ಕುಂದಾಪುರ (ಮೇ,22): ತಮಿಳುನಾಡಿನ ಕಡಲೂರಿನ ಅಣ್ಣಾ ಸ್ಟೇಡಿಯಂನಲ್ಲಿ ಮೇ 21 ಹಾಗೂ 22 ರಂದು ನೆಡೆದ 41 ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುವ ಕುಂದಾಪುರದ ಪ್ರಶಾಂತ್ ಶೆಟ್ಟಿ ಯವರು 800 ಮೀ ಓಟದ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಟ್ರಿಪಲ್ ಜಂಪ್ ವಿಭಾಗದಲ್ಲಿ ಕಂಚಿನ ಪದಕ ಪಡೆದು ಕರ್ನಾಟಕದ ಹಿರಿಮೆಯನ್ನು ಮುಗಿಲೆತ್ತರಕ್ಕೆ ಏರಿಸಿದ್ದಾರೆ. ಕುಂದಾಪುರದ ಓಕ್ ವುಡ್ ಇಂಡಿಯನ್ ಸ್ಕೂಲ್ ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕೆಲಸ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಎಸ್.ಎಸ್.ಎಲ್.ಸಿ ಫಲಿತಾಂಶ: ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ
ಕುಂದಾಪುರ(ಮೇ.19): ಇಲ್ಲಿನ ಸುಣ್ಣಾರಿಯ ಎಕ್ಸಲೆಂಟ್ ಪ್ರೌಢಶಾಲೆಯು ವಿದ್ಯಾರ್ಥಿಗಳು 2021–22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿದ್ದು ಸಂಸ್ಥೆಯ ವಿದ್ಯಾರ್ಥಿಯಾದ ಸಾಗರ್ – 622 ಅಂಕ ಪಡೆಯುವುದರ ಮೂಲಕ ಅತ್ಯುತ್ತಮ ಸಾಧನೆ ತೋರಿದ್ದಾರೆ. ಪರೀಕ್ಷೆ ಬರೆದ 45 ವಿದ್ಯಾರ್ಥಿಗಳಲ್ಲಿ ಕಾರ್ತಿಕ್ ಶೆಟ್ಟಿ 619 ಅದ್ವಿತಾ ಡಿ ಶೆಟ್ಟಿ – 618 ,ಈಶಾನ್ಯ – 617 ಸ್ಪೂರ್ತಿ –616, ಸಂಜನ್ ಕೆ –611, ಶೇರು ಬಹದ್ದೂರ್ – 610, ಬಿ. […]
ಡಾ.ಬಿ.ಬಿ.ಹೆಗ್ಡೆ ಕಾಲೇಜು: ಮಣ್ಣು ಉಳಿಸಿ ಅಭಿಯಾನ
ಕುಂದಾಪುರ(ಮೇ,19): ಮಣ್ಣಿನ ನೈಸರ್ಗಿಕ ಗುಣಲಕ್ಷಣಗಳು ಹಾಗೂ ಸ್ವರೂಪಗಳು ದಿನದಂದ ದಿನಕ್ಕೆ ಕ್ಷೀಣಿಸುತ್ತಿದೆ. ಕ್ರತಕ ರಾಸಾಯನಿಕ ಗೊಬ್ಬರಗಳ ಬಳಕೆ ಹಾಗೂ ಅನಗತ್ಯ ವಿಷಪೂರಿತ ತ್ಯಾಜ್ಯದಿಂದಾಗಿ ಮಣ್ಣಿನ ಮಾಲಿನ್ಯ ಹೆಚ್ಚುತ್ತಿರುವುದು ಆತಂಕಕಾರಿಯಾದ ವಿಷಯ ಎಂದು ಇಶಾ ಫೌಂಡೆಶನ್ ಕೊಯಮುತ್ತೂರು ಇದರ ಸ್ವಯಂಸೇವಕರಾದ ಬಿ.ಎನ್.ವೆಂಕಟೇಶರವರು ಹೇಳಿದರು. ಅವರು ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್.ಘಟಕ ಹಾಗೂ ಇಶಾ ಫೌಂಡೇಶನ್ ಆಯೋಜಿಸಿದ ಮಣ್ಣು ಉಳಿಸಿ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ತನ್ನ ಮೂಲಸತ್ವವನ್ನು ಕಳೆದುಕೊಳ್ಳುತ್ತಿರುವ ಮಣ್ಣನ್ನು ರಕ್ಷಿಸುವುದರ ಜೊತೆಗೆ ಭವಿಷ್ಯದ ದಿನಗಳಲ್ಲಿ ಮಣ್ಣಿನ ಫಲವತ್ತತೆಯನ್ನು ನೈಸರ್ಗಿಕವಾಗಿ […]
ಶಿಕ್ಷಪ್ರಭ ಅಕಾಡೆಮಿ ಕುಂದಾಪುರ: ಸಿಎ, ಸಿಎಸ್ ಆಸಕ್ತ ವಾಣಿಜ್ಯ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿದೀಪ
ಕುಂದಾಪುರದ ಕುಂದೇಶ್ವರ ದೇವಸ್ಥಾನ ರಸ್ತೆಯ ಬಳಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿಎ/ ಸಿಎಸ್ ಶಿಕ್ಷಣ ತರಬೇತಿ ಸಂಸ್ಥೆಯು ವಾಣಿಜ್ಯ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳಾದ ಸಿಎ ಮತ್ತು ಸಿಎಸ್ ಕೋರ್ಸುಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವುದರ ಮೂಲಕ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಸಂಸ್ಥೆಯಲ್ಲಿ ಸಿಎ ಮತ್ತು ಸಿಎಸ್ ಪರೀಕ್ಷೆಗಳಿಗೆ ಗುಣಮಟ್ಟದ ಬೋಧಕ ಸಿಬ್ಬಂದಿಗಳ […]
ಕೋಡಿ ಬೀಚ್ನಲ್ಲಿ ಹೊಸ ಆಕರ್ಷಣೆ ಕಡಲ ತಡಿಯ ಮಾಲಿನ್ಯ ನಿಯಂತ್ರಣಕ್ಕೆ ಮೀನಿನ ಆಕಾರದ ಕಸದ ತೊಟ್ಟಿ ನಿರ್ಮಾಣ
ಕೋಡಿ(ಮೇ,16): ಕಡಲ ಪರಿಸರ ರಕ್ಷಣೆಗೆ ನಿರಂತರ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರುವುದರ ಜೊತೆಗೆ ಇತ್ತೀಚೆಗೆ ಆಮೆ ಹಬ್ಬ ವನ್ನು ಬಹಳ ಅರ್ಥಪೂರ್ಣವಾಗಿ ಆಯೋಜಿಸಿದ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡ ಇದೀಗ ಪರಿಸರ ಸಂರಕ್ಷಣೆಗೆ ಇನ್ನೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮತ್ಸೋದ್ಯಮಿ ಶ್ರೀ ಆನಂದ.ಸಿ.ಕುಂದರ್ ರವರ ಪ್ರಾಯೋಜಕತ್ವದ ಗೀತಾನಂದ ಫೌಂಡೇಶನ್(ರಿ) ಕೋಟ ಇವರ ಸಹಯೋಗದಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಕೋಡಿ ಸೀ ವಾಕ್ ಬೀಚ್ನಲ್ಲಿ ಮೀನಿನ ಆಕಾರದ ಕಸದ ತೊಟ್ಟಿಯನ್ನು ರಚನೆ ಮಾಡಿ ಸಮುದ್ರವನ್ನು […]
ಮತ್ತೆ ಅಂಕಣಕ್ಕೆ ಇಳಿದ ಛಲಗಾರ ಸುಷ್ಮಂತ್ ಒಂಟಿ ಕಾಲಲ್ಲೇ ಟೂರ್ನಿ ಆಯೋಜಿಸಿ ಗೆದ್ದ ಸುಷ್ಮಂತ್
ಭಾರತೀಯ ಪ್ರೊ ಕಬ್ಬಡ್ಡಿ ತಂಡದ ಬಾಗಿಲು ಬಡಿದು ಬಂದಿದ್ದ ಸುಷ್ಮಂತ್ ಎನ್ನುವ ಮಲೆನಾಡಿನ ಪ್ರತಿಭೆ ಇನ್ನೇನು ಮುಂಬೈ ತಂಡ ಸೇರಿಯೇ ಬಿಟ್ಟ ಅನ್ನೋವಷ್ಟರಲ್ಲಿ ಆತನ ಜೀವನದಲ್ಲಿ ವಿಧಿ ಬೇರೆಯದೇ ಆಟ ಆಡಿತ್ತು. ಮೂರು ವರ್ಷಗಳ ಹಿಂದೆ ಪ್ರೊ ಕಬಡ್ಡಿ ಉತ್ತುಂಗಕ್ಕೆ ಏರಿದಾಗ ಕಬಡ್ಡಿ ಆಟಗಾರರಿಗೂ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು ಸಂತಸದ ಮಾತೇ.ಮಲೆನಾಡಿನ ಹೊಸನಗರದ ಹೆದ್ದಾರಿಪುರದ ತೊರೆಗದ್ದೆಯ ಮಧ್ಯಮ ಕುಟುಂಬದ ಹುಡುಗ ಬಾಲ್ಯದಿಂದಲೂ ಕಬ್ಬಡ್ಡಿ ಅಂಕಣದಲ್ಲಿ ಕಳೆದದ್ದೇ ಹೆಚ್ಚು. […]
ಶಿರ್ವ: ಉದ್ಯೋಗ ತರಬೇತಿ ಸಹಯೋಗದ ಪರಸ್ಪರ ಒಡಂಬಡಿಕೆ ಕಾರ್ಯಕ್ರಮ
ಶಿರ್ವ(ಮೇ13) : ಸಂತ ಮೇರಿಸ್ ಕಾಲೇಜು,ಶಿರ್ವ ಮತ್ತು ಉನ್ನತಿ ಕ್ಯಾರಿಯರ್ ಅಕಾಡೆಮಿ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಉದ್ಯೋಗ ತರಬೇತಿ ಕಾರ್ಯಕ್ರಮಗಳ ಪರಸ್ಪರ ಒಡಂಬಡಿಕೆಯು ಎರಡು ಸಂಸ್ಥೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ನಡೆಯಿತು. ನಮ್ಮ ದೇಶದಲ್ಲಿ ಶೇಕಡಾ 50ರಷ್ಟು ಜನರು 35ವರ್ಷಕ್ಕಿಂತ ಸಣ್ಣವರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಲಭಿಸುವುದು ಕಷ್ಟಸಾಧ್ಯವಾಗಿದೆ.ಯುವಜನರ ಉದ್ಯೋಗದ ಸಾಮಾರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾದರೆ ಅಯಾ ಉದ್ಯೋಗಗಳ ಹಿನ್ನಲೆಯಲ್ಲಿ ಸೂಕ್ತ ತರಬೇತಿಯು ಅತ್ಯಂತ ಅಗತ್ಯವಾಗಿದೆ. ತಾಂತ್ರಿಕತೆ ಇಂದು ಎಲ್ಲಾರಂಗಗಳಲ್ಲಿ ವ್ಯಾಪಕವಾಗಿರುವ […]
ಪುಸ್ತಕ ದಾನ ನೀಡಿ ಜ್ಞಾನ ಹರಡಿಸಿ ಪುಸ್ತಕ ಸಂಗ್ರಹ ಅಭಿಯಾನಕ್ಕೆ ಕೈ ಜೋಡಿಸಿ
ರಾಣಿಬೇನ್ನೂರು ನಗರದ ಯುವ ಕವಿ,ಸಾಹಿತ್ಯ ಪರಿಚಾರಕ ಬಸವರಾಜ ಎಸ್. ಬಾಗೇವಾಡಿಮಠರವರು ತಮ್ಮ ಸಂಸ್ಥೆಯವತಿಯಿಂದ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಬಡ ಮಕ್ಕಳಿಗೆ ಓದಲು ಕೊಡುವ ದೃಷ್ಟಿಯಿಂದ ವಿನೂತನ ಯೋಜನೆಯೊಂದನ್ನು ಜಾರಿಗೊಳಿದ್ದಾರೆ. ಮನೆಯಲ್ಲಿ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ ಯಾವುದೇ ಹಳೆಯ ಪಠ್ಯ ಪುಸ್ತಕ, ಕಾದಂಬರಿ,ಕಥೆ, ಕವನ ಸಂಕಲನ, ಲೇಖಕನಗಳ ಮಾಲಿಕೆ, ವಾರ-ಮಾಸ ಪತ್ರಿಕೆ,ಗ್ರಂಥಗಳು, ನಿಘಂಟುಗಳು ಸೇರಿದಂತೆ ಇತರೆ ಯಾವುದೇ ವಿಷಯ ಜ್ಞಾನಾರ್ಜನೆ ಹೆಚ್ಚಿಸುವ ಪುಸ್ತಕಗಳಿರಲಿ ಅವುಗಳನ್ನು ರದ್ದಿಗೆ ಹಾಕದೇ ಮುಕ್ತವಾಗಿ ಶೃಂಗಾರ ಕಾವ್ಯ […]
ಮೂಡ್ಲಕಟ್ಟೆ ಎಂ ಐ ಟಿ ಮತ್ತು ಐ ಸಿ ಟಿ ಅಕಾಡೆಮಿ ಒಪ್ಪಂದ
ಕುಂದಾಪುರ(ಮೇ,11): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಉದ್ಯೋಗವಕಾಶ ಕಲ್ಪಿಸುವ ಮತ್ತು ಹೊಸ ತಂತ್ರಜ್ಞಾನ ದ ಮೇಲೆ ತರಬೇತಿ ನೀಡುವ ಸಲುವಾಗಿ ಪ್ರತಿಷ್ಟಿತ ಐ ಸಿ ಟಿ ಅಕಾಡೆಮಿ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕಾಲೇಜಿನ ಪ್ರಾಂಶುಪಾಲ, ಡಾ .ಚಂದ್ರರಾವ್ ಮದಾನೆ ಮತ್ತು ಐ ಸಿ ಟಿ ಕಡೆಯಿಂದ ರೋಹಿತ್ ಕಜವ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ । ಮೆಲ್ವಿನ್ ದ ಸೋಜಾ ಮತ್ತು ಡೀನ್ ಅಕಾಡೆಮಿಕ್ […]
ಕೆಂಚನೂರು: ಶ್ರೀ ಬ್ರಹ್ಮ ಮತ್ತು ಯಕ್ಷಿ ಸಹಪರಿವಾರ ದೇವಸ್ಥಾನ: ಅಷ್ಟಬಂಧ ಪುನ:ಪ್ರತಿಷ್ಠೆ ಸಂಪನ್ನ
ವಂಡ್ಸೆ( ಮೇ,10): ಶ್ರೀ ಬ್ರಹ್ಮ ಮತ್ತು ಯಕ್ಷಿ ಸಹಪರಿವಾರ ದೇವಸ್ಥಾನ ಪಡೂರು, ಭಟ್ರಮಕ್ಕಿ ಇದರ ಅಷ್ಟಬಂಧ ಪುನ:ಪ್ರತಿಷ್ಠೆ ಮೇ7 ಹಾಗೂ 8 ರಂದು ನಡೆಯಿತು. ಅರ್ಚಕರಾದ ಪ್ರಶಾಂತ್ ಭಟ್ ರವರ ನೇತೃತ್ವದಲ್ಲಿ ಅಷ್ಟಬಂಧ ಪುನ:ಪ್ರತಿಷ್ಠೆಯ ಧಾರ್ಮಿಕ ವಿಧಿ -ವಿಧಾನಗಳು ನೇರವೇರಿತು. ಧಾರ್ಮಿಕ ಸಭಾ ಕಾರ್ಯಕ್ರಮ ನೆಂಪು ಸೀತಾರಾಮ ಶೆಟ್ಟಿ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು. ಶ್ರೀ ಬ್ರಹ್ಮ ಮತ್ತು ಯಕ್ಷಿ ಸಹಪರಿವಾರ ದೇವಸ್ಥಾನದ ಗೌರವಾಧ್ಯಕ್ಷರಾದ ಶೀನ ಗಾಣಿಗ ಚೂಡಿಕಟ್ಟೆ […]










