ಮಲ್ಪೆ (ಅ, 02) : ಜೀವರಕ್ಷಕ ಮತ್ತು ಆಪದ್ಬಾಂಧವ ಎಂದು ಕರೆಲ್ಪಡುವ ಮಲ್ಪೆಯ ಈಶ್ವರ್ ರವರ ಸಮಾಜ ಸೇವೆ ಕಾರ್ಯವನ್ನು ಗುರುತಿಸಿ ಅವರ ಸಮಾಜ ಮುಖಿ ಕಾರ್ಯಕ್ಕೆ ಅನುಕೂಲವಾಗಲೆಂದು ಮಲ್ಪೆಯ ಮತ್ಸ್ಯ ಉದ್ಯಮಿ ಸುರೇಶ್ ರವರು ಅಂಬುಲೆನ್ಸ್ ಸೇವೆಗೆ ಅನುಕೂಲವಾಗಲೆಂದು ನವೀನ ಮಾದರಿಯ “ಸ್ಟ್ರೆಚರ್”ನ್ನು ಉಚಿತವಾಗಿ ನೀಡಿದರು. ಈಶ್ವರ್ ಮಲ್ಪೆ ಈ ಕೊಡುಗೆಯನ್ನು ಸ್ವೀಕರಿಸಿ ಸುರೇಶ್ ರವರಿಗೆ ಅಭಿನಂದನೆ ಮತ್ತು ಕೃತಜ್ಞತೆಯನ್ನು ತಿಳಿಸಿದರು. ವರದಿ ✍️ಈಶ್ವರ್ ಸಿ ನಾವುಂದ.
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಡಾ. ಬಿ. ಬಿ. ಹೆಗ್ಡೆ ಕಾಲೇಜು : ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ
ಕುಂದಾಪುರ (ಅ, 02) : ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ದೇಶದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಬೋಧಕ ಮತ್ತು ಬೋಧಕೇತರರು ಗಾಂಧೀಜಿ ಮತ್ತು ಶಾಸ್ತ್ರೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಿದರು.
ವರಸಿದ್ಧಿ ವಿನಾಯಕ ಕಾಲೇಜು ಕೆರಾಡಿ : ಗಾಂಧಿ ಜಯಂತಿ ಆಚರಣೆ
ಕೆರಾಡಿ (ಆ, 02) : ಇಲ್ಲಿನ ವರಸಿದ್ಧಿ ವಿನಾಯಕ ಪ್ರಥಮ ದರ್ಜೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜ್ ನ ಪ್ರಾಂಶುಪಾಲರಾದ ಪ್ರಸಾದ್ ಕುಮಾರ್ ಆರ್. ವಹಿಸಿದ್ದು, ಉಪನ್ಯಾಸಕರಾದ ಅರುಣ್ ಕುಮಾರ್, ಅಭಿಜಿತ್ ಹೆಮ್ಮಾಡಿ, ನೇಹಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಿಂಚನ ಸ್ವಾಗತಿಸಿದರು. ನಿಶ್ಮಿತಾ ಧನ್ಯವಾದಗೈದರುಶರಾವತಿ ಕಾರ್ಯಕ್ರಮ ನಿರೂಪಿಸಿದರು.
ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಸಂಚಿಕೆ ಶಿಖರ ಅನಾವರಣ (ನಾಲ್ಕು ವರ್ಷ ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಪ್ರಶಸ್ತಿ)
ಕುಂದಾಪುರ (ಅ, 02) : ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ 2019-20ರ ಶೈಕ್ಷಣಿಕ ವರ್ಷದ ‘ಶಿಖರ’ ವಾರ್ಷಿಕ ಸಂಚಿಕೆಯನ್ನು ಎಂಆರ್ಪಿಎಲ್ ಮಂಗಳೂರು ಇಲ್ಲಿನ ಡಾ. ಸಂಪತ್ ಕುಮಾರ್ ಹೆಚ್.ಸಿ. ಯವರು ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು, ಕಾಲೇಜಿನ ವಾರ್ಷಿಕ ಸಂಚಿಕೆ ಶಿಖರ ವಿಶ್ವವಿದ್ಯಾನಿಲಯದಲ್ಲಿ ಸತತ ನಾಲ್ಕು ವರ್ಷ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ವಾರ್ಷಿಕ ಸಂಚಿಕೆ ವರ್ಷದ ಕಾರ್ಯಕ್ರಮಗಳ ಜೊತೆಗೆ ಸಂಸ್ಥೆಯ ಗುಣಮಟ್ಟದ ಪ್ರತೀಕ ಆಗಿರುತ್ತದೆ ಎಂದು […]
ಮರೆಯಲಾಗದ ಕಾಲೇಜು ನೆನಪು….
ನೆನಪುಗಳ ಮಾತು ಮಧುರ ಎಂಬ ಮಾತು ಎಷ್ಟು ಅರ್ಥಪೂರ್ಣವಾಗಿದೆ ಅಲ್ವ?.. ನನ್ನ ಜೀವನದಲ್ಲಿ ನನಗೆ ಅಚ್ಚೆಳೆದು ಉಳಿದ ನೆನಪು ಎಂದರೆ ಅದು ನನ್ನ ಕಾಲೇಜು ದಿನದ ನೆನಪುಗಳು. ಆ ದಿನವನ್ನೆಲ್ಲಾ ಮತ್ತೇ ನೆನಪಿಸಿಕೊಂಡರೆ ಕಣ್ಣಿನಂಚಿನಲ್ಲಿ ಕಂಬನಿ ಮೂಡುತ್ತದೆ. ಪಿಯುಸಿ ಮುಗಿದಿತ್ತು. ಮುಂದೇನು ಎಂಬ ಪ್ರಶ್ನೆ? ಮನೆಯವರ ಆಸೆ ಈಡೇರಿಸಲಾ? ಅಕ್ಕಪಕ್ಕದ ಮನೆಯವರ ಆಸೆ ಈಡೇರಿಸಲಾ ? ನನ್ನ ಆಸೆ ಈಡೇರಿಸಿಕೊಳ್ಳಲಾ? ಎಂಬ ಗೊಂದಲ.. ಅದೇನೇ ಆಗಲಿ ಎಂದು ಒಂದೆರಡು ಕಾಲೇಜಿನ […]
ಸರಸ್ವತಿ ವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಗಂಗೊಳ್ಳಿ (ಅ, 02 ): ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳು ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಇಂಡೋರ್ ಸ್ಟೇಡಿಯಂನಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಗಂಗೊಳ್ಳಿಯ ಅಧ್ಯಕ್ಷರಾದ ರಾಜೇಶ್ ಎಂ. ಜಿ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಲಯನ್ಸ್ ಅಕ್ಷಯ ಹೆಗ್ಡೆ ಮೊಳಹಳ್ಳಿ ಸ್ವಯಂಸೇವಕರನ್ನುಉದ್ದೇಶಿಸಿ ರಾಷ್ಟ್ರೀಯ ಸೇವಾ ಯೋಜನೆ ಯಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜು “ಮೆಂಟರ್ ಇನ್ಸಿಟ್ಯೂಟ್” ಆಗಿ ಆಯ್ಕೆ
ಬಂಟಕಲ್ (ಅ, 01) : ಭಾರತ ಶಿಕ್ಷಣ ಸಚಿವಾಲಯದ ಆಧೀನದಲ್ಲಿರುವ ಇನ್ಸಿಟ್ಯೂಶನ್ ಇನ್ನೊವೇಶನ್ ಕೌನ್ಸಿಲ್ (ಐಐಸಿ) 2021-22ರ ಸಾಲಿನಲ್ಲಿ ನಡೆದ ಮಾರ್ಗದರ್ಶಕ ಕಾರ್ಯಕ್ರಮದಲ್ಲಿ ಬಂಟಕಲ್ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯವನ್ನು ಮಾರ್ಗದರ್ಶಕ ಸಂಸ್ಥೆಯನ್ನಾಗಿ ಆಯ್ಕೆ ಮಾಡಲಾಗಿದೆ. ಸ್ಥಳೀಯ ಪರಿಸರ ವ್ಯವಸ್ಥೆಯನ್ನು ನವೀನ ಮಾದರಿಯಲ್ಲಿ ರಚಿಸುವುದು,ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಯಾಂತ್ರಿಕತೆಯನ್ನು ಬೆಂಬಲಿಸಿ ಅದರ ಚೌಕಟ್ಟಿನಲ್ಲಿ ಹೊಸಹೊಸ ಸಾಧನೆಗಳನ್ನು ಮಾಡಲು ಇತರ ವಿದ್ಯಾಸಂಸ್ಥೆಗಳಲ್ಲಿ ಆಟಲ್ ಶ್ರೇಯಾಂಕಕ್ಕಾಗಿ ವಿದ್ಯಾರ್ಥಿಗಳನ್ನು ರೂಪಿಸುವುದು, ವಿದ್ಯಾರ್ಥಿಗಳಿಗೆ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನೊಂದಿಗೆ ಸೃಸ್ಟಿ ವೆಂಚರ್, ಪಡುಬಿದ್ರಿ ಒಡಂಬಡಿಕೆ
ಬಂಟಕಲ್ (ಆ, 01) : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಸೃಷ್ಟಿ ವೆಂಚರ್, ಪಡುಬಿದ್ರಿ ಇತ್ತೀಚೆಗೆ ಸಂಸ್ಥೆಯ ಆವರಣದಲ್ಲಿ ಒಡಂಬಡಿಕೆಯೊಂದನ್ನು ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಎರಡೂ ಸಂಸ್ಥೆಗಳು ಜೊತೆಗೂಡಿ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಅವಿಷ್ಕಾರ ನಡೆಸಲಿದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಪರಿಸರ ಸ್ನೇಹಿ ಮನೆ ಹಾಗೂ ಕಟ್ಟಡ ನಿರ್ಮಾಣದ ಬಗ್ಗೆ ಸಂಶೋಧನೆ ಮತ್ತು ಅಭಿವೃದ್ಧಿಯ ಕಾರ್ಯ ನಿರ್ವಹಿಸಲಿದೆ. ಇದರಿಂದ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಿರ್ಮಾಣ […]
ಗೀತಾನಂದ ಫೌಂಡೇಶನ್ : ಪ್ರತಿಭಾ ಪುರಸ್ಕಾರ ನೋಟ್ ಬುಕ್ ವಿತರಣೆ ಹಾಗೂ ಅಂಗವಿಕಲರಿಗೆ ಸೈಕಲ್ ವಿತರಣೆ
ಕೋಟ (ಅ, 01) : ಗೀತಾನಂದ ಫೌಂಡೇಷನ್(ರಿ) ಕೋಟ ಇದರ ಆಶ್ರಯದಲ್ಲಿ ಸ್ಥಳೀಯ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೋಟ ಪಡುಕರೆ ಸಂಯುಕ್ತ ಪ್ರೌಢ ಶಾಲೆಯಲ್ಲಿ ಉಚಿತ ನೋಟ್ ಪ್ರಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಅಂಗವಿಕಲರಿಗೆ ಸೈಕಲ್ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೀತಾನಂದ ಫೌಂಡೇಷನ್ ಪ್ರವರ್ತಕರು ಉದ್ಯಮಿ, ಕೊಡುಗೈದಾನಿ ಶ್ರೀ ಆನಂದ ಸಿ .ಕುಂದರ್ ವಹಿಸಿದ್ದರು. ನಮ್ಮ ಟ್ರಸ್ಟ್ ಶಿಕ್ಷಣ, ಆರೋಗ್ಯ ಮತ್ತು ಬಡಜನರಿಗೆ ನಿರಂತರವಾಗಿ […]
ಮೊಗವೀರ ಯುವ ಸಂಘಟನೆ, ಬೈಂದೂರು- ಶಿರೂರು ಘಟಕ: ಸದಸ್ಯತ್ವ ನವೀಕರಣ ಹಾಗೂ ಸದಸ್ಯತ್ವ ನೋಂದಾವಣಿ ಅಭಿಯಾನ
ಬೈಂದೂರು (ಸೆ,30): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ,ಬೈಂದೂರು- ಶಿರೂರು ಘಟಕದ ಸದಸ್ಯತ್ವ ನವೀಕರಣ ಹಾಗೂ ನೂತನ ಸದಸ್ಯತ್ವ ನೋಂದಾವಣಾ ಅಭಿಯಾನಕ್ಕೆ ಸಪ್ಟೆಂಬರ್,26. ರಂದು ಸಂಘಟನೆಯ ಆಡಳಿತ ಕಛೇರಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಿವರಾಮ್ ಕೆ. ಎಂ. ಅವರು ಅಧ್ಯಕ್ಷತೆ ವಹಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದ ಸ್ವರ್ಣಕಲಶ ಸಮರ್ಪಣೆಯ ಬೈಂದೂರು ವಲಯ ಸಮಿತಿಯನ್ನು ರಚಿಸಲಾಯಿತು. ಸ್ವರ್ಣಕಲಶ ಸಮಿತಿಯ ಕುಂದಾಪುರ […]










