ಶ್ರೀ ಚಿಕ್ಕು ಅಮ್ಮ ಹಾಗೂ ಪರಿವಾರ ದೈವಸ್ಥಾನ ಬೀಜಾಡಿ – ಗೋಪಾಡಿ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಜನವರಿ 28ರಿಂದ 30ರ ತನಕ ನಡೆಯಲಿದೆ.
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ರೋಟರಿ ಕ್ಲಬ್ ಗಂಗೊಳ್ಳಿ : ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ
ಭಾರತದ ನೈಜ ಇತಿಹಾಸವನ್ನು ಅರಿತುಕೊಳ್ಳುವಲ್ಲಿ ನಾವು ಸ್ವಯಂಸ್ಪೂರ್ತಿಯಿಂದ ಕಾರ್ಯಪ್ರವೃತ್ತರಾಗಬೇಕಿದೆ ಆ ಮೂಲಕ ಭಾರತೀಯ ಸಂಸ್ಕೃತಿಯ ಅಪೂರ್ವ ಮೌಲ್ಯಗಳನ್ನು ಕಾಪಿಟ್ಟು ಈ ಜಗತ್ತಿಗೆ ಸಾರಿ ಹೇಳುವ ಕೆಲಸವಾಗಬೇಕಿದೆ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಾಣಿಜ್ಯಶಾಸ್ತ್ರ ಉಪನ್ಯಾಸಕ, ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗಂಗೊಳ್ಳಿಯ ರೋಟರಿ ಕ್ಲಬ್ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಏಳಿ ಎದ್ದೇಳಿ ಎಚ್ಚರಗೊಳ್ಳಿ ಎನ್ನುವ ವಿವೇಕಾನಂದರ […]
ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ ಕುಂದಾಪುರ : ಜನವರಿ 27 ಮತ್ತು 28 ರಂದು ವಾರ್ಷಿಕ ಗೆಂಡ ಮಹೋತ್ಸವ ಮತ್ತು ಪ್ರತಿಷ್ಟಾ ವರ್ಧಂತೋತ್ಸವ
ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ ಶ್ರೀ ಕ್ಷೇತ್ರ ಕಳಿನಕಟ್ಟೆ ಚಿಕ್ಕಮ್ಮನ ಸಾಲು ರಸ್ತೆ ಕುಂದಾಪುರದ ಶ್ರೀ ಚಿಕ್ಕಮ್ಮ ದೇವಿ ಹಾಗೂ ಪರಿವಾರ ದೈವಗಳ ವಾರ್ಷಿಕ ಗೆಂಡ ಮಹೋತ್ಸವ, ಚಂಡಿಕಾ ಹೋಮ ಮತ್ತು ಧಾರ್ಮಿಕ ಹಾಗೂ ಪ್ರತಿಷ್ಟಾ ವರ್ಧಂತೋತ್ಸವ ಇದೇ ಜನವರಿ 27 ಮತ್ತು 28 ರಂದು ನಡೆಯಲಿದೆ. ವೇದ ಮೂರ್ತಿ ಕೇಂಜಿ ಶ್ರೀಧರ ತಂತ್ರಿಗಳು ಮತ್ತು ದೇವಾಲಯ ಅರ್ಚಕರಾದ ಕ್ರಷ್ಣಮೂರ್ತಿ ಅಡಿಗರ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ […]
ಗೋಪಾಡಿ: ಶ್ರೀ ಮಲಸಾವರಿ ಪಂಜುರ್ಲಿ ಪರಿವಾರ ದೈವಸ್ಥಾನ ವಾರ್ಷಿಕ ವರ್ಧಂತ್ಯುತ್ಸವ
ಕುಂದಾಪುರ ತಾಲೂಕು ಗೋಪಾಡಿ (ಪಡು) ಗ್ರಾಮದ ಶ್ರೀ ಮಲಸಾವರಿ ಪಂಜುರ್ಲಿ ಹಾಗೂ ಪರಿವಾರ ದೈವಸ್ಥಾನದ 7ನೇ ವರ್ಷದ ವರ್ಧಂತ್ಯುತ್ಸವ ಜನವರಿ 25 ಹಾಗೂ 26 ರಂದು ನಡೆಯಲಿದೆ.
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಷನ್ ( ಸ್ಪೇಸ್ ) ಇದರ ವಿದ್ಯಾರ್ಥಿಗಳು ಕಂಪನಿ ಸೆಕ್ರೆಟರಿ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ಷಷ್ಠಿ ಉತ್ಸವ
ಉಡುಪಿ ಜಿಲ್ಲೆಯ ಪ್ರಮುಖ ನಾಗಾರಾಧನೆಯ ಕ್ಷೇತ್ರವಾದ ಕುಂದಾಪುರದ ಸೇನಾಪುರ ಗ್ರಾಮದಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಜನವರಿ 19 ಹಾಗೂ 20 ರಂದು ಷಷ್ಠಿ ಉತ್ಸವ ನಡೆಯಿತು.
ಮೊಗವೀರ ಯುವ ಸಂಘಟನೆಗೆ ಶ್ರೀ ಕ್ರಷ್ಣಾನುಗ್ರಹ ಪ್ರಶಸ್ತಿ
ಉಡುಪಿ ಪರ್ಯಾಯ 2020-21 ಅದಮಾರು ಮಠದ ಶ್ರೀ ಶ್ರೀ ಈಶಪ್ರೀಯತೀರ್ಥ ಶ್ರೀಪಾದರು ಕೊಡಮಾಡಿದ ಶ್ರೀ ಕ್ರಷ್ಣಾನುಗ್ರಹ ಪ್ರಶಸ್ತಿಯನ್ನು ಜನವರಿ 17, 2021 ರಂದು ಉಡುಪಿ ಶ್ರೀ ಕ್ರಷ್ಣ ಮಠದ ರಾಜಾಂಗಣದಲ್ಲಿ ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ಎಮ್ ಶಿವರಾಮ್ ಕೋಟ ರವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆಯ ಗೌರವ ಸಲಹೆಗಾರರಾದ ವಿಠ್ಠಲ ಕರ್ಕೇರಾ ಮತ್ತು ಕೋಟೇಶ್ವರ ಘಟಕಾಧ್ಯಕ್ಷ ರವೀಶ್ ಎಸ್. ಕೊರವಡಿ ಉಪಸ್ಥಿತರಿದ್ದರು. ಇಡೀ ಜಗತ್ತೇ ಕೊರೋನಾ […]
ಕಲಾವಿದ ಚೇತನ್ ಕುಮಾರ್ ಪ್ರತಿಭೆಯನ್ನು ಶ್ಲಾಘಿಸಿದ ಬೈಂದೂರಿನ ಶಾಸಕ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿ .
ಕಮಲಶಿಲೆ: ಕಲಾವಿದ ಚೇತನ್ ಕುಮಾರ್ ಪ್ರತಿಭೆಯನ್ನು ಶ್ಲಾಘಿಸಿದ ಬೈಂದೂರಿನ ಶಾಸಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ . ಕಮಲಶಿಲೆ ಹಳ್ಳಿಹೊಳೆ ಮಾರ್ಗದ ಪಕ್ಕದಲ್ಲಿ ಇರುವ ಕಲ್ಲು ಬಂಡೆಗೆ ತನ್ನ ಕಲೆಯ ಕೈಚಳಕ ತೊರಿಸಿ ಸ್ರಜನಶೀಲತೆ ಪ್ರದರ್ಶಿಸಿದ ಯುವ ಕಲಾವಿದ ಚೇತನ್ ಕುಮಾರ್ ಪ್ರತಿಭೆ ಶ್ಲಾಘನೀಯ ಎಂದು ಶಾಸಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು. ಯುವಕ ರಚಿಸಿದ ಕಲಾಕ್ರತಿಯ ಜಾಗಕ್ಕೆ ಭೇಟಿ ನೀಡಿ ವೀಕ್ಷಿಸಿದ ಶಾಸಕರು ಯುವಕನ ಕಲಾ ಭವಿಷ್ಯಕ್ಕೆ […]
ನಾಳೆ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮ -ಉದ್ಘಾಟನಾ ಸಮಾರಂಭ
ಗುಜ್ಜಾಡಿ ಪರಿಸರದಲ್ಲಿ ಶಿಕ್ಷಣದ ಕಂಪನ್ನು ಪಸರಿಸಿ, ಅಕ್ಷರದ ಅಕ್ಕರೆಯನ್ನು ತೋರಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ವರ್ಷ 2019- 20 ರ ಸವಿನೆನಪಿನ ಶತಮಾನೋತ್ಸವ ಭವನ, ರಂಗಮಂದಿರ ಹಾಗೂ ಸ್ಮಾರ್ಟ್ ತರಗತಿಯ ಉದ್ಘಾಟನಾ ಸಮಾರಂಭ ಜನವರಿ 17, 2021 ರಂದು ನಡೆಯಲಿದೆ. ಶತಮಾನೋತ್ಸವ ಭವನದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರಿನ ಶಾಸಕರಾದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿಯವರು ವಹಿಸಲಿದ್ದಾರೆ. ಹಾಗೆಯೇ ಉದ್ಯಮಿಗಳಾದ ಶ್ರೀ ಎನ್.ಟಿ ಪೂಜಾರಿ ಶಾಲೆಯ […]
ಹರಿಹರ ದೇವಸ್ಥಾನ – ಮನ್ಮಹಾರಥೋತ್ಸವ
ಕುಂಭಾಶಿ: ಜನವರಿ 16 ರಂದು ಮನ್ಮಹಾರಥೋತ್ಸವ – ಪುರಾಣ ಪ್ರಸಿದ್ಧ ಕುಂಭಾಶಿಯ ಶ್ರೀ ಮಹಾಲಿಂಗೇಶ್ವರ (ಹರಿಹರ) ದೇವಸ್ಥಾನದ ಮನ್ಮಹಾರಥೋತ್ಸವವು ಇದೇ ಜನವರಿ 16 ರ ಬೆಳಿಗ್ಗೆ 11:30 ಕ್ಕೆ ನಡೆಯಲಿದ್ದು ತದನಂತರ ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ಸಂಜೆ 5 ಗಂಟೆಗೆ ಧಾರ್ಮಿಕ ಪ್ರವಚನದ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ .










