ಕೆರಾಡಿ(ನ,15): ಕೆರಾಡಿಯ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನಲ್ಲಿ ನ,10 ರಂದು ಕಾನೂನು ಅರಿವು ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾಲೇಜಿನ ಸಂಸ್ಥಾಪಕ ಹಾಗೂ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಇದರ ಧರ್ಮದರ್ಶಿಗಳಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಅಂಪಾರು ಇದರ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕೊಲ್ಲೂರು ಠಾಣಾಧಿಕಾರಿ ಶ್ರೀ ನಾಸಿರ್ ಹುಸೇನ್ ಮಾದಕ ವಸ್ತುಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಕುಂದಾಪುರ :ಶಾಸನ ಅಧ್ಯಯನ ತರಬೇತಿ ಕಾರ್ಯಗಾರ
ಕುಂದಾಪುರ (ನ,5): ಡಾ.ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ ,ಸ್ವರಾಜ್ಯ ೭೫ ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಇವರ ವತಿಯಿಂದ ಡಾ.ಬಿ.ಬಿ.ಹೆಗ್ಡೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಗಳಿಗೆ ಒಂದು ದಿನದ ಶಾಸನದ ಬಗ್ಗೆ ಮಾಹಿತಿ,ಪಡಿಯಚ್ಚು ತೆಗೆಯುವ ಹಾಗೂ ತರಬೇತಿಯೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮ ನ,03 ರಂದು ಕಂದಾವರ ಶ್ರೀ ಮಹಾಗಣಪತಿ ,ಈಶ್ವರ ,ಪಾವ೯ತಿ ದೇವಸ್ಥಾನ ಕೊಳನಕೋಡು ನಲ್ಲಿ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸುಭಾಸ್ ನಾಯಕ್ ಬಂಟಕಲ್ಲು ಪುರಾತತ್ವ ಹಾಗೂ […]
ಕೋಟೇಶ್ವರ: ನ, 19 ಕ್ಕೆ ಕೋಟಿಲಿಂಗೇಶ್ವರ ದೇಗುಲದ ಕೊಡಿಹಬ್ಬ
ಕೋಟೇಶ್ವರ (ನ, 03) : ಕುಂದಾಪುರ ತಾಲೂಕಿನ ಅತೀ ದೊಡ್ಡ ಜಾತ್ರೆ ಪುರಾಣ ಪ್ರಸಿದ್ದ ಧ್ವಜಪುರ – ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇಗುಲದ ರಥೋತ್ಸವ (ಕೊಡಿ ಹಬ್ಬ) ಇದೇ ನ.19 ರಂದು ನಡೆಯಲಿದೆ. ನ. 19ರಂದು ನಡೆಯಲಿರುವ ಕೊಡಿಹಬ್ಬ ಉತ್ಸವ ಸರಳ ಸಂಭ್ರಮದಿಂದ ಆಚರಿಸಲು ತಾಲೂಕಿನ ಪ್ರತಿಯೋರ್ವ ಭಕ್ತರು ಸಹಕರಿಸಬೇಕೆಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎಂ. ಪ್ರಭಾಕರ ಶೆಟ್ಟಿ ಭಕ್ತರಲ್ಲಿ ಕೋರಿಕೊಂಡಿದ್ದಾರೆ.
ಸಂಪ್ರದಾಯಗಳ ಆಚರಣೆಯ ಹಿಂದಿರುವ ವೈಜ್ಞಾನಿಕ ಹಿನ್ನೆಲೆಯ ಅರಿವು ನಮಗಿರಬೇಕು – ಉಮಾನಾಥ್ ದೇವಾಡಿಗ ಗಂಗೊಳ್ಳಿ
ಗಂಗೊಳ್ಳಿ (ನ, 04) : ಪ್ರತಿಯೊಂದು ಸಂಪ್ರದಾಯಗಳ ಆಚರಣೆಯ ಹಿಂದೆ ವೈಜ್ಞಾನಿಕ ಹಿನ್ನೆಲೆ ಇರುತ್ತದೆ. ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚಿನ ಪ್ರಯತ್ನವನ್ನು ನಾವು ಮಾಡಬೇಕಿದೆ. ಗೂಡುದೀಪ ಸ್ಪರ್ಧೆಯಂತಹ ಕಾರ್ಯಕ್ರಮಗಳು ನಮ್ಮಲ್ಲಿನ ಕಲೆಯನ್ನು ಉದ್ದೀಪನಗೊಳಿಸಲು ನೆರವಾಗುತ್ತವೆ ಎಂದು ಖ್ಯಾತ ಸ್ಯಾಕ್ಸೋಫೋನ್ ವಾದಕ ಉಮಾನಾಥ್ ದೇವಾಡಿಗ ಹೇಳಿದರು. ಅವರು ಗಂಗೊಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ದೀಪಾವಳಿಯ ಅಂಗವಾಗಿ ಆಯೋಜಿಸಿದ್ದ ಗೂಡುದೀಪ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪನ್ಯಾಸಕ ಬರಹಗಾರ […]
ತವರು ಮನೆ ಕಲ್ಯಾಣಪುರ : ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಯ ಫಲಿತಾಂಶ ಪ್ರಕಟ
ಕಲ್ಯಾಣಪುರ (ನ, 02) : ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ಅಪ್ಪಟ ಭಾರತೀಯ ಸಂಸ್ಕೃತಿಯ ಉಡುಗೆಯ (ಫೋಟೋ ಸ್ಪರ್ಧೆಯನ್ನು ತವರು ಮನೆ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ್ದು, ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಗೊಂಡಿದೆ.ವಿಜೇತರ ಪಟ್ಟಿ ಈ ಕೆಳಗಿನಂತಿವೆ.
ಅಗ್ನಿಶಾಮಕ ದಳ ಉಡುಪಿ : ವಿವಿಧ ಕ್ಷೇತ್ರದಲ್ಲಿ ಸಾಧನಗೈದವರಿಗೆ ಸನ್ಮಾನ ಕಾರ್ಯಕ್ರಮ
ಉಡುಪಿ (ನ, 02) : ಉಡುಪಿಯ ಅಗ್ನಿಶಾಮಕ ದಳದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನಗೈದವರಿಗೆ ಸನ್ಮಾನ ಕಾರ್ಯಕ್ರಮವನ್ನು ನ.01ರಂದು ಹಮ್ಮಿಕೊಳ್ಳಲಾಯಿತು. ಜೀವರಕ್ಷಕ, ಮುಳುಗು ತಜ್ಞ ಈಶ್ವರ್ ಮಲ್ಪೆ, ಅಗ್ನಿಶಾಮಕ ದಳದ ಸಿಬ್ಬಂದಿ, ರಾಜ್ಯಮಟ್ಟದ ದೇಹದಾಡ್ಯಪಟು, ವೇಟ್ ಲಿಫ್ಟರ್ ಅಶ್ವಿನ್ ಸನಿಲ್ ರವರ ಸೇವೆಯನ್ನು ಗುರುತಿಸಿ ಉಡುಪಿ ಅಗ್ನಿಶಾಮಕದಳದ ವತಿಯಿಂದ ಗೌರವಧನ ದೊಂದಿಗೆ ಸನ್ಮಾನಿಸಲಾಯಿತು. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ವಸಂತ್ ಕುಮಾರ್, ಜಿಲ್ಲಾ ನಿವೃತ್ತ ಅಧಿಕಾರಿ ಓಬಯ್ಯ ಮೂಲ್ಯ ಹಾಗೂ […]
ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಯವರಿಗೆ ಸನ್ಮಾನ
ಕಾರ್ಕಳ (ನ. 02) : ಕಾರ್ಕಳ ತಾಲೂಕು ಆಡಳಿತ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಶ್ರೀ ಮಂಜುನಾಥ ಪೈ ಸ್ಮಾರಕ ಪ್ರತಿಷ್ಠಾನ ಸಭಾ ಭವನದಲ್ಲಿ ನ.01ರಂದು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಗೀತಗಾಯನ ರಸಮಂಜರಿ ಕಾರ್ಯಕ್ರಮ ನೀಡಿದ ಕರ್ನಾಟಕ ಜಾನಪದ ಕೋಗಿಲೆ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಗಣೇಶ್ ಗಂಗೊಳ್ಳಿ ಯವರನ್ನು ಕಾರ್ಕಳ ತಾಲೂಕು ಮಾನ್ಯ ತಹಸೀಲ್ದಾರರಾದ ಶ್ರೀ ಕೆ. ಪುರಂದರ ರವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾರ್ಕಳ […]
ಶ್ರೀ ಮಹಾಸತಿ ಯಕ್ಷಗಾನ ಚಿಕ್ಕಮೇಳ ನಾಯ್ಕನಕಟ್ಟೆ : ನ, 01 ರಂದು ಈ ವರ್ಷದ ಕೊನೆಯ ಸೇವೆಯಾಟ
ಬೈಂದೂರು (ಅ, 31) : ಶ್ರೀ ಮಹಾಸತಿ ಯಕ್ಷಗಾನ ಚಿಕ್ಕಮೇಳ ನಾಯ್ಕನಕಟ್ಟೆ ಇದರ ಈ ವರ್ಷದ ಕೊನೆಯ ಸೇವೆಯಾಟ ನ,01ರಂದು ಮುಗಿಸುವುದೆಂದು ತಿಮ್ಮಪ್ಪ ದೇವಾಡಿಗ, ಸಂಚಾಲಕರಾದ ನಾಗರಾಜ್ ಭಟ್ ಹಾಗೂ ದೇವಸ್ಥಾನದ ಮುಕ್ತೇಶ್ವರರಾದ ನಾಗೇಂದ್ರ ಕಾರಂತರು ತಿಳಿಸಿರುತ್ತಾರೆ. ಮೇಳಕ್ಕೆ ಸಂಪೂರ್ಣವಾಗಿ ಸಹಕರಿಸಿ ದೇವಿಯನ್ನು ಬರಮಾಡಿಕೊಂಡು ದೇವಿಯನ್ನು ಆರಾಧಿಸಿದ ಕುಂದಾಪುರ ತಾಲ್ಲೂಕಿನ ಕುಂದಾಪುರ ಪರಿಸರ ಹೇರಿಕುದ್ರು ,ಆನಗಳ್ಳಿ ,ಉಪ್ಪಿನಕುದ್ರು, ಸಬ್ಲಾಡಿ ಪಾರ್ತಿಕಟ್ಟೆ , ಜಾಲಾಡಿ, ಹೆಮ್ಮಾಡಿ, ಬಗ್ವಾಡಿ, ಕಟ್ ಬೆಲ್ತೂರು, ಹಟ್ಟಿಯಂಗಡಿ, […]
ತೆರೆಮರೆಯ ಸಮಾಜ ಸೇವಕ ಸಾಯಿನಾಥ್ ಶೇಟ್ ಕುಂದಾಪುರ ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಕುಂದಾಪುರ (ಅ, 30) : ಪ್ರಚಾರ ಬಯಸದ, ತನ್ನ ಕೈಯಲ್ಲಾದಷ್ಟು ಅಶಕ್ತರಿಗೆ ಸಹಾಯ ಮಾಡುವ ಕುಂದಾಪುರದ ತೆರೆಮರೆಯ ಸರಳ ಸ್ವಭಾವದ ಸಮಾಜ ಸೇವಕ ಶ್ರೀ ಸಾಯಿನಾಥ್ ಶೇಟ್ ರವರು ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ. ಕಳೆದ ಲಾಕ್ ಡೌನ್ ಸಮಯದಲ್ಲಿ ತಿಂಗಳುಗಟ್ಟಲೆ ಏಕಾಂಗಿಯಾಗಿ ಯಾವುದೇ ಪ್ರಚಾರದ ಅಪೇಕ್ಷೆ ಇಲ್ಲದೆ ಅದೆಷ್ಟೋ ಜನರ ಹಸಿವು ತಣಿಸಿದ ಶೇಟ್ ರವರು ಕಲಾಕ್ಷೇತ್ರ ಕುಂದಾಪುರದ ಸಕ್ರಿಯ ಸದಸ್ಯರಾಗಿದ್ದಾರೆ.
ಲಿಯೋ ಅಧ್ಯಕ್ಷರಾಗಿ ಭವಿಷ್ಯ ಶೆಟ್ಟಿ ಕೊವಾಡಿ ಆಯ್ಕೆ
ತಲ್ಲೂರು (ಅ. 30) : ಲಿಯೋ ಕ್ಲಬ್ ಬಸ್ರೂರು ಮೂಡ್ಲಕಟ್ಟೆಯ ನೂತನ ಅಧ್ಯಕ್ಷರಾಗಿ ಭವಿಷ್ಯ ಶೆಟ್ಟಿ ಕೋವಾಡಿ ಆಯ್ಕೆ ಯಾಗಿರುತ್ತಾರೆ. ಇವರು ಬಾಲ ಬರಹಗಾರ, ವಾಗ್ಮಿ ,ಯಕ್ಷಗಾನ ಕಲಾ ಪ್ರತಿಭೆ. ಉತ್ತಮ ನಾಯಕತ್ವ ಗುಣಗಳನ್ನು ಮೈಗುಾಡಿಸಿಕೊಂಡಿರುವ ಇವರು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಎಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.










