ಕುಂದಾಪುರ(ಡಿ.22): ಶೈಕ್ಷಣಿಕವಾಗಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯ ಸರ್ವೇಸಾಮಾನ್ಯವಾಗಿದೆ. ಆದರೆ ಅಪರೂಪವೆಂಬಂತೆ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ ಪುರಸ್ಕೃತರಾದ ಡಾ.ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಅವರ ಗೋವಾದ ಸ್ನೇಹಿತರಾದ ರವಿರಾಜ್ ಕಫೆ ಹಾಗೂ ಲಕ್ಷ್ಮಿ ಎಂಪೈರ್ ತ್ರಿ ಸ್ಟಾರ್ ಹೋಟೆಲ್ ಮಾಲೀಕರಾದ ಕಾವಡಿ ಸದಾಶಿವ ಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ ಹರ್ಷ ಶೆಟ್ಟಿ ತಂಡ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿ ಗೌರವಿಸಿದ ಅಪರೂಪದ ಸನ್ನಿವೇಶ ಲಯನ್ಸ್ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಡಾ.ಬಿ.ಬಿ.ಹೆಗ್ಡೆ ಕಾಲೇಜು: ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಉದ್ಘಾಟನೆ
ಕುಂದಾಪುರ(ಡಿ,22): ವಿದ್ಯಾರ್ಥಿಗಳಲ್ಲಿ ಉತ್ತಮ ಹವ್ಯಾಸಗಳಿರಬೇಕು. ಉತ್ತಮ ಹವ್ಯಾಸಗಳ ಪಸರಿಸುವಿಕೆ ಕಾಲೇಜು ಮತ್ತು ಊರಿನ ಘನತೆ ಹೆಚ್ಚಿಸುತ್ತವೆ. ಈ ದಿಸೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಮಾರ್ಗದರ್ಶನದಲ್ಲಿ ಉತ್ತಮ ರೀತಿಯಲ್ಲಿ ಸಂಘಟಿತರಾಗಿ ಮಾದರಿ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಕುಂದಾಪುರ ಕೋಸ್ಟಲ್ ಲಯನ್ಸ್ ಕ್ಲಬ್ನ ಉಪಾಧ್ಯಕ್ಷರಾದ ಕಂದಾವರ ಸತೀಶ ಶೆಟ್ಟಿಯವರು ಹೇಳಿದರು. ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2021-22ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ […]
ಪಾರ್ವತಿ ಜಿ ಐತಾಳ್ ಸಾಹಿತ್ಯ ಸಾಧನೆ ತೆರೆದಿಡುವ ‘ಸುರಗಂಗೆ’
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಅನುವಾದ ಕ್ಷೇತ್ರದಲ್ಲಿ ಅಮೂಲ್ಯ ಕೃತಿ ರಚನೆಗಳ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿರುವ ಕರಾವಳಿಯ ಸೃಜನಶೀಲ ಬಹುಭಾಷಾ ಲೇಖಕಿ ಪಾರ್ವತಿ ಜಿ. ಐತಾಳರು ಕನ್ನಡ ಸಾಹಿತ್ಯ ಲೋಕದ ಅಪರೂಪದ ಪ್ರತಿಭೆ. ಕನ್ನಡ, ಇಂಗ್ಲೀಷ್ ,ಹಿಂದಿ ,ಮಲಯಾಳಂ ಮತ್ತು ತುಳು ಹೀಗೆ ಐದು ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿ ಆಯಾ ಭಾಷೆಗಳಲ್ಲಿ ಕೃತಿ ರಚನೆ ಮಾಡಿದ್ದು ಮಾತ್ರವಲ್ಲದೆ ಆಯಾ ಭಾಷೆಗಳ ನಡುವೆ ಅನುವಾದದ ಕೆಲಸವನ್ನೂ ಮಾಡುತ್ತ,ವಿವಿಧ […]
ತ್ರಾಸಿ: ಪುಟ್ಟ ಹುಡುಗಿ ಸೋನಿಯಾಳ ವೈದ್ಯಕೀಯ ಚಿಕಿತ್ಸೆಗೆ ಬೇಕಿದೆ ಆರ್ಥಿಕ ನೆರವು
ತ್ರಾಸಿ( ಡಿ.21) : ತ್ರಾಸಿ ಗ್ರಾಮದ ನಿವಾಸಿಯಾಗಿರುವ ಕೋದಂಡರಾಮರವರ ಮಗಳಾದ ಸೋನಿ ಶೆಟ್ಟಿಗಾರ್ (ಹತ್ತು ವರುಷ) ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದು , ಮೆದುಳಿನ ಗಡ್ಡೆ (ಬ್ರೈನ್ ಟ್ಯೂಮರ್)ಯ ಖಾಯಿಲೆಗೆ ಒಳಗಾಗಿದ್ದು ಹಲವು ದಾನಿಗಳ ಸಹಕಾರದೊಂದಿಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿತ್ತು. ಆ ಬಳಿಕ ಸತತವಾಗಿ ಆಕೆಗೆ ಔಷಧೋಪಚಾರ ನಡೆಯುತ್ತಿದೆ. ಇದೀಗ ಆಕೆಯ ದೇಹದಲ್ಲಿ ನರಗಳಿಗೆ ಸಂಬಂದಿಸಿದ ದ ಹಾರ್ಮೊನುಗಳ ಬೆಳವಣಿಗೆಯು ಸೂಕ್ತವಾಗಿ […]
ಕಾಯಿದೆಗಳ ಅರಿವು ಅಗತ್ಯ -ನರೇಂದ್ರ ಎಸ್ ಗಂಗೊಳ್ಳಿ
ಗಂಗೊಳ್ಳಿ(ಡಿ,21): ದೇಶದ ನಾಗರಿಕರಾಗಿ ನಮಗೆ ಲಭ್ಯವಿರುವ ಹಕ್ಕುಗಳ ಅರಿವನ್ನು ಹೊಂದಿರಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ. ಮಾಹಿತಿ ಹಕ್ಕು ಕಾಯಿದೆ ಮತ್ತು ಕೇಂದ್ರ ವಿಚಕ್ಷಣಾ ಆಯೋಗವನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ, ಖಂಡಿತ ಭ್ರಷ್ಟಚಾರ ನಿರ್ಮೂಲನೆ ಸಾಧ್ಯ ಎಂದು ಯುವ ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಆರ್. ಟಿ. ಐ ಮತ್ತು ಸಿವಿಸಿ ಕುರಿತಾಗಿನ ಅರಿವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಮಾಹಿತಿ […]
ಉಡುಪಿ: ಡಿ,23 ರಂದು “ಸೈಬರ್ ಸುರಕ್ಷತಾ ಅರಿವು” ಕಾರ್ಯಕ್ರಮ
ಉಡುಪಿ (ಡಿ,19): ಇಲ್ಲಿನ ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ಸಭಾಂಗಣದಲ್ಲಿ ಡಿಸೆಂಬರ್ 23 ರ ಗುರುವಾರದಂದು ಸೈಬರ್ ಸುರಕ್ಷತಾ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಂದಿನ ಕಂಪ್ಯೂಟರ್ ಯುಗದಲ್ಲಿ ಅಂತರ್ಜಾಲದ ಮಿತಿಮೀರಿದ ಬಳಕೆಯಿಂದ ಮಕ್ಕಳ ಮೇಲೆ ಉಂಟಾಗುವ ಪರಿಣಾಮಗಳನ್ನು ವಿವರಿಸುವ ಅಂಗವಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ವಿಷಯ ತಜ್ಞರಾಗಿ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ರಾಜಶ್ರೀ […]
ಶ್ರೀ ಕುಮಾರ್ ಕಾಂಚನ್ ರವರಿಗೆ ಗೋವತ್ಸಪ್ರಿಯ ಪ್ರಶಸ್ತಿ
ಕೋಟೇಶ್ವರ(ಡಿ.19): ದೇಶಿಯ ಗೋತಳಿಗಳ ರಕ್ಷಣೆ ಮತ್ತು ಪಂಚಗವ್ಯ ಉತ್ಪನ್ನಗಳು ಕುರಿತು ಜನ ಜಾಗೃತಿ ಮೂಡಿಸುತ್ತಿರುವ ಕೋಟೇಶ್ವರ ಸಮೀಪದಬೀಜಾಡಿಯ ಕಪಿಲೆ ಗೋ ಸಮೃದ್ಧಿ ಟ್ರಸ್ಟ್(ರಿ) ಇದರ ಪ್ರವರ್ತಕರಾದ ಶ್ರೀಕುಮಾರ್ ಕಾಂಚನ ರವರಿಗೆ ಗೋವತ್ಸಪ್ರಿಯ ಪ್ರಶಸ್ತಿ ಲಭಿಸಿದೆ. ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠ ಉಡುಪಿ ಇವರ ಆಶ್ರಯದಲ್ಲಿ ಡಿ. 14ರಂದು ನಡೆದ ರಾಜ್ಯಮಟ್ಟದ ದೇಶಿ ಗೋಪಾಲಕ, ಕೃಷಿಕ ಹಾಗೂ ಗೋ-ಉತ್ಪನ್ನ ತಯಾರಕ ಸಮ್ಮೇಳನದಲ್ಲಿ ಶ್ರೀಕುಮಾರ್ ಕಾಂಚನ ರವರಿಗೆ ಗೋವತ್ಸ ಪ್ರಿಯ’ […]
ಡಾ.ಬಿ. ಬಿ. ಹೆಗ್ಡೆ ಕಾಲೇಜು:ಎನ್.ಎಸ್.ಎಸ್ ಘಟಕದ ಆಶ್ರಯದಲ್ಲಿ ನಿರ್ಮಲ ದೇಗುಲ ಸ್ವಚ್ಚತಾ ಕಾರ್ಯಕ್ರಮ
ಕುಂದಾಪುರ(ಡಿ.18): ಡಾ.ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕದ ಆಶ್ರಯದಲ್ಲಿ ಕುಂದಾಪುರದಚಿಕ್ಕಮ್ಮನಸಾಲ್ ರಸ್ತೆಯ ಶ್ರೀ ಚಿಕ್ಕಮ್ಮದೇವಿ ದೇವಸ್ಥಾನದ ವಠಾರದಲ್ಲಿ ಡಿ.18 ರಂದು ನಿರ್ಮಲ ದೇಗುಲ ಒಂದು ದಿನದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾ ಪ್ರೊ. ಕೆ. ಉಮೇಶ ಶೆಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಶ್ರಮದಾನದ ಮಹತ್ವವನ್ನು ತಿಳಿಸಿದರು.ಶ್ರೀ ಚಿಕ್ಕಮ್ಮದೇವಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ನಾಗೇಶ್ ಎಮ್.ಪುತ್ರನ್, ಸುರೇಂದ್ರ ಸಂಗಮ್ ,ಸಂಗಮ್ ಫ್ರೆಂಡ್ಸ್ ನ ಸದಸ್ಯರು,ದೇವಾಲಯ ಅರ್ಚಕರಾದ […]
ಸುಣ್ಣಾರಿ ಎಕ್ಸ್ ಲೆಂಟ್ ವಿದ್ಯಾ ಸಂಸ್ಥೆಯ ನಾಲ್ಕು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಕುಂದಾಪುರ (ಡಿ.18): ಶ್ರೀ ಶ್ರೀ ಮದ್ ಗಂಗಾಧರೇಂದ್ರ ಮಹಾಸ್ವಾಮಿಗಳು ಸ್ವರ್ಣವಲೀ ಮಠ ಶಿರಸಿ ಇವರ ಮಹಾ ಪೋಷಕತ್ವದಲ್ಲಿ ಕುಂದಾಪುರದ ಭಗವದ್ಗೀತಾ ಆಚರಣಾ ಸಮಿತಿಯವರು ನಡೆಸಿದ ಉಡುಪಿ ಜಿಲ್ಲಾ ಮಟ್ಟದ ಭಗವದ್ಗೀತಾ ಕಂಠಪಾಠ ಮತ್ತು ಭಾಷಣ ಸ್ಪರ್ಧೆಯಲ್ಲಿ ಸುಣ್ಣಾರಿಯ ಎಕ್ಸಲೆಂಟ್ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ಪ್ರೌಢ ಶಾಲಾ ವಿಭಾಗದ ವೈಯಕ್ತಿಕ ಕಂಠಪಾಠ ಸ್ಪರ್ಧೆಯಲ್ಲಿ 9ನೇ ತರಗತಿಯ ಸಮೃದ್ಧ ಎಂ ಉಪಾಧ್ಯ ,ಭಾಷಣ ಸ್ಪರ್ಧೆಯಲ್ಲಿ 8ನೇ ತರಗತಿ […]
ಡಾ.ಬಿ.ಬಿ. ಹೆಗ್ಡೆ ಕಾಲೇಜು: ಸೈಕಲ್ ಜಾಥಾ ( ಸ್ವಸ್ಥ ಸಮಾಜದ ಸಂದೇಶ ಸಾರಿದ ವಿದ್ಯಾರ್ಥಿಗಳು)
ಕುಂದಾಪುರ (ಡಿ,18): ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಎನ್ಸಿಸಿ ಆರ್ಮಿ ಘಟಕದ ಆಯೋಜನೆಯಲ್ಲಿ ಕುಂದಾಪುರದಿಂದ ಮರವಂತೆ ತನಕ ಸೈಕಲ್ ಜಾಥಾವನ್ನು ಡಿಸೆಂಬರ್ 18ರಂದು ಬೆಳಿಗ್ಗೆ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ನಾರಾಯಣ ನಾಯಕ್ ಎನ್ಸಿಸಿ ಧ್ವಜ ಏರಿಸುವುದರ ಮೂಲಕ ಜಾಥಕ್ಕೆ ಚಾಲನೆ ನೀಡಿದರು. ನಾಗರಿಕ ಸಮಾಜವನ್ನು ಎಚ್ಚರಿಸುವ ಭಿತ್ತಿ ಪತ್ರಗಳನ್ನು ಹೊಂದಿರುವ, ವಿವಿಧ ಸಾಮಾಜಿಕ ಸಂದೇಶ ಸಾರುವ ಸೈಕಲ್ಗಳಲ್ಲಿ ವಿದ್ಯಾರ್ಥಿಗಳು ಕಾಲೇಜಿನಿಂದ ಮರವಂತೆ ಬೀಚ್ ತನಕ ಪಯಣಿಸಿದರು. […]










