ದೋಣಿ ಮುಳುಗಿದ್ದು ಗೊತ್ತಾಗುವ ಮುನ್ನವೇ… ಆಸೆ ಭಾಸೆಗಳ ಆಡುವು ಇಟ್ಟಿದ್ದು ನಿನ್ನ ಒಳ ಮನಸಿಗು ಗೊತ್ತಾಗಲಿ …!!! ನೀರಿನ ಸೆಳತದಲ್ಲಿ ಸಿಕ್ಕಿ ಈಗಷ್ಟೇ ದಡಕ್ಕೆ ಬರುತ್ತಿರುವ ದೋಣಿಗೆಮಹತ್ವದ ಸೂಚನೆಯಂತೆ ಏಳುತಿದೆಯಂತೆ ಮೂರನೇ ಅಲೆ ಈ ಅಲೆಗಳಿಗೆ ಬೆಲೆ ಕೊಟ್ಟು […]
ಶ್ರೀ ಗೋವಿಂದ ಬಾಬು ಪೂಜಾರಿಯವರು ಬಡ ಕುಟುಂಬಗಳಿಗೆ ನಾಲ್ಕನೇ ಮನೆ ನಿರ್ಮಿಸಿ, ಹಸ್ತಾಂತರಿಸುವ ಶುಭ ಘಳಿಗೆಯಲ್ಲಿ ….
ತನ್ನ ದುಡಿಮೆಯ ಒಂದು ಭಾಗವನ್ನು ಅಶಕ್ತರ ಪಾಲಿಗೆ ಮೀಸಲಿಟ್ಟು, ನಿರಂತರವಾಗಿ ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ, ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ನ್ನು ಹುಟ್ಟುಹಾಕಿ, ಆ ಮೂಲಕ ಕಡು ಬಡವರ ಬದುಕಿನಲ್ಲಿ ಆಶ್ರಯದಾತ, ಅನ್ನದಾತ ಮತ್ತು ಆರೋಗ್ಯದಾತರಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಆಶ್ರಯ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಹಿನ್ನೆಲೆಯಲ್ಲಿ ಶ್ರೀ ಗೋವಿಂದ ಬಾಬು ಪೂಜಾರಿಯವರು […]
ಸೋಶಿಯಲ್ ಮೀಡಿಯಾದ ಒಳ-ಹೊರಗು
ಬೆಂಕಿಯನ್ನು ಮನೆಯೊಳಗೆ ಚಿಕ್ಕದಾಗಿ ಹಚ್ಚಿಟ್ಟರೆ ದೀಪವಾಗಿ ಮನೆ ಬೆಳಗುತ್ತದೆ. ಅದೇ ಮನೆಗೆ ಹಚ್ಚಿದರೆ ಮನೆಯನ್ನೇ ಸುಟ್ಟು ನಾಶ ಮಾಡುತ್ತದೆ. ಇಡೀ ಜಗತ್ತನ್ನೇ ತನ್ನತ್ತ ಸೆಳೆಯುತ್ತ ,ವಿಷಯ ,ವಿಚಾರ ಹಾಗೂ ಭಾವನೆಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಬಹುಬೇಗನೆ ತಲುಪಿಸುವ ಉದ್ದೇಶದಿಂದ ಹುಟ್ಟಿಕೊಂಡ ಫೇಸ್ ಬುಕ್ ಹಾಗೂ ಇತರ ಸೋಶಿಯಲ್ ಮೀಡಿಯಾಗಳು ಇಂದು ಇಡೀ ಜಗತ್ತನ್ನೇ ಆವರಿಸಿದೆ. ಆದರೆ ಈ ಸೋಶಿಯಲ್ ಮೀಡಿಯಾಗಳನ್ನು ನಾವು ದೀಪದಂತೆ ನಾವು ಆರೋಗ್ಯಕರವಾಗಿ ಬಳಸುವುದು ಉತ್ತಮ. ಇಲ್ಲವಾದರೆ ಇದು […]