ಬೆಂಗಳೂರು(ಜ.3): ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಪುನೀತ್ ರವರ ಸೇವೆಯನ್ನು ಆದರ್ಶವಾಗಿಟ್ಟುಕೊಂಡು ಅವರ ಸವಿ ನೆನೆಪಿನಲ್ಲಿ ನೀಡುತ್ತಿರುವ ಕನ್ನಡ ಚೇತನ” ರಾಜ್ಯ ಪ್ರಶಸ್ತಿಯನ್ನು ಪ್ರಸಿದ್ದ ಉದ್ಯಮಿ ,ಕೊಡುಗೈದಾನಿ ಡಾ.ಗೋವಿಂದ ಬಾಬು ಪೂಜಾರಿಯವರಿಗೆ ನೀಡಿ ಗೌರವಿಸಲಾಯಿತು.ಎ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಸ್ವಾತಂತ್ರ್ಯ ಹೋರಾಟಗಾರ ಮಾಲಾಡಿ ಗಣಪತಿ ವೆಂಕಟೇಶ್ ಶ್ಯಾನ್ ಭೊಗ್ ಮನೆಯಲ್ಲಿ ನಾಮಫಲಕ ಅನಾವರಣ
ತೆಕ್ಕಟ್ಟೆ(ಜ.3): ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆಯ ಹಿನ್ನೆಲೆಯಲ್ಲಿ ಮಾಲಾಡಿ ಗಣಪತಿ ವೆಂಕಟೇಶ್ ಶ್ಯಾನ್ ಭೊಗ್ ಇವರ ಸೇವೆಯ ಸ್ಮರಣಾರ್ಥ ಸ್ವರಾಜ್ಯ75 ಸಂಘಟನೆ, ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಹಸ್ತ ಚಿತ್ತ ಫೌಂಡೇಶನ್,ಉಸಿರು ಕೋಟ,ಅರಿವು ಪ್ರತಿಷ್ಠಾನ ಹಾಗೂ ಗ್ರಾಮಸ್ಥರ ಸಹಕಾರದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಾಲಾಡಿ ಗಣಪತಿ ವೆಂಕಟೇಶ್ ಶ್ಯಾನ್ ಭೊಗ್ ರವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎನ್ನುವ ನಾಮಫಲಕವನ್ನು ಶ್ರೀಯುತ ಹರೀಶ್ ಕುಮಾರ್ ಶೆಟ್ಟಿ ಯವರು ಅನಾವರಣಗೊಳಿಸಿದರು . […]
ಆ 90 ದಿನಗಳು ಸಿನಿಮಾದ ಫಸ್ಟ್ ಲುಕ್, ಪೋಸ್ಟರ್, ಟ್ರೈಲರ್ ಮತ್ತು ಹಾಡು ಬಿಡುಗಡೆ
ಬಸ್ರೂರು(ಜ.3): ರಾಷ್ಟ್ರಪ್ರಶಸ್ತಿ ಪುರಸ್ಕೃತ ಯಾಕೂಬ್ ಖಾದರ್ ಗುಲ್ವಾಡಿ ಹಾಗೂ ರೊನಾಲ್ಡ್ ಲೋಬೊ ನಿರ್ದೇಶನದ ಕರಾವಳಿಯ ಯುವ ಪ್ರತಿಭೆಗಳನ್ನೊಳಗೊಂಡ ಆ 90 ದಿನಗಳು ಸಿನಿಮಾದ ಫಸ್ಟ್ ಲುಕ್ ಪೋಸ್ಟರ್, ಟೈಲರ್ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮ ಜ.02 ರಂದು ಗುಲ್ವಾಡಿಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ,ನಾಡೋಜ ಡಾ. ಜಿ ಶಂಕರ್ ,ಖ್ಯಾತ ಚಲನಚಿತ್ರ ನಿರ್ದೇಶಕ,-ನಟ ರಿಷಬ್ ಶೆಟ್ಟಿ ,ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ,ಹಿರಿಯ ನ್ಯಾಯವಾದಿ […]
ಗಟ್ಟಿಗಿತ್ತಿ…
ಅಮ್ಮ ಎಂದರೆ ಎನೋ ಹರುಷವು ನಮ್ಮ ಪಾಲಿಗೆ ಅವಳೇ ದೈವವೂ……….ಸೋಲು ಎಂದರೆ ಬಾಕಿ ಉಳಿದ ಸವಾಲು ,ಮರಳಿ ಪ್ರಯತ್ನಿಸು ಎಂದರ್ಥವಂತೆ .ಗೆಲುವು ಎಂದರೆ ಇನ್ನೂ ಕಾಲಹರಣ ಮಾಡುವುದು ಸೂಕ್ತವಲ್ಲ ಎಂದರ್ಥವಂತೆ ..ಶಬ್ದಕೋಶ ದಲ್ಲೂ ಸಿಗದ ಅರ್ಥವನ್ನು ,ಬದುಕಿನ ದೊಡ್ಡ ಸಂಕಷ್ಟವನ್ನು ಸರಳವಾಗಿಯೇ ಬಗೆಹರಿಸುವಂತೆ ತಿಳಿ ಹೇಳುವ ಅವಳ ಮಾತು ಇನ್ನೇಲ್ಲೋ ನೆನಪಾಗಿ ಆ ವಿಷಯವೇ ಶಕ್ತಿ ತುಂಬುವುದುಂಟು ಮರಳಿ ಹೋರಾಟ ನಡೆಸಲು…. ಹಾ,ಪ್ರೀತಿ ಕುರುಡು ಎನಿಸಿಕೊಂಡಿದ್ದು ಇವಳಿಂದಲೇ ಎನೋ […]
ಕೋಟತಟ್ಟು:ಪೊಲೀಸ್ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗೆ ಪರಿಹಾರಧನ ವಿತರಿಸಿದ ಗ್ರಹ ಸಚಿವ
ಕೋಟ(ಜ.2): ಕೋಟತಟ್ಟು ಗ್ರಾಮದಲ್ಲಿ ಪೊಲೀಸ್ ಲಾಠಿಚಾರ್ಜ್ ಗೊಳಗಾದ ಕೊರಗ ಸಮುದಾಯವರನ್ನು ರಾಜ್ಯ ಗ್ರಹ ಸಚಿವ ಅರಗ ಜ್ಙಾನೇಂದ್ರರವರು ಜ.01 ರಂದು ಭೇಟಿ ಮಾಡಿ ಸಾಂತ್ವನ ಹೇಳಿದರು. ಗಾಯಗೊಂಡವರಿಗೆ ₹2 ಲಕ್ಷ ಪರಿಹಾರ ಘೋಷಿಸಿ, ಪ್ರತಿ ಕುಟುಂಬಕ್ಕೆ ₹50,000 ಪರಿಹಾರ ನೀಡಿದರು. ಪೊಲೀಸ್ ದೌರ್ಜನ್ಯ ಪ್ರಕರಣ ಕುರಿತು ಸಿ.ಓ.ಡಿ ತನಿಖೆ ನಡೆಸಲಾಗುವುದು ಎಂದು ತಿಳಿಸುತ್ತಾ, ಕೊರಗ ಕುಟುಂಬದವರ ವಿವಾಹ ಸಮಾರಂಭದಲ್ಲಿ ಲಾಠಿಚಾರ್ಜ್ ಮಾಡಿ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು,ಕೊರಗ […]
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ
ಶಿರ್ವ(ಜ.1): ಆರೋಗ್ಯ ಸಂಬಂಧಿ ವಿಚಾರದಲ್ಲಿ ಸದಾ ಎಚ್ಚರಿಕೆಯಿಂದ ಇರುವ ಅನಿವಾರ್ಯತೆ ಮತ್ತು ಅಗತ್ಯತೆ ಇಂದು ನಮ್ಮ ಮುಂದಿದೆ. ಇಂದಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಅಬಾಲ ವೃದ್ಧರಾದಿಯಾಗಿ ಸಾವು ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ಸಮಯದಲ್ಲಿ ಆರೋಗ್ಯ ವಂತ ಜನರು ಕೂಡ ತಮ್ಮ ಆರೋಗ್ಯವನ್ನು ತಜ್ಞ ವೈದ್ಯರಿಂದ ಸಕಾಲದಲ್ಲಿ ಪರೀಕ್ಷಿಸಿ ಹೃದಯದ ರೋಗಗಳಿಂದ ತಮ್ಮನ್ನು ರಕ್ಷಣೆ ಮಾಡಿಸಿಕೊಳ್ಳುವುದು ಬಹಳ ಮಹತ್ವದ ವಿಚಾರವಾಗಿದೆ ಎಂದು ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತೀ […]
ಯಕ್ಷಗಾನದ “ಪವರ್ ಸ್ಟಾರ್” ಕೊಳಲಿ ಕೃಷ್ಣ ಶೆಟ್ಟಿ
ಕರಾವಳಿಯ ಸಾಂಸ್ಕ್ರತಿಕ ಹಿರಿಮೆಯ ಕಲೆಯಾದ ಯಕ್ಷಗಾನದ ಪ್ರಮುಖ ಕಲಾವಿದರುಗಳ ಪಟ್ಟಿ ಮಾಡುತ್ತ ಹೋದರೆ ಅಭಿಮಾನ್ಯು -ಅಭಿಮಾನ್ಯು -ಅಭಿಮಾನ್ಯು ಈ ಪ್ರಸಂಗದ ಅಭಿಮಾನಿಗಳ ಅಭಿಮನ್ಯು ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಕಲಾವಿದರೆಂದರೆ ಅದು ಕೊಳಲಿ ಕೃಷ್ಣ ಶೆಟ್ಟಿಎಂದರೆ ಯಾರೂ ಅಲ್ಲಗಳೆಯುವಂತಿಲ್ಲ.ಹಿರಿಯ ಕಲಾವಿದ ಕೊಳಲಿ ಕೃಷ್ಣ ಶೆಟ್ಟಿಯವರಪರಿಚಯವನ್ನು ಸಂಗ್ರಹಿಸುವಾಗ ಮಾರಣಕಟ್ಟೆ ಮೇಳದ ಮೇರು ಭಾಗವತರಾದ ತಿಮ್ಮಪ್ಪ ದೇವಾಡಿಗ ಹೇರಂಜಾಲು ಈ ಪರಿಚಯ ಲೇಖನಕ್ಕೆ ಸಹಕರಿಸಿದ ಇವರನ್ನು ಸಹಕಾರವನ್ನು ಸ್ಮರಿಸಿಕೊಳ್ಳುತ್ತಾ ಕುಂದ ವಾಹಿನಿ ಮೂಲಕ ಕೊಳಲಿ ಕೃಷ್ಣ […]
ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್ ನಲ್ಲಿ ವಿಶೇಷ ಭಜನಾ ಕಾರ್ಯಕ್ರಮ
ಉಡುಪಿ(ಜ.1): ಕುತ್ಯಾರು ಸೂರ್ಯಚೈತನ್ಯ ಹೈಸ್ಕೂಲ್ ಆವರಣದಲ್ಲಿರುವ ಭವ್ಯ ಏಕಶಿಲಾ ಪರಶುರಾಮ ವಿಗ್ರಹವನ್ನೊಳಗೊಂಡ ಪರಶುರಾಮೇಶ್ವರ ದೇವಸ್ಥಾನದಲ್ಲಿ ನಾಗೇಶ್ವರ ಭಜನಾ ಮಂಡಳಿ, ಪಡುಬಿದ್ರಿ – ಮೂಲ್ಕಿ ವಲಯ ಇವರಿಂದ ಡಿಸೆಂಬರ್ 31 ರಂದು ವಿಶೇಷ ಭಜನಾ ಕಾರ್ಯಕ್ರಮವು ಜರುಗಿತು. ಭಜನಾ ಮಂಡಳಿಯ ನೇತೃತ್ವವನ್ನು ಶ್ರೀ ಚಂದ್ರಹಾಸ್ ವಹಿಸಿದ್ದರು. ಎಳೆಯ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿ ಸಂಸ್ಕಾರವಂತರನ್ನಾಗಿ ಮಾಡುವ ಕೆಲಸ ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ ನಡೆಯಬೇಕೆಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ತರುವಾಯ ಮಾತನಾಡಿದ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಅಧ್ಯಕ್ಷ ವಿದ್ವಾನ್ ಶಂಭುದಾಸ ಗುರೂಜಿ […]
ವಿಶೇಷ ಮಕ್ಕಳ ಶಾಲೆಗೆ ಬೈಂದೂರು ಶಾಸಕರಿಂದ ಐದು ಲಕ್ಷ ರೂಪಾಯಿ ಕೊಡುಗೆ
ಬೈಂದೂರು(ಡಿ.31):ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ನಾರಾಯಣ ವಿಶೇಷ ಮಕ್ಕಳ ಶಾಲೆ ತಲ್ಲೂರು, ಕುಂದಾಪುರ ಇಲ್ಲಿಗೆ ಭೇಟಿ ನೀಡಿದ ಬೈಂದೂರಿನ ಶಾಸಕರಾದ ಶ್ರೀ ಬಿ.ಎಮ್.ಸುಕುಮಾರ ಶೆಟ್ಟಿಯವರು ಶಾಸಕರ ನಿಧಿಯಿಂದ ಐದು ಲಕ್ಷ ರೂಪಾಯಿ ಬಿಡುಗಡೆಗೊಳಿಸಿದರು. ಇಲ್ಲಿ ಸುಮಾರು 39 ವಿಶೇಷ ಮಕ್ಕಳು ತರಬೇತಿಯನ್ನು ಪಡೆಯುತ್ತಿದ್ದಾರೆ. ಆ ಮಕ್ಕಳೊಂದಿಗೆ ಶಾಸಕರು ಸಮಯ ಕಳೆದು, ಶುಭ ಹಾರೈಸಿದರು.
ಕೆಮ್ಮಣ್ಣು ಪಂ.ಉಪಚುನಾವಣೆ : ಮಹೇಶ್ ಪೂಜಾರಿಗೆ ಗೆಲುವು
ಉಡುಪಿ( ಡಿ.30): ಉಡುಪಿಯ ತೋನ್ಸೆ ಗ್ರಾಮ ಪಂಚಾಯತ್ ಪಡುಕುದ್ರು ವಾರ್ಡಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಹೇಶ್ ಪೂಜಾರಿ ಅವರು 108 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ನಿತ್ಯಾನಂದ ಕೆಮ್ಮಣ್ಣರವರ ನಿಧನದಿಂದ ತೆರವಾದ ಸ್ಥಾನಕ್ಕೆ ಡಿ.27 ರಂದು ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮಹೇಶ್ ಪೂಜಾರಿ ಯವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ವೆಂಕಟೇಶ್ ಕುಂದರ್ ಎದುರು 108 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.










