ಕುಂದಾಪುರ ( ಡಿ.8) : ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯ ಉದ್ಘಾಟನೆ ಡಿ.18. ರಂದು ನೆರವೇರಿತು. ಕುಂದಾಪುರ ಪೋಲಿಸ್ ಉಪನಿರೀಕ್ಷಕರಾದ ಶ್ರೀ ಸದಾಶಿವ್ ಆರ್. ಗೌರೋಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಈ ವಯೋಮಾನದ ವಿದ್ಯಾರ್ಥಿಗಳಿಗೆ ಅತಿ ಅಗತ್ಯವಾದ ತರಬೇತಿಯ ಅವಕಾಶ ಈ ಕಾಲೇಜಿನಲ್ಲಿ ದೊರಕಿದೆ, ಅದನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರಿ ಪಡೆಯಿರಿ. ಒಳ್ಳೆಯ ಗುರಿ ನಿಮ್ಮದಿರಲಿ, ಅದನ್ನು ಸಾಧಿಸುವ ಶ್ರದ್ಧೆಯಿರಲಿ, ಖಂಡಿತ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ನಿವೇದಿತ ಪ್ರೌಢಶಾಲೆ ಬಸ್ರೂರಿನಲ್ಲಿ ಅಪರಾಧ ತಡೆ ಮಾಸಾಚರಣೆ 2021 ಕಾರ್ಯಕ್ರಮ
ಬಸ್ರೂರು(ಡಿ.18): ಇಲ್ಲಿನ ನಿವೇದಿತ ಪ್ರೌಢಶಾಲೆಯಲ್ಲಿ ಡಿ.13ರಂದು ಕಾನೂನು ಅರಿವು ಶಿಬಿರ ಹಮ್ಮಿಕೊಳ್ಳಲಾಯಿತು. ಕಂಡ್ಲೂರಿನ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಗಳಾದ ಶ್ರೀ ನಿರಂಜನ ಗೌಡ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳು ಮೊಬೈಲ್ ಹೆಚ್ಚಾಗಿ ಬಳಸುವುದರಿಂದ ಆಗುವ ತೊಂದರೆ, ಪೋಕ್ಸೋ ಕಾಯ್ದೆ ಬಗ್ಗೆ ಅರಿವು, ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವುದರಿಂದ ಆಗುವ ಸಮಸ್ಯೆಗಳ ಬಗ್ಗೆ, ನಮ್ಮ ಪರಿಸರದ ಬಗ್ಗೆ ವಿದ್ಯಾರ್ಥಿಗಳಿಗೆ ಅತೀವ ಕಾಳಜಿ ಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯು ಒಂದೊಂದು […]
ಕುಂದಾಪುರ ರೋಟರಿ ಕ್ಲಬ್ ಗೆ ಹಿರಿಯ ಚಲನಚಿತ್ರ ನಟ ಶ್ರೀ ರಮೇಶ್ ಭಟ್ ಭೇಟಿ
ಕುಂದಾಪುರ (ಡಿ.18): ಕನ್ನಡ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ನಟ ಶ್ರೀ ರಮೇಶ್ ಭಟ್ ರವರು ರೋಟರಿ ಕ್ಲಬ್ ಕುಂದಾಪುರಕ್ಕೆ ಇತ್ತೀಚೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಸೇರಿ ಅವರನ್ನು ಸನ್ಮಾನಿಸಲಾಯಿತು ಸದಸ್ಯರಾದ ಮಾಜಿ ಸಹಾಯಕ ಗೌರ್ನರ್ ಶ್ರೀ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ರೋಟೇರಿಯನ್ ಮುತ್ತಯ್ಯ ಶೆಟ್ಟಿ ಹಾಗೂ ನಾಗರಾಜಶೆಟ್ಟಿ ಈ ಸಂದರ್ಭದಲ್ಲಿ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತಾಡಿದ ಶ್ರೀ ರಮೇಶ್ ಭಟ್ ರೋಟರಿ ಕ್ಲಬ್ ಸದಸ್ಯರ […]
ಸೂರ್ಯ ಚೈತನ್ಯ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ಕಾರ್ಯಾಗಾರ ಸಂಪನ್ನ
ಉಡುಪಿ(ಡಿ.18): ಕುತ್ಯಾರಿನ ಸೂರ್ಯ ಚೈತನ್ಯ ಹೈಸ್ಕೂಲಿನಲ್ಲಿ ಶಿಕ್ಷಕರಿಗಾಗಿ ‘ಉತ್ತಮದಿಂದ ಅತ್ಯುತ್ತಮ ಶಿಕ್ಷಕರಾಗುವತ್ತ ಎನ್ನುವ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ತಜ್ಞ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಮೆನೇಜ್ಮೆಂಟ್ ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಪ್ರಾಧ್ಯಾಪಕ ಡಾ. ಬಾಲಚಂದ್ರ ಆಚಾರ್ ಮಾತನಾಡಿ, “ಶಿಕ್ಷಕರಲ್ಲಿ ವಿಷಯ ಪಾಂಡಿತ್ಯ ಇರಬೇಕು. ಶಿಕ್ಷಕರೆಂದರೆ ಜೀವನ ಪರ್ಯಂತ ಕಲಿಯುವವರು. ಕಾಲಕಾಲಕ್ಕೆ ಬದಲಾಗುವ ಬೋಧನಾ ಪ್ರಕ್ರಿಯೆಗಳನ್ನು ಕಲಿತು […]
ನೇಶನ್ ಲವರ್ಸ್ ಬೈಂದೂರು: ಡಿ.24 ರಂದು ಸೇನಾ ಪಡೆಗಳಲ್ಲಿ ಉದ್ಯೋಗವಕಾಶದ ಕುರಿತು ಮಾಹಿತಿ ಕಾರ್ಯಗಾರ
ಬೈಂದೂರು (ಡಿ,17): ಯುವಜನತೆಯಲ್ಲಿ ರಾಷ್ಟ್ರ ಪ್ರೇಮ, ರಾಷ್ಟ್ರೀಯತೆ ಹಾಗೂ ರಾಷ್ಟ್ರ ಸೇವಾ ಮನೋಭಾವ ಹೆಚ್ಚಿಸಲು ಹಾಗೂ ಉಡುಪಿ- ಕುಂದಾಪುರ ,ಬೈಂದೂರು ಭಾಗದ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುವಂತಾಗಬೇಕು ಎನ್ನುವ ಆಶಯದೊಂದಿಗೆ ಹುಟ್ಟಿಕೊಂಡ ನೇಶನ್ ಲವರ್ಸ್ ಬೈಂದೂರು ಇವರ ವತಿಯಿಂದ ಬೈಂದೂರು ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಭಾರತೀಯ ಸೇನಾ ಪಡೆಗಳಲ್ಲಿ ಉದ್ಯೋಗವಕಾಶದ ಕುರಿತು ಮಾಹಿತಿ ಕಾರ್ಯಾಗಾರವನ್ನು ಡಿಸೆಂಬರ್ 24 ರ ಶುಕ್ರವಾರ ಬೆಳಿಗ್ಗೆ ಗಂಟೆ 9-15ಕ್ಕೆ ಬೈಂದೂರಿನ ರೋಟರಿ ಭವನದಲ್ಲಿ […]
ಸರ್ಕಾರಿ ಪದವಿಪೂರ್ವ ಕಾಲೇಜು ಬಿದ್ಕಲ್ ಕಟ್ಟೆ: ಎನ್.ಎಸ್.ಎಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಬಿದ್ಕಲ್ಕಟ್ಟೆ:ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ 2021-22ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಇತ್ತೀಚಿಗೆ ಜರುಗಿತು.ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಶ್ರೀಕಾಂತ್ ರವರು ಉದ್ಘಾಟಕರಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಎಸ್ ಎಸ್ ಎಸ್ ಪೂರಕವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಶುಪಾಲರಾದ ಶ್ರೀ ವಿಘ್ನೇಶ್ವರ ಭಟ್ ವಹಿಸಿದ್ದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ,ರಾಜ್ಯಶಾಸ್ತ್ರ […]
ಡಾ.ಬಿ.ಬಿ. ಹೆಗ್ಡೆ ಕಾಲೇಜು: ಎನ್.ಸಿ .ಸಿ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಕುಂದಾಪುರ(ಡಿಸೆಂಬರ್ 15) : ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಎನ್.ಸಿ .ಸಿ ಘಟಕದ 2021-22 ನೇ ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿ ಭಾರತೀಯ ಸೇನಾಪಡೆಯ ಯೋಧ ಪ್ರಶಾಂತ್ ದೇವಾಡಿಗ ಡಿ.15 ರಂದು ಉದ್ಘಾಟಿಸಿ ಶುಭಹಾರೈಸಿದರು .ಹಾಗೆಯೇ ಯುವ ಸಮುದಾಯಕ್ಕೆ ದೇಶ ಸೇವೆಗೈಯಲು ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಸೈನ್ಯ ಸೇರಲು ಯುವಕರು ಮಂದಾಗಬೇಕು. ನಮ್ಮ ಉಡುಪಿ- ಕುಂದಾಪುರ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುವಂತಾಗಬೇಕು ಎಂದು ಅವರು ಹೇಳಿದರು. ತನ್ನ […]
ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಯೋಧರಿಗೆ ನಮನ
ಕುಂದಾಪುರ ( ಡಿಸೆಂಬರ್ 15): ತಮಿಳುನಾಡಿನ ಕೂನ್ನೂರು ಬಳಿ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ(CDS) ಜ.ಬಿಪಿನ್ ರಾವತ್ ದಂಪತಿ ಸೇರಿದಂತೆ, ಹುತಾತ್ಮರಾದ ಎಲ್ಲಾ ವೀರ ಯೋಧರಿಗೆ ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಡಿಸೆಂಬರ್ 15ರಂದು ದೀಪ ನಮನ ಸಲ್ಲಿಸಲಾಯಿತು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಬೋಧಕೇತರರು ಕೈಯಲ್ಲಿ ಮೇಣದ ದೀಪ ಬೆಳಗಿಸಿ, ದೇಶಭಕ್ತಿ ಗೀತೆ ಹಾಡುವುದರ ಮೂಲಕ ಹುತಾತ್ಮರ ಆತ್ಮಕ್ಕೆ ದೀಪ ಪ್ರಜ್ವಲನದ ಶ್ರದ್ಧಾಂಜಲಿ ಸಲ್ಲಿಸಿದ್ದರು. ಈ […]
ಗಂಗೊಳ್ಳಿ: ಡಾ. ಬಿ.ಆರ್ ಅಂಬೇಡ್ಕರ್ ರ ವರ ಪರಿನಿರ್ವಾಣ ದಿನಾಚರಣೆ
ಗಂಗೊಳ್ಳಿ(ಡಿ.13) : ಡಾ. ಅಂಬೇಡ್ಕರ್ ಯುವಕ ಮಂಡಲ (ರಿ) ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಳಿ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಮೇಲ್ ಗಂಗೊಳ್ಳಿಯ ಅಂಬೇಡ್ಕರ್ ಭವನದಲ್ಲಿ ಬಿ.ಆರ್ ಅಂಬೇಡ್ಕರ್ ರ ವರ 65ನೇ ವರುಷದ ಪರಿನಿರ್ವಾಣ ದಿನಾಚರಣೆ ನಡೆಯಿತು. ಯುವಕ ಮಂಡಲದ ಉಪಾಧ್ಯಕ್ಷ ಕಿರಣ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಂಸ್ಥೆಯ ಗೌರವ ಅಧ್ಯಕ್ಷರಾದ ಭಾಸ್ಕರ್ ಹೆಚ್. ಜಿ ಮಾತನಾಡಿ ಅಂಬೇಡ್ಕರ್ ಅವರ ಜೀವನ ಶೈಲಿ […]
ಮೂಡ್ಲಕಟ್ಟೆ ಎಂ ಐ ಟಿ: ಅಪರಾಧ ತಡೆ ಮಾಸಾಚರಣೆ -2021 ಕಾರ್ಯಕ್ರಮ
ಕುಂದಾಪುರ(ಡಿ.13): ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮದ ಪ್ರಯುಕ್ತ ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆ ಕಂಡ್ಲೂರು ಇದರ ಸಹಯೋಗದೊಂದಿಗೆ ಅಪರಾಧ ತಡೆ ಮಾಸಾಚರಣೆ 2021 ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಕಂಡ್ಲೂರು ಪೋಲಿಸ್ ಸಬ್ ಇನ್ಸ್ಪೆಕ್ಟರ್ ಶ್ರೀ ನಿರಂಜನ್ ಗೌಡ ಬಿ ಎಸ್ ಆಗಮಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. “ಅಪರಾದ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾದದ್ದು, ಕ್ಷಣ ಮಾತ್ರದಲ್ಲಿ ಆಗುವ ಅಹಿತಕರ ಘಟನೆಗಳ ಬಗ್ಗೆ ನಾವು […]










