ಕುಂದಾಪುರ (ಜೂ, 7):ಕುಂದಾಪುರದ ಪುರಸಭೆಯ ಬಳಿ ವಯೋವೃದ್ಧನೊಬ್ಬ ಅನಾರೋಗ್ಯ ಪೀಡಿತನಾಗಿ, ಅಸಹಾಯಕ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸಮಾಜ ಸೇವಕ ಸುರೇಂದ್ರ ಕಾಂಚನ್ ಸಂಗಮ್, ಕುಂದಾಪುರ ಪುರಸಭೆಯ ಉಪಾಧ್ಯಕ್ಷ ಸಂದೀಪ ಖಾರ್ವಿ, ಪತ್ರಕರ್ತ ಕಿರಣ್ ಪೂಜಾರಿ ಮದ್ದುಗುಡ್ಡೆಯವರು 108 ಸಿಬ್ಬಂದಿಯ ಸಹಕಾರದಿಂದ ಸಮೀಪದ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ಸಹಕರಿಸಿದರು. ಇವರ ಮಾನವೀಯ ನೆಲೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ : ವಿಶ್ವ ಪರಿಸರ ದಿನಾಚರಣೆ
ಗೋಪಾಡಿ (ಜೂ, 07): ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿಯಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುರೇಂದ್ರ ಕಾಂಚನ್ ಸಂಗಮ್ ಹಾಗೂ ಅಂಗನವಾಡಿ ಶಿಕ್ಷಕಿ ಶ್ರೀಮತಿ ಜಯಂತಿ ರವರು ಸರಿ ಸುಮಾರು 15 ಕ್ಕೂ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಸರಳವಾಗಿ ಆಚರಿಸಿದರು.ಕೋವಿಡ್ ನಿಯಮದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಭವಿಷ್ಯದ ನಿರೀಕ್ಷೆಯಲ್ಲಿರುವ ಕಂದಮ್ಮಳಿಗೆ ಆಸರೆಯಾಗಿ ನಿಂತ ಸಾಮಾಜಿಕ ಕಳಕಳಿಯ ಸಮಾನ ಮನಸ್ಕರ ಸೇವಾ ತಂಡ
ಉಡುಪಿ (ಜೂ, 06) : ಕಾಡೂರು ಗ್ರಾಮದ ಮುಂಡಾಡಿ ಬಡಾಬೆಟ್ಟು ನಿವಾಸಿ ಚಂದ್ರಾವತಿ ಶೆಟ್ಟಿ ಯವರ ಮಗಳು 10 ವರ್ಷ ಪ್ರಾಯದ ಬಾಲಕಿ ಯುಕ್ತಿ ಶೆಟ್ಟಿ ಬ್ರೈನ್ ಟ್ಯೂಮರ್ ರೋಗದಿಂದ ಬಳಲುತ್ತಿದ್ದು, ಖಾಯಿಲೆಯ ಅರಿವೂ ಇಲ್ಲದ ಈ ಮಗುವಿನ ನೆರವಿಗಾಗಿ ಕೊಕ್ಕರ್ಣೆ – ಕಾಡೂರು ಸ್ಥಳೀಯ ಪರಿಸರದ ಸಂತೋಷ್ ಶೆಟ್ಟಿ ಮುಂಡಾಡಿ ಅವರ ನೇತೃತ್ವದಲ್ಲಿ ಹಾಗೂ ಅವರ ಆಪ್ತ ಸ್ನೇಹಿತ ವರ್ಗದವರಾದ ಅಶೋಕ್ ಕುಂದರ್ ಮಂದಾರ್ತಿ, ವಸಂತ್ ಕುಮಾರ್ ನುಕ್ಕೂರು, […]
ಐಐಐಟಿ ಧಾರವಾಡ : ಬಿ.ಟೆಕ್. ಹಾಗೂ ಬಿ.ಇ. ಮುಗಿಸಿದ ಮಹಿಳಾ ಪದವೀಧರರಿಗೆ ಸೈಬರ್ ಸೆಕ್ಯೂರಿಟಿ ಉಚಿತ ತರಬೇತಿ ಕಾರ್ಯಕ್ರಮ
ಉಡುಪಿ (ಜೂನ್, 06) : CySecK ಸೈಬರ್ ಸೆಕ್ಯೂರಿಟಿ ಕರ್ನಾಟಕ ಇದು ಸೈಬರ್ ಶಿಕ್ಷಣವನ್ನು ಕರ್ನಾಟಕದಲ್ಲಿ ಒಂದು ಜನಾಂದೋಲನ ಕಾರ್ಯಕ್ರಮವಾಗಿ ರೂಪಿಸುತ್ತಿದ್ದು, ಸೈಬರ್ ಶಿಕ್ಷಣದ ಜೊತೆಗೆ ತಂತ್ರಜ್ಞಾನದ ಗುಣಮಟ್ಟ ಕಾಪಾಡಿಕೊಳ್ಳುವಿಕೆ, ಅವಿಷ್ಕಾರ ತಂತ್ರ, ಸೃಜನಶೀಲತೆ, ತಂತ್ರಜ್ಞಾನದ ಸದ್ಬಳಕೆ, ಸೈಬರ್ ಸೆಕ್ಯೂರಿಟಿ ಕುರಿತಾದ ಅರಿವು ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಸೈಬರ್ ಶಿಕ್ಷಾ ,ಇದು ಮೈಕ್ರೋಸಾಫ್ಟ್ ಹಾಗೂ ಡಿ.ಎಸ್.ಐ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಡಿ ಐಐಐಟಿ ಧಾರವಾಡ ಹಾಗೂ CySek ಕರ್ನಾಟಕದ ಜಂಟಿ ಆಶ್ರಯದಲ್ಲಿ […]
ಕರಾವಳಿ – ಮೂಡಣದಿ ಹಿತವಾಗಿ ಆರಂಭಗೊಂಡ ಮುಂಗಾರು ಮಳೆ
ಕರಾವಳಿ ಹಾಗೂ ಮೂಡಣ( ಪಶ್ಚಿಮಘಟ್ಟ) ಭಾಗದಲ್ಲಿ ಮುಂಗಾರು ಮಳೆ ಆರಂಭಗೊಂಡು ಹಿತವಾಗಿ ಸುರಿದಿದೆ. ಹವಾಮಾನ ವರದಿಯ ದಿನದಂತೆ ಬಂದು ತನ್ನ ಆಗಮನವನ್ನು ತೋರಿಸಿ ಜನರಲ್ಲಿ ಖುಷಿಯನ್ನು ಮೂಡಿಸಿತು. ಭಾರತದಲ್ಲಿ ಮುಂಗಾರು ಮಳೆಗೆ ಹೆಚ್ಚಿನ ಮಹತ್ವ ಇದೆ. ಈ ಮಳೆ ಈ ವರುಷ ನಮ್ಮ ಜಿಲ್ಲೆಗೆ ಸಮಯಕ್ಕೆ ಸರಿಯಾಗಿ ಬಂದಿರುವುದು ವಿಶೇಷ. ಜೂನ್ 3 ರೊಳಗೆ ರಾಜ್ಯಕ್ಕೆ ಮುಂಗಾರು ಪ್ರವೇಶಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿತ್ತು. ಮಳೆಯ ಜೊತೆ ಅನ್ನದಾತ […]
ಗಂಗೊಳ್ಳಿಯಲ್ಲಿ ಕೋವಿಡ್ ಲಸಿಕೆ ಅಭಿಯಾನ
ಗಂಗೊಳ್ಳಿ (ಜೂ, 2): ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಹಾಗೂ ಸೇವಾ ಭಾರತಿಯ ಸಹಕಾರದಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಹಾಗೂ ಸರಸ್ವತಿ ವಿದ್ಯಾಲಯದಲ್ಲಿ (ಲಸಿಕೆಯ ಇರುವಿಕೆಯ ಮೇರೆಗೆ) ಲಸಿಕಾ ಅಭಿಯಾನ ನಡೆಯುತ್ತಿದೆ. ಸಾರ್ವಜನಿಕರು ಕೋವಿಡ್ ಲಸಿಕೆಯ ವಿಚಾರದಲ್ಲಿ ಸ್ವಯಂ ಸೇವಕರನ್ನು ಯಾವುದೇ ಸಮಯದಲ್ಲಿ ಸಂಪರ್ಕಿಸಬಹುದು ಹಾಗೂ ಲಸಿಕಾ ಕೇಂದ್ರಕ್ಕೆ ಬರುವ ಮುನ್ನ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸೇವಾಭಾರತಿ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ ಆಗಮಿಸಬೇಕೆಂದು […]
ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ|ಗಿರೀಶ್ ಕುಲಕರ್ಣಿಯವರಿಗೆ ಗೌರವಾರ್ಪಣೆ
ಗಂಗೊಳ್ಳಿ (ಜೂ, 2): ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿ ಸೇವಾ ನಿಮಿತ್ತ ಯಾದಗಿರಿಗೆ ವರ್ಗಾವಣೆಗೊಂಡಿರುವ ಡಾ|ಗಿರೀಶ್ ಕುಲಕರ್ಣಿ ಇವರಿಗೆ ಸೇವಾ ಭಾರತಿ ಗಂಗೊಳ್ಳಿ ಇದರ ಸ್ವಯಂಸೇವಕರು ಗೌರವ ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಲ್ಲಿಸಿದರು. ಕೋವಿಡ್ ಸಂದರ್ಭದಲ್ಲಿನ ಡಾ |ಗಿರೀಶ್ ಕುಲಕರ್ಣಿಯವರ ವೈದ್ಯಕೀಯ ಸೇವೆಗೆ ಸ್ವಯಂಸೇವಕರು ಹಾಗೂ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.
ಅಮ್ಮ
ಹಸಿದು ಬಂದರೆ ತುತ್ತು ಕೊಡುವವಳುಬಾಯಾರಿ ಬಂದರೆ ನೀರು ನೀಡುವವಳುಅತ್ತು ಬಂದರೆ ಮಮತೆಯ ಮಳೆ ಗೈಯುವವಳು.. ನಿರ್ಸಗದ ಕೊಡುಗೆ ಆವಳುಸಹನೆಯ ಮೂರ್ತಿ ಅವಳುತ್ಯಾಗದ ಹೃದಯ ಆವಳು ಮಮತೆಯ ಗಣಿ ಆವಳುಆಸರೆಯ ಬಳ್ಳಿ ಅವಳುಪ್ರೀತಿಯ ಹೆಮ್ಮರ ಅವಳು ಕನಸಿನ ಶುರು ಆವಳುವಿದ್ಯೆಯ ಮೂಲ ಆವಳುಪ್ರೇಮದ ಸೆಲೆ ಆವಳು ಆಕಾಶದಷ್ಟು ಎತ್ತರ ಅವಳುಭೂಮಿಯಷ್ಟೆ ವಿಶಾಲ ಅವಳುಪ್ರಕೃತಿಯಷ್ಟೆ ಶಾಂತ ಅವಳು ತರ್ಕಕ್ಕೂ ಎಟುಕದ ಮನಸ್ಸಿನವಳುಮನು ಕುಲದ ಉಸಿರು ಅವಳುಮಗುವಿನ ಮೆಲುನಿಡಿಗೆ ಸಿಂಚಿನ ಅವಳು ಈಶ್ವರ. ಸಿ. […]
ಎಕ್ಸಲೆಂಟ್ ಕುಂದಾಪುರ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಮೂಡಬಿದ್ರೆ ನೇತೃತ್ವ : ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಿಗೆ ಸುವರ್ಣಾವಕಾಶ – ಪ್ರೊ ಬಾಲಕೃಷ್ಣ ಶೆಟ್ಟಿ
ಕುಂದಾಪುರ (ಮೇ, 30) : ಜೀವನದಲ್ಲಿ ನಾನೊಬ್ಬ ಶ್ರೇಷ್ಠ ವೈದ್ಯ ನಾಗಬೇಕು, ಒಳ್ಳೆಯ ಐಐಟಿ ಕಾಲೇಜಿನಲ್ಲಿ ಇಂಜಿನಿಯರ್ ಆಗಬೇಕು ಇಲ್ಲ ಲೆಕ್ಕಪರಿಶೋಧಕನಾಗಬೇಕು,ಕಂಪನಿ ಸೆಕ್ರೆಟರಿ ಆಗಬೇಕು ಎನ್ನುವ ಕನಸನ್ನು ಕಾಣುತ್ತಿರುವ ಅದೆಷ್ಟು ವಿದ್ಯಾರ್ಥಿಗಳಿಗೆ ಡಾ. ರಮೇಶ್ ಶೆಟ್ಟಿ ನೇತೃತ್ವದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ತಂಡ ಕುಂದಾಪುರದ ಎಕ್ಸಲೆಂಟ್ ಕಾಲೇಜಿನ ಸಂಪೂರ್ಣ ಆಡಳಿತ ವಹಿಸಿಕೊಂಡಿರುವುದು ಸುವರ್ಣ ಅವಕಾಶವಾಗಲಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಕನಸು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಮೂಡುಬಿದಿರೆಯ ಮೂಲಕ […]
ಜೈ ಕುಂದಾಪ್ರ ಸೇವಾ ಟ್ರಸ್ಟ್ ವತಿಯಿಂದ ಸಮಾಜಸೇವಕ ಗೋವಿಂದ ಬಾಬು ಪೂಜಾರಿಯವರಿಗೆ ಸನ್ಮಾನ
ಬೈಂದೂರು (ಮೇ, 29): ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಪ್ರವರ್ತಕರು, ಕೊಡುಗೈ ದಾನಿ ಹಾಗೂ ಸಮಾಜಸೇವಕರು ಆಗಿರುವ ಗೋವಿಂದ ಬಾಬು ಪೂಜಾರಿಯವರನ್ನು ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ) ಕುಂದಾಪುರದ ವತಿಯಿಂದ ಸನ್ಮಾನಿಸಲಾಯಿತು. ಯಾವುದೇ ಜಾತಿ-ಮತ, ಧರ್ಮ ತಾರತಮ್ಯವಿಲ್ಲದೆ ಸಮಾಜದಲ್ಲಿರುವ ಅಶಕ್ತರನ್ನು ಗುರುತಿಸಿ ನಿರಂತರ ಸಮಾಜಸೇವೆ ಗೈಯುತ್ತಿರುವ ಗೋವಿಂದ ಬಾಬು ಪೂಜಾರಿ ಯವರು ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ) ಇದರ ಗೌರವ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಟ್ರಸ್ಟ್ ವತಿಯಿಂದ […]










