ಬೈಂದೂರು (ಮೇ, 6): ಬೈಂದೂರು ಸರ್ಕಾರಿ ಆಸ್ಪತ್ರೆಗೆ ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಭೇಟಿ ನೀಡಿ ಆಸ್ಪತ್ರೆಗೆ ಮಂಜೂರರಾಗಿರುವ ಹೊಸ ಆಮ್ಲಜನಕ ಉತ್ಪಾದನಾ ಘಟಕದ ಸ್ಥಳಪರಿಶೀಲನೆ ನಡೆಸಿದರು. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಈ ಘಟಕ ನಿರ್ಮಾಣವಾಗುತ್ತಿದ್ದು, ಪ್ರತಿನಿತ್ಯ 80 ಸಿಲಿಂಡರ್ ನಷ್ಟು ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ ಎಂದು ಅವರು ಹೇಳಿದರು. ಹಾಗೆಯೇ ಶಾಸಕರು ಕೋವಿಡ್ ನಿರ್ವಹಣೆ ಬಗ್ಗೆ ವೈದ್ಯಾಧಿಕಾರಿ ಗಳು ಹಾಗೂ […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಮರವಂತೆ ಯುವಕರಿಂದ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಪೂರೈಕೆ
ಮರವಂತೆ (ಮೇ, 3): ಕೋವಿಡ್-19 ಎರಡನೇ ಅಲೆಯ ಲಾಕ್ಡೌನ್ ನಿಂದಾಗಿ ಲಾರಿ ಮತ್ತಿತರ ವಾಹನ ಚಾಲಕರಿಗೆ ಆಹಾರದ ಅವಶ್ಯಕತೆಯನ್ನು ಗಮನಿಸಿದ ಮರವಂತೆಯ ಯುವಕರಾದ ಗೀತೇಶ್ ದೇವಾಡಿಗ ಮರವಂತೆ,ರಂಜಿತ್ ಪೂಜಾರಿ ನೇರಳಕಟ್ಟೆ, ಗಣೇಶ ದೇವಾಡಿಗ ನಾವುಂದ, ರಾಘವೇಂದ್ರ ದೇವಾಡಿಗ ಹಾಗೂ ಕೀರ್ತನ್ ಶೆಟ್ಟಿ ಯವರು ರಾಷ್ಟ್ರೀಯ ಹೆದ್ದಾರಿ 66 ರ ಮರವಂತೆಯ ಬಳಿ ಲಾರಿ ಮತ್ತು ಇತರೆ ವಾಹನ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಊಟದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಬಾಟಲ್ […]
ಕೊಲ್ಲೂರು : ಅಪಾಯಕಾರಿ ಒಳಚರಂಡಿ ಮುಚ್ಚಳ ದುರಸ್ತಿಗೆ ಮನವಿ
ವಂಡ್ಸೆ (ಮೇ, 04): ಕೊಲ್ಲೂರಿನ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ಅಪಾಯಕಾರಿ ಒಳಚರಂಡಿಯ ಮುಚ್ಚಳ ತೆರೆದ ಸ್ಥಿತಿಯಲ್ಲಿದ್ದು ,ಅದರಲ್ಲಿ ಚೂಪಾದ ಕಬ್ಬಿಣದ ಸರಳುಗಳು ಎದ್ದು ನಿಂತು ಹಲವು ದಿನಗಳಾಗಿವೆ.ಕೊಲ್ಲೂರು ಶಿವಮೊಗ್ಗ ರಸ್ತೆಯ ಪರಬ್ರಹ್ಮ ಗೆಸ್ಟ್ ಹೌಸಿನ ಮುಂಭಾಗದ ತಿರುವಿನಲ್ಲಿ ಈ ಅಪಾಯಕಾರಿ ಒಳಚರಂಡಿ ಇದ್ದು ಜನತೆಗೆ ಸುಗಮ ಸಂಚಾರಕ್ಕೆ ಸವಾಲಾಗಿದೆ. ಯಾವುದೇ ಜೀವ ಹಾನಿ ಆಗುವ ಮೊದಲು ಸಂಬಂಧಪಟ್ಟ ಇಲಾಖೆ ಕೂಡಲೇ ಇದನ್ನು ಗಮನಿಸಿ ಸರಿಪಡಿಸಬೇಕಾಗಿ ಗ್ರಾಮಸ್ಥರ ಪರವಾಗಿ ಪರಿಸರ ಅಭಿವೃದ್ಧಿ […]
ಸೆಲೆಬ್ರೆಟಿಯಾದ ಭಜನಾ ರಂಗದ ಪ್ರತಿಭೆ….
ಕೆಲವು ದಿನಗಳಿಂದ ಕರಾವಳಿಯ ಉದ್ದಗಲಕ್ಕೂ ಸೋಷಿಯಲ್ ಮಿಡಿಯಗಳಲ್ಲಿ ಯುವಕನ ಹಾಡೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ… ಸುದ್ದಿ ವಾಹಿನಿಗಳು ಕೂಡ ಸುದ್ದಿಯಲ್ಲಿ ಹಂಚಿ ಕೊಂಡವು..ಅಷ್ಟೊಂದು ವೈರಲ್ ಆಯ್ತು ಆ ಒಂದು ಹಾಡಿನ ವಿಡಿಯೋ…ಯಾವ ಹಾಡು ಇರಬಹುದು?ಸಿನಿಮಾ ಹಾಡು ಇರಬಹುದು ಅನ್ಕೊಂಡ್ರ !ಹಾಗಂದು ಕೊಂಡ್ರೆ ನಿಮ್ಮ ಊಹೆ ತಪ್ಪು. ಅದೊಂದು ರಾಮನ ಭಜನೆ. ರಾಮ ಮಂತ್ರವ ಜಪಿಸಿ … ಪಾಪವ ಕಳೆಯೋಣ ಎನ್ನುವ ರಾಮ ನಾಮ ಸ್ಮರಣೆಯ ಆ ಹಾಡನ್ನು ಒಟ್ಟಾರೆ 10 […]
ಏಪ್ರಿಲ್ 30 ರಂದು ತ್ರಾಸಿಯಲ್ಲಿ ರಕ್ತದಾನ ಶಿಬಿರ
ತ್ರಾಸಿ (ಏ, 29): ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ರಕ್ತದ ತೀವ್ರ ಅಭಾವವಿರುವುದರಿಂದಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ರಕ್ತನಿಧಿ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರ, ಉಡುಪಿ ಇವರಸಹಯೋಗದೊಂದಿಗೆ ಏಪ್ರಿಲ್ 30ರ ಶುಕ್ರವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತ್ರಾಸಿಯ ಸಾಕೇತ ವೈದ್ಯಕೀಯ ಪ್ರಯೋಗಾಲಯ ಹಾಗೂ ತಪಾಸಣಾ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ.
ನಾಪತ್ತೆಯಾಗಿದ್ದ ಯಕ್ಷಗಾನ ಕಲಾವಿದ ಬೆಂಗಳೂರಿನಲ್ಲಿ ಪತ್ತೆ
ಉಡುಪಿ (ಏ, 29): ಏ. 21ರಂದು ನಾಪತ್ತೆಯಾಗಿದ್ದ ಬಡಗುತಿಟ್ಟಿನ ಹೆಸರಾಂತ ಪೆರ್ಡೂರು ಮೇಳದ ಕಲಾವಿದ ಉದಯ ಹೆಗಡೆ ಕಡಬಾಳ ಇದೀಗ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಉದಯ ಹೆಗಡೆ ಅವರು ಯಕ್ಷಗಾನ ಕಲಾವಿದೆ ಹಾಗೂ ಯಕ್ಷ ಶಿಕ್ಷಕಿಯಾಗಿರುವ ಅಶ್ವಿನಿ ಹೆಗಡೆ ಯವರ ಪತಿ. ಏಪ್ರಿಲ್ 21 ರಂದು ಸಂಜೆ ನಾಪತ್ತೆಯಾದ ಹಿನ್ನಲೆಯಲ್ಲಿ ಪತ್ನಿ ಅಶ್ವಿನಿ ಕೋಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಈ ಕುರಿತು […]
ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಹಸ್ತಚಾಚಲು ಮುಂದಾದ ಜೆಸಿಐ ಕುಂದಾಪುರ ಸಿಟಿ ತಂಡ
ಕುಂದಾಪುರ (ಏ, 28): ಕಳೆದ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಜೆ.ಸಿ.ಐ. ಸಿಟಿ ಕುಂದಾಪುರದ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಮತ್ತು ಅವರ ಜೆಸಿಐ ಕುಂದಾಪುರ ಸಿಟಿ ತಂಡ ದಾನಿಗಳ ನೆರವಿನಿಂದ ಅಶಕ್ತರಿಗೆ ಸಹಾಯ ಹಸ್ತ ನೀಡಿದ್ದರು. 40 ದಿನಗಳ ಕಾಲ ಸರಿಸುಮಾರು 9,500 ಮಂದಿಗೆ ಊಟ ಕೊಟ್ಟು ಈ ತಂಡ ಮಾನವೀಯತೆ ಮೆರೆದಿದ್ದರು. ಹಾಗೆಯೇ ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿ ವ್ಯಾಪಕವಾಗಿ ಹರಡುತ್ತಿರುವ […]
ಬಿಜೆಪಿ ಯುವಮೋರ್ಚಾ ಕುಂದಾಪುರ : ಯಶಸ್ವಿ ರಕ್ತದಾನ ಶಿಬಿರ
ಕುಂದಾಪುರ (ಏ, 27) : ದೇಶಾದ್ಯಂತ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುತ್ತಿರುವುದರಿಂದ ಮುಂದಿನ 60 ದಿನಗಳ ವೆರೆಗೆ ರಕ್ತದಾನ ಮಾಡಲು ಸಾಧ್ಯವಾಗದಿರುವುದರಿಂದ, ಆ ಸಮಯದಲ್ಲಿ ರಕ್ತದ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಬಿಜೆಪಿ ಯುವಮೋರ್ಚಾ ಕುಂದಾಪುರ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ- ರಕ್ತ ನಿಧಿ ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ ಏಪ್ರಿಲ್ 27 ರಂದು ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ […]
ಏಪ್ರಿಲ್ 27 ರಂದು ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕುಂದಾಪುರ (ಏ, 26): ದೇಶದಾದ್ಯಂತ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುತ್ತಿರುವ ಹಿನ್ನಲೆಯಲ್ಲಿ ಮುಂದಿನ 60 ದಿನಗಳ ವರೆಗೆ ರಕ್ತದಾನ ಮಾಡಲು ಸಾಧ್ಯವಾಗದಿರುವುದರಿಂದ ಹಾಗೂ ಆ ಸಂಧರ್ಬದಲ್ಲಿ ರಕ್ತದ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ- ರಕ್ತ ನಿಧಿ ಕೇಂದ್ರ ಕುಂದಾಪುರ, ಇವರ ಸಹಯೋಗದೊಂದಿಗೆ ಎಪ್ರಿಲ್ 27 ರ ಮಂಗಳವಾರ ಸಮಯ ಬೆಳಿಗ್ಗೆ […]
ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಎಂ ಐ ಟಿ ಮೂಡ್ಲಕಟ್ಟೆಯ ಶಶಾಂಕ್ ರಾಜ್ಯಮಟ್ಟದಲ್ಲಿ 9ನೇ ಸ್ಥಾನ
ಕುಂದಾಪುರ (ಏ, 23) : ಸೈಬರ್ ಸೆಕ್ಯೂರಿಟಿ ಉತ್ಕೃಷ್ಟತೆಯ ಕೇಂದ್ರ, ಕರ್ನಾಟಕ ಮತ್ತು ರಾಷ್ಟ್ರೀಯ ಸಾಫ್ಟ್ವೇರ್ & ಸರ್ವಿಸ್ ಕಂಪನಿಗಳ ಅಸೋಸಿಯೇಷನ್ ವತಿಯಿಂದ ನಡೆಸಲ್ಪಟ್ಟ ‘ಮಾರ್ಚ್ ಫಾರ್ ಸೆಕ್ಯೂರ್ ಕೋಡ್’ ಎಂಬ ಅತೀ ಬೇಗ ಕೋರ್ಸ್ ಮುಗಿಸುವ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಶಶಾಂಕ್ ರಾಜ್ಯಮಟ್ಟದಲ್ಲಿ 9ನೇ ಸ್ಥಾನ ಪಡೆದು ಅಗ್ರ ಹತ್ತು ವಿಜೇತರಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ […]










