ಶ್ರೀಧವಲಾ ಕಾಲೇಜಿನ ಕಲಾ ಸಂಘದ 2020-21ನೇ ಸಾಲಿನ ಚಟುವಟಿಗಳ ಉದ್ಘಾಟನೆಯು ಮಾರ್ಚ್ 6 ರಂದು ಜರುಗಿತು. ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಅರುಣ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಕಲಾ ವಿದ್ಯಾರ್ಥಿಗಳ ಮುಂದಿನ ಹೆಜ್ಜೆ ಮತ್ತು ಹಾದಿ ಈ ವಿಷಯದ ಕುರಿತು ಮಾತನಾಡಿದರು.
Category: ಜಿಲ್ಲಾ ಸುದ್ದಿ
ಸುದ್ದಿ ಸಮಾಚಾರ — > ಜಿಲ್ಲಾ ಸುದ್ದಿ
ಶಿರ್ವ ಸಂತ ಮೇರಿ ಕಾಲೇಜು : ರಕ್ಷಕ – ಶಿಕ್ಷಕ ಸಭೆ
ಉಡುಪಿ(ಮಾ.6): ಸಂತ ಮೇರಿ ಕಾಲೇಜಿನ ಕಂಪ್ಯೂಟರ್ ಸಾಯನ್ಸ್ ವಿಭಾಗದ ಆಯೋಜನೆಯಲ್ಲಿ ರಕ್ಷಕ-ಶಿಕ್ಷಕ ಸಭೆಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ರವರು ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸುವಲ್ಲಿ ಹೆತ್ತವರು ಹಾಗೂ ಅಧ್ಯಾಪಕರ ಪಾತ್ರ ಬಹಳ ಪ್ರಾಮುಖ್ಯವಾಗಿದೆ. ಇಂದಿನ ಯುವ ಜನತೆಗೆ ಮಾರ್ಗದರ್ಶನ ಮಾಡುವಾಗ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆ ಇದೆ, ಯುವಜನತೆಯ ಮನಸ್ಸನ್ನು ಇಂದಿನ ಜಗತ್ತು ನಾನಾ ಧುಶ್ಚಟಗಳಿಗ್ಗೆ ಸೆಳೆಯುತ್ತಿದೆ ಇದರಿಂದ ದೂರವಿರಿಸಿ […]
ಸಂತ ಮೇರಿ ಕಾಲೇಜು ಶಿರ್ವ : ಜಲಸಂರಕ್ಷಣೆ ಮಾಹಿತಿ ಕಾರ್ಯಕ್ರಮ
ಉಡುಪಿ (ಮಾ.6): ಜಗತ್ತಿನಲ್ಲಿ ಮೂರನೇ ಯುದ್ಧ ಅಂತ ಹೆಸರಿಸುವುದಾದರೆ ಅದು ನೀರಿನ ಸಮಸ್ಯೆಯ ಯುದ್ದ. ಇಂದು ಪ್ರತಿಯೊಂದು ರಾಷ್ಟ್ರವೂ ನೀರಿನ ಅಭಾವವನ್ನು ಎದುರಿಸುತ್ತಿದೆ. ನೀರಿನ ಸಮೃದ್ಧಿಯಲ್ಲಿ ಭಾರತವು ವಿಶ್ವದಲ್ಲಿ ಎರಡನೇ ದೇಶವಾಗಿದೆ. ಆದರೆ ಅದರ ಸರಿಯಾದ ಬಳಕೆ ಮತ್ತು ಸಂರಕ್ಷಣೆ ಇಲ್ಲದೆ ನೀರಿನ ಅಭಾವವನ್ನು ನಾವಿಂದು ಎದುರಿಸಬೇಕಾಗಿದೆ. ಇದರ ನಿವಾರಣೆಯಾಗಬೇಕಾದರೆ ನಾವಿಂದು ಮಳೆ ನೀರನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿ ಮರು ಬಳಕೆ ಮಾಡುವುದು ಅನಿವಾರ್ಯವಾಗಿದೆ ಎಂದು ರತ್ನ ಶ್ರೀ ಜೋಸೆಫ್ […]
ಯಕ್ಷಗಾನದ ಅನರ್ಘ್ಯ ರತ್ನ ಡಾ. ಶ್ರೀಧರ್ ಭಂಡಾರಿ ನಿಧನ
ಉಡುಪಿ( ಫೆ:19) ತೆಂಕುತಿಟ್ಟು ಯಕ್ಷಗಾನದ ಖ್ಯಾತ ಕಲಾವಿದ ಡಾ.ಶ್ರೀಧರ್ ಭಂಡಾರಿ(73 ) ಯವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಇವರು ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದ ಗಣಮಣಿ ಪಾತ್ರಕ್ಕೆ ಹೊಸ ಆಯಾಮ ನೀಡಿರುತ್ತಾರೆ.ಅಭಿಮನ್ಯು,ಸುಧನ್ವ ,ಕ್ರಷ್ಣ ಮುಂತಾದ ಪುಂಡುವೇಷಗಳಿಗೆ ಹೆಸರುವಾಸಿಯಾಗಿದ್ದ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬನ್ನೂರು ನಿವಾಸಿಯಾಗಿದ್ದು, 2019ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಧರ್ಮಸ್ಥಳ ಮೇಳದ […]
ಟೋಲ್ ಪ್ಲಾಜಾಗಳಲ್ಲಿ ಸ್ಥಳೀಯರಿಗೆ ಶುಲ್ಕ ವಿನಾಯಿತಿ ಸ್ಥಗಿತ ವಿರೋಧಿಸಿ ಪ್ರತಿಭಟನೆಗೆ ಸಜ್ಜು
ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ನೀಡಲಾಗುತ್ತಿರುವ ಶುಲ್ಕ ವಿನಾಯಿತಿ ಸ್ಥಗಿತ ವಿರೋಧಿಸಿ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಫೆ. 22ರಂದು ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಂದ್ಗೆ ಕರೆ ನೀಡಿದ್ದು, ನಾಗರೀಕರು ಹಾಗೂ ಸ್ಥಳೀಯ ಹಲವಾರು ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.
ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಘಟಕದ ಕಛೇರಿಗೆ ಶ್ರೀ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಭೇಟಿ
ಬೈಂದೂರು (ಫೆ – 18) : ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ, ಬೈಂದೂರು – ಶಿರೂರು ಘಟಕದ ಯಡ್ತರೆಯ ಆಡಳಿತ ಕಛೇರಿಗೆ ಫೆಬ್ರವರಿ 17 ರಂದು ಶ್ರೀ ನಿಜಶರಣ ಚೌಡಯ್ಯನವರ ಗುರುಪೀಠ ಶ್ರೀಕ್ಷೇತ್ರ ನರಸೀಪುರದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಭೇಟಿನೀಡಿ, ಸಂಘಟನೆಯ ಸದಸ್ಯರುಗಳಿಗೆ ಆಶೀರ್ವದಿಸಿ,ಮಂತ್ರ ದಕ್ಷತೆ ನೀಡಿದರು. ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕ ಅಧ್ಯಕ್ಷ ರವಿರಾಜ ಚಂದನ್ ಕಳವಾಡಿ, […]
ಧಾರಿಣಿ ಕೆ. ಎಸ್. ಗೆ ಸ್ವರ ಕುಡ್ಲ ಸೀಸನ್ – 3 ಪ್ರಶಸ್ತಿ
ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಮಂಗಳೂರು ಇವರು ಫೆಬ್ರವರಿ 10ರಂದು ಆಯೋಜಿಸಿದ “ಸ್ವರ ಕುಡ್ಲ” ಸೀಸನ್ 3 ಅಂತರ್ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಧಾರಿಣಿ ಕೆ.ಎಸ್ ಕುಂದಾಪುರ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಫೆ : 21 ರಂದು ತೋನ್ಸೆ ರಕ್ತ ದಾನ ಶಿಬಿರ
ಉಡುಪಿ ಹೆಲ್ಪ್ ಲೈನ್ (ರಿ), ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ ಇವರ ನೇತೃತ್ವದಲ್ಲಿ ,ರಕ್ತ ನಿಧಿ ಕೇಂದ್ರ- ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಫೆಬ್ರವರಿ 21ರಂದು ಕೆಮ್ಮಣ್ಣು ಲಿಟ್ಲ್ ಫ್ಲವರ್ ಚರ್ಚ್ ಹಾಲ್ ನಲ್ಲಿ ಬ್ರಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಫೆ. 21 ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಗರ್ಭಗುಡಿಗೆ ಶಿಲಾನ್ಯಾಸ
ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕೇಂದ್ರಗಳಲ್ಲೊಂದಾದ,ಮೊಗವೀರ ಸಮುದಾಯದ ಆರಾಧ್ಯ ದೇವರು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ನೂತನ ಗರ್ಭಗುಡಿಗೆ ಶಿಲಾನ್ಯಾಸ ಇದೇ ಫೆಬ್ರವರಿ 21 ರಂದು ಬೆಳಗ್ಗೆ 8.30ಕ್ಕೆ ನಡೆಯಲಿದೆ.
ಕುಮಾರ್ ಕಾಂಚನ್ ಬೀಜಾಡಿ ಯವರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ
ಉಡುಪಿ : ಪ್ರಗತಿಪರ ಕೃಷಿಕ, ದೇಶಿಯ ಗೋವುಗಳ ರಕ್ಷಣೆ ಮತ್ತು ಪಂಚಗವ್ಯ ಉತ್ಪನ್ನಗಳ ಮಹತ್ವದ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತಿರುವ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಕಪಿಲೆ ಗೋ ಸಮೃದ್ಧಿ ಟ್ರಸ್ಟ್ (ರಿ) ಇದರ ಪ್ರವರ್ತಕರಾದ ಶ್ರೀಕುಮಾರ್. ಎಸ್. ಕಾಂಚನ್ ರವರಿಗೆ ಕರ್ನಾಟಕ ಸರ್ಕಾರ 2020-21 ನೇ ಸಾಲಿನ ಆತ್ಮ ಯೋಜನೆಯಡಿ, ಕೃಷಿ ಸಂಸ್ಕರಣೆ ವಿಭಾಗದಲ್ಲಿ ಉಡುಪಿ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರಕಾರದ ಮೀನುಗಾರಿಕೆ […]