ಉಡುಪಿ (ಆ, 08): ಯಕ್ಷಗುರು ರಾಕೇಶ್ ರೈ ಅಡ್ಕ ನೇತೃತ್ವದ ಸನಾತನ ಯಕ್ಷಾಲಯ ಮಂಗಳೂರು ಸಂಸ್ಥೆಯು ತನ್ನ 12ನೇ ವಾರ್ಷಿಕೋತ್ಸವವನ್ನು 10ನೇ ಆಗಸ್ಟ್ 2021 ರ ಮಂಗಳವಾರ ಆಚರಿಸಿಕೊಳ್ಳುತ್ತಿದೆ. ಈ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಜೆ ಘಂಟೆ 4.00 ರಿಂದ ಪೂರ್ವರಂಗ ಮತ್ತು ಸಂಜೆ ಘಂಟೆ 4.30 ರಿಂದ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ ಇದರ ವಿದ್ಯಾರ್ಥಿಗಳಿಂದ ಅತೀ ಅಪರೂಪವಾಗಿ ಕಾಣಸಿಗುವ ಒಡ್ಡೋಲಗಗಳು ಹಾಗೂ ತೆರೆ ಕಲಾಸುಗಳ ಪ್ರದರ್ಶನ ಕಾರ್ಯಕ್ರಮ […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಹೋಟೆಲ್ ಉದ್ಯಮಿ ಆತ್ಮಹತ್ಯೆಗೆ ಯತ್ನ : ಈಶ್ವರ್ ಮಲ್ಪೆ ಮತ್ತು ಸತ್ಯದ ತುಳುವೆರ್ ಬಳಗದಿಂದ ರಕ್ಷಣೆ
ಉಡುಪಿ (ಆ, 6) : ಆರ್ಥಿಕ ನಷ್ಟದಿಂದ ಮನನೊಂದು ಗುರುವಾರ ತಡರಾತ್ರಿ ಕುರ್ಕಾಲುನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕೃಷ್ಣ ಭಟ್ ರವರನ್ನು ಆಪದ್ಬಾಂಧವ ಈಶ್ವರ್ ಮಲ್ಪೆ ಹಾಗೂ ಸತ್ಯದ ತುಳುವೆರ್ ಬಳಗದವರು ರಕ್ಷಿಸಿದ್ದಾರೆ. ಉಡುಪಿ ರಥಬೀದಿಯ ಹೋಟೆಲೊಂದರ ಮಾಲೀಕರಾಗಿದ್ದ ಕುಕ್ಕಿಕಟ್ಟೆಯ ಬಾಲಕೃಷ್ಣ ಭಟ್ ಕೋವಿಡ್ ಹಿನ್ನೆಲೆಯಲ್ಲಿ ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಿದ್ದರು. ಆರ್ಥಿಕ ನಷ್ಟದ ಕಾರಣದಿಂದ ಮನನೊಂದು ಕುರ್ಕಾಲು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸುದ್ದಿ “ಆಪದ್ಬಾಂಧವ” ಈಶ್ವರ್ ಮಲ್ಪೆ ತಂಡಕ್ಕೆ ತಿಳಿದ […]
ಕುಂದಾಪುರ : ಡಾ. ಹೆಚ್. ಎಸ್. ಮಲ್ಲಿಯವರ ಪಕ್ಷಿಗಳ ಕುರಿತಾದ ಕೃತಿ ಬಿಡುಗಡೆ
ಕುಂದಾಪುರ (ಆ, 06) : ಕುಂದಾಪುರದ ಫ್ಲೋರಾ ಎಂಡ್ ಫೌನಾ ಕ್ಲಬ್ನ ಅಧ್ಯಕ್ಷರಾಗಿರುವ ರೋಟೆರಿಯನ್ ಡಾ. ಹೆಚ್. ಎಸ್. ಮಲ್ಲಿ ಯವರ ಪಕ್ಷಿಗಳ ಕುರಿತಾಗಿ ರಚಿಸಿದ ಕೃತಿ ಹಾರ್ಬಿನ್ಜೆರ್ ಆಫ್ ಡಿಲೈಟ್ ನ್ನು ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಅಧ್ಯಕ್ಷರಾದ ಎ. ಶಶಿಧರ ಹೆಗ್ಡೆ ಅವರು ಆಗಸ್ಟ್, 5ರಂದು ಡಾ. ಹೆಚ್. ಎಸ್. ಮಲ್ಲಿ ಯವರ ಚಿಕಿತ್ಸಾಲಯದಲ್ಲಿ ಬಿಡುಗಡೆಗೊಳಿಸಿ ಡಾ. ಹೆಚ್.ಎಸ್. ಮಲ್ಲಿಯವರು ಪಕ್ಷಿ ಪ್ರೇಮ ಹಾಗೂ ಅಧ್ಯಯನ ಆಸಕ್ತಿಯನ್ನು […]
ಸಂತೆಕಟ್ಟೆ : ಕೃಷ್ಣಾನುಗ್ರಹ ಮಕ್ಕಳ ಅನಾಥಾಶ್ರಮಕ್ಕೆ ಭೇಟಿ ನೀಡಿದ ಶ್ರೀ ಗೋವಿಂದ ಬಾಬು ಪೂಜಾರಿ
ಉಡುಪಿ (ಆ, 5) : ಇಲ್ಲಿನ ಸಂತೆಕಟ್ಟೆಯ “ಕೃಷ್ಣಾನುಗ್ರಹ” ಅನಾಥ ಮಕ್ಕಳ ದತ್ತು ಸ್ವೀಕಾರ ಕೇಂದ್ರಕ್ಕೆ ಕೊಡುಗೈದಾನಿ, ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಇತ್ತೀಚೆಗೆ ತಮ್ಮ ಕುಟುಂಬಿಕರೊಂದಿಗೆ ಭೇಟಿ ನೀಡಿದರು. ಈ ಸಂದರ್ಭ ಕೇಂದ್ರಕ್ಕೆ ಅಗತ್ಯವಿರುವ ಸುಮಾರು ಒಂದು ತಿಂಗಳ ದಿನಸಿ ಸಾಮಾಗ್ರಿ, ಒಂದು ಸಾವಿರ ಪ್ಯಾಂಪರ್ಸ್ ಹಾಗೂ ಮಕ್ಕಳಿಗೆ ತಿಂಡಿ ತಿನಿಸು ವಿತರಿಸಿದರು. ಅನಾಥಾಶ್ರಮದ ಮಕ್ಕಳ ಜೊತೆ ಕೆಲಕಾಲ ಸಮಯ ಕಳೆದ ಗೋವಿಂದ ಬಾಬು ಪೂಜಾರಿಯವರು ಮಕ್ಕಳ […]
ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಕುಂದಾಪುರ (ಆ, 5) : ಕುಂದಗನ್ನಡ ನಾಡು-ನುಡಿ, ಸಂಸ್ಕೃತಿಯ ಕುರಿತಾಗಿ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕುಂದಗನ್ನಡ ಭಾಗದ ಜನತೆ ಆಚರಿಸುವ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಕುಂದಾಪುರದ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಗಸ್ಟ್ 09 ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕುಂದಾಪ್ರ ಕನ್ನಡದ ರಾಯಭಾರಿ, ಸಾಂಸ್ಕೃತಿಕ ಚಿಂತಕ ಹಾಗೂ ಶಿಕ್ಷಕರಾದ ಶ್ರೀ ಮನು ಹಂದಾಡಿಯವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ […]
ತ್ರಾಸಿ ಡಾನ್ ಬಾಸ್ಕೋ ಸ್ಕೂಲ್ ಎಸೆಸೆಲ್ಸಿಯಲ್ಲಿ ಶೇಕಡ 100 ಫಲಿತಾಂಶ
ಕುಂದಾಪುರ (ಆ, 5) : ಸಿ ಬಿ ಎಸ್ ಇ ಪಠ್ಯಕ್ರಮದ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ತ್ರಾಸಿ ಡಾನ್ ಬಾಸ್ಕೋ ಸ್ಕೂಲ್ ನ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಗೆ 100 ಶೇಕಡ ಫಲಿತಾಂಶ ಬಂದಿರುತ್ತದೆ. ಐದು ವರ್ಷಗಳಿಂದ ಸತತ ಈ ದಾಖಲೆಯನ್ನು ಶಾಲೆ ಮಾಡುತ್ತಾ ಬಂದಿದೆ. ಈ ಬಾರಿ 29 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ವಿ.ನಿತ್ಯಶ್ರೀ ಶೇ 94.2 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. […]
ಸಾಹಸಿ – ಮಿಡಿಯುವ ಹೃದಯಗಳ ಜೀವ ರಕ್ಷಕ – ಆಪತ್ಭಾಂಧವ ಶ್ರೀ ಈಶ್ವರ ಮಲ್ಪೆ
ಯಾವುದೇ ಪ್ರತಿಫಲ ಬಯಸದೆ ನಿಸ್ವಾರ್ಥತೆಯಿಂದ ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸುಗಳು ಅತೀ ವಿರಳ. ಜನಸೇವೆಯೇ ಜನಾರ್ದನ ಸೇವೆ ಎಂಬ ಮಾತಿನಂತೆ ಸಮಾಜಸೇವೆಯನ್ನು ದೇವರ ಪೂಜೆಯಷ್ಟೇ ಪವಿತ್ರವಾದ ಕಾರ್ಯ ಎಂದು ಭಾವಿಸಿ ಸಮಾಜ ಸೇವೆಯಯನ್ನು ನಿಸ್ವಾರ್ಥತೆಯಿಂದ ಆತ್ಮ ಸಂತ್ರಪ್ತಿಗಾಗಿ ಮಾಡುವ ಹಲವಾರು ಜನಗಳ ಮಧ್ಯೆ ನಾವಿಂದು ನಿಮಗೆ ಒರ್ವ ನಿಸ್ವಾರ್ಥ ಸಮಾಜ ಸೇವಕನನ್ನು ಕುಂದವಾಹಿನಿ ಅಂತರ್ಜಾಲ ಸುದ್ದಿತಾಣದ ಮೂಲಕ ಪರಿಚಯಿಸಲು ಸಂತೋಷ ಪಡುತ್ತಿದ್ದೇವೆ.ಸಾಹಸಿ ,ಜೀವರಕ್ಷಕ ,ಜನಸೇವೆಯ ಮನೋಭಾವದ ಈಜು ಪ್ರವೀಣ ,ಆಪತ್ಭಾಂಧವ […]
ರೋಟರಿ ಕ್ಲಬ್ ಕುಂದಾಪುರ : ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
ಕುಂದಾಪುರ (ಆ, 03) : ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ Rtn. ಸಾಲಗದ್ದೆ ಶಶಿಧರ ಶೆಟ್ಟಿ ಪ್ರಾಯೋಜಕತ್ವದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಳೂರು, ತೋಪ್ಲು ಹಾಗೂ ಹಕ್ಲಾಡಿ ಶಾಲಾ ಮಕ್ಕಳಿಗೆ ಅಗಸ್ಟ್ 2 ರಂದು ನೋಟ್ ಬುಕ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ Rtn. ಶಶಿಧರ ಹೆಗ್ಡೆಯವರು ವಹಿಸಿಕೊಂಡು ಶುಭಹಾರೈಸಿ ಮಾತನಾಡಿದರು. ಜಿಲ್ಲಾ ಪ್ರಶಸ್ತಿ ವಿಜೇತ, ಶಿಕ್ಷಕ […]
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು : ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಕ್ರಮ
ಕೊಲ್ಲೂರು (ಆ, 03) : ಇಲ್ಲಿನ ಶ್ರೀಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್,03ರಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುವೆಂಪು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಪ್ರೊ ಡಾ. ಜೆ. ಎಸ್. ಸದಾನಂದ ರವರು ಭೇಟಿ ನೀಡಿ, ಹೊಸ ಶಿಕ್ಷಣ ನೀತಿ ಯ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ಪ್ರೊ. ಡಾ. ಜೆ ಎಸ್ ಸದಾನಂದ ರವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. […]
ಕರೋನಾ ಹಿನ್ನೆಲೆ- ಮಂಗಳೂರು ವಿ.ವಿ ಎಲ್ಲಾ ಪದವಿ ಪರೀಕ್ಷೆಗಳ ರದ್ದು – ತರಗತಿಗಳು ಮುಂದೂಡಿಕೆ: ದ.ಕ. ಜಿಲ್ಲಾಧಿಕಾರಿ ಆದೇಶ
ಕರೋನಾ ಲಾಕ್ಡೌನ್ ಕಾರಣದಿಂದಾಗಿ ಬಾಕಿಯಾದ ಮಂಗಳೂರು ವಿ. ವಿ. 1, 3, 5 ಸೆಮಿಸ್ಟರ್ ನ ಪರೀಕ್ಷೆಗಳು ಅಗಸ್ಟ್ 2 ರಂದು ಪ್ರಾರಂಭಗೊಂಡಿದ್ದು, ಈಗ ಮತ್ತೆ ಕರೋನಾ ಮೂರನೇ ಅಲೆಯ ಆತಂಕದಿಂದಾಗಿ ಮುಂದೂಡಲಾಗಿದೆ.










