ಅವರ ಒಂದು ಹಿತನುಡಿಯೇ ಸಾಕು ನಿಮ್ಮ ಸಂಕಷ್ಟಗಳ ಸಾಂತ್ವನಕ್ಕೆ . ಅದರಲ್ಲೂ ಅವರ ಶ್ರೀರಕ್ಷೆ, ಸಹಾಯ ಹಾಗೂ ಸಹಕಾರ ಸಿಕ್ಕರಂತೂ ನೀವು ನಿಜವಾಗಿಯೂ ಜೀವನದಲ್ಲಿ ಸಾಧನೆಯ ಜೊತೆಗೆ ಯಶಸ್ಸನ್ನು ಕಾಣುತ್ತೀರಿ. ಜೀವನದಲ್ಲಿ ಎಂದಿಗೂ ಸೋತೆ ಎನ್ನುವ ಭಾವನೆಯೊಂದಿಗೆ ಜೀವನ ನೆಡೆಸಬೇಡಿ ,ಒಂದಲ್ಲ ಒಂದು ದಿನ ಗೆದ್ದೆ ಗೆಲ್ಲುವೆ ಎನ್ನುವ ಛಲದೊಂದಿಗೆ ಜೀವನ ನೆಡೆಸಿ ಎನ್ನುವ ಅವರ ಆದರ್ಶ ಪಾಲನೆಯ ಬದುಕು ಅನುಕರಣೀಯ. ಧೈರ್ಯದಿಂದ ಮುಂದೆ ಹೋಗಿ ,ಜಗತ್ತಿನ ಎಲ್ಲಾ ಕೆಲಸವನ್ನು […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಚಿತ್ರದುರ್ಗ ರೆಡ್ ಕ್ರಾಸ್ : ಕೋವಿಡ್ ಸಂಧರ್ಬದಲ್ಲಿನ ವೈದ್ಯಕೀಯ ಉಪಕರಣಗಳ ಹಸ್ತಾಂತರ ಕಾರ್ಯಕ್ರಮ
ಚಿತ್ರದುರ್ಗ (ಜೂನ್ , 13) : ಕೋವಿಡ್ ಸಂಧರ್ಬದಲ್ಲಿನ ವೈದ್ಯಕೀಯ ಉಪಕರಣಗಳ ಹಸ್ತಾಂತರ ಕಾರ್ಯಕ್ರಮ ಅಂಗವಾಗಿ ಚಿತ್ರದುರ್ಗ ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಶಾಂತ ರಾಮತೀರ್ಥ ಆಶ್ರಮದ ಶ್ರೀ ಶ್ರೀ ಶ್ರೀ ಪ್ರಹಲ್ಲಾದ್ ಗುರೂಜಿ ರವರನ್ನು ಜೂನ್ 13 ರಂದು ಭೇಟಿ ಮಾಡಿ ಪಲ್ಸ ಓಕ್ಸಿಮೀಟರನ್ನು ರೆಡ್ ಕ್ರಾಸ್ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ಮಜಹರ್ ಉಲ್ಲಾ ಮತ್ತು ನಿರ್ದೇಶಕರಾದ ಗಿರೀಶ್ ರವರು ಉಪಸ್ಥಿತರಿದ್ದರು.
ನರೇಂದ್ರ ಎಸ್ ಗಂಗೊಳ್ಳಿಗೆ ಶಿಕ್ಷಕ ರತ್ನ ಗೌರವ
ಗಂಗೊಳ್ಳಿ ( ಜೂ, 13): ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ, ಯುವ ಸಾಹಿತಿ ಹಾಗೂ ಅಂಕಣಕಾರರೂ ಆಗಿರುವ ಶ್ರೀ ನರೇಂದ್ರ ಎಸ್ ಗಂಗೊಳ್ಳಿ ಅವರ ವಿವಿಧ ಕ್ಷೇತ್ರಗಳಲ್ಲಿನ ಬಹುಮುಖ ಪ್ರತಿಭೆಯನ್ನು ಪರಿಗಣಿಸಿ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಮಂಗಳೂರು ವಿಭಾಗದ ವತಿಯಿಂದ ಶಿಕ್ಷಕ ರತ್ನ ಗೌರವವನ್ನು ನೀಡಿ ಪುರಸ್ಕರಿಸಲಾಗಿದೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾರ್ಡಿ ಕೊಡ್ಲಾಡಿ : 2021-22 ನೇ ಶೈಕ್ಷಣಿಕ ಸಾಲಿನ ದಾಖಲಾತಿ ಆರಂಭ
ವಂಡ್ಸೆ (ಜೂ, 13): ಕೊಡ್ಲಾಡಿ -ಮಾರ್ಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2021-22ನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಜೂನ್, 15 ರಿಂದ ಆರಂಭವಾಗಲಿದೆ. ಜುಲೈ ,1 ರಿಂದ ಬೋಧನಾ ಹಾಗೂ ಕಲಿಕಾ ಪ್ರಕ್ರಿಯೆಗಳು ಆರಂಭವಾಗಲಿದ್ದು ಇದಕ್ಕೆ ಸಂಬಂಧಪಟ್ಟಂತೆ ಪೂರ್ವ ಸಿದ್ಧತೆಗಳನ್ನು ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಕೈಗೊಳ್ಳಲಾಗುತ್ತಿದೆ. Covid-19ನ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಬಹುತೇಕ ಸೆಪ್ಟಂಬರ್ ವರೆಗೆ ಆಫ್ಲೈನ್ (ವಿದ್ಯಾರ್ಥಿಗೆ ನೇರ ಬೋಧನೆ) ತರಗತಿಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿರುತ್ತದೆ. ಆದ್ದರಿಂದ […]
ಗಂಗೊಳ್ಳಿ: ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಭೇಟಿ – ಕರೋನಾ ನಿಯಂತ್ರಣ ಕ್ರಮಗಳ ಕುರಿತು ಪರಿಶೀಲನೆ
ಗಂಗೊಳ್ಳಿ (ಜೂ, 12): ಬೈಂದೂರು ಶಾಸಕ ಶ್ರೀ. ಬಿ.ಎಂ.ಸುಕುಮಾರ್ ಶೆಟ್ಟಿ ಗಂಗೊಳ್ಳಿ ಗ್ರಾಮಕ್ಕೆ ಗ ಭೇಟಿ ನೀಡಿ ಕೋವಿಡ್ ನಿಯಂತ್ರಣಕ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಕ್ರಮಗಳನ್ನು ಪರಿಶೀಲಿಸಿ ಮಾಹಿತಿಯನ್ನು ಪಡೆದುಕೊಂಡರು. ಕೋವಿಡ್ ನಿಯಂತ್ರಣಕ್ಕೆ 50 ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಇರುವ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶವನ್ನು ಜೂ.10 ರಿಂದ ಸಂಪೂರ್ಣ ಲಾಕ್ಡೌನ್ ಮಾಡಲಾಗಿದ್ದು, ಉತ್ತಮ ರೀತಿಯಲ್ಲಿ ಲಾಕ್ಡೌನ್ ವ್ಯವಸ್ಥೆ ಮಾಡಿರುವುದಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಕರೋನಾ […]
ಜೆಸಿಐ ಕುಂದಾಪುರ ಸಿಟಿ : 46 ನೇ ದಿನದ ಅನ್ನದಾಸೋಹ ಕಾರ್ಯಕ್ರಮ
ಕುಂದಾಪುರ (ಜೂ, 12): ಕೋವಿಡ್ 19 ಲಾಕ್ ಡೌನ್ ಸಂದರ್ಭದಲ್ಲಿ ಸತತ 46 ದಿನಗಳಿಂದ ಕುಂದಾಪುರ ಪರಿಸರದಲ್ಲಿನ ಸುಮಾರು 230 ಕ್ಕಿಂತಲೂ ಹೆಚ್ಚು ವೃದ್ದರಿಗೆ, ಕೂಲಿ ಕಾರ್ಮಿಕರಿಗೆ, ವಿವಿಧ ಕಚೇರಿಗಳಲ್ಲಿ ಕೆಲಸ ಮಾಡುವರಿಗೆ, ಆಸ್ಪತ್ರೆಯಲ್ಲಿನ ರೋಗಿಗಳಿಗೆ ಜೆಸಿಐ ಕುಂದಾಪುರ ಸಿಟಿ ವತಿಯಿಂದ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜೂನ್ 12 ರಂದು ನಡೆದ 46 ನೇ ದಿನದ ಅನ್ನದಾಸೋಹ ಕಾರ್ಯಕ್ರಮದಲ್ಲಿ ಜೆಸಿಐ ಕುಂದಾಪುರ ಸಿಟಿ ಯ ಅಧ್ಯಕ್ಷ ವಿಜಯ ಭಂಡಾರಿ, ಸ್ಥಾಪಕಾಧ್ಯಕ್ಷ […]
ಯುವಾ ಬ್ರಿಗೇಡ್ ಕುಂದಾಪುರ : ಖಾಸಗಿ ಶಾಲಾ ಶಿಕ್ಷಕರಿಗೆ ರೇಷನ್ ಕಿಟ್ ವಿತರಣೆ
ಕುಂದಾಪುರ (ಜೂ, 10): ರಾಜ್ಯದೆಲ್ಲೆಡೆ ಯುವಾಬ್ರಿಗೇಡ್ ವತಿಯಿಂದ “ಗುರು ಗೌರವ” ಎನ್ನುವ ಶೀರ್ಷಿಕೆಯಡಿಯಲ್ಲಿ ವೇತನವಿಲ್ಲದ, ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ರೇಷನ್ ಕಿಟ್ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಲ್ಲಿಯ ತನಕ ಸುಮಾರು 13000 ಕಿಟ್ ಗಳನ್ನ ವಿತರಿಸಲಾಗಿದೆ. ಹಾಗೆಯೇ ಯುವಾಬ್ರಿಗೇಡ್ ಕುಂದಾಪುರ ತಂಡದಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಕರೋನಾ ಕಾರಣದಿಂದ ಶಾಲೆಗಳು ನಡೆಯದೆ, ಅನೇಕ ಖಾಸಗಿ ಶಿಕ್ಷಕರು ಸಂಬಳ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಗುರುತಿಸಿ , ಸರಿ ಸುಮಾರು […]
ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರ : ದಾನಿಗಳ ಸಹಕಾರದಿಂದ ಆಶ್ರಮದ ಮಕ್ಕಳಿಗೆ ದಿನಬಳಕೆಯ ಸಾಮಾಗ್ರಿ ಹಾಗೂ ತಿಂಡಿ ತಿನಿಸುಗಳ ಹಸ್ತಾಂತರ
ಕುಂದಾಪುರ (ಜೂ, 10): ಬ್ರಹ್ಮಾವರದ ಅಪ್ಪ -ಅಮ್ಮ ಅನಾಥಾಶ್ರಮ ಹಾಗೂ ಮಣಿಪಾಲ ಹೊಸ ಬೆಳಕು ಆಶ್ರಮಕ್ಕೆ ಕೊಡುಗೈ ದಾನಿಗಳು ಹಾಗೂ ಸಮಾಜ ಸೇವಕರಾದ ಶ್ರೀಕಾಂತ್ ಶೆಣೈ ಕೋಟ ಹಾಗೂ ಕರಾವಳಿಯ ಪ್ರಸಿದ್ಧ ಮೊಬೈಲ್ ಮಳಿಗೆಯಾದ ಶ್ರೀ ಶಾಸ್ತ ಮೊಬೈಲ್ ಕೋಟ ಇದರ ಮಾಲಿಕರಾದ ಆದಿತ್ಯ ಕೋಟ ಇವರು ನೀಡಿದ ಸರಿಸುಮಾರು 18ಸಾವಿರ ದಿಂದ 20ಸಾವಿರ ಮೌಲ್ಯದ ದಿನಬಳಕೆಯ ಸಾಮಾಗ್ರಿ ಮತ್ತು ತಿಂಡಿ ತಿನಿಸುಗಳನ್ನು ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. […]
ದೈವದ ಚಾಕ್ರಿ ವರ್ಗಕ್ಕೆ ಕೋವಿಡ್ ಪರಿಹಾರ ಘೋಷಿಸಲು ಮಹೇಶ್ ಪೂಜಾರಿ ಹೂಡೆ ಆಗ್ರಹ
ಉಡುಪಿ (ಜೂ, 10): ಪರಶುರಾಮ ಸೃಷ್ಟಿಯ ತುಳುನಾಡಿನ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೈವಸ್ಥಾನಗಳು ಹಲವಾರು ಇದೆ. ಆಯಾಯ ಗ್ರಾಮಗಳ ದೈವ ಸ್ಥಾನದಲ್ಲಿ ದೈವ ಚಾಕ್ರಿ ಮಾಡುವ ವರ್ಗಗಳು ಹಲವು ವರ್ಷಗಳಿಂದ ದೈವಾರಾಧನೆಯಲ್ಲೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆಈ ಕರೋನಾ ಮಹಾಮಾರಿಯಿಂದಾದ ದೀರ್ಘಾವಧಿಯ ಲಾಕ್ಡೌನ್ನಿಂದಾಗಿ ಧಾರ್ಮಿಕ ಕ್ಷೇತ್ರಗಳ ಉತ್ಸವ, ಜಾತ್ರೆ, ವಾರ್ಷಿಕೋತ್ಸವಗಳನ್ನು ಕೋವಿಡ್ ಮುನ್ನೆಚ್ಚರಿಕೆಯ ಕಾರಣದಿಂದಾಗಿ ಸರ್ಕಾರ ರದ್ದು ಮಾಡಿದೆ. ಆದರೆ ಇದು ದೈವ ಚಾಕ್ರಿ ಸದಸ್ಯರ ಬದುಕಿನ ಮೇಲೆ ನೇರ […]
ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರ : ದಾನಿಗಳ ಸಹಕಾರದಿಂದ ಆಶ್ರಮದ ಮಕ್ಕಳಿಗೆ ಅಗತ್ಯ ವಸ್ತುಗಳ ಪೂರೈಕೆ
ಕುಂದಾಪುರ (ಜೂ, 8) : ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಕುಂದಾಪುರ ತಂಡದ ವತಿಯಿಂದ ಜೂನ್ 6 ರಂದು ಸಂತೆಕಟ್ಟೆಯ ಕೃಷ್ಣಾನುಗ್ರಹ ಆಶ್ರಮ ಹಾಗೂ ಉಪ್ಪೂರಿನ ಸ್ಪಂದನ ಆಶ್ರಮದ ಮಕ್ಕಳಿಗೆ ದಾನಿಗಳಾದ ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಕುಂದಾಪುರ ಇದರ ಗೌರವ ಸಲಹೆಗಾರ ದಿನೇಶ್ ಗಾಣಿಗ ಕೋಟ ಹಾಗೂ ಕೋಟೇಶ್ವರದ ಬ್ರಹ್ಮಶ್ರೀ ಡಿಸ್ಟ್ರಿಬ್ಯೂಟರ್ ನ ಮಾಲಿಕರಾದ ಸಂತೋಷ್ ಶೆಟ್ಟಿನೀಡಿದ ಸಹಾಯಹಸ್ತದಿಂದ ದಿನಬಳಕೆಯ ಸಾಮಾಗ್ರಿ ಹಾಗೂ ತಿಂಡಿ ತಿನಿಸುಗಳನ್ನು […]










