ಕಣ್ಣು ತೆರೆದಾಗ ನಾ ಕಂಡ ಶಿವ ನೀನುಮನೆಯಂಬ ಗುಡಿಯಲಿ ನೆಲಸಿರುವ ದೇವರು ನೀನುನಿನ್ನ ನಡೆಯೇ ವಿದ್ಯಾದಾಯಿನಿನಿನ್ನ ನುಡಿಯೇ ದಿವ್ಯವಾಣಿನೀನೇ ನನ್ನ ಬಾಳ ಅನುಗ್ರಹನೀನೇ ನನ್ನ ಸರ್ವಸ್ವ ….ನನ್ನ ತಂದೆ. ನೀನು ಕಣ್ತುಂಬ ನಿದ್ದೆ ಮಾಡಿದ್ದು ನೋಡಿಲ್ಲ ನಾನುನಮ್ಮ ಬದುಕು ರೂಪಿಸು ಹಗಲಿರುಳು ದುಡಿದವ ನೀನುನಿನ್ನ ಮನದಲ್ಲಿ ತುಂಬಿತ್ತು ನಮ್ಮ ಉಜ್ವಲ ಭವಿಷ್ಯದ ಚಿಂತೆನೀನೇ ನನ್ನ ಸರ್ವಸ್ವ ….ನನ್ನ ತಂದೆ. ನಿನ್ನ ನಗುವೆ ನನಗೆ ಕೋಟಿ ಧನನೀನಿರುವ ತಾಣವೇ ನನಗೆ ದೇವಸ್ಥಾನನಿನ್ನ […]
Category: ಸಮಗ್ರ ಕನ್ನಡ
ಮೊಳಕೆ
ಕಣ್ಣೀರು ಚೆಲ್ಲಬೇಡಮೊಳಕೆಯೊಂದು ನಾಳೆಯಿಂದ ನಿನ್ನಕಣ್ಣೀರನ್ನೇ ಬಯಸೀತುಕಣ್ಣೀರು ಚೆಲ್ಲಬೇಡಅದನ್ನೇ ಹೀರಿದ ನೆಲ ದಿನ ಕಳೆದಂತೆಬಂಜರು ಭೂಮಿಯಾದೀತುಸಾಧ್ಯವಾದರೆ ನೀನೊಮ್ಮೆ ನಕ್ಕುಬಿಡುದ್ವೇಷದ ಬೀಜ ಬಿತ್ತಿದವರೆಲ್ಲ ಒಳಗೊಳಗೇಕುದ್ದು ಬೆಂದು ಹೋಗಲಿಇಲ್ಲವಾದರೆ ಅಂತೆಯೇ ಸುಮ್ಮನಿದ್ದುಬಿಡುನಿನ್ನ ಕೆಣಕಿದವರಿಗೆಲ್ಲ ನೀನೊಂದು ಬಂಡೆಯೆಂದುಗೊತ್ತಾಗಿ ಸುಮ್ಮನಾಗಿಹೋಗಲಿಶಸ್ತ್ರ ಹೋರಾಟ ಗೊತ್ತಿರಲೇ ಬೇಕಾಗಿಲ್ಲ ಗೆಲ್ಲಲುಸುಮ್ಮನೆ ಬಂದೂಕನ್ನೆತ್ತಿಕೋ, ಗುರಿಯಿಡುಕುದುರೆಯ ಮೇಲೆ ಬೆರಳಿರಲಿಎದುರಿನವನು ಖಡ್ಗ ಕೆಳಗಿಡಬಹುದು ಅಥವಾಬಿಳಿ ಪತಾಕೆ ಹಾರಿಸಿಯಾನುಸುಮ್ಮನೆ ಬಂದೂಕಿನ ಕುದುರೆಯನ್ನೆಳೆದು ಬಿಡುನಳಿಕೆಯಿಂದ ಕೆಂಗುಲಾಬಿಯೇ ಚಿಮ್ಮಲಿಸೋತರೂ ಜಯ ನಿನ್ನದಾಗಬಹುದುಬಾನಿಂದ ಹನಿಯೊಂದು ಚೆಲ್ಲಬಹುದುಮೊಳಕೆ ಚಿಗುರಲೂ ಬಹುದು ಕಿಗ್ಗಾಲು ಜಿ. […]
ಕನಸುಗಳು ಮಾರಾಟವಾಗಿದೆ…!
ಕನಸುಗಳು ಮಾರಾಟವಾಗಿದೆ…! ಏಳು ಸುತ್ತಿನ ಕೋಟೆಯಲಿ ….ಕನಸುಗಳು ಇದೆ ನೂರಾರುಸಾಗುತಿದೆ ಕಾವಲುದಾರಿಯಲ್ಲಿ ಗುರಿ, ಗುರು ಮರೆತು ಬೇಕಾಗಿದ್ದಾರೆ… ಕನಸುಗಳಿಗೆ ಬಣ್ಣ ಹಚ್ಚುವವರು ಬೇಕು… ಆಸೆಗಳಿಗೆ ದಾರಿ ತೋರಿಸುವವರುಕನಸು ಮಾರಿ ಹೊರಟಿದೆ ಜೀವಗಳುಬಿಳಿ ಬಟ್ಟೆ ಹೊದ್ದು, ಬಣ್ಣದ ಬಟ್ಟೆ ಮರೆತು. ಸಾವುವೆಂಬ ಕಠಿಣ ಶಬ್ದ ಮೆಲ್ಲನೆ ಹೇಳಿ ಸೂಚನೆ ಕೊಡದೆ ಹೊರಟು ನಿಂತಿದ್ದಾರೆಯಾರಿಗೂ ಹೇಳದೇ…. ಏನನು ಕೇಳದೆ ಯಾರನು ಕಾಯದೆ… ಬಾರದ ಲೋಕದಡೆ …ಕನಸು ಹೊತ್ತವನ ಪ್ರಯಾಣ…! ಈಶ್ವರ ಸಿ ನಾವುಂದ
ಹೇಳದೆ ಹೋದ ಅಪ್ಪನಿಗಾಗಿ…
ಅಂದು ಶಿವರಾತ್ರಿಯ ಅಮಾವಾಸ್ಯೆ, ಸಂಜೆ ಹೊತ್ತು ನನ್ನ ಬಾಲ್ಯದ ಸ್ನೇಹಿತರ ಜೊತೆ ಆಟ ಮುಗಿಸಿ ಮನೆಗೆ ಹೋಗುವಾಗ, ಗೆಳೆಯ ಅಶೋಕ್ ಹೇಳಿದ “ಇವತ್ತು ಕೋಟೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಇದೆ, ನನ್ನ ಬಳಿ ಹಣ ಇದೆ, ಈವಾಗಲೇ ಹೋಗಿ ಅಲ್ಲೇ ಏನಾದ್ರೂ ತಿಂದು ಯಕ್ಷಗಾನ ನೋಡಿಕೊಂಡು ಬರೋಣ” ಎಂದು ಹೇಳುತ್ತಿದ್ದಂತೆ ಹಿಂದೆ ಮುಂದೆ ನೋಡದೆ ಅವನೊಂದಿಗೆ ಯಕ್ಷಗಾನ ನೋಡಲು ಹೋಗಿದ್ದೆ. ಇತ್ತ ಊಟ ಸಿದ್ದಪಡಿಸಿಕೊಂಡು ಕಾದಿದ್ದ ಅಮ್ಮನಿಗೆ ಚಿಂತೆ ಹೆಚ್ಚಾಗಿ ಅಪ್ಪನಿಗೆ […]
ಬದುಕು ಮತ್ತು ಕಲೆ ಎರಡನ್ನು ಸಮಾನವಾಗಿ ಪ್ರೀತಿಸುವ ಉಪ್ಪುಂದ ಮೇಲ್ಮನೆ ಜಗದೀಶ್ ದೇವಾಡಿಗ
ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾ, ಮಿತ್ರ ಬಳಗವನ್ನು ಬೆಳೆಸುತ್ತಾ, ತಮ್ಮ ಬದುಕಿನ ಇತಿಮಿತಿಯ ಒಳಗೆ ಉತ್ತಮ ಕೆಲಸ ಮಾಡುವುದರೊಂದಿಗೆ ಹ್ರದಯ ವೈಶಾಲ್ಯತೆಯನ್ನು ತೋರುವ ಒಬ್ಬ ಯುವಕನ ಬಗ್ಗೆ ನಿಮಗೆ ಹೇಳಲೇ ಬೇಕು. ಅವರೇ ಸರಳ ಸ್ವಭಾವದ ಸೇವಾ ಜೀವಿ,ಯುವ ಸಾಹಿತಿ ಉಪ್ಪುಂದ ಮೇಲ್ಮನೆ ಜಗದೀಶ್ ದೇವಾಡಿಗ. ಗೆಳೆಯರು ಇವರನ್ನು ಪ್ರೀತಿಯಿಂದ” ಜಗ್ಗು” ಎಂದು ಕರೆಯುತ್ತಾರೆ. ಶ್ರೀಯುತರು 1985ರ ಮಾರ್ಚ್ ,7 ರಂದು ಭದ್ರ ದೇವಾಡಿಗ & ಚಂದು ದೇವಾಡಿಗರ ಎರಡನೆಯ […]
ಕಾಣದ ಜೀವಿಯ ಕಣ್ಣಾಮುಚ್ಚಾಲೆ
ಕಾಣದ ಜೀವಿಯ ಕಣ್ಣಾಮುಚ್ಚಾಲೆ ಭಯವನು ಹೂಡಿ ಆವರಿಸಿಹುದು ಕತ್ತಲೆಅಪರಿಚಿತರ ಅಪರಾಧಕೆ ಬಲಿಯಾಗಿದೆ ಇಡೀ ವಿಶ್ವವೇ!ನಾಳೆಗೆಂದೂ ಕೂಡಿಟ್ಟ ಕನಸೆಲ್ಲಾ ಕುಸಿದು ಮಣ್ಣಾಯಿತೇ?ಬಿಡದ ಅನಿವಾರ್ಯತೆ ಹುಡುಕುತಿದೆ ಪರಿಹಾರಸ್ವಾಭಿಮಾನ ನಲುಗಿ ಕೈಯೊಡ್ಡುತಿರುವಾಗ, ಆಗೋ ತಿರಸ್ಕಾರಆ ಅಸಹಾಯಕತೆಯಲ್ಲೂ ಸೋತು ಬಡತನ ಮತ್ತಷ್ಟು ಅನುಭವಿಸುತಿದೆ ಬಹಿಷ್ಕಾರದಾರಿ ಕಂಗೆಟ್ಟು ದಾರಿದೀಪವನು ಹುಡುಕಾಡುತಿದೆ.ಬಡವಾಯ್ತು ಬದುಕುಆಶಾವಾದವಷ್ಟೇ ಇನ್ನುಳಿದ ಬೆಳಕು-ಕೊರೊನಾ ಕಥೆ. -ಅರ್ಚನಾ .ಆರ್. ಕುಂದಾಪುರ
“ಅದೃಷ್ಟವಂತರಲ್ಲ, ಆಶಾವಾದಿಯಾಗೋಣ”
ಅದೇನೋ ಹತಾಶೆ. ಯಾವುದೂ ಸರಿ ಇಲ್ಲ ಎನ್ನುವ ಭಾವ. ಮರಳಿ ಪ್ರಯತ್ನಿಸಲೂ ಅದೇನೋ ಭಯ .ಪದೇ ಪದೇ ಅದೇ ಕನಸು ಹಳ್ಳ ಹಿಡಿಯುತ್ತಿರುವುದನ್ನು ನೋಡಿ ಕುಸಿದು ಹೋಗಿದ್ದೆ.ಋಣಾತ್ಮಕ ಚಿಂತನೆ ತಲೆ ತುಂಬಾ ತುಂಬಿಕೊಂಡು ಬಿಟ್ಟಿದ್ದವು.ವಿಫಲವಾದ ಯೋಜನೆಯ ನೆನೆದು ಅತ್ತು ಅತ್ತು ಮಂಕಾಗಿಯೇ ಬಿಡುತ್ತಿದ್ದೆ.ಹೊರ ಬರುವ ದಾರಿಯ ಹುಡುಕಾಟ ಮರಳಿ ನನ್ನ ಋಣಾತ್ಮಕ ಚಿಂತನೆಗೆ ದೂಡಿ ಹಾಕುತ್ತಿತ್ತು.ಬದಲಾಗೋ ಆಸೆ ಅಲ್ಲ.ಕಳೆದುಕೊಂಡ ನನ್ನನ್ನು ಹುಡುಕಾಡೋ ಪ್ರಯತ್ನ ಅದಾಗಿತ್ತು.ಒಂದು ಸಣ್ಣ ವಿರಾಮ ತೆಗೆದುಕೊಂಡೆ.ಆ ವಿರಾಮದಲ್ಲಿ […]
“ಸೋಲದಿರು ಎಂದೆಂದೂ”
“ಸೋಲದಿರು ಎಂದೆಂದೂ” ಓ ಮನಸೇ, ನೀ ವಿಶ್ವಬಂಧುಸಾಧನೆಯ ಪಣವ ಸ್ವೀಕರಿಸು ಇಂದು.ಬಾನೇ ಬೀಳಲಿ, ಭುವಿಯೇ ಸೀಳಲಿಸೋಲನ್ನು ಕಂಡು ಕುಸಿಯದಿರು ಎಂದು.ಧೈರ್ಯವ ಬಿತ್ತಿ, ಸಹನೆಯ ಹೊತ್ತಿಸಾಗುತಿರು ಮುಂದೆಂದು, ಸಾಗುತಿರು ಮುಂದೆಂದು.ನೋವಿದ್ದರೆ ಇಂದು, ನಲಿವಿರುವುದು ಮುಂದುನುಗ್ಗುತಿರು ನುಗ್ಗುತಿರು, ಸೋಲದಿರು ಎಂದೆಂದೂ. ಕವಿಯತ್ರಿ: ಡಾ. ಉಮ್ಮೆ ಸಲ್ಮಾ ಎಂ. ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯
ದಾನದಲ್ಲಿ ಕರ್ಣ, ಆದರ್ಶದಲ್ಲಿ ರಾಮ, ಕಾರ್ಮಿಕರ ಅನ್ನದಾತ ಶ್ರೀ ಗೋವಿಂದ ಬಾಬು ಪೂಜಾರಿ
ಅವರ ಒಂದು ಹಿತನುಡಿಯೇ ಸಾಕು ನಿಮ್ಮ ಸಂಕಷ್ಟಗಳ ಸಾಂತ್ವನಕ್ಕೆ . ಅದರಲ್ಲೂ ಅವರ ಶ್ರೀರಕ್ಷೆ, ಸಹಾಯ ಹಾಗೂ ಸಹಕಾರ ಸಿಕ್ಕರಂತೂ ನೀವು ನಿಜವಾಗಿಯೂ ಜೀವನದಲ್ಲಿ ಸಾಧನೆಯ ಜೊತೆಗೆ ಯಶಸ್ಸನ್ನು ಕಾಣುತ್ತೀರಿ. ಜೀವನದಲ್ಲಿ ಎಂದಿಗೂ ಸೋತೆ ಎನ್ನುವ ಭಾವನೆಯೊಂದಿಗೆ ಜೀವನ ನೆಡೆಸಬೇಡಿ ,ಒಂದಲ್ಲ ಒಂದು ದಿನ ಗೆದ್ದೆ ಗೆಲ್ಲುವೆ ಎನ್ನುವ ಛಲದೊಂದಿಗೆ ಜೀವನ ನೆಡೆಸಿ ಎನ್ನುವ ಅವರ ಆದರ್ಶ ಪಾಲನೆಯ ಬದುಕು ಅನುಕರಣೀಯ. ಧೈರ್ಯದಿಂದ ಮುಂದೆ ಹೋಗಿ ,ಜಗತ್ತಿನ ಎಲ್ಲಾ ಕೆಲಸವನ್ನು […]