ಗಂಗೊಳ್ಳಿ (ಆ, 3) : ಒಂದು ಸಮುದಾಯದ ಹಿತರಕ್ಷಣೆಗಾಗಿ ಸಂಬಂಧಪಟ್ಟ ಎಲ್ಲರೂ ಒಮ್ಮನಸ್ಸಿನಿಂದ ಕೆಲಸವನ್ನು ಮಾಡಬೇಕು. ಸಮಗ್ರ ಪರಿಶ್ರಮದಿಂದಲೇ ಸಮುದಾಯದ ಹಿತ ರಕ್ಷಣೆ ಸಾಧ್ಯ ಎಂದು ಬಿಲ್ಲವ ಸಮುದಾಯದ ಹಿರಿಯರಾದ ಮುತ್ತ ಕುಂದರ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಪಂಜುರ್ಲಿ ದೈವಸ್ಥಾನದ ವಠಾರದಲ್ಲಿ ನಡೆದ ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿಯ ಪ್ರಥಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀನಿವಾಸ ಜತ್ತನ್ ಮಾತನಾಡಿ, ಸಂಸ್ಥೆಗಳು ಸಮುದಾಯದ ಕೆಳವರ್ಗದ ಜನರನ್ನು ಕೂಡ […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಹಳ್ಳಿಹೊಳೆ ಒಕ್ಕೂಟದ ಸಂಘದ ಸದಸ್ಯರಿಗೆ ಲಾಭಾಂಶ ಹಂಚಿಕೆ
ಹಳ್ಳಿಹೊಳೆ (ಆ, 2) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ಇದರ ಕೊಲ್ಲೂರು ವಲಯದ ಹಳ್ಳಿಹೊಳೆ ಒಕ್ಕೂಟದ ಸಂಘದ ಸದಸ್ಯರಿಗೆ ಸುಮಾರು 7.59 ಲಕ್ಷಕ್ಕೂ ಹೆಚ್ಚು ಲಾಭಾಂಶ ಮೊತ್ತವನ್ನು ಆಗಸ್ಟ್ 01ರಂದು ವಿತರಣೆ ಮಾಡಲಾಯಿತು. ಲಾಭಾಂಶ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶಂಕರ್ ನಾಯ್ಕ ರವರು ವಹಿಸಿದ್ದರು. ವಲಯದ ಮೇಲ್ವಿಚಾರಕರಾದ ಶ್ರೀ ರಾಮ. ಎನ್ ರವರು ಸದಸ್ಯರಿಗೆ ಮಾಹಿತಿ ನೀಡಿದರು. ಸೇವಾಪ್ರತಿನಿಧಿ ಕೃಷ್ಣ […]
ಮೀನುಗಾರರನ್ನು ಕರೋನ ಲಸಿಕೆಯ ಆದ್ಯತೆಯ ಪಟ್ಟಿಯಲ್ಲಿ ಸೇರಿಸಬೇಕು
ಕರೋನಾ ಲಾಕ್ಡೌನಿನ ಕಳೆದೆರಡು ಅವಧಿಯಲ್ಲಿ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು, ಸರಕಾರದ ಪ್ಯಾಕೇಜುಗಳು ಸರಿಯಾಗಿ ಸಿಗದೆ ಬದುಕು ಸಾಗಿಸಿದ ಮೀನುಗಾರರು ಮತ್ತೆ ಕಡಲಿಗೆ ಇಳಿಯಲು ಸಜ್ಜಾಗುತ್ತಿದ್ದಾರೆ. ಕರೋನಾ ಮೂರನೆ ಅಲೆಯ ಭಯದ ನಡುವೆ ಹೊಟ್ಟೆಪಾಡಿಗಾಗಿ ಅಗಸ್ಟ್ ತಿಂಗಳ ಎರಡನೇ ವಾರದಲ್ಲಿ ಸರ್ಕಾರದ ನಿಯಮದಂತೆ ಮೀನು ಹಿಡಿಯಲು ಹೊರಡುತ್ತಿರುವ ಬಹುತೇಕ ಮೀನುಗಾರರಿಗೆ ಕರೋನಾ ಲಸಿಕೆ ಇನ್ನೂ ಲಭ್ಯವಾಗಿಲ್ಲ. ಕರೋನಾ ಲಸಿಕಾಕರಣ ನಿಧಾನ ಗತಿಯಲ್ಲಿ ಸಾಗುತ್ತಿರುವುದರ ಜೊತೆಗೆ ಸರ್ಕಾರ ಮೀನುಗಾರರನ್ನು ಕರೋನ ಲಸಿಕೆಯ […]
ಹೆಮ್ಮಾಡಿ : ಒತ್ತಡ ನಿವಾರಣೆ – ಆರೋಗ್ಯ ಜೀವನಶೈಲಿ ಕಾರ್ಯಾಗಾರ
ಹೆಮ್ಮಾಡಿ (ಜು, 31) : ಆಧುನಿಕತೆಯ ಒತ್ತಡದ ಬದುಕಿನಿಂದಾಗಿ ಮನುಷ್ಯನ ಆರೋಗ್ಯದ ಮೇಲೆ ಬಹಳಷ್ಟು ನಕಾರಾತ್ಮಕ ಪ್ರಭಾವಗಳು ಹೆಚ್ಚಾಗುತ್ತಿದ್ದು ಅದರಿಂದ ಹೊರ ಬರಲು ನಾವು ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಬೇಕು. ಆ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ನಮ್ಮ ಲಯನ್ಸ್ ಸಂಸ್ಥೆ ಇಂದು ಗ್ರಾಮೀಣ ಭಾಗದ ಮಹಿಳೆಯರಿಗೆ ಆರೋಗ್ಯವನ್ನು ಕಾಪಾಡಲು ಕಾರ್ಯಗಾರವನ್ನು ಹಮ್ಮಿಕೊಂಡಿದೆ ಎಂದು ಕುಂದಾಪುರ ಲಯನ್ಸ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ನಾಯಕ್ ಕುಂದಾಪುರ ಹೇಳಿದರು. ಅವರು ಲಯನ್ಸ್ ಕ್ಲಬ್ ಕುಂದಾಪುರ, […]
ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೋತ್ಸಾಹ ಧನ ವಿತರಣೆ
ನಾವುಂದ ( ಜು, 31) : ಪ್ರತಿ ವರುಷ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿಗೆ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ 1995-96ನೇ ಸಾಲಿನ ವಿದ್ಯಾರ್ಥಿಗಳ ವತಿಯಿಂದ ನೀಡಲ್ಪಡುವ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ಇತ್ತೀಚೆಗೆ ವಿತರಿಸಲಾಯಿತು. ಈ ವರುಷ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದ ವಿಭಾಗದ ವಿದ್ಯಾರ್ಥಿ ಚವೀಶ್ ಜೈನ್ ಅವರಿಗೆ ಈ ಪ್ರೋತ್ಸಾಹಧನವನ್ನು ನೀಡಲಾಯಿತು. ಆನ್ಲೈನ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ 1995-96ನೇ ಸಾಲಿನ […]
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕುರ್ಕಾಲು ಗ್ರಾಮದ ಮಹಿಳೆ ಸರಸ್ವತಿಯ ಉಳಿಸಲು ನೆರವಿಗೆ ಮನವಿ
ಉಡುಪಿ (ಜು, 30): ಕುರ್ಕಾಲು ಗ್ರಾಮದ ಕುಂಜಾರುಗಿರಿ ನಿವಾಸಿ ಶಂಕರ್ ರವರ ಧರ್ಮಪತ್ನಿ ಶ್ರೀಮತಿ ಸರಸ್ವತಿ (ವಯಸ್ಸು, 25)ಯವರು 2 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇವರಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗಿದೆ. ಸದ್ಯ ಈಗಿರುವ ಪರಿಸ್ಥಿತಿಯಲ್ಲಿ ಡಯಾಲಿಸಿಸ್ ಮಾಡಲು ಕಷ್ಟವಾಗಿದೆ. ಮನೆ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಸರಸ್ವತಿಯವರಿಗೆ ಒಂದು ಹೆಣ್ಣು ಮಗುವಿದೆ. ಪತಿ ಶಂಕರ್ ನಿತ್ಯ ಕಲ್ಲು ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಸರಸ್ವತಿಯವರ ಪರಿಸ್ಥಿತಿ […]
ಶ್ರೀ ಗೋವಿಂದ ಬಾಬು ಪೂಜಾರಿಯವರು ಬಡ ಕುಟುಂಬಗಳಿಗೆ ನಾಲ್ಕನೇ ಮನೆ ನಿರ್ಮಿಸಿ, ಹಸ್ತಾಂತರಿಸುವ ಶುಭ ಘಳಿಗೆಯಲ್ಲಿ ….
ತನ್ನ ದುಡಿಮೆಯ ಒಂದು ಭಾಗವನ್ನು ಅಶಕ್ತರ ಪಾಲಿಗೆ ಮೀಸಲಿಟ್ಟು, ನಿರಂತರವಾಗಿ ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ, ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ನ್ನು ಹುಟ್ಟುಹಾಕಿ, ಆ ಮೂಲಕ ಕಡು ಬಡವರ ಬದುಕಿನಲ್ಲಿ ಆಶ್ರಯದಾತ, ಅನ್ನದಾತ ಮತ್ತು ಆರೋಗ್ಯದಾತರಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಆಶ್ರಯ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಹಿನ್ನೆಲೆಯಲ್ಲಿ ಶ್ರೀ ಗೋವಿಂದ ಬಾಬು ಪೂಜಾರಿಯವರು […]
ಗೋಪಾಡಿ : ಶ್ರೀ ರಾಮ ಮಂದಿರದ ಬಳಿ ಪುನುಗು ಬೆಕ್ಕಿನ ರಕ್ಷಣೆ – ಅರಣ್ಯ ಇಲಾಖೆಗೆ ಹಸ್ತಾಂತರ
ಗೋಪಾಡಿ (ಜು, 28) : ಇಲ್ಲಿನ ಶ್ರೀ ರಾಮ ಮಂದಿರದ ಬಳಿ ಅಪರೂಪದ ಪುನುಗು ಬೆಕ್ಕುನ್ನು ಶ್ರೀರಾಮ ಭಜನಾ ಮಂದಿರದ ಸದಸ್ಯರಾದ ಭರತ್ ಶ್ರೀನಿವಾಸ ಕುಂದರ್, ಮಹೇಶ ಕುಂದರ್, ಸಂತೋಷ ಪೂಜಾರಿ ಹಾಗೂ ಕಾರ್ತಿಕ್ ಪೂಜಾರಿಯವರು ಅದನ್ನು ಸುರಕ್ಷಿತವಾಗಿ ರಕ್ಷಿಸಿ ಕುಂದಾಪುರದ ಅರಣ್ಯ ಇಲಾಖೆಯ ಅಧಿಕಾರಿ ಶ್ರೀ ಉಮೇಶ್ ರವರಿಗೆ ಒಪ್ಪಿಸಿದರು.
ಶ್ರೀ ವಿವೇಕಾನಂದರಿಂದ ಮಾನವೀಯ ಮೌಲ್ಯಗಳ ಪುನರುತ್ಥಾನದ ಜನಜಾಗೃತಿ ಪಾದಯಾತ್ರೆ
ಮಾನವೀಯ ಮೌಲ್ಯಗಳ ಪುನರುತ್ಥಾನ ಎಂಬ ವಿಷಯದೊಂದಿಗೆ ಶ್ರೀ ವಿವೇಕಾನಂದ ಹೆಚ್. ಜಿ ಯವರು ಬೀದರ್ ಜಿಲ್ಲೆಯ ವನಮಾರ್ಪಳ್ಳಿಯಿಂದ ನವೆಂಬರ್, 1 ರಂದು ಹೊರಟು ಸುಮಾರು 8 ಸಾವಿರ ಕಿಲೋಮೀಟರ್ ಪಾದಯಾತ್ರೆಗೈಯುತ್ತ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸ್ನೇಹಿತರ ಸರಳ ಆತಿಥ್ಯವನ್ನು ಸ್ವೀಕರಿಸಿ, ಆಶ್ರಯವನ್ನು ಪಡೆದು ರಾಜ್ಯದಾದ್ಯಂತ ಮಾನವೀಯ ಮೌಲ್ಯಗಳ ಕುರಿತಾಗಿ ಅರಿವು ಮೂಡಿಸುತ್ತಿದ್ದಾರೆ. ಇವರ ಪಾದಯಾತ್ರೆ ಜುಲೈ,26 ರಂದು ಬೈಂದೂರಿನ ನಾವುಂದಕ್ಕೆ ಬಂದು ತಲುಪಿದ ಸಂದರ್ಭದಲ್ಲಿ ಬೈಂದೂರಿನ ಜನತೆಯ ವತಿಯಿಂದ ಪ್ರೀತಿಪೂರ್ವಕವಾಗಿ […]
ಮಡಿಕೇರಿ : ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ
ಮಡಿಕೇರಿ (ಜು. 28) : ಇಲ್ಲಿನ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ 6 ನೇ ತರಗತಿಯ ಪ್ರವೇಶಕ್ಕೆ ಆಗಸ್ಟ್, 11 ರಂದು ಜಿಲ್ಲೆಯ 06 ಕೇಂದ್ರಗಳಲ್ಲಿ ಆಯ್ಕೆ ಪರೀಕ್ಷೆ ನಡೆಯಲಿದೆ. ಪ್ರವೇಶ ಪತ್ರವನ್ನು ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಬಳಸಿ https://cbseitms.nic.in/index.aspx ಲಿಂಕ್ ಮೂಲಕ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನೀರಜ್ 7676825036, ಪದ್ಮ ಡಿ.ಟಿ. 7019054680 ಮತ್ತು ಗಂಗಾಧರನ್ ಕೆ. 6363354829 ನ್ನು ಸಂಪರ್ಕಿಸಬಹುದು ಎಂದು ಜವಾಹರ್ ನವೋದಯ […]










