ಬಾನಿಂದ ಜಾರಿ ಹಂಚಿನ ಮೇಲೆರಗಿ ಯಾರಿಗೂ ಕಾಯದೆನನ್ನ ಬಳಿ ಬಂದು ಉಲ್ಲಾಸ ನೀಡಿದ್ದುಯಾರಿಗೂ ಗೊತ್ತಾಗಲಿಲ್ಲಕೆಲಸವಿಲ್ಲದೆ ಕುಳಿತ ನನ್ನೊಬ್ಬನನ್ನು ಬಿಟ್ಟು … ವರ್ಣಿನೆಗೂ ಮೀರಿದ ನಿನ್ನ ಮಾಯೆನಿನ್ನ ಕಿರು ಹನಿಯೇ ಪ್ರಕ್ರತಿಗೆ ಛಾಯೆ ಗೊತ್ತಾಗುತ್ತಿಲ್ಲವಲ್ಲಾ ನಿನ್ನ ತುಂತುರು ಹನಿಗಳ ಲೀಲೆ ಆಕಾಶ ಬಿರಿದು ಹೊರ ಬರಲು ಸಾಲು ನಿಂತ ಹನಿಗಳ ಸರದಿ.ನೀ ಹಿತ ಮಿತವಾಗಿ ಬಂದರಷ್ಟೇ ಜಗಕೆ ನೆಮ್ಮದಿಜೋರಾಗಿ ಸುರಿದರೆ ಮಾಡಬೇಕಾದಿತು ನಿನ್ನ ಮೇಲೆ ವರದಿ ✍️ಈಶ್ವರ ಸಿ. ನಾವುಂದ
Category: ಸಮಗ್ರ ಕನ್ನಡ
ಹೆಣ್ಣು – ಮಣ್ಣು
ಇಡೀ ಭೂಮಂಡಲದಲ್ಲಿ ಸೃಷ್ಟಿಸುವ ಶಕ್ತಿ ಇರುವುದು ಹೆಣ್ಣಿಗೆ ….. ನಾನು ಅನ್ನುವ ಈ ಚರ್ಮದ ಹೊದಿಕೆಯ ದೇಹವು ಒಂದಲ್ಲ ಒಂದು ದಿನ ಸೇರಬೇಕು ಮಣ್ಣಿಗೆ….. ಜಗತ್ತು ಮಾಯಾಲೋಕದಂತೆ ಕಂಡಿರಬಹುವುದು ನಿನ್ನ ಕಣ್ಣಿಗೆ …… ಕೊನೆತನಕ ಚಿರಋಣಿಯಾಗಿರು ನಿನ್ನ ಸ್ರಷ್ಠಿಸಿದ ಹೆಣ್ಣಿಗೆ….. ತಾಯ್ನೆಲದ ಮಣ್ಣಿಗೆ ✒️ ರಾಘವೇಂದ್ರ ಹಾರ್ಮಣ್ಇಡೂರು ಕುಂಜ್ಞಾಡಿ
ನೆನಪು
ಅದೆಷ್ಟೋ ರಾತ್ರಿ ನಿನ್ನ ನೆರಳ ಚಾದರ ಹೊದ್ದು ಮಲಗಿದ್ದೆ ನಾನು….ಕನಸು ಮಾರಿಕೊಂಡು ನಿನ್ನ ಸವಿನೆನಪ ಮೆರವಣಿಗೆಯಲ್ಲಿ….ಕಳೆದು ಹೋದ ಬಯಕೆಗಳ ಹುಡುಕಾಟದಲ್ಲಿ ಹುಟ್ಟಿದ ಭಾವನೆಗಳಿಗೆ ಲೆಕ್ಕವೇ ಇಲ್ಲ …ಚಾದರದ ಮುಸುಕಿನೊಳಗಿನ ಗುದ್ದಾಟಗಳಿಗೆ ಅರ್ಥವೇ ಇಲ್ಲ ….ಬರಿ ಹಸಿ, ಹಸಿ ನೆನಪುಗಳ ನೆಪದಲ್ಲೇ ಉಳಿದುಸಮಯ ಸಿಕ್ಕರೆ ಕನಸಲ್ಲೂ ಬಂದು ಬಿಡುನಿನ್ನ ಮರೆತು ಬಿಡುವ ಮೊದಲು…! ನೆನಪಲ್ಲೇ ಬೆಂದು ಸಾಕಾಗಿದೆ ನನಗೆ…!!! ✍️ಕಲ್ಪನೆ : ಈಶ್ವರ ಸಿ ನಾವುಂದ
ಸೋತವನ ಗೆಲುವುಗಳು
ಗೆಲ್ಲಲೇಬೇಕೆಂದು ಮನದೊಳಗೆಪಣತೊಟ್ಟವನೊಬ್ಬಅಡಿಗಡಿಗೆ ಸೋತ, ಮತ್ತೆ ಸೋತಸೋಲುತ್ತಲೇ ಹೋದಕೆಲವೊಮ್ಮೆ ನಿಕೃಷ್ಟವಾಗಿಅವನು ಪ್ರತೀ ಸೋಲಿನಿಂದಲೂ ಕಲಿತದ್ದುಹೇಗೆಲ್ಲ ಸೋಲಬಹುದು ಎಂಬುದನ್ನು.ಸೋತಾಗಲೆಲ್ಲ ಪಟ್ಟಿಮಾಡಿಕೊಂಡತಪ್ಪು ಹೆಜ್ಜೆ ತಪ್ಪು ಊಹೆತಪ್ಪು ಲೆಕ್ಕಾಚಾರ ತಪ್ಪು ಯೋಜನೆಎಲ್ಲವನ್ನೂ ಟಿಪ್ಪಣಿ ಮಾಡಿಕೊಂಡ ತಪ್ಪುಗಳಿಗೆಲ್ಲ ಉತ್ತರ ಹುಡುಕುತ್ತಾಸರಿಯಾಗಿಸುತ್ತಾ ಸಾಗಿದಸೋಲಿನೆಲ್ಲಾ ದಾರಿಯನ್ನೂ ಕಂಡುಕೊಂಡಸೋಲಿನ ಪಾಠಗಳಿಗೆ ವೀಷಯವಾಗಿಯೇ ಗುರುವಾಗಿಬಿಟ್ಟ ಈಗ ಅವನಿಗೆ ನೂರಾರು ಶಿಷ್ಯರುಎಲ್ಲರೂ ಗೆಲ್ಲುತ್ತಿದ್ದಾರೆಒಂದೊಂದು ಗೇಲುವೂ ಮೈಲಿಗಲ್ಲೇಸೋತವನೊಬ್ಬನ ಗೆಲುವುಗಳುಬೆಳಕನ್ನು ಹರಿಸುತ್ತಿವೆ ಕತ್ತಲ ದಾರಿಯಲ್ಲಿಎಂದೂ ಸೋಲರಿಯದಂತೆ….. ಕಿಗ್ಗಾಲು.ಜಿ.ಹರೀಶ್
ಸಂಬಂಧ
ಮಾನವ ಸಂಬಂಧಗಳ ನಿರ್ವಹಣೆ ಇದು ಅತ್ಯಂತ ಕಷ್ಟಕರ ಹಾಗೂ ನಿರಂತರ ಪ್ರಕ್ರಿಯೆಯಾಗಿದೆ. ಏಕೆಂದರೆ ಆಧುನಿಕತೆಯ ಬದುಕಿನಲ್ಲಿ ಸಂಬಂಧಗಳು ವಿಮುಖ ಗೊಳ್ಳುವ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ಜಾಗತೀಕರಣದ ನಾಗಾಲೋಟಕ್ಕೆ ಸಿಲುಕಿ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಆತಂಕ ನಮ್ಮೆಲ್ಲರನ್ನು ಕಾಡತೊಡಗಿದೆ. ಭಾರತೀಯ ಸಂಸ್ಕೃತಿಯಲ್ಲಿನ ಮಾನವ ಸಂಬಂಧಗಳ ಮೌಲ್ಯತೆಗೆ ಮತ್ತು ಪಾವಿತ್ರ್ಯತೆಗೆ ಇದ್ದ ಬೆಲೆ ಇವತ್ತು ಪಾಶ್ಚಾತೀಕರಣ ಜೀವನ ಶೈಲಿಯಿಂದಾಗಿ ಪ್ರವಾಹದ ಹರಿದು ಹೋಗುತ್ತಿರುವ ಕೊಳಕು ನೀರಿನಂತಾಗಿದೆ. ವಾಸ್ತವವಾಗಿ ಇಂದಿನ ದಿನಗಳಲ್ಲಿ ನೆನಪಿಗೆ […]
ಕಲೆಗೆ ನೆಲೆ ಸಿಗಲಿ, ಕಲಾವಿದರಿಗೆ ಬೆಲೆ ಸಿಗಲಿ ಕಲೆಯಲ್ಲೇ ಉಸಿರಾಡ ಬಯಸುವರಿಗೆ ಅವಕಾಶ ದೊರಕಲಿ
ಪ್ರತಿಯೊಬ್ಬ ಮನುಷ್ಯನಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೆ ಇರುತ್ತೆ. ಕೆಲವರದ್ದು ಸುಪ್ತವಾಗಿರುತ್ತೆ, ಇನ್ನೂ ಕೆಲವರದ್ದು ಹುಟ್ಟುವಾಗಲೇ ರಕ್ತಗತವಾಗಿರುತ್ತದೆ. ಇನ್ನು ಕೆಲವು ಪ್ರತಿಭೆಗಳು ಯಾರ ಕಣ್ಣಿಗೂ ಕಾಣದೆ ಸುಪ್ತವಾಗಿಯೇ ಇದ್ದು ಎಲ್ಲೋ ಅಡಗಿ ಮರೆಯಾಗಿ ಹೋಗುತ್ತದೆ. ಮತ್ತೆ ಕೆಲವರದ್ದು ಕಲೆ ಪರಿಚಯಸುವವರ ಕಣ್ಣಿಗೆ ಬಿದ್ದು ಅದಕ್ಕೊಂದು ರೂಪ ಬಂದು ಅದು ಜಗಕ್ಕೆ ತೋರ್ಪಡಿಸುವಂತಗುತ್ತದೆ.ಕಲೆಯೇ ಉಸಿರು, ಜೀವಾಳ ಎಂದು ಬದುಕಿನೂದ್ದಕ್ಕೂ ಕಲಾ ಕ್ಷೇತ್ರದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆ ಎಂಬ ಗಿಡಕ್ಕೆ […]
ನಾನು, ಕನ್ನಡಿ ಮತ್ತು ನೆರಳು
ಕನ್ನಡಿಯೊಂದೇ ತೋರಿಸುವುದಂತೆನನ್ನನ್ನು ನಾನಿದ್ದಂತೆಕಾಣಬೇಕಿತ್ತು ನನ್ನೊಳಗಿನ ನನ್ನನ್ನು ನಾನುಆಳೆತ್ತರದ ಕನ್ನಡಿಯೆದುರು ನಿಂತೆ ಏನಾಶ್ಚರ್ಯ !ಎಡಭಾಗ ಬಲಭಾಗವಾಗಿಬಲಭಾಗ ಎಡಭಾಗವಾಗಿನನ್ನ ವೈರುಧ್ಯಗಳ ದರ್ಶನ ಕನ್ನಡಿಯೊಳಗಿನ ನನ್ನ ಬಿಂಬದಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿ ನೋಡಿದೆಕಣ್ಣುಗಳ ಮೂಲಕವೇ ನನ್ನೊಳಗಿಳಿದು ಕೇಳಿದೆಹೌದು, ಯಾರು ನಾನುಅಲುಗಾಡಿದ ತುಟಿ ಅತ್ತದ್ದೇ ನಕ್ಕದ್ದೇ ಅರ್ಥವಾಗಲಿಲ್ಲಕಣ್ಣುಗಳಾದರೂ ಹೇಳಿದ್ದೇನು? ಅದೂ ಅರ್ಥವಾಗಲಿಲ್ಲನನ್ನ ಪ್ರತಿಬಿಂಬಕ್ಕೂ ನನ್ನರಿವಾಗದೆ ನಿಟ್ಟುಸಿರು ಬಿಟ್ಟಿರಬೇಕು ಖಚಿತವಾಯ್ತು. ಇಲ್ಲ..ಕನ್ನಡಿ ತೋರಲಾರದು ಸತ್ಯಅರ್ಥವಾಗಿತ್ತು ನನಗೆಹಾಗೇ ಸುಮ್ಮನೆ ನಡೆದು ಹೋದೆಬಿಡಲಾರದೆ ನನ್ನನ್ನೇ ಹಿಂಬಾಲಿಸುತ್ತಿತ್ತು ನೆರಳುಅದನ್ನೇ ಕೇಳಿದೆ ‘ಹೌದು ನಾನು […]
ಮೊಬೈಲ್ ಪ್ರಪಂಚ
ಕರೋನಾ ಮಹಾಮಾರಿಗೆ ಸಿಲುಕಿ ಬದುಕು ಅಸ್ತವ್ಯಸ್ತವಾಗಿದೆ. ಇಂತಹ ಸಂದರ್ಭದಲ್ಲಿಯೂ ಕೂಡ ಕರೋನಾದಿಂದಾಗಿ ನಮ್ಮ ಮೇಲೆ ಬೀರಿದ ಸಕಾರಾತ್ಮಕ ವಿಷಯಗಳ ಕುರಿತು ನಾವು ಹಲವು ಲೇಖನಗಳಲ್ಲಿ ಓದಿದ್ದೇವೆ. ಹೊಟ್ಟೆಪಾಡಿಗಾಗಿ ನಮ್ಮವರನ್ನೆಲ್ಲಾ ಬಿಟ್ಟು ಎಲ್ಲೆಲ್ಲೋ ದುಡಿಯುತ್ತಿದ್ದವರು ಇಂದು ಕುಟುಂಬದ ಜೊತೆ ಸೇರಿ ಸಂತೋಷದಿಂದಿರಲು ಕರೋನಾ ಲಾಕ್ಡೌನ್ ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಮಾತು ಎಷ್ಟರ ಮಟ್ಟಿಗೆ ನಿಜ? ಎಷ್ಟೇ ಸಮಯವಿದ್ದರೂ, ನಮ್ಮವರೆಲ್ಲಾ ಕಣ್ಣೆದುರಿಗಿದ್ದರು, ಅವರೊಂದಿಗೆ ಮಾತನಾಡದೆ ಮೊಬೈಲ್ ನಲ್ಲಿ ಮುಳುಗಿರುವವರ ಸಂಖ್ಯೆ ಹೆಚ್ಚು. […]
ನಮ್ಮನೆ ಬೆಕ್ಕು
ನಮ್ಮನೆ ಬೆಕ್ಕು ಲಾಂಗೂಲವನ್ನು ಲಂಬ ಕೋನದಲ್ಲಿ ಮೇಲಕ್ಕೆತ್ತಿಮೀಸೆಗಳನ್ನು ನೆಟ್ಟಗೆ ಮಾಡಿಕೊಂಡುಸರಳ ರೇಖೆಯಲ್ಲೇ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟುನಡೆದು ಬರುವಾಗ ವಿಶ್ವ ಸುಂದರಿಯರನ್ನುನೆನಪಿಸುತ್ತದೆ ನಮ್ಮನೆಯ ಬೆಕ್ಕು ! ಬಿಳಿಯ ಬಣ್ಣ ಮೈತುಂಬ ರೋಮರೋಮ್ ನಿಂದ ಬಂದದ್ದೇ? ನೀವೇನಾದರೂಕೇಳಿದರೆ ರೂಮ್ ಬಿಟ್ಟು ಹೊರಹೋಗದ್ದುಅಲ್ಲಿಂದ ಬರುವುದು ಹೇಗೆ? ಅದೇನು ಭಕ್ತಿ ? ಅದೇನು ನಿಯತ್ತು?ಬಟ್ಟಲಿಗೆ ಹಾಕಿಟ್ಟ ಹಾಲು ಕುಡಿಯುವಾಗಲೂಕಣ್ಮುಚ್ಚಿ ಪರಶಿವನ ಧ್ಯಾನಕಾಡಿ ಬೇಡಿ ಅರಚಿ ಕಿರುಚಿವ್ಹಿಸ್ಕಸ್ ಮೆದ್ದ ಮೇಲೆಕುಂಭಕರ್ಣನೂ ನಾಚಬೇಕು ಅದರ ನಿದ್ದೆಗೆ ಮುಟ್ಟಿದೊಡನೆ ಮೈಮರೆತುಶೀರ್ಷಾಸನ […]
ಅದ್ಯಾವ ಸೀಮೆಯ ಮಾಯಗಾತಿ ನೀನು..!
ಅದ್ಯಾವ ಸೀಮೆಯ ಮಾಯಗಾತಿ ನೀನು..ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ..ಸುಮ್ಮನಿರಲು ಈ ಹೃದಯ ಬಿಡಬೇಕಲ್ಲ.. ಅರೇ ! ಇದೇನು ನಿನ್ನ ಹುಚ್ಚಾಟ ಅನ್ನುವುದು ನೀನುನೀನಿಲ್ಲದೆ ಬದುಕೆನು ನಾನು..ನನಗೆ ನೀನೆ ವ್ಯಾಕ್ಸಿನ್ನು… ಬಿಸಿರಕ್ತ ಹರಿಯುವ ಈ ದೇಹಕ್ಕೆ ..ಅಣು ಕಣದಿ ನಿನ್ನದೆ ಛಾಯೆ..ಈ ನನ್ನ ಬದುಕೆಲ್ಲಾ ನಿನ್ನದೆಯಾ ಮಾಯೆ. ನಿನ್ನ ಪ್ರೀತಿ ಸಂಜೆಯಲಿ ಗುಂಯ್ಗುಡುವ ಸೊಳ್ಳೆಯಂತೆ..ಮಧ್ಯರಾತ್ರಿ ಕಚ್ಚುವ ತಿಗಣೆಯಂತೆಮುಂಜಾನೆಯಲ್ಲಿ ಮುದುಡುವ ಚಳಿಯಂತೆ..ಮಧ್ಯಾಹ್ನದಲ್ಲಿ ನೆತ್ತಿ ಸುಡುವ ಬಿಸಿಲಂತೆ.ಅದಕ್ಕೆ ನಾ ಹೇಳುವೆ ನೀ ನನ್ನಲೊವಿನವಳು..ಮುದ್ದು ಲವ್ ಯೂ…. […]










