ವಂಡ್ಸೆ (ಮಾ.3) ಮಹಾವಿಷ್ಣು ಯುವಕ ಮಂಡಲ ಕಟ್ ಬ್ಯಾಲ್ತೂರು ಇದರ 2021-22 ನೇ ಸಾಲಿನಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಮಹಾವಿಷ್ಣು ಯುವಕ ಮಂಡಲ ದ ಅಧ್ಯಕ್ಷರಾಗಿ ಶ್ರೀಕಾಂತ್ ಆಚಾರ್ಯ ಮತ್ತು ಕಾರ್ಯದರ್ಶಿಯಾಗಿ ಗುರುರಾಜ್ ಗಾಣಿಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷರಾದ ಬಸವ ಮೊಗವೀರ ಇವರ ಅಧ್ಯಕ್ಷತೆಯಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಸಭೆಯಲ್ಲಿ ಯುವಕ ಮಂಡಲದ ಸಂಚಾಲಕರದ ಚಂದ್ರ ನಾಯ್ಕ್, ನರಸಿಂಹ ಗಾಣಿಗ, ರವೀಶ್ ಡಿ. ಎಚ್, ರಾಘವೇಂದ್ರ ಜೋಗಿ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಮಾ. 7 ರಂದು ಶ್ರೀ ವಿನಾಯಕ ಯುವಕ ಸಂಘ (ರಿ) ನೆಂಪು ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳು
ಶ್ರೀ ವಿನಾಯಕ ಯುವಕ ಸಂಘ(ರಿ) ನೆಂಪು ,ಕರ್ಕುಂಜೆ ಇವರ ಆಶ್ರಯದಲ್ಲಿ ಇದೇ ಮಾರ್ಚ್ 7 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪು ವಠಾರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಪ್ರವಚನ ಹಾಗೂ ಸಾಂಸ್ಕೃತಿಕ ವೈಭವ ನಡೆಯಲಿದೆ.
ಮೂಡ್ಲಕಟ್ಟೆ ಎಂ.ಐ.ಟಿ. ಕಾಲೇಜು : ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಯನ್ನು ಆಚರಿಸಲಾಯಿತು.
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಹರಿಕಥಾ ಕಲಾಕ್ಷೇಪ ಕಾರ್ಯಕ್ರಮ
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಲಲಿತ ಕಲಾ ಸಂಘದ ಆಶ್ರಯದಲ್ಲಿ ‘ಹರಿಕಥಾ ಕಲಾಕ್ಷೇಪ’ ಎನ್ನುವ ಹರಿಕಥಾ ಪ್ರವಚನ ಕಾರ್ಯಕ್ರಮ ಮಾರ್ಚ್ 02 ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.
ಡಾ. ಜಿ. ಶಂಕರ್ ರವರ ಸಮಾಜ ಸೇವೆ ಶ್ಲಾಘನೀಯ : ಸಂಸದ ಬಿ. ವೈ. ರಾಘವೇಂದ್ರ
ಸಮಾಜದಿಂದ ಪಡೆದಿದ್ದನ್ನು ಪುನ: ಸಮಾಜಕ್ಕೆ ನೀಡಬೇಕಾಗಿದ್ದು ಮನುಷ್ಯ ಧರ್ಮ. ಆ ನಿಟ್ಟಿನಲ್ಲಿ ಡಾ.ಜಿ ಶಂಕರ್ ರವರು ತಮ್ಮ ಫ್ಯಾಮಿಲಿ ಟ್ರಸ್ಟ್ ಮೂಲಕ ಅನೇಕ ರೀತಿಯಲ್ಲಿ ಜನಸೇವೆ ಮಾಡುತ್ತಾ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಂಸದ ಬಿ.ವೈ ರಾಘವೇಂದ್ರ ರವರು ಹೇಳಿದರು.
ದೇಹದಾಡ್ಯ ಪಟು ಸೋಮಶೇಖರ ಖಾರ್ವಿಗೆ ಚಿನ್ನದ ಪದಕ
ಶಿರಸಿ ಸಂಭ್ರಮ ಸಮಿತಿ ಹಾಗೂ ಮ್ಯಾಕ್ಸ್ ಫಿಟ್ನೆಸ್ ಇವರು ದಿನಾಂಕ 28ರಂದು ಶಿರಸಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ದೇಹದಾಡ್ಯ ಚಾಂಪಿಯನ್ ಶಿಪ್ ಮಿಸ್ಟರ್ ಫಯ್ಯೂ’ಸ್ ಕ್ಲಾಸಿಕ್- ಶಿರಸಿ ಸಂಭ್ರಮ -2021ದ 65 ಕೆಜಿ ವಿಭಾಗದಲ್ಲಿ ಹೆಮ್ಮಾಡಿಯ ವೀರ ಮಾರುತಿ ವ್ಯಾಯಾಮ ಶಾಲೆಯ ಸೋಮಶೇಖರ ಖಾರ್ವಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಕೆರಾಡಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ
ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಗುದ್ದಲಿ ಪೂಜೆ ನೇರವೆರಿಸುವುದರೊಂದಿಗೆ ಕಾಮಗಾರಿಗೆ ಚಾಲನೆ ನೀಡಿದರು.
ಮಾ.3 ರಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕೊಲ್ಲೂರು ದೇವಸ್ಥಾನಕ್ಕೆ ಅಮ್ಮ ವಿಶ್ರಾಂತಿಗೃಹ ಹಸ್ತಾಂತರ ಕಾರ್ಯಕ್ರಮ
ನಾಡೋಜಾ.ಡಾ.ಜಿ.ಶಂಕರ್ ಪ್ರವರ್ತಿತ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಉಡುಪಿ ವತಿಯಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಉಳಿದುಕೊಳ್ಳಲು ಅನುಕೂಲವಾಗುವಂತೆ ಸುಮಾರು 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ‘ಅಮ್ಮ’ ವಿಶ್ರಾಂತಿಗೃಹವನ್ನು ನಿರ್ಮಿಸಿದ್ದು, ಇದರ ಹಸ್ತಾಂತರ ಕಾರ್ಯಕ್ರಮ ಮಾ.3 ರ ಬುಧವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಡಾ|ಬಿ.ಬಿ. ಹೆಗ್ಡೆ ಕಾಲೇಜು : ಯಕ್ಷಗಾನ ಮ್ಯೂಸಿಯಂಗೆ ಭೇಟಿ
ಕುಂದಾಪುರ (ಮಾ.1): ಡಾ| ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ ಇದರ ಯಕ್ಷಗಾನ ಸಂಘದ ವತಿಯಿಂದ ಫೆಬ್ರವರಿ 27ರಂದು ಸಮೀಪದ ಭಂಡಾರ್ಕಾರ್ಸ್ ಕಾಲೇಜಿನ ಯಕ್ಷಗಾನ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಯಕ್ಷಗಾನ ವಸ್ತುಸಂಗ್ರಹಾಲಯದ ಸಂಯೋಜಕರು ಹಾಗೂ ಇಂಗ್ಲಿಷ್ ಉಪನ್ಯಾಸಕ ಶಶಾಂಕ ಪಟೇಲ್ ಯಕ್ಷಗಾನದ ವಿವಿಧ ಮಾದರಿ ಮತ್ತು ಪರಿಕರಗಳ ಬಗ್ಗೆ ಮಾಹಿತಿ ನೀಡಿದರು. ಬಡಗು, ಬಡಾಬಡಗು ಹಾಗೂ ತೆಂಕುತಿಟ್ಟು ಯಕ್ಷಗಾನದ ವೈಶಿಷ್ಟತೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಡಾ.ಬಿ.ಬಿ […]
ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ವತಿಯಿಂದ 85ನೇ ವಾರದ ಸ್ವಚ್ಛತಾ ಕಾರ್ಯಕ್ರಮ
ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣ ಕುಂದಾಪುರದ ಕೋಡಿ ಕಡಲತೀರದಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ವತಿಯಿಂದ 85ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಫೆಬ್ರವರಿ 28ರಂದು ಜರುಗಿತು.