ಶಿರ್ವ(ಡಿ,5): ಇಂದಿನ ವಾಣಿಜ್ಯ ಕ್ಷೇತ್ರಗಳಲ್ಲಿ ಲೆಕ್ಕಪತ್ರಗಳ ಲೆಕ್ಕಚಾರ ಮಾಡಲು ಬೇಸಿಕ್ ಅಕೌಂಟಿಂಗ್ ಬಗ್ಗೆ ಯುವಕರಲ್ಲಿ ಜ್ಞಾನದ ಅರಿವು ಇರಬೇಕೆಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಬೇಸಿಕ್ ಅಕೌಂಟಿಂಗ್ ಕುರಿತು ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀ ಸ್ಯಾಮ್ ಜೋಯಲ್ ಡೈಸ್ ರವರು ಪ್ರಾಯೋಗಿಕವಾಗಿ ವಿವರಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಾಣಿಜ್ಯ ಉದ್ಯೋಗ ಕ್ಷೇತ್ರದಲ್ಲಿ ಅಕೌಂಟಿಂಗ್ ಎಕ್ಸ್ಪರ್ಟ್ ಗಳಿಗೆ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಶ್ರೀ ಧವಲಾ ಕಾಲೇಜು ಮೂಡಬಿದಿರೆ: ಎನ್.ಎಸ್.ಸ್ ಘಟಕದ 2021- 22 ನೇ ಸಾಲಿನ ಕಾರ್ಯಕ್ರಮಗಳ ಉದ್ಘಾಟನೆ
ಮೂಡಬಿದಿರೆ(ಡಿ,5): ಶ್ರೀ ಧವಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಇದರ 2021 -22 ನೇ ಸಾಲಿನ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ಡಿ,03ರಂದು ಕಾಲೇಜಿನ ಕಾನ್ಫರೆನ್ಸ್ ಹಾಲಿನಲ್ಲಿ ನಡೆಯಿತು. ನಿವೃತ್ತ ವೃತ್ತ ನಿರೀಕ್ಷಕ ಶ್ರ ರಾಜಾರಾಮ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ನ ಉಪಯುಕ್ತತೆ ಮತ್ತು ಅದನ್ನು ವಿದ್ಯಾರ್ಥಿಗಳು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ವಿವರಿಸಿದರು. ಎನ್ಎಸ್ಎಸ್ ಎನ್ನುವುದು ಸ್ವಯಂ ಸೇವಕರಿಂದ ಕೂಡಿದ ಸಂಸ್ಥೆ. ಸ್ವಯಂಸೇವಕರು ಸ್ವ ಹಿತಾಸಕ್ತಿಯಿಂದ ಸಾಮಾಜಿಕ ಶೈಕ್ಷಣಿಕ ಸೇವೆಗಳನ್ನು […]
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿಶ್ವ ಕಂಪ್ಯೂಟರ್ ಸಾಕ್ಷರತೆ ದಿನಾಚರಣೆ
ಶಿರ್ವ(ಡಿ,5): ಕಂಪ್ಯೂಟರ್ ಜ್ಞಾನ ಇಂದಿನ ಯುವಕರಲ್ಲಿ ಅತ್ಯಂತ ಅವಶ್ಯಕವಾಗಿದೆ. ಕಲಿಕೆಯ ಜೊತೆಗೆ ಉದ್ಯೋಗ ಕ್ಷೇತ್ರದಲ್ಲಿ ಕಂಪ್ಯೂಟರ್ ಜ್ಞಾನವನ್ನು ಸಮರ್ಪಕವಾಗಿ ಅಳವಡಿಸಿಕೊಂಡದಲ್ಲಿ ಉತ್ತಮ ರೀತಿಯ ಬೆಳವಣಿಗೆ ಕಾಣಬಹುದೆಂದು ಕಾಲೇಜಿನ ಕಚೇರಿ ಅಧೀಕ್ಷಕಿ ಶ್ರೀಮತಿ ಡೊರಿಯನ್ ಡಿಸಿಲ್ವಾ ಹೇಳಿದರು. ಅವರು ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗ ಹಾಗೂ ಕಂಪ್ಯೂಟರ್ ಸಾಕ್ಷರತ ಕೋಶ ಜಂಟಿಯಾಗಿ ಏರ್ಪಡಿಸಿದ ವಿಶ್ವ ಕಂಪ್ಯೂಟರ್ ಸಾಕ್ಷರತೆ ದಿನಾಚರಣೆ ದಲ್ಲಿ ಮುಖ್ಯ ಅತಿಥಿಗಳಾಗಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು […]
ಆಚ್ಲಾಡಿ ಗ್ರಾಮದ ಸೊಬಗು
ಕನ್ನಡ ಕರಾವಳಿ ಪ್ರಕ್ರತಿಯ ರಮಣೀಯ ತಾಣ. ಒಂದೆಡೆ ಪಶ್ಚಿಮ ಘಟ್ಟದ ಸಾಲಾದರೆ, ಇನ್ನೊಂದೆಡೆ ಕಡಲ ಕಿನಾರೆ ಕರಾವಳಿಗೆ ಸಾಕಷ್ಟು ಮೆರುಗು ನೀಡಿದೆ. ಸದಾ ಹಸಿರುಟ್ಟ ಭೂತಾಯಿ ಇಲ್ಲಿ ಸಂತಸದ ನಗೆ ಬೀರುತ್ತಿದ್ದಾಳೆ. ವಿದ್ಯಾ ದೇವತೆ ಕೂಡ ಇಲ್ಲಿ ಪ್ರಸನ್ನಳಾಗಿದ್ದಾಳೆ ಎನ್ನುವುದು ಹೆಮ್ಮೆ ವಿಷಯ . ಇಂತಹ ಪುಣ್ಯ ಭೂಮಿಯಲ್ಲಿನ ಜನ ಅನಾದಿ ಕಾಲದಿಂದಲೂ ದೈವ ದೇವರಲ್ಲಿ ಅಪಾರ ನಂಬಿಕೆ ಇಟ್ಟವರು. ಉಡುಪಿ ಹಾಗೂ ದಕ್ಷಿಣ ಕನ್ನಡ ಹತ್ತು ಹಲವು ಪುರಾತನ […]
ಇಂಡಿಯ ಬುಕ್ ಅಫ್ ರೆಕಾರ್ಡ್ ಸಾಧಕಿ ಬಾಲ ಪ್ರತಿಭೆ ಅಗಮ್ಯ ಎಂ ಶೆಟ್ಟಿ ಯನ್ನು ಅಭಿನಂದಿಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ
ವಂಡ್ಸೆ (ಡಿ,2): ಉಪ್ಪುಂದದ ನಿವಾಸಿ , ಉದ್ಯಮಿ ಶ್ರೀ ಗುರುದತ್ತ ಶೆಟ್ಟಿ ಹಾಗೂ ಶ್ರೀಮತಿ ಮಮತಾ ಶೆಟ್ಟಿ ದಂಪತಿಯ ಒಂದು ವರ್ಷದ ಆರು ತಿಂಗಳ ಪುತ್ರಿ ಅಗಮ್ಯ ಎಂ ಶೆಟ್ಟಿ ತನ್ನ ವಿಶೇಷ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿಯಿಂದ ಭಾರತದ ಪ್ರತಿಷ್ಠಿತ ಇಂಡಿಯ ಬುಕ್ ಅಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದ್ದಾರೆ . ಈ ಬಾಲಪ್ರತಿಭೆಯ ವಿಶೇಷ ಸಾಧನೆಯನ್ನು ಗುರುತಿಸಿ ಬೈಂದೂರು ಶಾಸಕ ಬಿ ಎಂ ಸುಕುಮಾರ ಶೆಟ್ಟಿಯವರು ತಮ್ನ ಸ್ವಗ್ರಹದಲ್ಲಿ ಅಗಮ್ಯ […]
ತಡರಾತ್ರಿ ಮೀನುಗಾರನ ರಕ್ಷಣೆ: ಆಪತ್ಭಾಂದವ ಈಶ್ವರ ಮಲ್ಪೆಯವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ
ಮಲ್ಪೆ (ಡಿ,03): ಮಲ್ಪೆ ಮೀನಿಗಾರಿಕಾ ಬಂದರಿನಲ್ಲಿ ಡಿ,02 ರ ತಡರಾತ್ರಿ 2.30.ಗಂಟೆಗೆ ಆಂಧ್ರಪ್ರದೇಶ ಮೂಲದ ಮೀನುಗಾರ ಲಕ್ಷ್ಮಣ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದಾರೆ. ವಿಷಯ ತಿಳಿದ ಆಪತ್ಭಾಂದವ ಈಶ್ವರ ಮಲ್ಪೆ ತಕ್ಷಣ ಬೋಟಿನ ಬಳಿ ತೆರಳಿ ರಕ್ಣಿಸುವುದರ ಜೊತೆಗೆ ಪ್ರಥಮ ಚಿಕಿತ್ಸೆ ನೀಡಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿದರು.ಅಲ್ಲಿನ ವೈದ್ಯರು ಹಾಗೂ ಅವರ ತಂಡ ಲಕ್ಷ್ಮಣ್ ರವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ.ಉಡುಪಿ ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳ ತುರ್ತು […]
ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ವಿವಿಧ ವೇದಿಕೆಗಳ ಉದ್ಘಾಟನೆ
ಕುಂದಾಪುರ (ಡಿ, 02) : ವಿದ್ಯಾರ್ಥಿ ಬದುಕಿನಲ್ಲಿ ವೈವಿಧ್ಯಮಯ ವೇದಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇರುವ ಸಮಯವನ್ನು ಧನಾತ್ಮಕವಾಗಿ ಬಳಸಿಕೊಳ್ಳಬೇಕು. ಔದ್ಯೋಗಿಕವಾಗಿ ಎತ್ತರದ ಸ್ಥಾನವೇರಲು ಇದೆಲ್ಲ ಬಹುದೊಡ್ಡ ಮೆಟ್ಟಿಲಾಗುತ್ತದೆ. ಈ ಕಾಲೇಜು ಅಪರೂಪದ ಈ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವುದು ಶ್ಲಾಘನೀಯ, ಇದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತದೆ ಎಂದು ಕನ್ನಡ ಜಾನಪದ ಪರಿಷತ್, ಉಡುಪಿ ಘಟಕದ ಅಧ್ಯಕ್ಷರಾದ ಡಾ.ಗಣೇಶ ಗಂಗೊಳ್ಳಿ ಹೇಳಿದರು. ಅವರು ಕಾಲೇಜಿನ ವಿವಿಧ ವೇದಿಕೆಗಳ ವಾರ್ಷಿಕ ಚಟುವಟಿಕೆಗಳನ್ನು ಡಿಸೆಂಬರ್ 02ರಂದು ಉದ್ಘಾಟಿಸಿ […]
ಎಕ್ಸಲೆಂಟ್ ವಿದ್ಯಾಸಂಸ್ಥೆ ಸುಣ್ಣಾರಿ: ಸುನಾದ ಸಂಗಮ- ಸಾಂಸ್ಕೃತಿಕ ಕಲರವ ಉದ್ಘಾಟನೆ
ಕುಂದಾಪುರ(ಡಿ,02): ಸುಣ್ಣಾರಿಯ ಎಕ್ಸಲೆಂಟ್ ಇಂಡಿಯನ್ ಸ್ಕೂಲ್ ಮತ್ತು ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೊಸ್ಕರ ಸುನಾದ ಸಂಗಮ ಎನ್ನುವ ವಿನೂತನ ಕಾರ್ಯಕ್ರಮದ ಉದ್ಘಾಟನೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡ್ರಾಮಾ ಜೂನಿಯರ್ ಖ್ಯಾತಿಯ ಸಿಂಚನ ಕೋಟೇಶ್ವರ ಯವರು ಪ್ರತಿಯೊಂದು ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಿದಾಗ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಕ್ಕಂತಾಗುತ್ತದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ನುಡಿದರು. ಸಂಸ್ಥೆಯ ಅಧ್ಯಕ್ಷರಾದ ಡಾ. ಎಚ್. ರಮೇಶ್ ಶೆಟ್ಟಿ ಯವರು ಪ್ರಾಸ್ತವಿಕ […]
ಮೂಡ್ಲಕಟ್ಟೆ ಎಂ ಐ ಟಿ: ಯೂತ್ ರೆಡ್ ಕ್ರಾಸ್ ಘಟಕ ಉದ್ಘಾಟನೆ
ಕುಂದಾಪುರ(ಡಿ .02): ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕದ ಸಹಯೋಗದೊಂದಿಗೆ ಯೂತ್ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕ್ ಘಟಕ ಸಭಾಪತಿ ಜಯಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯ ಕಾರ್ಯವೈಖರಿಯನ್ನು , ಅದರ ಮಹತ್ವವನ್ನು ವಿವರಿಸುತ್ತ ಇಂದಿನ ಯುವ ಪೀಳಿಗೆ ಸಮಾಜಮುಖಿ ಕೆಲಸಗಳಲ್ಲಿ ಸಾದ್ಯವಾದಷ್ಟು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು […]
ಭಾವಗೀತೆ ಸ್ಪರ್ಧೆ:ಅಕ್ಷತಾ ವಿನಯ್ ಪ್ರಥಮ ಸ್ಥಾನ
ಗಂಗೊಳ್ಳಿ (ಡಿ,2): ಇತ್ತೀಚೆಗೆ ಬಾಳೆಹೊನ್ನೂರಿನಲ್ಲಿ ನಡೆದ ರೋಟರಿ 3182ನ ಜಿಲ್ಲಾ ರೋಟರಿ ಸಾಂಸ್ಕೃತಿಕ ಸ್ಪರ್ಧೆ 2021-22ರ ಏಕವ್ಯಕ್ತಿ ಭಾವಗೀತೆ ಸ್ಪರ್ಧೆಯಲ್ಲಿ ಗಂಗೊಳ್ಳಿ ರೋಟರಿ ಕ್ಲಬ್ ನ ಸದಸ್ಯೆ ಅಕ್ಷತಾ ವಿನಯ್ ಪ್ರಥಮ ಸ್ಥಾನ ಗಳಿಸಿದ್ದಾರೆ.










