ಕೋಟ(ಜ.2): ಕೋಟತಟ್ಟು ಗ್ರಾಮದಲ್ಲಿ ಪೊಲೀಸ್ ಲಾಠಿಚಾರ್ಜ್ ಗೊಳಗಾದ ಕೊರಗ ಸಮುದಾಯವರನ್ನು ರಾಜ್ಯ ಗ್ರಹ ಸಚಿವ ಅರಗ ಜ್ಙಾನೇಂದ್ರರವರು ಜ.01 ರಂದು ಭೇಟಿ ಮಾಡಿ ಸಾಂತ್ವನ ಹೇಳಿದರು. ಗಾಯಗೊಂಡವರಿಗೆ ₹2 ಲಕ್ಷ ಪರಿಹಾರ ಘೋಷಿಸಿ, ಪ್ರತಿ ಕುಟುಂಬಕ್ಕೆ ₹50,000 ಪರಿಹಾರ ನೀಡಿದರು. ಪೊಲೀಸ್ ದೌರ್ಜನ್ಯ ಪ್ರಕರಣ ಕುರಿತು ಸಿ.ಓ.ಡಿ ತನಿಖೆ ನಡೆಸಲಾಗುವುದು ಎಂದು ತಿಳಿಸುತ್ತಾ, ಕೊರಗ ಕುಟುಂಬದವರ ವಿವಾಹ ಸಮಾರಂಭದಲ್ಲಿ ಲಾಠಿಚಾರ್ಜ್ ಮಾಡಿ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು,ಕೊರಗ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ
ಶಿರ್ವ(ಜ.1): ಆರೋಗ್ಯ ಸಂಬಂಧಿ ವಿಚಾರದಲ್ಲಿ ಸದಾ ಎಚ್ಚರಿಕೆಯಿಂದ ಇರುವ ಅನಿವಾರ್ಯತೆ ಮತ್ತು ಅಗತ್ಯತೆ ಇಂದು ನಮ್ಮ ಮುಂದಿದೆ. ಇಂದಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಅಬಾಲ ವೃದ್ಧರಾದಿಯಾಗಿ ಸಾವು ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ಸಮಯದಲ್ಲಿ ಆರೋಗ್ಯ ವಂತ ಜನರು ಕೂಡ ತಮ್ಮ ಆರೋಗ್ಯವನ್ನು ತಜ್ಞ ವೈದ್ಯರಿಂದ ಸಕಾಲದಲ್ಲಿ ಪರೀಕ್ಷಿಸಿ ಹೃದಯದ ರೋಗಗಳಿಂದ ತಮ್ಮನ್ನು ರಕ್ಷಣೆ ಮಾಡಿಸಿಕೊಳ್ಳುವುದು ಬಹಳ ಮಹತ್ವದ ವಿಚಾರವಾಗಿದೆ ಎಂದು ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತೀ […]
ಯಕ್ಷಗಾನದ “ಪವರ್ ಸ್ಟಾರ್” ಕೊಳಲಿ ಕೃಷ್ಣ ಶೆಟ್ಟಿ
ಕರಾವಳಿಯ ಸಾಂಸ್ಕ್ರತಿಕ ಹಿರಿಮೆಯ ಕಲೆಯಾದ ಯಕ್ಷಗಾನದ ಪ್ರಮುಖ ಕಲಾವಿದರುಗಳ ಪಟ್ಟಿ ಮಾಡುತ್ತ ಹೋದರೆ ಅಭಿಮಾನ್ಯು -ಅಭಿಮಾನ್ಯು -ಅಭಿಮಾನ್ಯು ಈ ಪ್ರಸಂಗದ ಅಭಿಮಾನಿಗಳ ಅಭಿಮನ್ಯು ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಕಲಾವಿದರೆಂದರೆ ಅದು ಕೊಳಲಿ ಕೃಷ್ಣ ಶೆಟ್ಟಿಎಂದರೆ ಯಾರೂ ಅಲ್ಲಗಳೆಯುವಂತಿಲ್ಲ.ಹಿರಿಯ ಕಲಾವಿದ ಕೊಳಲಿ ಕೃಷ್ಣ ಶೆಟ್ಟಿಯವರಪರಿಚಯವನ್ನು ಸಂಗ್ರಹಿಸುವಾಗ ಮಾರಣಕಟ್ಟೆ ಮೇಳದ ಮೇರು ಭಾಗವತರಾದ ತಿಮ್ಮಪ್ಪ ದೇವಾಡಿಗ ಹೇರಂಜಾಲು ಈ ಪರಿಚಯ ಲೇಖನಕ್ಕೆ ಸಹಕರಿಸಿದ ಇವರನ್ನು ಸಹಕಾರವನ್ನು ಸ್ಮರಿಸಿಕೊಳ್ಳುತ್ತಾ ಕುಂದ ವಾಹಿನಿ ಮೂಲಕ ಕೊಳಲಿ ಕೃಷ್ಣ […]
ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್ ನಲ್ಲಿ ವಿಶೇಷ ಭಜನಾ ಕಾರ್ಯಕ್ರಮ
ಉಡುಪಿ(ಜ.1): ಕುತ್ಯಾರು ಸೂರ್ಯಚೈತನ್ಯ ಹೈಸ್ಕೂಲ್ ಆವರಣದಲ್ಲಿರುವ ಭವ್ಯ ಏಕಶಿಲಾ ಪರಶುರಾಮ ವಿಗ್ರಹವನ್ನೊಳಗೊಂಡ ಪರಶುರಾಮೇಶ್ವರ ದೇವಸ್ಥಾನದಲ್ಲಿ ನಾಗೇಶ್ವರ ಭಜನಾ ಮಂಡಳಿ, ಪಡುಬಿದ್ರಿ – ಮೂಲ್ಕಿ ವಲಯ ಇವರಿಂದ ಡಿಸೆಂಬರ್ 31 ರಂದು ವಿಶೇಷ ಭಜನಾ ಕಾರ್ಯಕ್ರಮವು ಜರುಗಿತು. ಭಜನಾ ಮಂಡಳಿಯ ನೇತೃತ್ವವನ್ನು ಶ್ರೀ ಚಂದ್ರಹಾಸ್ ವಹಿಸಿದ್ದರು. ಎಳೆಯ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿ ಸಂಸ್ಕಾರವಂತರನ್ನಾಗಿ ಮಾಡುವ ಕೆಲಸ ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ ನಡೆಯಬೇಕೆಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ತರುವಾಯ ಮಾತನಾಡಿದ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಅಧ್ಯಕ್ಷ ವಿದ್ವಾನ್ ಶಂಭುದಾಸ ಗುರೂಜಿ […]
ವಿಶೇಷ ಮಕ್ಕಳ ಶಾಲೆಗೆ ಬೈಂದೂರು ಶಾಸಕರಿಂದ ಐದು ಲಕ್ಷ ರೂಪಾಯಿ ಕೊಡುಗೆ
ಬೈಂದೂರು(ಡಿ.31):ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ನಾರಾಯಣ ವಿಶೇಷ ಮಕ್ಕಳ ಶಾಲೆ ತಲ್ಲೂರು, ಕುಂದಾಪುರ ಇಲ್ಲಿಗೆ ಭೇಟಿ ನೀಡಿದ ಬೈಂದೂರಿನ ಶಾಸಕರಾದ ಶ್ರೀ ಬಿ.ಎಮ್.ಸುಕುಮಾರ ಶೆಟ್ಟಿಯವರು ಶಾಸಕರ ನಿಧಿಯಿಂದ ಐದು ಲಕ್ಷ ರೂಪಾಯಿ ಬಿಡುಗಡೆಗೊಳಿಸಿದರು. ಇಲ್ಲಿ ಸುಮಾರು 39 ವಿಶೇಷ ಮಕ್ಕಳು ತರಬೇತಿಯನ್ನು ಪಡೆಯುತ್ತಿದ್ದಾರೆ. ಆ ಮಕ್ಕಳೊಂದಿಗೆ ಶಾಸಕರು ಸಮಯ ಕಳೆದು, ಶುಭ ಹಾರೈಸಿದರು.
ಕೆಮ್ಮಣ್ಣು ಪಂ.ಉಪಚುನಾವಣೆ : ಮಹೇಶ್ ಪೂಜಾರಿಗೆ ಗೆಲುವು
ಉಡುಪಿ( ಡಿ.30): ಉಡುಪಿಯ ತೋನ್ಸೆ ಗ್ರಾಮ ಪಂಚಾಯತ್ ಪಡುಕುದ್ರು ವಾರ್ಡಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಹೇಶ್ ಪೂಜಾರಿ ಅವರು 108 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ನಿತ್ಯಾನಂದ ಕೆಮ್ಮಣ್ಣರವರ ನಿಧನದಿಂದ ತೆರವಾದ ಸ್ಥಾನಕ್ಕೆ ಡಿ.27 ರಂದು ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮಹೇಶ್ ಪೂಜಾರಿ ಯವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ವೆಂಕಟೇಶ್ ಕುಂದರ್ ಎದುರು 108 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸುಣ್ಣಾರಿ ಶಾಲೆ “ಇ-ಕಲಿಕಾ” ತರಗತಿ ಉದ್ಘಾಟನೆ
ಕುಂದಾಪುರ (ಡಿ.31):ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹೊಂಬಾಡಿ ಮಂಡಾಡಿ (ಸುಣ್ಣಾರಿ) ಹೊಸ ಕಲಿಕಾ ಪದ್ಧತಿಯ ಅನ್ವಯ ಆಧುನಿಕ ಶೈಲಿ “ಇ-ಕಲಿಕಾ” (E-Learning) ತರಗತಿಯನ್ನು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಶ್ರೀ ರಮಾನಂದ ಶೆಟ್ಟಿ ಸುಣ್ಣಾರಿ ಉದ್ಘಾಟಿಸಿದರು. ಶಾಲಾ ಸಂಚಾಲಕರಾದ ಸುಣ್ಣಾರಿ ಶ್ರೀ ಕಿಶೋರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಎಂ. ರತ್ನಾಕರ ಶೆಟ್ಟಿ, ಶ್ರೀ ವಿ. ಚಂದ್ರಶೇಖರ […]
ಎಂಸಿಎ ಸ್ನಾತಕೋತ್ತರ ವಿಭಾಗ ಆರಂಭ – ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು, ಪುತ್ತೂರು
ಪುತ್ತೂರು ( ಡಿ.30 ) : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಎರಡು ವರ್ಷಗಳ ಎಂಸಿಎ ಸ್ನಾತಕೋತ್ತರ ವಿಭಾಗವನ್ನು ಪ್ರಾರಂಭಿಸಲಾಗಿದೆ. ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಂಸಿಎ ವಿಭಾಗವನ್ನು ಪ್ರಾರಂಭಿಸಲಾಗಿದೆ. ಬಿಸಿಎ, ಬಿಎಸ್ಸಿ ಪದವಿಯನ್ನು ಪಡೆದವರು ಈ ಕೋರ್ಸಿಗೆ ಸೇರಲು ಅರ್ಹರಾಗಿರುತ್ತಾರೆ. ಸಂಪೂರ್ಣ ಹವಾನಿಯಂತ್ರಿತ ತರಗತಿ ಕೊಠಡಿಗಳು, ಸುಸಜ್ಜಿತ ಪ್ರಯೋಗಾಲಯಗಳು ಈಗಾಗಲೇ ಸಜ್ಜುಗೊಂಡಿವೆ. […]
ಮೂಡ್ಲಕಟ್ಟೆ ಎಂ ಐ ಟಿ: IEEE ವಿದ್ಯಾರ್ಥಿ ಶಾಖೆ ಉದ್ಘಾಟನೆ
ಮೂಡ್ಲಕಟ್ಟೆ(ಡಿ.30): ವಿದ್ಯಾರ್ಥಿಗಳ ಪರಿಪೂರ್ಣ ಅಭಿವೃದ್ಧಿಯ ದೃಷ್ಟಿಕೋನದಿಂದ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿರುವ ಕುಂದಾಪುರದ ಪ್ರತಿಷ್ಠಿತ ಸಂಸ್ಥೆಯಾದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ತಾಂತ್ರಿಕ ಕ್ಷೇತ್ರದಲ್ಲಿ ನಾವೀನ್ಯತೆ ಯನ್ನು ಹೆಚ್ಚಿಸುವ ಉದ್ದೇಶದಿಂದ ಐಇಇಇ ವಿದ್ಯಾರ್ಥಿ ಶಾಖೆ ಆರಂಭಿಸಿದ್ದು ಅದರ ಉದ್ಘಾಟನಾಕಾರ್ಯಕ್ರಮ ಡಿ.30 ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಐಇಇಇ ಮಂಗಳೂರು ಉಪ ವಿಭಾಗದ ಅಧ್ಯಕ್ಷರಾದ ಡಾ| ಪುಷ್ಪರಾಜ್ ಶೆಟ್ಟಿ ಯ ವರು ಭಾಗವಹಿಸಿ ಐಇಇಇ ವಿದ್ಯಾರ್ಥಿ ಶಾಖೆಯ ಪ್ರಾಮುಖ್ಯತೆಯನ್ನು ವಿವರಿಸಿದರು. […]
ಥ್ಯಾಂಕ್ಯೂ ಹೇಳೋಣವೇ – 2021ಕ್ಕೆ ..
ಮತ್ತದೇ ಡಿಸೆಂಬರ್ ಅಂತ್ಯ….ಹೌದು 2021ರ ಕೊನೆಯ ದಿನಕ್ಕೆ ಬಂದು ನಿಂತಿದ್ದೇವೆ. ಹೊಸವರ್ಷ ಆಚರಣೆ ಈ ಬಾರಿ ಇಲ್ಲ.ಆದರೆ ನಮ್ಮ ದಿನನಿತ್ಯದ ದಿನಗಳ ಗಣನೆ, ದಿನಚರಿಯ ನಡುವೆ ಹೊಸ ವರ್ಷದ ಕ್ಯಾಲೆಂಡರ್ ಸಾಂಕೇತಿಕ ಆಚರಣೆ ಸಮಯ …. ಹೊಸ ವರ್ಷಕ್ಕೆ ಹೊಸ ಅಭಿಯಾನ ಒಂದನ್ನು ಆರಂಭಿಸಿದ್ದರೂ.. 2021ರ ಒಂದು ಪಕ್ಷಿ ನೋಟದೊಡನೆ ಸುಖ- ದುಃಖ ಎನ್ನದೇ ಎಲ್ಲದ್ದಕ್ಕೂ ಕೃತಜ್ಞತೆ ತೋರುವ ಸಲುವಾಗಿ ಥ್ಯಾಂಕ್ಯೂ_ಹೇಳೋಣ ಎಂದು.. ಹೌದು 2021 ಬಹಳಷ್ಟು ಹೊಸ ಅನುಭವಗಳನ್ನು ನೀಡಿತು. ನೋವು […]










