ವಂಡ್ಸೆ (ಜೂ, 28) : ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ ಹೆಚ್ಚಿದ್ದು, ಲಾಕ್ಡೌನ್ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಅನಿವಾರ್ಯವಾದ ಅನ್ ಲೈನ್ ಶಿಕ್ಷಣಕ್ಕೆ ನೆಟ್ ವರ್ಕ್ ಸಮಸ್ಯೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಸಂದಿಗ್ಧ ಪರಿಸ್ಥಿತಿಯನ್ನು ಸರಿಪಡಿಸುವ ಸಲುವಾಗಿ ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಸಂಬಂಧಪಟ್ಟ ನೆಟ್ವರ್ಕ್ ನಿರ್ವಹಣಾಧಿಕಾರಿಗಳೊಂದಿಗೆ ತಮ್ಮ ಗ್ರಹ ಕಛೇರಿಯಲ್ಲಿ ಜೂನ್, 22 ರಂದು ಸಭೆ ನಡೆಸಿದರು. ನೆಟ್ ವರ್ಕ್ […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ಕುಂದಾಪುರ : 30 ಮತ್ತು 31ನೇ ಯೋಜನೆಯ ಧನ ಸಹಾಯದ ಚೆಕ್ ಹಸ್ತಾಂತರ ಕಾರ್ಯಕ್ರಮ
ಕುಂದಾಪುರ (ಜೂ, 28) : ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ ಇದರ 30ನೇ ಸೇವಾ ಯೋಜನೆಯ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಕುಂಭಾಶಿ ಗ್ರಾಮದ ಕೊರವಡಿ ಬಣಸಾಲೆ ಬೆಟ್ಟಿನ ನಿವಾಸಿಯಾದ ಶ್ರೀಮತಿ ಲಕ್ಷ್ಮೀ ಯವರಿಗೆ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಯ ವೆಚ್ಚಕ್ಕೆ ಸಹಾಯ ಧನ ಹಾಗೂ ಟ್ರಸ್ಟ್ ನ 31ನೇ ಯೋಜನೆಯ ಅಂಗವಾಗಿ ಅಕಸ್ಮಿಕ ಅಪಘಾತದಲ್ಲಿ ತಲೆಗೆ ಬಲವಾದ ಏಟು ಬಿದ್ದು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ದೀಕ್ಷಿತ್ ಪೂಜಾರಿಯವರ ಹೆಚ್ಚಿನ ಚಿಕಿತ್ಸಾ […]
ಸಂತೆಕಟ್ಟೆ : ಕೃಷ್ಣಾನುಗ್ರಹ -ಮಮತೆಯ ತೊಟ್ಟಿಲು ಆಶ್ರಮದಲ್ಲಿ ಶ್ರೀ ಗೋವಿಂದ ಬಾಬು ಪೂಜಾರಿಯವರ ಜನ್ಮ ದಿನಾಚರಣೆ
ಉಡುಪಿ (ಜೂ, 28): ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ).ಕುಂದಾಪುರ ಇದರ ಗೌರವಾಧ್ಯಕ್ಷರಾದ ಕೊಡುಗೈದಾನಿ , ಉದ್ಯಮಿ ಗೋವಿಂದ ಬಾಬು ಪೂಜಾರಿ ಯವರ 44ನೇ ಜನ್ಮ ದಿನಾಚರಣೆಯನ್ನು ಸಂತೆಕಟ್ಟೆಯ ಕೃಷ್ಣಾನುಗ್ರಹ ಆಶ್ರಮದ (ಮಮತೆಯ ತೊಟ್ಟಿಲು) ಮಕ್ಕಳ ಜೊತೆ ಜೈ ಕುಂದಾಪ್ರ ಸೇವಾ ಟ್ರಸ್ಟ್ ವತಿಯಿಂದ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷ ಶ್ರೀ ಗೋವಿಂದ ಬಾಬು ಪೂಜಾರಿ ಯವರು ಆಶ್ರಮದ ಮಕ್ಕಳಿಗೆ ತನ್ನ ಜನ್ಮ ದಿನದ ಪ್ರಯುಕ್ತ […]
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೆಕ್ಕೆ : ಅರಣ್ಯ ಇಲಾಖೆ ಹಾಗೂ ಅರಣ್ಯಸಮಿತಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ
ಜಡ್ಕಲ್ (ಜೂನ್, 26) : ಪ್ರಾದೇಶಿಕ ಅರಣ್ಯ ಉಪ ವಿಭಾಗ ಕುಂದಾಪುರ ಹಾಗೂ ಗ್ರಾಮ ಅರಣ್ಯಸಮಿತಿ ಜಡ್ಕಲ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಜೂನ್ ,25 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೆಕ್ಕೆ ಯಲ್ಲಿ ನಡೆಯಿತು. ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವನಜಾಕ್ಷಿ ಶೆಟ್ಟಿ, ಗಿಡ ನೆಡುವುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ […]
ಬಡ ಕುಟುಂಬಕ್ಕೆ ನೂತನ ಮನೆ ಹಸ್ತಾಂತರಿಸುವ ಮೂಲಕ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡ ಶ್ರೀ ಗೋವಿಂದ ಬಾಬು ಪೂಜಾರಿ
ಉಪ್ಪುಂದ (ಜೂ, 26): ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಸಹಸ್ರಾರು ಬಡಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಿರುವ ಕೊಡುಗೈದಾನಿ, ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಜೂನ್ ,26 ರಂದು ತಮ್ಮ 44 ನೇ ಜನ್ಮದಿನದ ಶುಭ ಸಂದರ್ಭದಲ್ಲಿ ಉಪ್ಪುಂದದ ಕಾಸನಾಡಿ ಗ್ರಾಮದ ವಿಜಯ ರಮೇಶ್ ಪೂಜಾರಿಯವರಿಗೆ ನೂತನ ಮನೆ ಶ್ರೀ ವರಲಕ್ಷ್ಮಿ ನಿಲಯ ” ಗ್ರಹಪ್ರವೇಶ ನೆರವೇರಿಸಿ, ಮನೆಯ ಕೀ ಯನ್ನು ಹಸ್ತಾಂತರ ಮಾಡುವುದರ ಮೂಲಕ ತಮ್ಮ ಜನ್ಮ […]
ಮೂಡ್ಲಕಟ್ಟೆ ಎಂ ಐ ಟಿ : ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ
ಕುಂದಾಪುರ (ಜೂ, 25): ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿಯ ದ್ರಷ್ಟಿಯಿಂದ ಆರಂಭಿಸಿದ “ಅಪ್ನಾ-ಸಪ್ನಾ” ಸಂಘಟನೆಯ ಆಶ್ರಯದಲ್ಲಿ ರಾಜ್ಯದ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಆನ್ಲೈನ್ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಸಾವಿಶ್ಕಾರ್ ಎಂಬ ಈ ಸಾಂಸ್ಕೃತಿಕ ಉತ್ಸವದಲ್ಲಿ 21ಕ್ಕೂ ಹೆಚ್ಚೂ ವಿವಿಧ ರೀತಿಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ ಸಾವಿಶ್ಕಾರ್ 2.0 ಇದರ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಂಬಿಕಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿನಾಯಕ […]
ವಂಡ್ಸೆ : ಶಾಸಕರ ನಿವಾಸದಲ್ಲಿ ಶ್ಯಾಮಪ್ರಸಾದ್ ಮುಖರ್ಜಿಯವರ ನುಡಿ ನಮನ ಕಾರ್ಯಕ್ರಮ
ವಂಡ್ಸೆ (ಜೂ, 24) : ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಡ್ಡಿಯಾದ ಆರ್ಟಿಕಲ್ 370 ಬಗ್ಗೆ ಮೊದಲು ಧ್ವನಿ ಎತ್ತಿದವರು ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರು. ಇವರ ಪ್ರಯತ್ನದ ಫಲವಾಗಿ ಜನಸಂಘದ ರಚನೆಯಾಯಿತು. ಇವರು ಬಿತ್ತಿದ ರಾಷ್ಟ್ರೀಯತೆ ಮತ್ತು ಭಾರತೀಯತೆಯ ಗುಣಗಳಿಂದಾಗಿ ಇಂದು ನಮ್ಮ ಬಿಜೆಪಿ ಪಕ್ಷ ವಿಶ್ವದ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಬೈಂದೂರು ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ ಹೇಳಿದರು. ಉದಾತ್ತ ಕಾರಣಗಳಿಗಾಗಿ ಹುತಾತ್ಮರಾದ ಶ್ಯಾಮಪ್ರಸಾದ್ ಮುಖರ್ಜಿಯವರು ಎಂದೆಂದಿಗೂ […]
ಬಾರ್ಕೂರು : ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಕಾಲೇಜು – ಉಚಿತ ಟ್ಯಾಬ್ಲೆಟ್ ಪಿ ಸಿ ವಿತರಣಾ ಕಾರ್ಯಕ್ರಮ ಹಾಗೂ ಸ್ಮಾರ್ಟ್ ಕ್ಲಾಸ್ ರೂಮ್ ಉದ್ಘಾಟನಾ ಸಮಾರಂಭ
ಬ್ರಹ್ಮಾವರ (ಜೂ, 24): ಕರ್ನಾಟಕ ಸರಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರ್ಕೂರು ಇದರ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿ ಸಿ ವಿತರಣಾ ಕಾರ್ಯಕ್ರಮ ಹಾಗೂ ಸ್ಮಾರ್ಟ್ ಕ್ಲಾಸ್ ರೂಮ್ ಉದ್ಘಾಟನಾ ಸಮಾರಂಭ ಜೂನ್, 23 ರಂದು ಕಾಲೇಜಿನ ರೂಸಾ ಸಭಾಂಗಣದಲ್ಲಿ ನಡೆಯಿತು. ಕಾಲೇಜು […]
ವಿಶ್ವ ಹಿಂದೂ ಪರಿಷತ್ ಬಜರಂಗದಳ ಕೋಟೇಶ್ವರ : ಅಶಕ್ತ ಕುಟುಂಬಕ್ಕೆ ನೂತನ ಗ್ರಹ ನಿರ್ಮಾಣ
ಕೋಟೇಶ್ವರ (ಜೂ,23) ವಿಶ್ವಹಿಂದೂ ಪರಿಷತ್ ಬಜರಂಗದಳ ಕೋಟೇಶ್ವರದ ಕಾರ್ಯಕರ್ತರು ಲಾಕ್ಡೌನ್ ದಿನಗಳಲ್ಲಿ ತಮ್ಮ ಸಮಯ ವ್ಯರ್ಥ ಮಾಡದೇ ಸಮಾಜದ ಅಶಕ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.ಅದಕ್ಕೆ ಉದಾಹರಣೆ ಎನ್ನುವಂತೆ ಕೋಟೇಶ್ವರ ಪರಿಸರದ ಬೇಬಿ ಎನ್ನುವ ಮಹಿಳೆಯ ತೀರ ಅಶಕ್ತ ಕುಟುಂಬದ ಮನೆ ದು:ಸ್ಥಿತಿಯನ್ನು ಕಂಡು ಅದನ್ನು ಸಂಪೂರ್ಣ ದುರಸ್ಥಿ ಮಾಡಿಸಿ ವಿನೂತನವಾಗಿ ನಿರ್ಮಿಸಿ ಕೊಟ್ಟಿರುತ್ತಾರೆ .ಇವರ ಈ ಸೇವಾ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಅಂಪಾರು : ವಿಕಲಚೇತನರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ
ಅಂಪಾರು (ಜೂ, 22): ಉಡುಪಿ ಜಿಲ್ಲೆಯ ಸಕ್ಷಮ ಸಂಸ್ಥೆಯಿಂದ ಅಂಪಾರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ವಿಕಲಚೇತನರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಜೂನ್,22 ರಂದು ಅಂಪಾರು ಗ್ರಾಮ ಪಂಚಾಯತ್ ಕೇಂದ್ರದಲ್ಲಿ ನಡೆಯಿತು. ಉಡುಪಿ ಜಿಲ್ಲೆಯ ಸಕ್ಷಮ ಸಂಸ್ಥೆಯ ಶ್ರೀ ನಿತೇಶ್ ಮಲ್ಪೆ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಅಂಪಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, VRW ಸುಜಾತ ಶೆಟ್ಟಿ, ಹಾಗೂ […]