ಗಂಗೊಳ್ಳಿ (ಏ, 10) : ಕುಂದಾಪುರ ತಾಲ್ಲೂಕಿನ ಗುಜ್ಜಾಡಿ ಸಮೀಪದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದ ಸ್ವಾಗತ ಗೋಪುರವನ್ನು ಬೈಂದೂರಿನ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿಶ್ರೀ ನಾಗ ದೇವಸ್ಥಾನ ಮಂಡಳಿಯ ಅಧ್ಯಕ್ಷ ಉಮೇಶ್ ಮೇಸ್ತ, ಮಾಜಿ ಅಧ್ಯಕ್ಷ ಶಾಂತರಾಮ ಮೇಸ್ತ ಗುಜ್ಜಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಹರೀಶ ಮೇಸ್ತ , ದೇವಸ್ಥಾನದ ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಬೀಜಾಡಿ-ಗೋಪಾಡಿ : ಶ್ರೀ ರಾಮನವಮಿ ಪ್ರಯುಕ್ತ ಮನೆ – ಮನೆ ಭಜನೆ ಕಾರ್ಯಕ್ರಮ
ಕೋಟೇಶ್ವರ (ಏ, 12): ಶ್ರೀರಾಮ ಭಜನಾ ಮಂಡಳಿ(ರಿ) ಬೀಜಾಡಿ- ಗೋಪಾಡಿ ಇವರು ಶ್ರೀ ರಾಮನವಮಿ ಪ್ರಯುಕ್ತ ಪ್ರತಿವರ್ಷ ನಡೆಸುವ ನಗರ ಭಜನೆ ಮತ್ತು ಶ್ರೀರಾಮ ರಕ್ಷ ಹೋಮ ಧಾರ್ಮಿಕ ಕಾರ್ಯಕ್ರಮದ ಸಲುವಾಗಿ ಬೀಜಾಡಿ- ಗೋಪಾಡಿ ಗ್ರಾಮಗಳಲ್ಲಿ ಏಪ್ರಿಲ್ 9 ರಿಂದ 20 ರ ತನಕ ಮನೆ ಮನೆ ಭಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರಾತ್ರಿ ಸಮಯದಲ್ಲಿ ಗ್ರಾಮದ ಮನೆ – ಮನೆಗಳಿಗೆ ತೆರಳಿ ಶ್ರೀರಾಮ ದೇವರ ನಾಮ ಸ್ಮರಣೆಯೊಂದಿಗೆ ಕುಣಿತ ಭಜನೆ […]
ಖಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ನೆರವಾಗಲು ಯಕ್ಷಗಾನ ವೇಷ ಧರಿಸಿದ ಬೆಂಕಿಮಣಿ ಸಂತು ಅರೆಹೊಳೆ
ಕುಂದಾಪುರ (ಏ, 11): ಥಲಸ್ಸೇಮಿಯ ಎನ್ನುವ ಖಾಯಿಲೆಯಿಂದ ಬಳಲುತ್ತಿರುವ ಪಡುಕೋಣೆಯ ರಿಷಿಕ್ ಆಚಾರ್ಯ ಮಗುವಿನ ಚಿಕಿತ್ಸೆಗೆ ನೆರವಾಗಲು ಹೊಯ್ಸಳ ಟ್ರಸ್ಟ್ ನಾಡಾ ಇವರ ನೇತ್ರತ್ವದಲ್ಲಿ ಕುಂದಾಪುರ ವಾರದ ಸಂತೆಯ ಶನಿವಾರದಂದು ಸಹಾಯ ಧನ ಸಂಗ್ರಹಿಸಿದರು. ಯಕ್ಷಗಾನ ಕಲಾವಿದ ನಂದೀಶ್ ಜನ್ನಾಡಿಯವರ ಸಹಕಾರದೊಂದಿಗೆ ಹವ್ಯಾಸಿ ಯಕ್ಷಗಾನ ಕಲಾವಿದ ಬೆಂಕಿ ಮಣಿ ಸಂತು ಆರೆಹೊಳೆ ಮಹಿಷಾಸುರ ವೇಷ ಧರಿಸಿ ಕುಂದಾಪುರದ ವಾರದ ಸಂತೆ ಹಾಗೂ ಪೇಟೆಯಲ್ಲಿ ಸಹಾಯಧನ ಸಂಗ್ರಹ ಮಾಡಿದರು. ಬೆಂಕಿಮಣಿ ಸಂತು […]
ಜನತಾ ಸಂಸ್ಥಾಪಕರ ಮಾಸದ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ
ಕೋಟ (ಏ, 12): ಜನತಾ ಸಂಸ್ಥಾಪಕರ ಮಾಸದ ಪ್ರಯುಕ್ತ ಅಯೋಜನೆಗೊಂಡ ಸರಣಿ ಕಾರ್ಯಕ್ರಮಗಳ ಮೊದಲ ದಿನದ ‘”ಸ್ಪೂರ್ತಿ” ಕಾರ್ಯಕ್ರಮದಲ್ಲಿ ಮಣೂರು ಕಡಲತೀರ ಹಾಗೂ ಸ್ಮಶಾನದ ಬಳಿ ಹಮ್ಮಿಕೊಂಡ ಸ್ವಚ್ಚತಾ ಅಭಿಯಾನದಲ್ಲಿ ಗೀತಾನಂದ ಫೌಂಡೇಶನ್ ಹಾಗೂ ಜನತಾ ಸಮೂಹ ಸಂಸ್ಥೆಗಳು ಇದರ ಪ್ರವರ್ತಕರಾದ ಆನಂದ್. ಸಿ. ಕುಂದರ್ ಭಾವಹಿಸಿದ್ದರು. ಕೋಟ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಕ್ಲೀನ ಕುಂದಾಪುರ ಪ್ರೋಜೆಕ್ಟ್ ತಂಡದ ಸದಸ್ಯರು, ಪಂಚವರ್ಣ ಯುವಕ ಮಂಡಲದ ಸದಸ್ಯರು, ನಿಸ್ವಾರ್ಥ […]
ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಸತೀಶ್ ಖಾರ್ವಿ ಯವರಿಗೆ ಚಿನ್ನದ ಪದಕ
ದಾವಣಗೆರೆ (ಏ, 11): ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಇವರ ಆಶ್ರಯದಲ್ಲಿ ದಾವಣಗೆರೆಯಲ್ಲಿ ನಡೆದ ಮಾಸ್ಟರ್-1 ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕುಂದಾಪುರದ ನ್ಯೂ ಹರ್ಕ್ಯೂಲಸ್ ಜಿಮ್ ನ ಸತೀಶ್ ಖಾರ್ವಿ ಯವರು 66 ಕೆ.ಜಿ. ವಿಭಾಗದಲ್ಲಿ ಮೊದಲ ಸ್ಥಾನ ದೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ದೇಹದಾರ್ಡ್ಯ ಹಾಗೂ ಪವರ್ ಲಿಫ್ಟಿನಲ್ಲಿ ಲಿಫ್ಟಿನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರು ಈ ಸ್ಪರ್ಧೆಯಲ್ಲಿ 115 ಕೆಜಿ ಭಾರ ಲಿಫ್ಟ್ ಮಾಡುವುದರ ಮುಖಾಂತರ […]
ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಹಾ ರಥೋತ್ಸವ
ಬಂಟ್ವಾಳ (ಏ, 11): ಬಂಟ್ವಾಳ ತಾಲೂಕಿನ ಕರಿಯಂಗಳದ ಪುರಾಣ ಪ್ರಸಿದ್ದ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮಹಾ ರಥೋತ್ಸವವು ಏಪ್ರಿಲ್ 11 ರಂದು ನಡೆಯಿತು. ಭಕ್ತರ ಆರಾಧ್ಯ ದೇವತೆ ಪೊಳಲಿ ಶ್ರೀರಾಜರಾಜೇಶ್ವರಿ ದೇವರ ದರ್ಶನ ಪಡೆಯುವುದರೊಂದಿಗೆ ರಥೋತ್ಸವದಲ್ಲಿ ಭಕ್ತಿ ಪೂರ್ವಕವಾಗಿ ಪಾಲ್ಗೊಂಡರು.
ಅ(ಸ)ಬಲೆ
ಆಕೆ ನನ್ನಂತೆ ಕನಸು ಕಂಡಿರಬಹುದಲ್ಲವೇ,ರೆಕ್ಕೆ ಬಿಚ್ಚಿ ಹಾರಾಡೋ ಕನಸು, ಯಾರ ಪರಿವಿಲ್ಲದೇ ಗುನುಗಾಡೋ ಮನಸು ಆಕೆಗೂ ಇದ್ದಿರಬಹುದಲ್ಲವೇ!ಆದರೆ ಇಂದು ಇನ್ನೊಬ್ಬರ ಖುಷಿಯಲಿ ತನ್ನ ಕನಸನ್ನು ಕಾಣುತಿರುವಳಷ್ಟೇ. ಚಿಕ್ಕ ಪುಟ್ಟ ವಿಷಯಕ್ಕೂ ಕೂಗಾಡೋ ನಮ್ಮ ಪರಿಸ್ಥಿತಿಗೆ ,ಕೋಪ ಆಕೆಗೂ ಬರುವುದೇ ಎನ್ನುವುದು ಪ್ರಶ್ನೆ.ನಮ್ಮ ಕೋಪ ಕೂಗಾಡಿ ಕರಗಿದರೆ,ಆಕೆಯ ಕೋಪ ಪಾತ್ರೆಗಳ ಮೇಲೆ ತೀರಿಸಿಕೊಂಡು, ಒಬ್ಬಳೇ ನೀರ್ಜೀವ ವಸ್ತುಗಳ ಮೇಲೆ ಕೋಪ ಹೊರಗೆ ಹಾಕುತ್ತಾಳೆ. ಇನ್ನೂ ಇವಳ ಹಾಗೆ ಮಾಡಬೇಡ, ಹೀಗೆ ಮಾಡಬೇಡ […]
ಹೋಟೆಲ್ ಬದುಕು
ಹೋಟೆಲ್ ಕೆಲಸ ಎಂದಾಕ್ಷಣ ಬೇರೆ-ಬೇರೆ ರೀತಿ ಆಲೋಚನೆ ಮಾಡುವ ಜನರಿದ್ದಾರೆ. ಅದೇನೋ ಗೊತ್ತಿಲ್ಲ ಕೆಲವರು ಹೋಟೆಲ್ ಕೆಲಸ ಎಂದರೆ ಸ್ವಲ್ಪ ತಾತ್ಸಾರದಿಂದ ಕಾಣುತ್ತಾರೆ. ಅಷ್ಟೇ ಅಲ್ಲ ಚುಚ್ಚುಮಾತುಗಳನ್ನಾಡಿ ಮನ ನೋಯಿಸುತ್ತಾರೆ. ಹೆಣ್ಣು ಗಂಡಿನ ವಿಚಾರದಲ್ಲೂ ಕಡೆಗಣಿಸುವ ಮನೋಭಾವನೆಯಿಂದ ಕಾಣುತ್ತಾರೆ. ಆದರೆ ಕಡೆಗಣಿಸುವವರಿಗೆ ಅರಿವಿಲ್ಲ ಕೋಟ್ಯಂತರ ಜನರ ಜೀವನ ಇದರಿಂದ ಸಾಗುತ್ತಿದೆಯೆಂದು. ಹೌದು ಅದೆಷ್ಟೋ ಯುವಕರು ಕೆಲಸ ಹುಡುಕಿಕೊಂಡು ಊರುಗಳಿಂದ ಪಟ್ಟಣಕ್ಕೆ ವಲಸೆ ಬಂದಿರುತ್ತಾರೆ. ಆಗ ಅವರ ಕೈ ಹಿಡಿಯುವುದು ಈ […]
ಏಪ್ರಿಲ್ 12 ರಂದು ನಡೆಯ ಬೇಕಿದ್ದ ಮಂಗಳೂರು ವಿ. ವಿ. ಪದವಿ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ
ಮಂಗಳೂರು (ಏ, 10) : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಮುಷ್ಕರದಿಂದಾಗಿ ಸಾರಿಗೆ ವ್ಯವಸ್ಥೆಯಲ್ಲಾದ ವ್ಯತ್ಯಯದಿಂದಾಗಿ ಮಂಗಳೂರು ವಿಶ್ವವಿದ್ಯಾನಿಲಯವು ಏಪ್ರಿಲ್ 12 ರಂದು ನಿಗದಿಪಡಿಸಿದ್ದ ಎಲ್ಲಾ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದೆ. ಮುಂದೂಡಿದ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ನಿಗದಿ ಪಡಿಸಿ ಶೀಘ್ರದಲ್ಲಿ ಮುಂದೆ ತಿಳಿಸಲಾಗುವುದು, ಉಳಿದ ಪರೀಕ್ಷೆಗಳು ಈ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯಂತೆ ನಡೆಯುತ್ತದೆ ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಂಗಳೂರು ವಿ.ವಿ. ಪರೀಕ್ಷಾಂಗ ಕುಲಸಚಿವರಾದ ಪ್ರೋ. […]
ಸದಾನಂದ ಉಪ್ಪಿನ ಕುದ್ರು ರವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿರುವುದರ ಬಗ್ಗೆ ನನ್ನ ಬಳಿ ದಾಖಲೆ ಇದೆ – ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಪ್ರತಿಕ್ರಿಯೆ
ವಂಡ್ಸೆ (ಏ, 10) : ಬಿ.ಜೆ.ಪಿ ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ರವರು ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಾಡಿರುವ ಆರೋಪಕ್ಕೆ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಬದುಕಿನಲ್ಲಿ ಪ್ರಾಮಾಣಿಕವಾಗಿ ಆರಾಧಿಸಿ ಸರ್ವಸ್ವವೆಂದು ನಂಬಿಕೊಂಡು ಬಂದ ಜಗನ್ಮಾತೆ ತಾಯಿ ಮೂಕಾಂಬಿಕೆ ಸನ್ನಿಧಾನದಲ್ಲಿ ನನ್ನ ಬಗೆಗೆ ಆರೋಪಗಳನ್ನು ಮಾಡಿದ್ದಾರೆ. ಹಾಗಾಗಿ ಈ ಎಲ್ಲಾ ಆರೋಪಗಳ ಸತ್ಯಾಸತ್ಯೆಯನ್ನು ತಾಯಿ ಮೂಕಾಂಬಿಕೆಯ ಚಿತ್ತಕ್ಕೆ ಬಿಡುತ್ತೇನೆ ಎಂದು ಬಿ. ಎಂ. ಸುಕುಮಾರ […]










