ಸಾಹಿತ್ಯದಲ್ಲಿ ಸಾಧನೆ ಮಾಡುವುದು ಒಂದು ವಿಶಿಷ್ಟವಾದ ಕಲೆ. ಈ ಸಾಹಿತ್ಯ ಎನ್ನುವುದು ಯಾರಿಗೆ ಯಾವ ಸಂಧರ್ಭದಲ್ಲಿ ಹೇಗೆ ಒದಗಿ ಬರುತ್ತದೆಂದು ಯಾರಿಗೂ ಹೇಳಲು ಸಾಧ್ಯವಾಗದು. ಇನ್ನೂ ಮನುಷ್ಯ ಭೂಮಿ ಮೇಲೆ ಜನಿಸಿದ ಮೇಲೆ ನಾವು ಏನಾದರೊಂದು ಸಾಧನೆ ಮಾಡಬೇಕೆಂದು ಆತ್ಮ ವಿಶ್ವಾಸ ಇದ್ದರೆ ಬದುಕಿನಲ್ಲಿ ಮುಂದೆ ಬರಲು ಸಾಧ್ಯ ಎನ್ನುವುದನ್ನು ಕಂಡುಕೊಂಡವರು ಕುಮಾರಿ ಜಯಶ್ರೀ. ತಮ್ಮ ಶಿಕ್ಷಣ ಜೊತೆಗೆ ಸಾಹಿತ್ಯದ ಅಭಿರುಚಿ ಬೆಳಸಿ ಕೊಂಡು ರಾಜ್ಯ ಪ್ರಶಸ್ತಿ ಪಡೆದ ಬೆಳಗಾವಿ […]
Category: ಸಮಗ್ರ ಕನ್ನಡ
ಬಡ ರೈತನ ಮಗಳಾಗಿ ಸಮಾಜ ಸೇವೆ ಜೊತೆಗೆ ಬಡಮಕ್ಕಳಿಗೆ ಜ್ಞಾನ ದಾಸೋಹಿನಿಯಾದ ಕುಮಾರಿ ಬಿಂದು
ನಾವು ಮಾನವರಾಗಿ ಧರೆಗಿಳಿದು ಬಂದ ಮೇಲೆ ಮನೆಯವರಿಂದ ಪಡೆದ ನಾಮಕರಣ ಜೊತೆಗೆ ಬಾಲ್ಯ, ಶಿಕ್ಷಣ, ಮದುವೆ, ಜೀವನ ಮಾಡಿಕೊಂಡು ಮರಣವೆಂಬ ಮೂರು ಅಕ್ಷರದಿಂದ ಬದುಕಿನ ಪಯಣ ನಿಲ್ಲಿಸುತ್ತೇವೆ. . ನಾವು ಮನುಷ್ಯರಾಗಿ ಮರಣವೆಂಬ ಮೂರು ಅಕ್ಷರದ ಬಿರುದನ್ನು ಪಡೆಯುವುದಕ್ಕಿಂತ ಮುಂಚಿತವಾಗಿ ನಾವು ಶಿಕ್ಷಣ, ಸಾಹಿತ್ಯ, ಧಾರ್ಮಿಕ, ಸಮಾಜ ಸೇವೆ, ಇನ್ನೂ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು, ನಾವು ಇನ್ನೊಬ್ಬರಿಗೆ ಆದರ್ಶ ವ್ಯಕ್ತಿಯಾಗಿ, ಬಡವರಿಗೆ ಮಾರ್ಗದರ್ಶಕರಾಗಿ ಬದುಕಬೇಕು.ಸಮಾಜ ಸೇವೆ ಎನ್ನುವ ಪದ […]
ನಮ್ಮೂರು ನಮಗೆ ಚಂದ
ಭೂಮಿ ತಾಯಿ ಸುತ್ತಲೂ ಹಸಿರನ್ನು ಹೊದಿಕೆ ಮಾಡಿಕೊಂಡು ಕಣ್ಣ್ಮನ ನಾಚುವಂತೆ ಮನಸ್ಸಿಗೆ ಮುದ ನೀಡುತ, ಒಂದು ಕಡೆ ನೋಡಿದರೆ ಶ್ರೀ ಮೂಕಾಂಬಿಕಾ ಅಭಯಾರಣ್ಯ, ಮಧ್ಯದಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತ ಹಲವು ಸಾವಿರಾರು ಪ್ರಭೇದದ ಔಷಧಿ ಸಸ್ಯರಾಶಿಯಿಂದ ಕಂಗೊಳಿಸುವ ಸಸ್ಯಕಾಶಿ, ಮತ್ತೊಂದು ಕಡೆಯಿಂದ ನೋಡಿದರೆ ಕೊಡಚಾದ್ರಿ ಬೆಟ್ಟದ ತುತ್ತತುದಿಯ ಮಧ್ಯದಿಂದ ರುದ್ರ ರಮಣೀಯವಾಗಿ ಅಂಕುಡೊಂಕಾಗಿ ಹಾಲ್ನೊರೆಯಂತೆ ಜುಳು ಜುಳು ಶಬ್ದನಾದದಂತೆ ಹರಿಯುವ ನೀರನಲ್ಲಿ ಲಕ್ಷಾಂತರ ವಿವಿಧ ಬಣ್ಣ,ಪ್ರಭೇದದ ಜಲಚರಗಳ ಬದುಕಿಗೆ ಆಹಾರ […]
ನಶಿಸಿ ಹೊಗುತ್ತಿರುವ ಪ್ರಕ್ರತಿಯ ಜೊತೆಗೆ ನರಳುತ್ತಿರುವ ಮಾನವ
ಪ್ರಕೃತಿ ಮಾನವ ಸೇರಿದಂತೆ ಇಡೀ ಜೀವಿ ಸಂಕುಲಕ್ಕೆ ದೇವರು ನೀಡಿಡ ಮಹತ್ವ ಪೂರ್ಣವಾದ ಕೊಡುಗೆ.ಆದರೆ ಅದನ್ನು ಅರ್ಥ ಮಾಡಿಕೊಳ್ಳದ ಮನುಜ ತನ್ನ ಸ್ವಾರ್ಥ ಸಾಧನೆಗೆ ಪ್ರಕೃತಿಯನ್ನು ನಾಶ ಮಾಡುತ್ತಾಹೋಗುತ್ತಿದ್ದಾನೆ. ದುರ್ದೈವದ ಸಂಗತಿ ಎನೆಂದರೆ ಪ್ರಕೃತಿ ನಾಶಕ್ಕೆ ಪ್ರತಿಯಾಗಿ ದೊಡ್ಡ ಬೆಲೆ ತೆತ್ತ ಬೇಕಂತ ಮನುಜನಿಗೆ ಗೊತ್ತೇ ಇಲ್ಲ. ಪ್ರಕೃತಿಯಿಂದ ನಾವೋ .. ಇಲ್ಲ ನಮ್ಮಿಂದ ಪ್ರಕ್ರತಿಯೋ, ಇದನ್ನ ಅರ್ಥ ಮಾಡಿಕೊಳ್ಳುವ ವೇಳೆಗೆ ಇಡೀ ಮಾನವ ಸಂಕೂಲವೆ ನಶಿಸಿ ಹೋಗುವ ಸ್ಥಿತಿಗೆ […]
ಕರೋನಾ ಸೋಂಕಿತರಿಗೆ ಪ್ರಾಣವಾಯು ಪೂರೈಸಲು ಮುಂದಾದ ಕರುನಾಡ ಕರ್ಣ ಡಾ. ಜಿ. ಶಂಕರ್
ಕರಾವಳಿ, ಮಲೆನಾಡು ,ಉತ್ತರ ಕರ್ನಾಟಕ ಹೀಗೆ ರಾಜ್ಯದ ಉದ್ದಗಲಕ್ಕೂ ಡಾ.ಜಿ.ಶಂಕರ್ ರವರ ಹೆಸರು ಚಿರಪರಿಚಿತ. ಶಿಕ್ಷಣ, ಆರೋಗ್ಯ ಸುರಕ್ಷಾ, ರಕ್ತದಾನ ಶಿಬಿರ, ಅಶಕ್ತ ಕಲಾವಿದರಿಗೆ ನೆರವು, ಬಡ ಹಾಗೂ ದುರ್ಬಲ ವರ್ಗದವರಿಗೆ ಆರ್ಥಿಕ ನೆರವು ಹೀಗೆ ಬಹುಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡು ಹಲವು ಜನತೆಯ ಬದುಕಿಗೆ ಬೆಳಕಾದವರುನಾಡೋಜಾ ಡಾ.ಜಿ.ಶಂಕರ್. ಕಂಡುಕೇಳರಿಯದ ಕರೋನಾ ನಮ್ಮ ರಾಜ್ಯವನ್ನು ಪ್ರವೇಶಿಸಿದಾಗ ಅದರ ತೀವ್ರತೆಯನ್ನು ಗಮನಿಸಿದ ಡಾ.ಜಿ.ಶಂಕರ್ ರವರು ಯುವಕರ ತಂಡವನ್ನು […]
ನನ್ನ ಅಜ್ಜಿ ಮನೆ!
ಬ್ರಹ್ಮಾವರ ಸಮೀಪದ ಕುಂಜಾಲು ಎಂಬ ಪುಟ್ಟ ಊರಿನಲ್ಲಿದೆ ನನ್ನ ಅಜ್ಜಿಮನೆ. ಪರೀಕ್ಷೆ ಮಗಿದು ಶಾಲೆಯ ರಜೆಯ ಸಮಯದಲ್ಲಿ ಅಜ್ಜಿಯ ಮನೆಗೆ ಹೋಗುವುದು ಆ ದಿನಗಳಲ್ಲಿನ ವಾಡಿಕೆ. ಅಜ್ಜಿಯ ಮನೆಗೆ ಹೋಗೋದೆಂದರೆ ಒಂದು ರೀತಿ ಪ್ರವಾಸಕ್ಕೆ ತೆರಳಿದ ಅನುಭವ. ಅತ್ಯಂತ ಪುರಾತನವಾದ ಅದರಲ್ಲೂ ವಿಶೇಷವಾಗಿ ಮಣ್ಣಿನಲ್ಲಿ ನಿರ್ಮಿಸಿದ ಇಂಗ್ಲೀಷನ L ಆಕಾರಾದ ಮನೆ ನನಗೆ ಅಚ್ಚುಮೆಚ್ಚು. 100 ವರ್ಷಗಳ ಈ ಪುರಾತನ ಮನೆಗೆ ಉಪ್ಪರಿಗೆಯ ಇದೆ. ಹಳೆಯ ಮನೆಯಾದ್ರೂ ಅಲ್ಲಿರುವ ಖುಷಿ, […]
ಚಿಕ್ಕ ಅಕ್ಕನಿಗೊಂದು ಗಂಡು ಹುಡುಕಿ ಮದುವೆ ಮಾಡಲೆಂದು ಅದೆಷ್ಟು ಕಾದಿದ್ದಳು. ಕೊಂಕಣಿ ರಾಮಣ್ಣನ ಕ್ಯಾಮೆರಾ ರೀಲುಗಳಲೆಲ್ಲ ಅಕ್ಕನ ನೆಗೆಟಿವ್ಗಳೇ ತುಂಬಿರುವಷ್ಟು!!!
ಕತ್ತಲು ಆಗಷ್ಟೇ ಕಳಚಿ, ಭೂಮಿ ಬೆಳಕಿಗೆ ಮೈಯೊಡ್ಡುವುದರಲ್ಲಿತ್ತು. ನೆರೆ ಮನೆಯ ಬಚ್ಚಲಿನ ಚಿಮುಣಿ ಚಟ ಚಟ ಸದ್ದಿನೊಂದಿಗೆ ಕರ್ರನೆಯ ಹೊಗೆಯನ್ನು ಸೂಸುತ್ತಾ, ಊರಿಗೆಲ್ಲ ಮಂಜಿನಂತ ಮಬ್ಬನ್ನು ಕವಿಯುವಂತೆ ಮಾಡಿತ್ತು. ವಾರವಿಡೀ ದುಡಿದು ದಣಿದ ಮಂದಿಗೆಲ್ಲ ಮೈಮುರಿಯಲೆಂದೆ ಅಂದು ಭಾನುವಾರ ಬೇರೆ!!! ಅವರೆಲ್ಲ ಮಗ್ಗಲು ಮಗಚಿ, ಮೈ ಮುರಿಯುವ ಹೊತ್ತು ದೂರವೇ ಇತ್ತು. ಮಂದಿ ಕಣ್ಣರಳಿಸುವ ಮುನ್ನವೆ ಅಲ್ಲೊಂದು ಜೀವ ಕಣ್ಮುಚ್ಚಿ , ಬದುಕಿನ ಓಟಕ್ಕೆ ವಿರಾಮವಿಟ್ಟಿತ್ತು. ಮುಂಜಾವಿನ ಮೌನಕ್ಕೆ ಸೆಡ್ಡು […]
ತೆರೆಯೊಂದಿಗೆ ಲೀನವಾದ ನೆನಪು
ಇಪ್ಪತ್ತು ವರ್ಷಗಳ ಹಿಂದೆ ನಾನು SSLC ಯಲ್ಲಿ ಇರುವಾಗ ನನ್ನ ಹಿರಿಯಣ್ಣ ಒಂದು ಸಣ್ಣ ದೋಣಿ ತಂದಿದ್ರು. ನಾನು, ಅಣ್ಣ ಮತ್ತು ನನ್ನ ಗೆಳೆಯ ಹರೀಶ ಸೇರಿ ದಿನಾಲೂ ಮೀನುಗಾರಿಕೆಗೆ ಹೋಗುತ್ತಿದ್ದೆವು. ಬೆಳಿಗ್ಗೆ ಮೂರಕ್ಕೆ ಹೊರಟು ಒಂಬತ್ತು ಗಂಟೆಗೆ ವಾಪಸಾಗುತ್ತಿದ್ದೆವು. ನನಗೆ ಹತ್ತು ಗಂಟೆಗೆ ಶಾಲೆಗೆ ಮುಟ್ಟಬೇಕಿದ್ದ ಕಾರಣ, ಬೇಗ ಬರುತ್ತಿದ್ದೆವು. ಶಾಲೆಗೆ ರಜೆ ಇರುವ ದಿನ ಮಧ್ಯಾಹ್ನದವರೆಗೆ ಫಿಶಿಂಗ್. ಕೆಲವು ದಿನ ಸಂಜೆ ಹೋದರೆ, ರಾತ್ರಿ ವಾಪಸ್ಸು ಬರುತ್ತಿದ್ದೆವು. […]
ದಡವಿಲ್ಲದ ದೋಣಿಗಳು
ಇನ್ನೂ ಅರ್ಧಗಂಟೆ ಅಂದಿದ್ದರೆ ಆದಷ್ಟು ದೋಣಿಗಳು ಹೇಳಹೆಸರಿಲ್ಲದಂತೆ ಸಮುದ್ರದ ಒಡಲು ಸೇರುತ್ತಿದ್ದವು. “ತೀರ” ಅನ್ನುವಂತಿದ್ದ ಕಡಲ ದಂಡೆ ರಕ್ಕಸ ಅಲೆಗಳಿಗೆ ರಕ್ಷಣೆಯಿಲ್ಲದೆ ತಾವಾಗೇ ಸೋಲನ್ನಪ್ಪಿದ್ದವು. ಕೊರೆತಕ್ಕೆ ಸವೆಯುತ್ತಿದ್ದ ಮರಳನ್ನು ಹಿಡಿದಿಡಲಾಗದೆ ಕರಾವಳಿಗುಂಟ ಮರಗಿಡಗಳು ನೀರುಪಾಲಾದವು. ಕೋಟಾದ ಮಣೂರು ಪಡುಕರೆಯಲ್ಲಿ ಕಂಡುಬಂದ ದೃಶ್ಯಗಳಿವು. ಕರಾವಳಿಯುದ್ದಕ್ಕೂ ಇಂದು ಇದೇ ಗೋಳು. ಹರೀಶ್ ಕಾಂಚನ್, ಮುದ್ದುರಾಧ
ಜೆಸಿಐ ಕುಂದಾಪುರ ಸಿಟಿ : 16 ನೇ ದಿನದ ಲಾಕ್ ಡೌನ್ ಉಚಿತ ಮಧ್ಯಾಹ್ನ ಊಟ ವಿತರಣೆ
ಕುಂದಾಪುರ (ಮೇ, 14) : ಜೆಸಿಐ ಕುಂದಾಪುರ ಸಿಟಿ ಘಟಕದ ಸತತ 16 ನೇ ದಿನದ ಲಾಕ್ ಡೌನ್ ಮಿಡ್ ಡೇ ಮಿಲ್ಸ್ ಮೇ13 ರಂದು ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗು ಮಿಲ್ಲತ್ ಫೌಂಡೇಶನ್ ಕುಂದಾಪುರ ತಾಲೂಕು ಇವರ ಸಹಕಾರ ದೊಂದಿಗೆ ನಡೆಯಿತು. ಕುಂದಾಪುರ ಪರಿಸರದಲ್ಲಿ ಲಾರಿ ಚಾಲಕರಿಗೆ, ಕೂಲಿಕಾರ್ಮಿಕರಿಗೆ ,ಆಸ್ಪತ್ರೆ ರೋಗಿ ಗಳಿಗೆ,ಭಿಕ್ಷುಕರಿಗೆಹಾಗೂ ವೃದ್ದರಿಗೆ ಸುಮಾರು 280 ಕ್ಕಿಂತಲೂ ಹೆಚ್ಚು ಹಸಿದವರಿಗೆ ಊಟ ವನ್ನು ನೀಡಲಾಯಿತು. ಈ […]