ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಎಂ.ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಮತ್ತು ಓರಿಯಂಟೇಶನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಪ್ರತಿಷ್ಟಿತ ಕಂಪೆನಿಯಾದ ಸಿನೋಪಿಕ್ ಸಿಸ್ಟಮ್ಸ್ ನ ಮಾನವ ಸಂಪನ್ಮೂಲ ಅಧಿಕಾರಿ ಸೌಜನ್ಯ ಕೆ ಆಗಮಿಸಿದ್ದರು.
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಬೈಂದೂರಿನ ಯುವಕ ವಿಶ್ವನಾಥ್ ಹೊಸ ದಾಖಲೆ
ರಾವಳಿಯ ಜಾನಪದ ಕ್ರೀಡೆಗಳಲ್ಲೊಂದಾದ ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಬೈಂದೂರಿನ ವಿಶ್ವನಾಥ್ ಹೊಸ ದಾಖಲೆ ನಿರ್ಮಿಸಿದ್ದಾರೆ.
ಗೆಳೆಯರ ಬಳಗ ಬೀಜಾಡಿ- ಅವೀಘ್ನ ಸ್ರಷ್ಟಿ ಟ್ರೋಫಿ -2021- ಕ್ರಿಕೆಟ್ ಪಂದ್ಯಾಕೂಟ
ಗೆಳೆಯರ ಬಳಗ ಬೀಜಾಡಿ ಇವರ ಆಶ್ರಯದಲ್ಲಿ ದ್ವಿತೀಯ ಬಾರಿಗೆ ಬೀಜಾಡಿ ಯಲ್ಲಿ ನಡೆದ 40 ಗಜಗಳ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ- ಅವೀಘ್ನ ಸ್ರಷ್ಠಿ ಟ್ರೋಫಿ- 2021, ಕುಂದಾಪುರದ 4 ಬಲಿಷ್ಠ ತಂಡಗಳ ನಡುವೆ ನಡೆದ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 6ರ ಶನಿವಾರ ಉದ್ಘಾಟನೆಗೊಂಡಿತು.
ಮಿಲಾಗ್ರಿಸ್ ಕಾಲೇಜು : ಪ್ರಶಸ್ತಿ ಪ್ರದಾನ ಹಾಗೂ ರಕ್ತದಾನ ಶಿಬಿರ
ಸ್ವಾಮಿ ವಿವೇಕಾನಂದ ಜಯಂತಿ- ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ರಕ್ತ ದಾನದ ಮಹತ್ವ ಹಾಗೂ ಸಾಮಾಜಿಕ ಜಾಗ್ರತಿ ಮೂಡಿಸುವ ಅಂತರ್ ಕಾಲೇಜು ಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ರಕ್ತ ದಾನ ಶಿಬಿರವನ್ನು ಫೆಬ್ರವರಿ 4 ರಂದು ಮಿಲಾಗ್ರಿಸ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಗೋಪಾಡಿ ಕಡಲ ತೀರ- ಕಡಲಾಮೆ ಮೊಟ್ಟೆ ರಕ್ಷಣೆ
ಕುಂದಾಪುರ: ಕುಂದಾಪುರ ತಾಲೂಕು ಗೋಪಾಡಿ ಗ್ರಾಮದ ಮಲಸಾವರಿ ಪಂಜುರ್ಲಿ ದೈವಸ್ಥಾನದ ಚೆರ್ಕಿ ಕಡು ಸಮುದ್ರತೀರದಲ್ಲಿ ಫೆಬ್ರುವರಿ 03 ರ ಬುಧವಾರ ರಾತ್ರಿ ಸಮಯದಲ್ಲಿ ಕಡಲಾಮೆ ಮೊಟ್ಟೆ ಪತ್ತೆಯಾಗಿದ್ದು, ಕರಾವಳಿ ಫ್ರೆಂಡ್ಸ್ ನ ಸಂತೋಷ್ ಪೂಜಾರಿ ಹಾಗೂ ಲೋಕೇಶ್ ಪೂಜಾರಿಯವರು ಕಡಲಾಮೆ ಮೊಟ್ಟೆಯನ್ನು ಪತ್ತೆಹಚ್ಚಿದ್ದು, ಇದೀಗ ಸರಿ ಸುಮಾರು 130 ಮೊಟ್ಟೆಗಳನ್ನು ಸಂರಕ್ಷಿಸಲಾಗಿದೆ. ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಹಾಗೂ ಎಫ್.ಎಸ್.ಎಲ್. ಇಂಡಿಯಾದ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಿ.ಸಿ.ಎಫ್ ಆಶಿಶ್ ರೆಡ್ಡಿ, […]
ಹೆಸ್ಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಮಾಣಿಕತಾ ಮಳಿಗೆ (HONESTY SHOP) ವಿನೂತನ ಪ್ರಯೋಗ
ವಿದ್ಯಾರ್ಥಿಗಳನ್ನು ಸದಾ ಕ್ರಿಯಾಶೀಲರನ್ನಾಗಿ ರೂಪಿಸಲು ಶ್ರಮಿಸುತ್ತಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಹೆಸ್ಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜೆ.ಸಿ.ಐ ಕುಂದಾಪುರ ಜೊತೆಗೂಡಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಪ್ರಾಮಾಣಿಕತಾ ಮಳಿಗೆ”.(HONESTY SHOP) ಪ್ರಾರಂಭಿಸಿದೆ.
ಫೆಬ್ರವರಿ 12 ರಿಂದ 14 ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವ
ಕುಂದಾಪುರ ತಾಲೂಕಿನ ಪ್ರಸಿದ್ಧ ಕ್ಷೇತ್ರ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಇದೇ ಫೆಬ್ರವರಿ 12 ರಿಂದ 14 ರ ವರೆಗೆ ನಡೆಯಲಿದೆ.
ಗಂಗೊಳ್ಳಿ ಮಾರಿಜಾತ್ರೆ : ಚಾಯ್ ಪೇ ಜಾತ್ರಾ ಕಾರ್ಯಕ್ರಮ
ಗಂಗೊಳ್ಳಿ: ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ಪ್ರಸಿದ್ದ ಮಹಾಂಕಾಳಿ ಅಮ್ಮನವರ ದೇವಸ್ಥಾನದ ವಾರ್ಷಿಕ ಮಾರಿಜಾತ್ರೆಯ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಗಂಗೊಳ್ಳಿ ವತಿಯಿಂದ “ಚಾಯ್ ಪೇ ಜಾತ್ರಾ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಾರಿಜಾತ್ರೆಗೆ ಆಗಮಿಸಿದ ಸಾವಿರಾರು ಭಕ್ತಾಧಿಗಳಿಗೆ ಉಚಿತ ಚಹಾ ಹಾಗೂ ಲಘುಉಪಹಾರ ವ್ಯವಸ್ಥೆ ಮಾಡಲಾಗಿತ್ತು.ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಭಕ್ತಾಧಿಗಳಿಗೆ ಚಹಾ ನೀಡುವ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಬಿಜೆಪಿ ಮೀನುಗಾರರ ಪ್ರಕೋಷ್ಠ ರಾಜ್ಯ ಸಂಚಾಲಕರಾದ ಶ್ರೀ ಯಶ್ […]
ಉಡುಪಿ ಜಿಲ್ಲೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಫಿಲೋಮಿನಾ ಆಯ್ಕೆ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜ್ಯ ಪ್ರಶಸ್ತಿ ಪುರಸ್ಕ್ರತ ಶ್ರೀಮತಿ ಫಿಲೋಮಿನಾ ರವರು ಉಡುಪಿ ಜಿಲ್ಲೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ 2014 – 15 ನೇ ಸಾಲಿನಲ್ಲಿ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಎಂದು ಗುರುತಿಸಿದ ಕರ್ನಾಟಕ ಸರ್ಕಾರ ಇವರಿಗೆ ರಾಜ್ಯ ಪ್ರಶಸ್ತಿಯನ್ನು ನೀಡಿರುತ್ತದೆ. ಅಂಗನವಾಡಿ ಕಾರ್ಯಕರ್ತೆಯಾಗಿ 26 ವರ್ಷಗಳಿಂದ […]
ಫೆಬ್ರವರಿ 2 ರಿಂದ 5 ಗಂಗೊಳ್ಳಿ ಮಾರಿಜಾತ್ರೆ
ಕನ್ನಡ ಕರಾವಳಿಯ ಕುಂದಾಪುರ ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ಖಾರ್ವಿಕೇರಿ ಗಂಗೊಳ್ಳಿ ಇದರ ವಾರ್ಷಿಕ ಮಾರಿಜಾತ್ರೆ ಇದೇ ಫೆಬ್ರವರಿ 2 ರಿಂದ 5 ನೇ ತಾರಿಕಿನ ತನಕ ನಡೆಯಲಿದ್ದು ಜಾತ್ರೆಯ ಪ್ರಯುಕ್ತ ವಿಶೇಷ ವಾರ್ಷಿಕ ರಂಗಪೂಜೆ, ಗೆಂಡಸೇವೆ ಧಕ್ಕೆಬಲಿ, ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿರುತ್ತದೆ










