ದೀಪಾವಳಿ ……ದೀಪಾವಳಿ…………. ಗೋವಿಂದ ಲೀಲಾವಳಿ.. ಅಳಿಯ ಮಗನಾ…….. ” ಹರಿಯಾ ಆ ಟೇಪ್ ಸೌಂಡ್ ಒಂಚೂರ್ ಕಮ್ಮಿ ಮಾಡ್.. ಕೆಮಿ ಕೆಪ್ಪ್ ಆಯ್ತಾ ನಿಮ್ದ್?”… ಗಡಾ ಹೋಯ್ ಕಮ್ಮಿ ಮಾಡ್, ಇಲ್ದಿರ್ ಅಪ್ಪ ಪಟಾಕಿಗ್ ದುಡ್ದ್ ಕೊಡುದಿಲ್ಲ.. ಹ್ಮಾಂ.. ಸರಿ; ಗಳಿನ್ ಒಟ್ಟಿಯಂಗ್ ದುಡ್ಡ್ ಇಟ್ಟದ್ ತೆಗುವಾ? ಪಟಾಕಿಗ್ ಆತ್ತ್…. ಉದ್ದ ತೆಮಿಗ್ ಕಟ್ಟದ್, ಬಿದ್ರಂಗ್ ಮಾಡದ್ ಗೂಡ್ ದೀಪ ಗಾಳಿಗ್ ಬಾಲ ಬೀಸ್ತಾ ಇತ್ತು…ಬಿಸ್ಲ್ ನೆತ್ತಿಗ್ ಏರುಕ್ ಹತ್ತಿತ್…. ಸೆಗ್ಣಿ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಪಿಎಚ್ಡಿ ಪದವಿ
ಉಡುಪಿ (ನ, 02) : ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಂಪಾರು ನಿತ್ಯಾನಂದ ಶೆಟ್ಟಿಯವರು ‘ಕುಂದಾಪುರ ಪರಿಸರದ ದೈವಾರಾಧನೆ’ ವಿಷಯದ ಕುರಿತು ಮಂಗಳೂರು ವಿಶ್ವವಿದ್ಯಾಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಅಭಯ್ ಕುಮಾರ್ ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದ ಪಿಎಚ್ ಡಿ ಪದವಿ ಲಭಿಸಿದೆ. ಬಹುಬಗೆಯ ಸಾಂಸ್ಕೃತಿಕ ಸಂಶೋಧನಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ವಿವಿಧ ಸಂಘ ಸಂಸ್ಥೆಗಳ ಸಕ್ರಿಯ […]
ತವರು ಮನೆ ಕಲ್ಯಾಣಪುರ : ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಯ ಫಲಿತಾಂಶ ಪ್ರಕಟ
ಕಲ್ಯಾಣಪುರ (ನ, 02) : ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ಅಪ್ಪಟ ಭಾರತೀಯ ಸಂಸ್ಕೃತಿಯ ಉಡುಗೆಯ (ಫೋಟೋ ಸ್ಪರ್ಧೆಯನ್ನು ತವರು ಮನೆ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ್ದು, ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಗೊಂಡಿದೆ.ವಿಜೇತರ ಪಟ್ಟಿ ಈ ಕೆಳಗಿನಂತಿವೆ.
ಅಗ್ನಿಶಾಮಕ ದಳ ಉಡುಪಿ : ವಿವಿಧ ಕ್ಷೇತ್ರದಲ್ಲಿ ಸಾಧನಗೈದವರಿಗೆ ಸನ್ಮಾನ ಕಾರ್ಯಕ್ರಮ
ಉಡುಪಿ (ನ, 02) : ಉಡುಪಿಯ ಅಗ್ನಿಶಾಮಕ ದಳದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನಗೈದವರಿಗೆ ಸನ್ಮಾನ ಕಾರ್ಯಕ್ರಮವನ್ನು ನ.01ರಂದು ಹಮ್ಮಿಕೊಳ್ಳಲಾಯಿತು. ಜೀವರಕ್ಷಕ, ಮುಳುಗು ತಜ್ಞ ಈಶ್ವರ್ ಮಲ್ಪೆ, ಅಗ್ನಿಶಾಮಕ ದಳದ ಸಿಬ್ಬಂದಿ, ರಾಜ್ಯಮಟ್ಟದ ದೇಹದಾಡ್ಯಪಟು, ವೇಟ್ ಲಿಫ್ಟರ್ ಅಶ್ವಿನ್ ಸನಿಲ್ ರವರ ಸೇವೆಯನ್ನು ಗುರುತಿಸಿ ಉಡುಪಿ ಅಗ್ನಿಶಾಮಕದಳದ ವತಿಯಿಂದ ಗೌರವಧನ ದೊಂದಿಗೆ ಸನ್ಮಾನಿಸಲಾಯಿತು. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ವಸಂತ್ ಕುಮಾರ್, ಜಿಲ್ಲಾ ನಿವೃತ್ತ ಅಧಿಕಾರಿ ಓಬಯ್ಯ ಮೂಲ್ಯ ಹಾಗೂ […]
ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಯವರಿಗೆ ಸನ್ಮಾನ
ಕಾರ್ಕಳ (ನ. 02) : ಕಾರ್ಕಳ ತಾಲೂಕು ಆಡಳಿತ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಶ್ರೀ ಮಂಜುನಾಥ ಪೈ ಸ್ಮಾರಕ ಪ್ರತಿಷ್ಠಾನ ಸಭಾ ಭವನದಲ್ಲಿ ನ.01ರಂದು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಗೀತಗಾಯನ ರಸಮಂಜರಿ ಕಾರ್ಯಕ್ರಮ ನೀಡಿದ ಕರ್ನಾಟಕ ಜಾನಪದ ಕೋಗಿಲೆ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಗಣೇಶ್ ಗಂಗೊಳ್ಳಿ ಯವರನ್ನು ಕಾರ್ಕಳ ತಾಲೂಕು ಮಾನ್ಯ ತಹಸೀಲ್ದಾರರಾದ ಶ್ರೀ ಕೆ. ಪುರಂದರ ರವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾರ್ಕಳ […]
ಗಂಗೊಳ್ಳಿಯಲ್ಲಿ ಗೂಡುದೀಪ ಸ್ಪರ್ಧೆ
ಗಂಗೊಳ್ಳಿ (ನ, 01) : ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ ಗೂಡುದೀಪ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ವಂತ ರಚನೆಯ ಆಧುನಿಕ ಮತ್ತು ಸಾಂಪ್ರದಾಯಿಕ ಶೈಲಿಯ ಗೂಡುದೀಪಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿದ್ದು ನವೆಂಬರ್ 3ರ ಒಳಗೆ ಸ್ಪರ್ಧಾಳುಗಳು ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನವೆಂಬರ್ ನಾಲ್ಕರ ಸಂಜೆ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9900357414, 9945919718, 9481751521, 9632867885 ನಂಬರನ್ನು ಸಂಪರ್ಕಿಸಲು ಕೋರಲಾಗಿದೆ.
ಗಂಗೊಳ್ಳಿಯಲ್ಲಿ 66 ನೇ ಕನ್ನಡ ರಾಜ್ಯೋತ್ಸವ
ಗಂಗೊಳ್ಳಿ (ನ, 01) : ಬೆಂಗಳೂರು ಹೋಟೆಲ್ ನ್ಯೂಸ್ ಪತ್ರಿಕೆ ಮತ್ತು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ಸಮಿತಿ(ರಿ)ವತಿಯಿಂದ ಗಂಗೊಳ್ಳಿಯಲ್ಲಿ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗಂಗೊಳ್ಳಿಯ ಕನ್ನಡ ಧ್ವಜ ಕಟ್ಟೆಯ ಬಳಿ ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿದ ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿಯ ಅಧ್ಯಕ್ಷರಾದ ಜಿ.ಗೋಪಾಲ ಪೂಜಾರಿ ಮಾತನಾಡಿ ಕನ್ನಡಿಗರಾದ ನಾವು ನಮ್ಮ ದಿನನಿತ್ಯದ ಸಂವಹನದಲ್ಲಿ ಹೆಚ್ಚೆಚ್ಚು ಕನ್ನಡವನ್ನು ಬಳಸಬೇಕು. ಕನ್ನಡ ನಾಡು ನುಡಿಯ ಬಗ್ಗೆ ಸದಾಕಾಲ ಗೌರವ […]
ಶಾರದಾ ಆಂಗ್ಲ ಮಾಧ್ಯಮ ಶಾಲೆ ಬಸ್ರೂರು : ಕನ್ನಡ ರಾಜ್ಯೋತ್ಸವ
ಬಸ್ರೂರು (ನ, 01) : ಇಲ್ಲಿನ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅರ್ಥಶಾಸ್ತ್ರ ಉಪನ್ಯಾಸಕ ,ಪ್ರಸಿದ್ಧ ನಿರೂಪಕ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿಧ್ವಜರೋಹಣಗೈದು ಕನ್ನಡ ನಾಡು, ನುಡಿ, ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಅರುಣ್ ಕುಮಾರ್ ಶೆಟ್ಟಿ , ಆಡಳಿತ ಮಂಡಳಿಯ ಮೊಸೆಸ್ ಮನೋಹರ್, ಜುನೈದ್, […]
ಶ್ರೀ ಮಹಾಸತಿ ಯಕ್ಷಗಾನ ಚಿಕ್ಕಮೇಳ ನಾಯ್ಕನಕಟ್ಟೆ : ನ, 01 ರಂದು ಈ ವರ್ಷದ ಕೊನೆಯ ಸೇವೆಯಾಟ
ಬೈಂದೂರು (ಅ, 31) : ಶ್ರೀ ಮಹಾಸತಿ ಯಕ್ಷಗಾನ ಚಿಕ್ಕಮೇಳ ನಾಯ್ಕನಕಟ್ಟೆ ಇದರ ಈ ವರ್ಷದ ಕೊನೆಯ ಸೇವೆಯಾಟ ನ,01ರಂದು ಮುಗಿಸುವುದೆಂದು ತಿಮ್ಮಪ್ಪ ದೇವಾಡಿಗ, ಸಂಚಾಲಕರಾದ ನಾಗರಾಜ್ ಭಟ್ ಹಾಗೂ ದೇವಸ್ಥಾನದ ಮುಕ್ತೇಶ್ವರರಾದ ನಾಗೇಂದ್ರ ಕಾರಂತರು ತಿಳಿಸಿರುತ್ತಾರೆ. ಮೇಳಕ್ಕೆ ಸಂಪೂರ್ಣವಾಗಿ ಸಹಕರಿಸಿ ದೇವಿಯನ್ನು ಬರಮಾಡಿಕೊಂಡು ದೇವಿಯನ್ನು ಆರಾಧಿಸಿದ ಕುಂದಾಪುರ ತಾಲ್ಲೂಕಿನ ಕುಂದಾಪುರ ಪರಿಸರ ಹೇರಿಕುದ್ರು ,ಆನಗಳ್ಳಿ ,ಉಪ್ಪಿನಕುದ್ರು, ಸಬ್ಲಾಡಿ ಪಾರ್ತಿಕಟ್ಟೆ , ಜಾಲಾಡಿ, ಹೆಮ್ಮಾಡಿ, ಬಗ್ವಾಡಿ, ಕಟ್ ಬೆಲ್ತೂರು, ಹಟ್ಟಿಯಂಗಡಿ, […]
ತೆರೆಮರೆಯ ಸಮಾಜ ಸೇವಕ ಸಾಯಿನಾಥ್ ಶೇಟ್ ಕುಂದಾಪುರ ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಕುಂದಾಪುರ (ಅ, 30) : ಪ್ರಚಾರ ಬಯಸದ, ತನ್ನ ಕೈಯಲ್ಲಾದಷ್ಟು ಅಶಕ್ತರಿಗೆ ಸಹಾಯ ಮಾಡುವ ಕುಂದಾಪುರದ ತೆರೆಮರೆಯ ಸರಳ ಸ್ವಭಾವದ ಸಮಾಜ ಸೇವಕ ಶ್ರೀ ಸಾಯಿನಾಥ್ ಶೇಟ್ ರವರು ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ. ಕಳೆದ ಲಾಕ್ ಡೌನ್ ಸಮಯದಲ್ಲಿ ತಿಂಗಳುಗಟ್ಟಲೆ ಏಕಾಂಗಿಯಾಗಿ ಯಾವುದೇ ಪ್ರಚಾರದ ಅಪೇಕ್ಷೆ ಇಲ್ಲದೆ ಅದೆಷ್ಟೋ ಜನರ ಹಸಿವು ತಣಿಸಿದ ಶೇಟ್ ರವರು ಕಲಾಕ್ಷೇತ್ರ ಕುಂದಾಪುರದ ಸಕ್ರಿಯ ಸದಸ್ಯರಾಗಿದ್ದಾರೆ.










